ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಹುಟ್ಟಿದ ಕಂದ: ಇದು ಸರ್ಕಾರದ ಲೋಪ ಮಗು ಸಾಕಲು ಆರ್ಥಿಕ ನೆರವು ಬೇಕು ಎಂದ ದಂಪತಿ

Published : Mar 12, 2026, 07:07 AM IST
baby born after sterilization surgery

ಸಾರಾಂಶ

failed tubal ligation surgery: ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಮಗು ಜನಿಸಿದ್ದು, ಅದರ ಪಾಲನೆಗೆ ಸರ್ಕಾರವೇ ಆರ್ಥಿಕ ನೆರವು ನೀಡಬೇಕೆಂದು ದಂಪತಿ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಜನಿಸಿದ ಮಗು

ಜನನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಒಂದು ಅಥವಾ ಎರಡು ಮಗುವಿನ ನಂತರ ಪ್ರತಿ ಮನೆಗಳಿಗೂ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ತಾಯಿ ಮಗುವಿನ ಅರೋಗ್ಯ ವಿಚಾರಿಸುವುದರ ಜೊತೆಗೆ ಮುಂದಿನ ಸಂತಾನಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಅವರಿಗೆ ಮನವವರಿಕೆ ಮಾಡಿಕೊಡುತ್ತಾರೆ. ಇತ್ತೀಚೆಗೆ ಎರಡು ಮಕ್ಕಳಾದ ನಂತರ ಬಹುತೇಕರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಇಲ್ಲೊಂದು ಕಡೆ ಸಂತಾನಹರಣ ಚಿಕಿತ್ಸೆಯ ನಂತರವೂ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯ ಇಲಾಖೆಯ ಈ ಸಂತಾನಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವರದಿಯ ಪ್ರಕಾರ ಮಹಿಳೆ 2023ರಲ್ಲಿ ಟ್ಯೂಬಲ್ ಲಿಗೇಶನ್(tubal ligation)ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಈ ವರ್ಷ 2026ರಲ್ಲಿ ಅವರು ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಟ್ಯೂಬಲ್ ಲಿಗೇಶನ್ ಪ್ರಕ್ರಿಯೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಮೂಡಿಸಿದೆ. ವರದಿಗಳ ಪ್ರಕಾರ ಟ್ಯೂಬಲ್ ಲಿಗೇಶನ್ ಎಂಬುದು 99% ಪರಿಣಾಮಕಾರಿ ಮತ್ತು ಶಾಶ್ವತವಾದ ಸ್ತ್ರೀ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಿದೆ. ಇದು ಫಾಲೋಪಿಯನ್ ಟ್ಯೂಬ್‌ಗಳನ್ನು ನಿರ್ಬಂಧಿಸುವ ಅಥವಾ ತೆಗೆದುಹಾಕುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತದೆ. ಸಾಮಾನ್ಯವಾಗಿ ಲ್ಯಾಪರೊಸ್ಕೋಪಿ ಮೂಲಕ ಇದನ್ನು ನಡೆಸಲಾಗುತ್ತದೆ. ಈ ವಿಧಾನದ ಮೂಲಕ ವೀರ್ಯವು ಅಂಡಾಣುವನ್ನು ತಲುಪದಂತೆ ತಡೆಯಲು ಟ್ಯೂಬ್‌ಗಳನ್ನು ಕತ್ತರಿಸುವುದು, ಮುಚ್ಚುವುದು ಅಥವಾ ಕ್ಲಿಪ್ ಹಾಕಲಾಗುತ್ತದೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಅಮೆರಿಕಾದಲ್ಲಿ ಭಾರಿ ಹೂಡಿಕೆ: ಟೆಕ್ಸಾಸ್‌ನಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪನೆಗೆ ಒಪ್ಪಂದ: ಟ್ರಂಪ್ ಶ್ಲಾಘನೆ

ಆದರೆ ಇಲ್ಲಿ ಈ ಶಸ್ತ್ರಚಿಕಿತ್ಸೆಯ ನಂತರವೂ ತಮಗೆ ಮಗು ಜನಿಸಿದ್ದರಿಂದ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅನಿರೀಕ್ಷಿತ ಮಗುವಿನ ಜನ ಅವರಿಗೆ ಆಘಾತ ನೀಡಿದೆ ಅವರು ಆರೋಗ್ಯಾಧಿಕಾರಿಗಳಿಗೆ ಈ ಘಟನೆಯ ಜವಾಬ್ದಾರಿ ಹೊರಬೇಕೆಂದು ಆಗ್ರಹಿಸಿದ್ದಾರೆ. ಕೆಲವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಯ ಪ್ರಕಾರ ಈ ದಂಪತಿ ತಮಗೆ ಬಯಸದೇ ಹುಟ್ಟಿದ ಈ ಮಗು ಸರ್ಕಾರದ ಹಾಗೂ ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಹುಟ್ಟಿದೆ. ಇದು ಸರ್ಕಾರದ ಲೋಪದಿಂದ ಆಗಿರೋದ್ರಿಂದ ಇದು ಸರ್ಕಾರದ ಆಸ್ತಿ. ಹೀಗಾಗಿ ನಮಗೆ ಮಗುವನ್ನು ಸಾಕುವುದಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಎಂದು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಸ್ಪಷ್ಟವಾದ ಮಾಹಿತಿ ಇಲ್ಲ.

ಇದನ್ನೂ ಓದಿ:  ವಿಮಾನಗಳಿಗೆ ಬಳಸುವ ಇಂಧನ ದರದಲ್ಲೂ ಭಾರಿ ಹೆಚ್ಚಳ : ಇಂಟರ್‌ನ್ಯಾಷನಲ್ ಫ್ಲೈಟ್‌ ದರದಲ್ಲಿ ಭಾರಿ ಏರಿಕೆ

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Pimple Patches: ಮೊಡವೆ ಮೇಲೆ ಸ್ಟಿಕ್ಕರ್ ಅಂಟಿಸಿದ್ರೆ ಸಾಕು, ಒಂದೇ ರಾತ್ರಿಯಲ್ಲಿ ಮಾಯ!
ಹಿಮ್ಮಡಿ ಒಡೆತಕ್ಕೆ ಮನೆಯಲ್ಲೇ ಇದೆ ಸುಲಭ ಮದ್ದು; ಈ 7 ಮನೆಮದ್ದು ಬಳಸಿ, ಸುಂದರ ಪಾದ ಹೊಂದಿರಿ!