ಫ್ರೆಶ್ ಆಗ್ಬೇಕು ಅಂತ ಕಾಫಿ ಕುಡಿದ್ರೆ ನಿದ್ರೆ ಬರ್ತಿದೆ ! ಏನಾದ್ರೂ ಹೆಚ್ಚುಕಮ್ಮಿ ಆಗಿದ್ಯಾ?

Published : Mar 11, 2026, 03:17 PM IST
Coffee

ಸಾರಾಂಶ

ಕಣ್ತುಂಬಿ ಬರ್ತಿರೋ ನಿದ್ರೆ ಹೋಗ್ಲಿ ಅಂತ ಕೆಲವರು ಕಾಫಿ ಕುಡಿತಾರೆ. ಮತ್ತೆ ಕೆಲವರಿ ಕಾಫಿ ಕುಡಿದ ಮೇಲೆ ನಿದ್ರೆ ಬರುತ್ತೆ. ಫ್ರೆಶ್ನೆಸ್ಗೆ ಹೆಸರುವಾಸಿ ಆಗಿರೋ ಈ ಕಾಫಿ ನಿದ್ರೆ ಬರಿಸೋದು ಏಕೆ? 

ಕಾಫಿ (Coffee) ಫ್ರೆಶ್ನೆಸ್ ನೀಡುತ್ತೆ ಅನ್ನೋ ಕಾರಣಕ್ಕೆ ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿತಾರೆ. ಅಕ್ಕಪಕ್ಕದ ಮನೆಯವರು ಕುಡಿತಾರೆ ಅಂತ ನೀವು ಬೆಳಿಗ್ಗೆ ಕಾಫಿ ಕುಡಿದು, ಫ್ರೆಶ್ ಆಗೋ ಬದಲು ನಿದ್ರೆಗೆ ಜಾರಿದ್ರೆ ಅದ್ರಲ್ಲಿ ಪಕ್ಕದ ಮನೆಯವರ ತಪ್ಪಿಲ್ಲ. ಕಾಫಿ ಕುಡಿದ್ರೆ ಎಲ್ಲರಿಗೂ ಶಕ್ತಿ ಬರೋದಿಲ್ಲ. ಪ್ರತಿಯೊಬ್ಬರ ಮೂಡ್ ಉಲ್ಲಾಸಗೊಳ್ಳೋದಿಲ್ಲ. ಕೆಲವರು ಕಾಫಿ ಕುಡಿದ್ಮೇಲೆ ನಿದ್ರೆ ಮಾಡ್ತಾರೆ. ಅದಕ್ಕೆ ಕಾರಣ ಇದೆ.

ಮೆದುಳಿಗೆ ನಿದ್ರೆ ಹೇಗೆ ಬರುತ್ತದೆ?

ಕೆಫೀನ್ ನಿಮ್ಮ ಮೆದುಳಿನ ಮೇಲೆ ಹೇಗೆ ಪ್ರಭಾವ ಬೀರುತ್ತೆ ಅನ್ನೋದನ್ನು ಮೊದಲು ತಿಳಿಯಬೇಕು. ಅಡೆನೊಸಿನ್ ಎಂಬ ನ್ಯಾಚ್ಯುರಲ್ ಕೆಮಿಕಲ್ ಇದ್ರಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಅಡೆನೊಸಿನ್ ದಿನವಿಡೀ ಮೆದುಳಿನಲ್ಲಿ ಸಂಗ್ರಹವಾಗುತ್ತೆ. ನಿದ್ರೆಯ ಒತ್ತಡವನ್ನು ಇದು ಉತ್ಪಾದಿಸುತ್ತೆ. ಅಡೆನೊಸಿನ್ ಮಟ್ಟ ಹೆಚ್ಚಾದಂತೆ ಮೆದುಳಿನ ಕೆಲ್ಸ ನಿಧಾನವಾಗುತ್ತೆ. ಕ್ರಮೇಣ ಮೆದುಳು ದಣಿದು, ವಿಶ್ರಾಂತಿ ಬಯಸುತ್ತೆ. ನಾವು ಕಾಫಿ ಕುಡಿದಾಗ ಅದ್ರಲ್ಲಿರುವ ಕೆಫೀನ್, ಅಡೆನೊಸಿನ್ ಉತ್ಪಾದನೆಯನ್ನು ತಡೆಯತ್ತದೆ. ಇದರಿಂದ ನಮಗೆ ಶಕ್ತಿ ಬಂದಂತೆ, ನಿದ್ರೆ ಮಾಯವಾದಂತೆ ಭಾಸವಾಗುತ್ತದೆ.

ಮಕ್ಕಳ ನೆಚ್ಚಿನ ಬಣ್ಣಬಣ್ಣದ 'ಕ್ರಾಕ್ಸ್' ಚಪ್ಪಲಿಗಳಲ್ಲಿದೆಯೇ ಹಾರ್ಮೋನ್ ಏರುಪೇರು ಮಾಡುವ ವಿಷ?

ಇದು ತಾತ್ಕಾಲಿಕ

ಆದ್ರೆ ಕೆಫೀನ್ ಈ ಪರಿಣಾಮ ತಾತ್ಕಾಲಿಕವಾಗಿರುತ್ತದೆ. ಕೆಫೀನ್ ಸಾಮಾನ್ಯವಾಗಿ ದೇಹದಲ್ಲಿ ಸುಮಾರು ನಾಲ್ಕರಿಂದ ಆರು ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ, ಅಡೆನೊಸಿನ್ ಸಂಗ್ರಹವಾಗುತ್ತಲೇ ಇರುತ್ತದೆ. ಕೆಫೀನ್ನ ಪರಿಣಾಮಗಳು ಕಡಿಮೆಯಾದ ನಂತ್ರ, ಎಲ್ಲಾ ಸಂಗ್ರಹವಾದ ಅಡೆನೊಸಿನ್ ಇದ್ದಕ್ಕಿದ್ದಂತೆ ಬಿಡುಗಡೆಯಾಗುವ ಕಾರಣ ಕೆಲವರು ದಣಿಯುತ್ತಾರೆ. ನಿದ್ರೆಗೆ ಜಾರುತ್ತಾರೆ. ಇದನ್ನು ಕೆಫೀನ್ ಕ್ರ್ಯಾಶ್ ಎಂದು ಕರೆಯಲಾಗುತ್ತದೆ.

ನಿಯಮಿತವಾಗಿ ಕಾಫಿ ಕುಡಿಯುವವರಿಗೆ ಕಾಲ ಕ್ರಮೇಣ ಒಂದು ಕಪ್ ಕಾಫಿ ಕಿಕ್ ನೀಡೋದಿಲ್ಲ. ಕಾಫಿಯಿಂದ ಸಿಗುವ ಶಕ್ತಿಯನ್ನು ಪಡೆಯಲು ಅವರು ಹೆಚ್ಚು ಕಾಫಿ ಸೇವನೆಗೆ ಮುಂದಾಗ್ತಾರೆ. ಕೆಫೀನ್ ಮಟ್ಟಗಳು ಕಡಿಮೆಯಾದಂತೆ, ಅಡೆನೊಸಿನ್ ಗ್ರಾಹಕಗಳ ಸಂಖ್ಯೆ ಹೆಚ್ಚಾಗುವುದರಿಂದ ನಿದ್ರೆಯ ಸಂಕೇತವು ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಇದು ಆಯಾಸಕ್ಕೆ ಕಾರಣವಾಗುತ್ತದೆ.

ನಿರಂತರ ಕೆಫೀನ್ ಸೇವನೆಯ ಕೆಲವು ದಿನಗಳು ಅಥವಾ ವಾರಗಳಲ್ಲಿ ಸಹಿಷ್ಣುತೆ ಬೆಳೆಯುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ತೋರಿಸುತ್ತದೆ. ಇದು ನರಮಂಡಲ ಮತ್ತು ಹೃದಯರಕ್ತನಾಳದ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ.

ಜೆನೆಟಿಕ್ಸ್ ಪರಿಣಾಮ

ಎಲ್ಲರೂ ಕೆಫೀನ್ ಅನ್ನು ಒಂದೇ ರೀತಿಯಲ್ಲಿ ಜೀರ್ಣಿಸಿಕೊಳ್ಳುವುದಿಲ್ಲ. ದೇಹವು ಕೆಫೀನ್ ಅನ್ನು ಎಷ್ಟು ಬೇಗನೆ ಚಯಾಪಚಯಗೊಳಿಸುತ್ತದೆ ಎಂಬುದರ ಮೇಲೆ ಜೆನೆಟಿಕ್ಸ್ ಪರಿಣಾಮ ಬೀರುತ್ತದೆ. ಕೆಫೀನ್ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಜೀನ್ ಅನ್ನು CYP1A2 ಎಂದು ಕರೆಯಲಾಗುತ್ತದೆ. ಈ ಜೀನ್ನ ಕೆಲವು ರೂಪಾಂತರಗಳನ್ನು ಹೊಂದಿರುವ ಜನರು ಇತರರಿಗಿಂತ ವೇಗವಾಗಿ ಕೆಫೀನ್ ಅನ್ನು ಚಯಾಪಚಯಗೊಳಿಸುತ್ತಾರೆ. ಈ ವೇಗದ ಚಯಾಪಚಯಕಾರಕಗಳಿಗೆ , ಒಂದು ಕಪ್ ಕಾಫಿ ಉತ್ಸಾಹ ನೀಡೋದಿಲ್ಲ. ಇದು ನಿರೀಕ್ಷೆಗಿಂತ ಮೊದಲೇ ಆಯಾಸಕ್ಕೆ ಕಾರಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಿಧಾನವಾದ ಚಯಾಪಚಯ ಕ್ರಿಯೆ ಹೊಂದಿರುವ ಜನರು ದೀರ್ಘಕಾಲದವರೆಗೆ ಉತ್ಸಾಹವನ್ನು ಅನುಭವಿಸುತ್ತಾರೆ.

ಹೊರಗೆ ಗರಿಗರಿ, ಒಳಗೆ ಹತ್ತಿಯಂತೆ ಮೃದು ದಾವಣಗೆರೆ ಬೆಣ್ಣೆ ದೋಸೆ ಮನೆಯಲ್ಲೇ ಮಾಡೋ ವಿಧಾನ ಇಲ್ಲಿದೆ

ಇದೂ ಒಂದು ಕಾರಣ

ನಿದ್ರೆ ಬರಲು ಬರೀ ಕೆಫೀನ್ ಕಾರಣವಲ್ಲ. ಸಿಹಿ ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ. ನಂತರ ವೇಗವಾಗಿ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ. ಕಾಫಿ, ಹೆಚ್ಚು ಮೂತ್ರಕ್ಕೆ ಕಾರಣವಾಗುತ್ತದೆ. ಇದ್ರಿಂದ ನಿರ್ಜಲೀಕರಣ ಕಾಡಬಹುದು. ನಿರ್ಜಲೀಕರಣ ಆಯಾಸಕ್ಕೆ ಪ್ರಮುಖ ಕಾರಣವಾಗಿದೆ. ಹಿಂದಿನ ರಾತ್ರಿಯ ಅಸಮರ್ಪಕ ನಿದ್ರೆ ಕಾಫಿಯ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ದೇಹವು ಈಗಾಗಲೇ ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಕೆಫೀನ್ ತಾತ್ಕಾಲಿಕವಾಗಿ ಆಯಾಸವನ್ನು ನಿವಾರಿಸಬಹುದು, ನಂತರ ಆಯಾಸ ಹೆಚ್ಚಾಗುತ್ತದೆ.

ಇದನ್ನು ತಿಳಿದಿರಿ

ಕಾಫಿಯನ್ನು ವಿಶ್ವಾದ್ಯಂತ ಹೆಚ್ಚಿನ ಜನರು ಫ್ರೆಶ್ ಆಗಿರಲು ಸೇವನೆ ಮಾಡ್ತಾರೆ. ಆದ್ರೆ ಅದರ ಪರಿಣಾಮಗಳು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಅಡೆನೊಸಿನ್ ಮರುಕಳಿಸುವಿಕೆ, ಕೆಫೀನ್ ಸಹಿಷ್ಣುತೆ, ಜೀವನಶೈಲಿಯ ಅಭ್ಯಾಸಗಳಂತಹ ಅಂಶಗಳು ದೇಹದ ಪ್ರತಿಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ಪ್ರತಿ ಬಾರಿ, ಕಾಫಿ ಕುಡಿಯುವುದರಿಂದ ನಿದ್ರೆ ಬರುತ್ತದೆ ಎಂದರ್ಥವಲ್ಲ. ಕಾ{ಇ ಕುಡಿದಾಗ ನಿದ್ರೆ ಬಂದ್ರೆ ಅದು ಸಾಮಾನ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಕ್ಕಳ ನೆಚ್ಚಿನ ಬಣ್ಣಬಣ್ಣದ 'ಕ್ರಾಕ್ಸ್' ಚಪ್ಪಲಿಗಳಲ್ಲಿದೆಯೇ ಹಾರ್ಮೋನ್ ಏರುಪೇರು ಮಾಡುವ ವಿಷ?
AI Brainfry: ನಾವಲ್ಲ, AI ನಮ್ಮನ್ನ ಆಳ್ತಿದೆ.. ಹಾರ್ವರ್ಡ್ ಸಂಶೋಧನೆಯಲ್ಲಿ ಬಯಲಾಯ್ತು ಈ ಹೊಸ ಕಾಯಿಲೆಯ ಸತ್ಯ!