30 ರ ನಂತರ ಮಹಿಳೆ ಕಾಡಬಹುದು ಈ ಗಂಭೀರ ಕಾಯಿಲೆ!

Published : Aug 09, 2022, 05:36 PM IST

30 ನೇ ವಯಸ್ಸಿನಲ್ಲಿ, ಹೆಚ್ಚಿನ ಮಹಿಳೆಯರು ಆಫೀಸ್ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗೋದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ನೀವು ಹೇಗಿದ್ದೀರೋ ಹಾಗೆಯೇ ನೀವು ಇನ್ನೂ ಕಾಣುತ್ತಿರಬಹುದು, ಆದರೆ ನಿಮ್ಮ ದೇಹವು ನಿಧಾನವಾಗಿ ಬದಲಾಗುತ್ತೆ. ಮತ್ತು ಅದರ ಅಗತ್ಯಗಳು ಸಹ. ಹಾಗಾಗಿ, ಆರೋಗ್ಯ ಕಾಪಾಡಿಕೊಳ್ಳಲು ನಿಮಗೆ ನಿಯಮಿತ ಹೆಲ್ತ್ ಟೆಸ್ಟ್ ಅಗತ್ಯವಿದೆ. 

PREV
18
30 ರ ನಂತರ ಮಹಿಳೆ ಕಾಡಬಹುದು ಈ ಗಂಭೀರ ಕಾಯಿಲೆ!

ಮಹಿಳೆಯರು(Women) ವಯಸ್ಸಾಗುತ್ತಿದ್ದಂತೆ, ಹೆಚ್ಚುವರಿ ಆರೋಗ್ಯ ಸಮಸ್ಯೆ ಎದುರಿಸಬಹುದು. ಏಕೆಂದರೆ ಸಾಮಾನ್ಯವಾಗಿ ಮಹಿಳೆಯರು 30ನೇ ವಯಸ್ಸಿನಲ್ಲಿ ಪೌಷ್ಠಿಕಾಂಶದ ಕೊರತೆಯಿಂದ  ಹಾರ್ಮೋನುಗಳ ಸಮಸ್ಯೆಗೆ ಬಲಿಯಾಗುತ್ತಾರೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗಬಹುದು ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ. 

28

ಹೆಚ್ಚಿನವರು age is just a number ಎಂದು ಹೇಳುತ್ತಾರೆ, ಆದರೆ ಈ ಸಂಖ್ಯೆ ಹೆಚ್ಚಾದಂತೆ, ಅದು ಗಂಭೀರ ಆರೋಗ್ಯ ಸಮಸ್ಯೆ ಸಹ ತರಬಹುದು, ಯಾವಾಗ? ಯಾವ ಸಮಸ್ಯೆ ಕಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀವು 30ರ ಹರೆಯದಲ್ಲಿದ್ದಾಗ ಅನೇಕ ಗಂಭೀರ ಕಾಯಿಲೆ ಕಾಡಬಹುದು. ಈ ಆರೋಗ್ಯ ಸಮಸ್ಯೆಗಳು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತೆ. ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತೆ. ಹಾಗಾಗಿ, ನಾವು ಕೆಲವು ಪ್ರಮುಖ ಮತ್ತು ಗಂಭೀರ ರೋಗಲಕ್ಷಣಗಳನ್ನು ತಿಳಿದುಕೊಳ್ಳೋದು ಮುಖ್ಯ.

38

 30 ರ ಹರೆಯದ ಮಹಿಳೆಯರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು
ತೂಕ(Weight) ಕಮ್ಮಿ ಆಗದಿರೋದು 
ನಿಮ್ಮ ಹೊಟ್ಟೆಯ ಸುತ್ತಲಿನ ಹೆಚ್ಚುವರಿ ಸ್ಥೂಲಕಾಯ ವಿಶೇಷವಾಗಿ ಕರುಳಿನ ಕೊಬ್ಬನ್ನು ಸೂಚಿಸುತ್ತೆ. ಇದು ದಿನಕಳೆದಂತೆ ಕ್ರಾನಿಕ್ ರೋಗಗಳ ಸಂಕೇತವಾಗಬಹುದು. ಇದರರ್ಥ ನಿಮ್ಮ ಮೆಟಬೋಲಿಸಂ ಮೊದಲಿನಂತೆ ಇಲ್ಲ ಎಂದು ಸಹ ಅರ್ಥೈಸಬಹುದು. 
 

48

ಹಾರ್ಮೋನುಗಳ ಅಸಮತೋಲನ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಹಾಗಾಗಿ , ಲೈಫ್ ಸ್ಟೈಲ್ ನಲ್ಲಿ (Life style) ಕೆಲವು ಆರೋಗ್ಯಕರ ಬದಲಾವಣೆ ಮಾಡೋದ್ರಿಂದ, ಆರೋಗ್ಯಕರ ಆಹಾರ ಸೇವನೆಯಿಂದ ಈ ಸಮಸ್ಯೆಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತೆ.

58
ಕೂದಲು ಉದುರೋದು (Hair Fall)

ಕೂದಲು ಉದುರೋದು ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಆಹಾರವನ್ನು ಅಪ್ಗ್ರೇಡ್ ಮಾಡೋ ಅಗತ್ಯವಿದೆ ಎಂಬುದರ ಸಂಕೇತ. ಹಾಗಾಗಿ, ಪ್ರೋಟೀನ್, ಫ್ಯಾಟಿ ಆಸಿಡ್ ಮತ್ತು ಜಿಂಕ್ ಪೌಷ್ಠಿಕಾಂಶದ ಕೊರತೆಗಳನ್ನು ಪರಿಶೀಲಿಸೋದು ಒಳ್ಳೆಯದು. ದೀರ್ಘಾವಧಿಯಲ್ಲಿ, ಈ ರೋಗಲಕ್ಷಣವು ಬಾಲ್ಡ್ ನೆಸ್ ಗೆ ಕಾರಣವಾಗಬಹುದು.
 

68
ಗರ್ಭಿಣಿಯಾಗಲು(Pregnant) ಕಷ್ಟವಾಗೋದು

30ರ ನಂತರ ತಾಯಿಯಾಗಲು ಬಯಸುವ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದರೆ, 30ರ ನಂತರ ನೀವು ಗರ್ಭ ಧರಿಸಲು ತೊಂದರೆ ಎದುರಿಸಬಹುದು. ಏಕೆಂದರೆ 30ರ ನಂತರ ಮಹಿಳೆಯರಲ್ಲಿ ಫರ್ಟಿಲಿಟಿ ಕಡಿಮೆಯಾಗಲು ಪ್ರಾರಂಭಿಸುತ್ತೆ. ಇದು ಗರ್ಭಧಾರಣೆಯಲ್ಲಿ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

78
ಪಿರಿಯಡ್ಸ್ (Periods) ಸಂಬಂಧಿಸಿದ ಸಮಸ್ಯೆಗಳು

30 ವರ್ಷ ವಯಸ್ಸಿನ ಮಹಿಳೆಯರು ಎಂಡೋಮೆಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್ ಗಳಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ನೀವು ಪಿರಿಯಡ್ಸ್‌ನಲ್ಲಿ  ಅನಿಯಮಿತತೆ, ಹೆಚ್ಚು ರಕ್ತಸ್ರಾವದಂತಹ ಸಮಸ್ಯೆ ಎದುರಿಸಬೇಕಾಗಬಹುದು.

88
ಉಸಿರಾಟದ ತೊಂದರೆಗಳು (Breathing problem)

ನಿಮ್ಮ ಶ್ವಾಸಕೋಶಗಳ ಬಗ್ಗೆ ಕಾಳಜಿ ವಹಿಸೋದು ಮತ್ತು ವಯಸ್ಸಾದಂತೆ ಉಸಿರಾಟದ ವ್ಯಾಯಾಮ ಮಾಡೋದು ಬಹಳ ಮುಖ್ಯ. ಏಕೆಂದರೆ 30 ರ ನಂತರ, ನಮ್ಮ ಶ್ವಾಸಕೋಶ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸೋದನ್ನು ನಿಲ್ಲಿಸಲು ಪ್ರಾರಂಭಿಸುತ್ತೆ. ಈ ಕಾರಣದಿಂದಾಗಿ ಉಸಿರಾಟದ ತೊಂದರೆ, ಆಯಾಸದಂತಹ ಸಮಸ್ಯೆ ಎದುರಿಸಬಹುದು. ಹಾಗಾಗಿ 30 ರ ನಂತರ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸೋದು ಅತ್ಯಗತ್ಯ.   

Read more Photos on
click me!

Recommended Stories