ಹೌದು, ಇದನ್ನು ಸೌಂದರ್ಯ(Beauty)ಹೆಚ್ಚಿಸಲು ಬಳಸುತ್ತಾರೆ. ಅನೇಕ ಜನರು ಇದನ್ನು ತಿನ್ನುವುದರ ಜೊತೆಗೆ ಮುಖಕ್ಕೆ ಹಚ್ಚುತ್ತಾರೆ. ಬೇಸಿಗೆಯಲ್ಲಿ, ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ ,ಮಾವಿನ ಹಣ್ಣನ್ನು ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ನಂತೆ ಮುಖಕ್ಕೆ ಹಚ್ಚುವ ಮೂಲಕ, ಮುಖದ ಮೇಲೆ ಮೇಕಪ್ ಇಲ್ಲದೆ ಇದ್ರೂನು ನೀವು ಹೊಳಪನ್ನು ಪಡೆಯಬಹುದು.
ಬೇಸಿಗೆಯಲ್ಲಿ ಮಾವಿನಹಣ್ಣಿಗಿಂತ(Mango) ಉತ್ತಮವಾದುದು ಮತ್ತೊಂದಿಲ್ಲ ಯಾಕೆ ಗೊತ್ತಾ?, ಏಕೆಂದರೆ ಇದು ಈ ಸೀಸನ್ ನಲ್ಲಿ ಸುಲಭವಾಗಿ ಸಿಗುತ್ತೆ. ಮಾವಿನ ಹಣ್ಣಿನ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅದರ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ, ನಿಮಗೂ ತಿಳಿದಿಲ್ಲ ಅಲ್ವಾ?
ಹೆಚ್ಚಿನ ಜನರು ಮಾವಿನ ಹಣ್ಣು ತಿಂದು ಸಿಪ್ಪೆ ಎಸೆಯುತ್ತಾರೆ. ಆದರೆ ಚರ್ಮದ ಆರೈಕೆಯಲ್ಲಿ(Skin care), ಮಾವಿನ ಸಿಪ್ಪೆಗಳನ್ನು ಒಂದಲ್ಲ, ಅನೇಕ ರೀತಿಯಲ್ಲಿ ಬಳಸಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ನಿಮ್ಮ ಚರ್ಮವು ಎಣ್ಣೆಯುಕ್ತ ಮತ್ತು ಜಿಗುಟಾದಂತಿದ್ದರೆ, ಖಂಡಿತವಾಗಿಯೂ ಅದನ್ನು ಬಳಸಿ.
ಮಾವಿನ ಹಣ್ಣು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿವೆ, ಇದು ಫ್ರೀ ರಾಡಿಕಲ್ ಗಳಿಂದ(Free radical) ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ವಯಸ್ಸಾಗುವಿಕೆಯ ಚಿಹ್ನೆಯನ್ನು ನಿಧಾನಗೊಳಿಸುವಲ್ಲಿ ಇದು ಪರಿಣಾಮಕಾರಿ ಅನ್ನೋದು ತಿಳಿದು ಬಂದಿದೆ.
ಮಾವಿನ ಹಣ್ಣಿನ ಸಿಪ್ಪೆನ ಮುಖಕ್ಕೆ ಹಚ್ಚೋದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ…
ಓಪನ್ ಪೋರ್ಸ್ ಗಳನ್ನು(Open pores) ಕಡಿಮೆ ಮಾಡಲು ಮುಖದ ಮೇಲೆ ದೊಡ್ಡ ಓಪನ್ ಪೋರ್ಸ್ ಗಳಿದ್ದರೆ, ನೀವು ಮಾವಿನ ಹಣ್ಣನ್ನು ತಿಂದ ನಂತರ, ಅದರ ಸಿಪ್ಪೆಗಳನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿ ಇರಿಸಿ. ಒಂದು ಗಂಟೆಯ ನಂತರ, ಈ ಸಿಪ್ಪೆಗಳಿಂದ ಮುಖವನ್ನು ಮಸಾಜ್ ಮಾಡಿ.
ಮುಖಕ್ಕೆ ಮಸಾಜ್ (Massage) ಮಾಡೊದ್ರಿಂದ ಚರ್ಮಕ್ಕೆ ವಿಶ್ರಾಂತಿ ನೀಡುವುದರ ಜೊತೆಗೆ, ಇದು ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಈ ವಿಧಾನವು ಮೊಡವೆಗಳ ಸಮಸ್ಯೆಯನ್ನು ಸಹ ನಿವಾರಿಸುತ್ತೆ. ಮಾವಿನ ಹಣ್ಣಿನ ಸಿಪ್ಪೆಗಳನ್ನು ನೀವು ಪ್ರತಿದಿನ ಮುಖದ ಮಸಾಜ್ ಗಾಗಿ ಈ ರೀತಿಯಾಗಿ ಬಳಸಬಹುದು.
ಟ್ಯಾನಿಂಗ್(Tanningt) ಅನ್ನು ತೆಗೆದುಹಾಕಲು ಈ ಫೇಸ್ ಪ್ಯಾಕ್ ಬೆಸ್ಟ್
ಟ್ಯಾನಿಂಗ್ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ, ಈ ಸಮಸ್ಯೆ ಹೆಚ್ಚಾಗಿ ಜನರಿಗೆ ಸಂಭವಿಸುತ್ತದೆ. ನೀವು ಅದನ್ನ ನಿವಾರಣೆ ಮಾಡಬೇಕು ಎಂದು ಬಯಸಿದರೆ, ಈ ಫೇಸ್ ಪ್ಯಾಕ್ ಅನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮುಖಕ್ಕೆ ಹಚ್ಚಿ.
ಇದಕ್ಕಾಗಿ, ಮಾವಿನ ಹಣ್ಣಿನ ಸಿಪ್ಪೆಗಳನ್ನು ರುಬ್ಬಿ ಮತ್ತು ಅದರಲ್ಲಿ ಒಂದು ಟೀ ಚಮಚ ಮೊಸರನ್ನು(Curd) ಮಿಶ್ರಣ ಮಾಡಿ. ಪೇಸ್ಟ್ ದಪ್ಪವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ಸುಮಾರು ೧೦ ದಿನಗಳವರೆಗೆ ಹಚ್ಚೋದ್ರಿಂದ ಟ್ಯಾನಿಂಗ್ ಸಮಸ್ಯೆಯನ್ನು ತೆಗೆದುಹಾಕುತ್ತದೆ.
ಬ್ರೈಟ್ ಸ್ಕಿನ್(Bright skin) ಪಡೆಯುವಿರಿ
ಕಲೆ ರಹಿತ ಮುಖವನ್ನು ಪಡೆಯಲು ನಾವು ವಿವಿಧ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ನಮ್ಮ ಮನೆಯಲ್ಲಿ ಅಂತಹ ಅನೇಕ ಪದಾರ್ಥಗಳಿವೆ, ಅವುಗಳನ್ನು ಈ ಸಮಸ್ಯೆಯನ್ನು ನಿವಾರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಟ್ರೈ ಮಾಡಿ ನೋಡಿ.
ಮಾವಿನ ಹಣ್ಣಿನ ಸಿಪ್ಪೆಗಳನ್ನು ತೆಗೆದುಕೊಂಡು ಅದರ ಮೇಲೆ ಜೇನುತುಪ್ಪವನ್ನು(Honey) ಹಾಕಿ. ಈಗ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ, ನಂತರ 5 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ನಿಮ್ಮ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸಿ. ಸ್ನಾನ ಮಾಡುವ ಮೊದಲು ಇದನ್ನು ಮಾಡಿ. ಒಂದು ವಾರದ ನಂತರ, ನಿಮ್ಮ ಮುಖದಲ್ಲಿ ವ್ಯತ್ಯಾಸವನ್ನ ನೀವೇ ನೋಡುತ್ತೀರಿ.
ಮಾವಿನ ಹಣ್ಣಿನ ಸಿಪ್ಪೆಗಳಿಂದ ಸ್ಕ್ರಬ್ ಗಳನ್ನು ತಯಾರಿಸಿ
ಮಾವಿನ ಹಣ್ಣಿನ ಸಿಪ್ಪೆಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಅದರಲ್ಲಿ ಕಾಫಿ ಪುಡಿಯನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ದೇಹ ಎರಡೂ ಕಡೆ ಸ್ಕ್ರಬ್(Scrub) ಮಾಡಲು ಬಳಸಬಹುದು. ಅದೇ ಸಮಯದಲ್ಲಿ, ನಿಮ್ಮ ಚರ್ಮವು ಡ್ರೈ ಆಗಿದ್ದರೆ, ನೀವು ಅದರಲ್ಲಿ ಕೆಲವು ಹನಿ ಕೊಬ್ಬರಿ ಎಣ್ಣೆಯನ್ನ ಮಿಶ್ರಣ ಮಾಡಬಹುದು. ನೀವು ಸ್ಕ್ರಬ್ ಮಾಡಲು ಹೊರಟಿರುವ ದಿನದಂದು ಚರ್ಮದ ಮೇಲೆ ಸಾಬೂನು ಅಥವಾ ಇತರ ಕ್ಲೆನ್ಸರ್ ಅನ್ನು ಹಚ್ಚದಿರಲು ಪ್ರಯತ್ನಿಸಿ.