Home remedy for pimple: ಮೊಡವೆ ಕಲೆಗಳನ್ನು ದೂರ ಮಾಡಲು ಇಲ್ಲಿದೆ ದೇಸಿ ಟ್ರಿಕ್ಸ್ !

First Published May 16, 2022, 12:04 PM IST

How to get rid of pimple: ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ ಎಂದರೆ ಮೊಡವೆ ಸಮಸ್ಯೆ. ಏನಾದರು ಕಾರ್ಯಕ್ರಮ ಇದೆ ಅನ್ನೋವಾಗ್ಲೇ ಮುಖದಲ್ಲಿ ಪಿಂಪಲ್ ಮೂಡುವ ಮೂಲಕ ಅಯ್ಯೋ ಎನಿಸುವಂತೆ ಮಾಡುತ್ತೆ. ಮೊಡವೆಗಳು ಅತ್ಯಂತ ಸಾಮಾನ್ಯವಾದ ಚರ್ಮದ ಸಮಸ್ಯೆಯಾಗಿದೆ ಮತ್ತು ಮೊಡವೆಗಳಿಂದ ಬಳಲುತ್ತಿರುವ ಅನೇಕ ಜನರನ್ನು ನಾವು ಕಾಣಬಹುದು.  ಆದರೆ ಮೊಡವೆ ನಿವಾರಣೆಯಾದ ಮೇಲೆ ಉಳಿಯುವ ಕಲೆಯನ್ನು ಹೇಗೆ ತೊಡೆದುಹಾಕೋದು? 

 ಮೊಡವೆ ನಿವಾರಣೆಯಾದ ಮೇಲೆ ಕಲೆಗಳು ತನ್ನಷ್ಟಕ್ಕೆ ತಾನು ನಿವಾರಣೆಯಾಗುತ್ತೆ.  ಅಂದರೆ ಮೊಡವೆಗಳು (pimple)ಗುಣ ಆದ ನಂತರ, ಚರ್ಮವು ಕಲೆಯಿಂದ ಉಂಟಾದ ಹಾನಿ ತಾನಾಗಿಯೇ ನಿವಾರಣೆಯಾಗುತ್ತೆ. ಕಾಲಜನ್ ಅನ್ನು ಉತ್ಪಾದಿಸುವ ಮೂಲಕ, ಇದು ಚರ್ಮದ ಮೇಲಿನ ಕಲೆಗಳನ್ನು ನಿವಾರಣೆ ಮಾಡುತ್ತೆ. ತುಂಬಾ ಕಡಿಮೆ ಕಾಲಜನ್ ಹೊಂದಿರುವವರಿಗೆ ಗಾಯದ ಕಲೆ ಹಾಗೆಯೇ ಉಳಿಯಬಹುದು.
 

ಹಾಗಾದರೆ ಚರ್ಮದ ಮೇಲೆ ಉಂಟಾದ ಕಲೆಗಳನ್ನು ನಿವಾರಣೆ ಮಾಡೋಡು ಹೇಗೆ ಗೊತ್ತಾ? ಮೊಡವೆಗಳ ಗಾಯದ ಚಿಕಿತ್ಸೆಗಾಗಿ ಟ್ರೂ ಎಸ್ ಸರ್ಜರಿ ಮತ್ತು ಲೇಸರ್ ರೀಸರ್ಫೇಸಿಂಗ್ ನಂತಹ ಚಿಕಿತ್ಸೆ ಇದ್ದರೂ, ನೀವು ನೈಸರ್ಗಿಕ ವಿಧಾನಗಳನ್ನು ಟ್ರೈ ಮಾಡೋ ಮೂಲಕವೂ ಪರಿಹಾರವನ್ನು ಕಂಡುಕೊಳ್ಳಬಹುದು. ಏನೆಲ್ಲಾ ನೈಸರ್ಗಿಕ ವಿಧಾನ ಬಳಸಬಹುದು ನೋಡೋಣ… 

ಅಲೋವೆರಾ  (aloevera)
ಅಲೋವೆರಾ ಒಂದು ಸಾಮಾನ್ಯ ಮನೆ ಮದ್ದಾಗಿದೆ ಅನ್ನೋದು ನಿಮಗೂ ಗೊತ್ತು. ಇದು ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ. ಮೊಡವೆಗಳನ್ನು ಹೋಗಲಾಡಿಸಲು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕೆಲಸ ಮಾಡುತ್ತದೆ. ಸೌಂದರ್ಯ ತಜ್ಞರ ಪ್ರಕಾರ, ಅಲೋವೆರಾವನ್ನು ನೇರವಾಗಿ ಪಿಂಪಲ್ಸ್ ಗೆ ಹಚ್ಚೋದ್ರಿಂದ ಪಿಂಪಲ್ ಗಾತ್ರವು ಕಡಿಮೆಯಾಗುತ್ತೆ. 
 

 ನೀವು ಅಲೋವೆರಾ ಜೆಲ್ ಗಳು ಮತ್ತು ಇತರ ಉತ್ಪನ್ನಗಳನ್ನು ಅಂಗಡಿಗಳಲ್ಲಿ ಕಾಣಬಹುದು. ಅಥವಾ ಮನೆಯಲ್ಲಿ ಅಲೋವೆರಾ ಸಸ್ಯಗಳನ್ನು ಬೆಳೆಸುವ ಮೂಲಕ ಔಷಧಿ ತಯಾರಿಸಬಹುದು. ಎಲೆಗಳನ್ನು ಕತ್ತರಿಸಿ ಮತ್ತು ಪ್ರತಿದಿನ ಒಮ್ಮೆ ನೇರವಾಗಿ ಚರ್ಮಕ್ಕೆ ಅಥವಾ ಪಿಂಪಲ್ ಮೇಲೆ ಅಲೋವೆರಾ ಜೆಲ್ (aloevera gel) ಹಚ್ಚಬಹುದು. 

ಜೇನುತುಪ್ಪವನ್ನು (Honey)ಸುಟ್ಟಗಾಯಗಳು, ಗಾಯಗಳು ಇತ್ಯಾದಿ ಸೇರಿದಂತೆ ಹಲವಾರು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜೇನುತುಪ್ಪವು  ಗಾಯವನ್ನು ಕ್ಲೀನಿಂಗ್ ಮಾಡಲು ಬಳಸಲಾಗುತ್ತೆ ಮತ್ತು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಾಯದ ಬೈಕೋಸ್ ಅನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಜೇನುತುಪ್ಪವು ಚರ್ಮದ ಸೋಂಕಿನ ವಿರುದ್ಧವೂ ಹೋರಾಡುತ್ತದೆ. 

ಕಪ್ಪು ಬೀಜದ ಎಣ್ಣೆ  (black seed oil)
ನಿಗೆಲ್ಲಾ ಸ್ಯಾಟಿವಾ ಅನ್ನೋ ಕಪ್ಪು ಬೀಜದ ಎಣ್ಣೆಯ ಬಗ್ಗೆ ನೀವು ಕೇಳಿದ್ದೀರಾ? ಇದೊಂದು ಸಾಮಾನ್ಯ ಔಷಧೀಯ ಸಸ್ಯವಾಗಿದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿರುವ ಜೊತೆಗೆ, ತೈಲವು ಉರಿಯೂತ ಶಮನಕಾರಿಯಾಗಿದೆ. ಇದು ಪಿಂಪಲ್ ಕಲೆ ನಿವಾರಿಸುತ್ತೆ. 

 ಗಾಯಗಳನ್ನು ಅಥವಾ ಪಿಂಪಲ್ ನಿಂದ ಉಂಟಾದ ಕಲೆಗಳನ್ನು ನಿವಾರಿಸಲು ಕಪ್ಪು ಬೀಜದ ಎಣ್ಣೆಯನ್ನು ನೀವು ಟ್ರೈ ಮಾಡಬಹುದು. ಇದು ಮೊಡವೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಮೊಡವೆ ಕಲೆಗಳನ್ನು ಕಡಿಮೆ ಮಾಡಲು ಪ್ರತಿದಿನ ಒಮ್ಮೆ ಈ ಎಣ್ಣೆಯನ್ನು ಹಚ್ಚಿ.

ನಿಂಬೆ ರಸ
 ಮೊಡವೆ ಕಲೆಗಳನ್ನು ತೊಡೆದುಹಾಕಲು ನಿಂಬೆ ರಸವು ನೀವು ಆಯ್ಕೆ ಮಾಡಬಹುದಾದ ಬೆಸ್ಟ್ ಮನೆಮದ್ದಾಗಿದೆ.  ಚರ್ಮದ ಟೋನ್ ಅನ್ನು ಸಹ ಹೊರಹಾಕಲು ಇದು ಸಹಾಯ ಮಾಡುತ್ತದೆ.  ನಿಂಬೆ ರಸವು ಹೈಲಿ ಅಸಿಡಿಕ್ ಆದ ಕಾರಣ, ಕಲೆಗಳಿಗೆ ನೇರವಾಗಿ ಹನಿಗಳನ್ನು ಹಚ್ಚಿ. 

ಯಾವುದೇ  ಉತ್ಪನ್ನಗಳನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ - ಅದು  ನ್ಯಾಚುರಲ್ ಮತ್ತು ಕೆಮಿಕಲ್ ಯುಕ್ತ ಉತ್ಪನ್ನವೇ ಆಗಿರಲಿ. ನಿಮ್ಮ ಸ್ಕಿನ್ ಅನ್ನು ಕಾಪಾಡಿಕೊಳ್ಳಲು ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯವಾಗಿದೆ. 

click me!