ಡೆಲಿವರಿ ಆದ ಬಳಿಕ ಮಹಿಳೆಯರನ್ನು ಕಾಡುವ ಖಿನ್ನತೆಗೂ ಸಿಕ್ಕಿದೆ ಪರಿಹಾರ

First Published | Aug 12, 2023, 5:23 PM IST

ಪ್ರಸವಾ ನಂತರ ಖಿನ್ನತೆ ಸಮಸ್ಯೆ ಕಾಡೋದು ಸಾಮಾನ್ಯ. ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿವರೆಗೆ ಯಾವುದೇ ಔಷಧಿ ಇರಲಿಲ್ಲ. ಆದರೆ ಇದೀಗ ಪ್ರಸವಾನಂತರದ ಖಿನ್ನತೆ ಮಾತ್ರೆಯನ್ನು ಕಂಡು ಹಿಡಿಯಲಾಗಿದೆ. ಅದರ ಬಗ್ಗೆ ತಿಳಿಯೋಣ. 
 

ವಿಶ್ವದ ಮೊದಲ ಪ್ರಸವ ನಂತರದ ಖಿನ್ನತೆ ಮಾತ್ರೆ (Postpartum Depression medicine) ಜುರ್ಜುವ್ ಅನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ FDA ಅನುಮೋದಿಸಿದೆ. ಪ್ರಸವಾನಂತರದ ಖಿನ್ನತೆಯೊಂದಿಗೆ ಅಂದರೆ ಗರ್ಭಧಾರಣೆ ನಂತರ ಪಿಪಿಡಿಯೊಂದಿಗೆ ಹೋರಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಈ ಔಷಧಿ ತುಂಬಾ ಸಹಾಯಕ. ಇದು ಹೆರಿಗೆಯ ನಂತರ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಗಂಭೀರ ಸಮಸ್ಯೆಯಾಗಿದೆ. ಈ ಔಷಧಿ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ.

ಗರ್ಭಧಾರಣೆಯು (pregnancy) ಮಹಿಳೆಯರ ಜೀವನದ ಅತ್ಯದ್ಭುತ ಕ್ಷಣ. ಆದರೆ ಈ ಸಮಯದಲ್ಲಿ ಅವರು ಅನೇಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಮೂಡ್ ಸ್ವಿಂಗ್ಸ್ ಅಥವಾ ಆಹಾರದ ಕಡು ಬಯಕೆಗಳಾಗಿರಬಹುದು, ಗರ್ಭಾವಸ್ಥೆಯಲ್ಲಿ ಮಹಿಳೆ ಅನೇಕ ವಿಭಿನ್ನ ವಿಷಯಗಳನ್ನು ಅನುಭವಿಸುತ್ತಾಳೆ, ಇದು ಈ ದಿನಗಳಲ್ಲಿ ಸಾಮಾನ್ಯ. ಆದರೆ ಗರ್ಭಧಾರಣೆಯ ನಂತರ ಎಲ್ಲಾ ಮಹಿಳೆಯರಿಗೆ ಒಂದೇ ರೀತಿಯಾಗಿರೋದಿಲ್ಲ. ಇದು ಎಲ್ಲರಿಗೂ ವಿಭಿನ್ನವಾಗಿರುತ್ತೆ. 
 

Latest Videos


ಅನೇಕ ಮಹಿಳೆಯರು ಗರ್ಭಧಾರಣೆಯ ನಂತರ ಪ್ರಸವಾನಂತರದ ಖಿನ್ನತೆಗೆ (postpartum depression) ಒಳಗಾಗುತ್ತಾರೆ, ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿಯೇ ಇರೋದಿಲ್ಲ. ಇದು ಗರ್ಭಧಾರಣೆಯ ನಂತರ ಮಹಿಳೆಯರಲ್ಲಿ ಕಂಡು ಬರುವಂತಹ ಅತ್ಯಂತ ಸಾಮಾನ್ಯ ಮತ್ತು ಗಂಭೀರ ಸಮಸ್ಯೆಯಾಗಿದೆ, ಇದು ಅನೇಕ ಸಂದರ್ಭಗಳಲ್ಲಿ ಮಾರಣಾಂತಿಕವಾಗಲೂ ಬಹುದು. ಅಂತಹ ಪರಿಸ್ಥಿತಿಯಲ್ಲಿ, ಇತ್ತೀಚೆಗೆ ಆಹಾರ ಮತ್ತು ಔಷಧ ಆಡಳಿತವು ಈ ಸಮಸ್ಯೆಯನ್ನು ಎದುರಿಸಲು ಪ್ರಸವಾನಂತರದ ಖಿನ್ನತೆಗೆ ಔಷಧಿಯನ್ನು ಅನುಮೋದಿಸಿದೆ.
 

ಇದು ಮಹಿಳೆಯರಿಗಾಗಿ ಉತ್ತಮ ಔಷಧಿಯಾಗಿದೆ
ಜುರ್ಜುವೆ ಎಂಬ ಈ ಔಷಧದ ಬಗ್ಗೆ ಮಾತನಾಡಿದ ಆಹಾರ ಮತ್ತು ಔಷಧ ವಲಸೆ ನಿರ್ದೇಶಕ ಡಾ.ಟಿಫಾನಿ ಫಾರ್ಚೂನ್, ಪ್ರಸವ ನಂತರದ ಖಿನ್ನತೆಗೆ ಮೌಖಿಕ ಔಷಧಿಯನ್ನು ಪರಿಚಯಿಸುವುದರಿಂದ ಈ ಗಂಭೀರ ಮತ್ತು ಕೆಲವೊಮ್ಮೆ ಮಾರಣಾಂತಿಕವಾಗಬಲ್ಲ ಸಮಸ್ಯೆಯಿಂದ ಬಳಲುತ್ತಿರುವ ಎಲ್ಲಾ ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಹೇಳಿದರು.

ಪ್ರಸವಾನಂತರದ ಖಿನ್ನತೆ ಎಂದರೇನು?
ಪ್ರಸವಾನಂತರದ ಖಿನ್ನತೆ (PPD) ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ಹೆರಿಗೆಯ ನಂತರ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಮಹಿಳೆಯರು ಮತ್ತು ಪುರುಷರ ಮೇಲೆ ಪರಿಣಾಮ ಬೀರುವ "ಬೇಬಿ ಬ್ಲೂಸ್" ಗಿಂತ ಭಿನ್ನ., ಆದರೂ ಇದು ಸಾಮಾನ್ಯವಾಗಿ ಮಹಿಳೆಯರ ಮೇಲೂ ಪರಿಣಾಮ ಬೀರುತ್ತದೆ. ಪಿಪಿಡಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ವಾರಗಳು, ತಿಂಗಳುಗಳು ಅಥವಾ ವರ್ಷಗಳವರೆಗೆ ಮುಂದುವರಿಯಬಹುದು ಮತ್ತು ಕೆಲವೊಮ್ಮೆ ಮಾರಣಾಂತಿಕವಾಗಬಹುದು.

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು
ಖಿನ್ನತೆಯ ಇತರ ರೂಪಗಳಂತೆ, ಪಿಪಿಡಿ ವಿವಿಧ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಪ್ರಸವಾನಂತರದ ಖಿನ್ನತೆಯ ಮುಖ್ಯ ಲಕ್ಷಣಗಳೆಂದರೆ:
ದುಃಖ, ಕಿರಿಕಿರಿ ಅಥವಾ ಆತಂಕ
ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು
ಆಯಾಸ ಅಥವಾ ಶಕ್ತಿಯ ಕೊರತೆ
ಹಸಿವು ಅಥವಾ ನಿದ್ರೆಯ ಮಾದರಿಗಳಲ್ಲಿ ಬದಲಾವಣೆಗಳು
ಏಕಾಗ್ರತೆ ಸಾಧಿಸಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟ
ಕುಟುಂಬ ಮತ್ತು ಸ್ನೇಹಿತರಿಂದ ಪ್ರತ್ಯೇಕತೆ
ತಲೆನೋವು ಅಥವಾ ಜೀರ್ಣಕಾರಿ ಸಮಸ್ಯೆಗಳು (digestion problem)
ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಆಲೋಚನೆಗಳು (ತೀವ್ರ ಸಂದರ್ಭಗಳಲ್ಲಿ)

ಪಿಪಿಡಿ ಔಷಧಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳು
ಮಾರ್ಗಸೂಚಿಗಳ ಪ್ರಕಾರ, ಮಾತ್ರೆಯನ್ನು 14 ದಿನಗಳವರೆಗೆ ದಿನಕ್ಕೆ ಒಮ್ಮೆ ತೆಗೆದುಕೊಳ್ಳಬೇಕು.
ಜುರ್ಜುವೆ  ಔಷಧಿಯ ಲೇಬಲಿಂಗ್ ನಲ್ಲಿರುವ ಬಾಕ್ಸ್ ಪ್ರಕಾರ, ಈ ಔಷಧವು ಒಬ್ಬ ವ್ಯಕ್ತಿಯ ವಾಹನ ಚಲಾಯಿಸುವ ಮತ್ತು ಇತರ ಅಪಾಯಕಾರಿ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸುತ್ತದೆ.

FDA ಎಚ್ಚರಿಕೆಯ ಪ್ರಕಾರ, ಜುರ್ಜುವೆಯ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಮಂಪರು, ತಲೆತಿರುಗುವಿಕೆ, ಅತಿಸಾರ, ಆಯಾಸ, ನಾಸೊಫಾರಿಂಗೈಟಿಸ್ (ಸಾಮಾನ್ಯ ಶೀತ) ಮತ್ತು ಮೂತ್ರನಾಳದ ಸೋಂಕುಗಳು ಸೇರಿವೆ.
ಮಾತ್ರೆ ತೆಗೆದುಕೊಂಡ ನಂತರ ಕನಿಷ್ಠ 12 ಗಂಟೆಗಳ ಕಾಲ ರೋಗಿಗಳು ಭಾರಿ ವಾಹನಗಳನ್ನು ಓಡಿಸಬಾರದು ಅಥವಾ ನಿರ್ವಹಿಸಬಾರದು ಎಂದು ಸಂಸ್ಥೆ ಎಚ್ಚರಿಸಿದೆ.
ಪ್ರಸವಾನಂತರದ ಖಿನ್ನತೆಯ ತೀವ್ರ ಪ್ರಕರಣಗಳೊಂದಿಗೆ ಹೋರಾಡುತ್ತಿರುವ ಮಹಿಳೆಯರಿಗೆ ಮೌಖಿಕ ಔಷಧದ (oral medicine) ಸೇವನೆ ಪ್ರಯೋಜನಕಾರಿ.

ಭಾರತದಲ್ಲಿ ಪ್ರಸವಾನಂತರದ ಖಿನ್ನತೆ
ಈ ಔಷಧವು ಮಾನಸಿಕ ಆರೋಗ್ಯ ರಕ್ಷಣೆಗೆ ಅತ್ಯುತ್ತಮ ಔಷಧಿಯಾಗಿದೆ. ಆದರೆ ಭಾರತದಲ್ಲಿ ಇದು ಇನ್ನೂ ಅಷ್ಟಾಗಿ ಅಗತ್ಯಕ್ಕೆ ಬರೋದಿಲ್ಲ. ಯಾಕಂದ್ರೆ, ಭಾರತದಲ್ಲಿ ಅನೇಕ ಜನರಿಗೆ ಪ್ರಸವಾನಂತರದ ಖಿನ್ನತೆಯ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದಿಲ್ಲ. ಈ ಬಗ್ಗೆ ಅರಿವಿನ ಕೊರತೆಯಿದ್ದಾಗ, ಹೊಸ ತಾಯಂದಿರಿಗೆ ಸಹಾಯ ಮಾಡೋದು ಸಹ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ಇದರ ಬಗ್ಗೆ ಸಂಭಾಷಣೆ ಮಾಡೋದು ಅವಶ್ಯಕ, ಇದರಿಂದ ಮಹಿಳೆಯರು ಇದನ್ನು ನಿಭಾಯಿಸಬಹುದು, ಮತ್ತು ಖಿನ್ನತೆಯಿಂದ ಹೊರ ಬರಬಹುದು. 

click me!