ಸ್ತನಪಾನ ಮಾಡೋದ್ರಿಂದ ನಿಜಕ್ಕೂ ತೂಕ ಇಳಿಯುತ್ತಾ?

First Published | Aug 11, 2023, 3:07 PM IST

ಸ್ತನ್ಯಪಾನದ ಸಮಯದಲ್ಲಿ ತೂಕ ನಷ್ಟ ಉಂಟಾಗೋದು ಸಾಮಾನ್ಯವೋ ಅಲ್ಲವೋ ಎನ್ನುವ ಬಗ್ಗೆ ಹೆಚ್ಚಿನ ಜನರಿಗೆ ಅನೇಕ ರೀತಿಯ ಸಂಶಯಗಳಿವೆ. ನಿಜವಾಗಿಯೂ ಎದೆ ಹಾಲು ನೀಡೋದ್ರಿಂದ ತೂಕ ಇಳಿಯುತ್ತದೆಯೋ ತಜ್ಞರಿಂದ ತಿಳಿಯೋಣ. 
 

ಸ್ತನ್ಯಪಾನದ (breastfeeding) ಸಮಯದಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಇದಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿ ತಿಳಿದುಕೊಳ್ಳೋದು ತುಂಬಾ ಮುಖ್ಯ. ಸ್ತನ್ಯಪಾನಕ್ಕೆ ಸಂಬಂಧಿಸಿದಂತೆ ಜನರು ಅನೇಕ ಅಂತೆ - ಕಂತೆಗಳನ್ನು ಹೇಳುತ್ತಾರೆ. ಅದನ್ನೆಲ್ಲಾ ನಂಬಿಕೊಂಡು ಮಾಡಿದ್ರೆ ಅದರಿಂದ ಹಾನಿಯನ್ನುಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಆದ್ದರಿಂದ, ಸ್ತನ್ಯಪಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ನಂಬುವ ಮೊದಲು, ತಜ್ಞರನ್ನು ಸಂಪರ್ಕಿಸೋದು ಬೆಸ್ಟ್. 
 

ಸ್ತನಪಾನದಿಂದ ತೂಕ ನಷ್ಟ (weight loss) ಉಂಟಾಗೋದು ಸಾಮಾನ್ಯವೇ? ಅನ್ನೋ ಬಗ್ಗೆ ಹಲವಾರು ಬಾರಿ ಮಹಿಳೆಯರಲ್ಲಿ ಸಂಶಯ ಉಂಟಾಗಿರುತ್ತೆ.  ಈ ವಿಷಯದ ಬಗ್ಗೆ ತಜ್ಞರು ಏನೆನ್ನುತ್ತಾರೆ? ನಿಜವಾಗಿಯೂ ಸ್ತನಪಾನದಿಂದ ತೂಕ ಇಳಿಕೆಯಾಗುತ್ತದೆಯೇ? ಅಥವಾ ಇದಕ್ಕೆ ಬೇರೆ ಏನಾದರೂ ಕಾರಣ ಇರಬಹುದೇ? ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

Tap to resize

ತೂಕದ ಮೇಲೆ ಸ್ತನ್ಯಪಾನದ ಪರಿಣಾಮಗಳು
ಈಗಷ್ಟೇ ತಾಯಿಯಾದ ಮಹಿಳೆಯರಿಗೆ ತೂಕ ಇಳಿಸಿಕೊಳ್ಳಲು ಸ್ತನ್ಯಪಾನವು ಉತ್ತಮ ಆಯ್ಕೆ. ತಜ್ಞರ ಪ್ರಕಾರ, ಸ್ತನ್ಯಪಾನವು ತಾಯಿಯ ತೂಕದ ಮೇಲೆ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮ (positive effect) ಬೀರುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ಪ್ರತಿದಿನ ಸುಮಾರು 500 ಕಿಲೋ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಇದು ಸುಮಾರು 45-60 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ಬರ್ನ್ ಮಾಡುವ ಕ್ಯಾಲೊರಿಗಳಿಗೆ ಸಮನಾಗಿರುತ್ತದೆ. 

ಸ್ತನ್ಯಪಾನವು ಪ್ರಸವಾದ ನಂತರದ ತೂಕ ನಷ್ಟದ ಮೇಲೆ ಅನೇಕ ವಿಷಯಗಳು ಪರಿಣಾಮ ಬೀರುತ್ತವೆ. ಗರ್ಭಿಣಿಯಾಗುವ ಮೊದಲಿನ ತೂಕ, ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ, ಕ್ಯಾಲೊರಿ ಸೇವನೆ, ದೈಹಿಕ ಚಟುವಟಿಕೆ (Physical Activity), ಇವೆಲ್ಲವೂ ಹೆರಿಗೆಯ ನಂತರ ತೂಕ ನಷ್ಟದ ಮೇಲೆ ಪರಿಣಾಮ ಬೀರುತ್ತವೆ. ಸ್ತನ್ಯಪಾನ ಮಾಡುವ ತಾಯಂದಿರು ತಿಂಗಳಿಗೆ ಸರಾಸರಿ 0.5-1 ಕೆಜಿ ತೂಕವನ್ನು ಕಳೆದುಕೊಳ್ಳಬಹುದು. ಸ್ತನ್ಯಪಾನ ಮಾಡದ ಮಹಿಳೆಯರಿಗಿಂತ ಸ್ತನ್ಯಪಾನ ಮಾಡುವ ಮಹಿಳೆಯರು ಹೆಚ್ಚು ತೂಕ ಇಳಿಸಿಕೊಳ್ಳುತ್ತಾರಂತೆ. 
 

ಸ್ತನ್ಯಪಾನ ಮಾಡುವ ತಾಯಂದಿರಿಗೆ ಆಹಾರಕ್ರಮ
ಸ್ತನ್ಯಪಾನ ಮಾಡುವ ಮಹಿಳೆಯರು ಸಹ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ತಮ್ಮ ಆಹಾರದಲ್ಲಿ ಧಾನ್ಯ, ದ್ವಿದಳ ಧಾನ್ಯ, ಪ್ರೋಟೀನ್, ಫೈಬರ್ ಸಮೃದ್ಧ (fiber based food) ಮತ್ತು ತರಕಾರಿನ್ನು ಸೇರಿಸಬೇಕು ಮತ್ತು ಸರಿಯಾದ ಪ್ರಮಾಣದ ನೀರು ಮತ್ತು ಕಡಿಮೆ ಸಂಸ್ಕರಿಸಿದ ಆಹಾರವನ್ನು ಸೇವಿಸೋದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

ಪ್ರತಿದಿನ 1500-1800 ಕ್ಯಾಲೊರಿಗಳಿಗಿಂತ ಕಡಿಮೆ ತಿನ್ನಬೇಡಿ ಏಕೆಂದರೆ ಇದು ಹಾಲಿನ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ. ಸ್ತನಪಾನ ಮಾಡುವ ಮಹಿಳೆಯರು ಹೆಚ್ಚು ಆಹಾರ ಸೇವಿಸಿದರೆ ಮತ್ತು ಕಡಿಮೆ ವಾಕಿಂಗ್ ಮಾಡಿದರೆ, ಅಂತಹ ಸಂದರ್ಭದಲ್ಲಿ ಸ್ತನ್ಯಪಾನದ ಮೂಲಕ ಕ್ಯಾಲೊರಿ ಬರ್ನ್ (calory burn) ಮಾಡಬಹುದು. ಹೊಸ ತಾಯಿಯ ನಿದ್ರೆಯ ಕೊರತೆಯೂ ತೂಕದ ಮೇಲೆ ಪರಿಣಾಮ ಬೀರುತ್ತದೆ.

ಸ್ತನ್ಯಪಾನ ಮಾಡುವ ತಾಯಂದಿರು ನೆನಪಿನಲ್ಲಿಡಬೇಕಾದ ವಿಷಯಗಳು ಯಾವುವು?
ಹೆರಿಗೆಯ ನಂತರ ಕನಿಷ್ಠ 6-8 ವಾರಗಳ ನಂತರ ಕ್ಯಾಲೊರಿ ಸೇವನೆಯನ್ನು ಮಿತಿಗೊಳಿಸಬೇಕು. ಏಕೆಂದರೆ ಈ ಸಮಯದಲ್ಲಿ ಹೆರಿಗೆಯ (after delivery) ನಂತರ ಆರೋಗ್ಯವಾಗಿರಲು ಮತ್ತು ಎದೆಹಾಲನ್ನು ಪೂರೈಸಲು ಸರಿಯಾದ ಆಹಾರವು ಅವಶ್ಯಕ.

ಹೆರಿಗೆಯ 6-8 ವಾರಗಳ ನಂತರ, ವೈದ್ಯರ ಸಲಹೆಯ ಮೇರೆಗೆ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬಹುದು. ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯೊಂದಿಗೆ, ಚುರುಕಾದ ವಾಕಿಂಗ್, ಜಾಗಿಂಗ್ ಮತ್ತು ಪಿಲೇಟ್ಸ್ ಮಾಡಬಹುದು. ಆದಾಗ್ಯೂ, ಮೊದಲು ವೈದ್ಯರ ಅನುಮೋದನೆ ಅಗತ್ಯ.

Latest Videos

click me!