ಇಶಾ ಅಂಬಾನಿಯಲ್ಲಿದೆ ಅಪರೂಪದ ಅನ್‌ಕಟ್‌ ಡೈಮಂಡ್‌ ನೆಕ್ಲೇಸ್‌, ಬೆಲೆ ಕೇಳಿದ್ರೆ ತಲೆಸುತ್ತಿ ಬೀಳ್ತೀರಾ!

Published : Aug 09, 2023, 02:11 PM ISTUpdated : Aug 09, 2023, 02:14 PM IST

ಅಂಬಾನಿ ಕುಟುಂಬದ ಲಕ್ಸುರಿಯಸ್ ಜೀವನಶೈಲಿ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತದೆ. ರಿಲಯನ್ಸ್ ರಿಟೇಲ್‌ನ್ನು ನೋಡಿಕೊಳ್ಳೋ ಇಶಾ ಅಂಬಾನಿಯ ಜ್ಯುವೆಲ್ಲರಿ ಕಲೆಕ್ಷನ್ ಅಂತೂ ಎಲ್ಲರ ಕಣ್ಣು ಕುಕ್ಕುವಂತಿದೆ. ಅದರಲ್ಲೂ ಅಪರೂಪದ ಅನ್‌ಕಟ್‌ ಡೈಮಂಡ್‌ ನೆಕ್ಲೇಸ್‌ ಬೆಲೆ ಕೇಳಿದ್ರೆ ನೀವು ದಂಗಾಗೋದು ಖಂಡಿತ.

PREV
17
ಇಶಾ ಅಂಬಾನಿಯಲ್ಲಿದೆ ಅಪರೂಪದ ಅನ್‌ಕಟ್‌ ಡೈಮಂಡ್‌ ನೆಕ್ಲೇಸ್‌, ಬೆಲೆ ಕೇಳಿದ್ರೆ ತಲೆಸುತ್ತಿ ಬೀಳ್ತೀರಾ!

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಪ್ರಸ್ತುತ ರಿಲಯನ್ಸ್ ರಿಟೇಲ್‌ನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಐಷಾರಾಮಿ ಜೀವನಶೈಲಿ ಮತ್ತು ಫ್ಯಾಷನ್ ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಇಶಾ ಅಂಬಾನಿ, ಜ್ಯುವೆಲ್ಲರಿ ಕಲೆಕ್ಷನ್ ಎಲ್ಲರ ಗಮನ ಸೆಳೆಯುತ್ತದೆ. 

27

ಇಶಾ ಅಂಬಾನಿ ವಜ್ರ, ಎಮರಾಲ್ಡ್‌, ಪಚ್ಚೆ ಕಲ್ಲು, ಪರ್ಲ್ಸ್ ಹೀಗೆ ಹಲವು ಬೆಲೆ ಬಾಳುವ ಆಭರಣಗಳ ಕಲೆಕ್ಷನ್ ಹೊಂದಿದ್ದಾರೆ. ಅದರಲ್ಲಿ ಮಲ್ಟಿ-ಸ್ಟ್ರಾಂಡ್ ಅನ್ ಕಟ್ ಡೈಮಂಡ್ ನೆಕ್ಲೇಸ್ ಕೂಡಾ ಇಶಾ ಅಂಬಾನಿ ಅವರ ಸಂಗ್ರಹದಲ್ಲಿದೆ. ಇದು ಅತ್ಯಂತ ವಿಶಿಷ್ಟ ಮತ್ತು ಸುಂದರವಾದ ಆಭರಣವಾಗಿದೆ.

37

ಇಶಾ ಅಂಬಾನಿಯವರ ಕಸ್ಟಮ್ ಡೈಮಂಡ್ ನೆಕ್ಲೇಸ್ USD 20 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಭಾವಿಸಲಾಗಿದೆ. ಇದು 165 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ್ದಾಗಿದೆ, ಆದರೆ ನಿಖರವಾದ ಬೆಲೆ ತಿಳಿದಿಲ್ಲ.

47

ಇಶಾ ಅಂಬಾನಿಯವರ ಲಕ್ಸುರಿಯಸ್‌ ಅನ್‌ಕಟ್‌ ಡೈಮೆಂಡ್ ನೆಕ್ಲೇಸ್‌ನಲ್ಲಿ ಕತ್ತರಿಸದ ವಜ್ರಗಳು ಸಂಕೀರ್ಣವಾದ ವಿನ್ಯಾಸದಲ್ಲಿ ಹೊಂದಿಸಲ್ಪಟ್ಟಿವೆ. NMACC ಲಾಂಚ್‌ನಲ್ಲಿ ಕೆಂಪು ವ್ಯಾಲೆಂಟಿನೋ ಗೌನ್‌ನೊಂದಿಗೆ ಧರಿಸಿದ್ದ ಈ ಕಸ್ಟಮ್ ನೆಕ್ಲೇಸ್ 50ಕ್ಕೂ ಹೆಚ್ಚು ದೊಡ್ಡ ಕತ್ತರಿಸದ ವಜ್ರಗಳನ್ನು ಒಳಗೊಂಡಿದೆ ಎಂದು ಭಾವಿಸಲಾಗಿದೆ.

57

ಇಶಾ ಅಂಬಾನಿ ಪತಿ ಆನಂದ್ ಪಿರಮಾಲ್ ಜೊತೆಗಿನ ವಿವಾಹ ಮಹೋತ್ಸವದ ಸಮಯದಲ್ಲಿ ತನ್ನದೇ ಆದ ಮೆಹೆಂದಿ ಸಮಾರಂಭದಲ್ಲಿ ಈ ನೆಕ್ಲೇಸ್‌ನ್ನು ಮೊದಲ ಬಾರಿಗೆ ಧರಿಸಿದ್ದರು. ಐದು ವರ್ಷಗಳ ನಂತರ NMACC ಗಾಲಾದಲ್ಲಿ ಇಶಾ ಅಂಬಾನಿ ಎರಡನೇ ಬಾರಿಗೆ ಈ ಹಾರವನ್ನು ಧರಿಸಿ ಎಲ್ಲರ ಗಮನ ಸೆಳೆದರು.

67

ಇಶಾ ಅಂಬಾನಿ ಅಂಥಾ ಅನೇಕ ಸಂಕೀರ್ಣವಾದ ನೆಕ್ಲೇಸ್‌ಗಳನ್ನು ಹೊಂದಿದ್ದಾರೆ, ಅವುಗಳಲ್ಲಿ ಒಂದು ಬೆರಗುಗೊಳಿಸುವ ಚಿನ್ನ ಮತ್ತು ಪಚ್ಚೆ ರಾಣಿ ಹಾರ್, ಅವರು ತಮ್ಮ ಮದುವೆಯ ದಿನದಂದು ಧರಿಸಿದ್ದರು. ಇಶಾ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದಿರುವ ಕಾರಣ ಅವರು ತಮ್ಮ ಜ್ಯುವೆಲ್ಲರಿ ಕಲೆಕ್ಷನ್‌ನಲ್ಲಿ ಅತ್ಯಂತ ಸುಂದರವಾದ ಜ್ಯುವೆಲ್ಸ್‌ ಕಲೆಕ್ಷನ್ ಹೊಂದಿದ್ದಾರೆ. 

77

ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲ್‌ನ್ನು ನಿರ್ವಹಿಸುತ್ತಿದ್ದಾರೆ. ಕೇಟ್ ಸ್ಪೇಡ್, ಬರ್ಬೆರಿ, ಡೀಸೆಲ್, ಹ್ಯಾಮ್ಲೀಸ್, ಜಿಮ್ಮಿ ಚೂ ಸೇರಿದಂತೆ ಹಲವು ಪ್ರೀಮಿಯಂ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ಪರಿಚಯಿಸಿದ್ದು, ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ 2.60 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ.

Read more Photos on
click me!

Recommended Stories