3 ಲಕ್ಷದ ಡ್ರೆಸ್‌ ಧರಿಸಿ ಮಗಳೊಂದಿಗೆ ಕ್ರಿಸ್ಮಸ್ ಪಾರ್ಟಿಯಲ್ಲಿ ಮಿಂಚಿದ ಉಪಾಸನಾ ರಾಮಚರಣ್

Published : Dec 27, 2023, 03:11 PM IST

ಕ್ರಿಸ್‌ಮಸ್ ಪಾರ್ಟಿಯಲ್ಲಿ ಉಪಾಸನಾ ಹಾಗೂ ರಾಮ್‌ಚರಣ್‌ ತಮ್ಮ ಮಗಳೊಂದಿಗೆ ಭಾಗವಹಿಸಿದ್ದು, ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಪಾರ್ಟಿಯಲ್ಲಿ ಉಪಾಸನಾ ರಾಮ್‌ಚರಣ್ ಧರಿಸಿದ ಧಿರಿಸು ಈಗ ಬಾರಿ ಗಮನ ಸೆಳೆದಿದೆ. 

PREV
17
3 ಲಕ್ಷದ ಡ್ರೆಸ್‌ ಧರಿಸಿ ಮಗಳೊಂದಿಗೆ ಕ್ರಿಸ್ಮಸ್ ಪಾರ್ಟಿಯಲ್ಲಿ ಮಿಂಚಿದ ಉಪಾಸನಾ ರಾಮಚರಣ್

ಟಾಲಿವುಡ್ ನಟ ರಾಮ್‌ಚರಣ್ ಹಾಗೂ ಉಪಾಸನಾ ಕಾಮಿನೇನಿ ಕೊನ್ನಿಡೆಲಾ ಅವರು ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಈಗ ಎಂಜಾಯ್ ಮಾಡುತ್ತಿದ್ದಾರೆ.  2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಈ ಜೋಡಿಗೆ ವಿವಾಹವಾಗಿ ಸರಿ ಸುಮಾರು 11 ವರ್ಷಗಳ ನಂತರ ಅವರ ಬಾಳಲ್ಲಿ ಪೋಷಕರಾಗುವ ಭಾಗ್ಯ ಒದಗಿ ಬಂದಿತ್ತು.

27

ಸೆಪ್ಟೆಂಬರ್ 1 ರಂದು ಹೆಣ್ಣು ಮಗುವಿಗೆ ಪೋಷಕರಾದ ಉಪಾಸನಾ ಹಾಗೂ ರಾಮ್‌ಚರಣ್ ಈಗ ತಮ್ಮ ಮಗಳು ಕ್ಲಿನ್‌ಕಾರ ಜೊತೆ ತಮ್ಮ ಪೇರೆಂಟ್‌ಹುಡ್‌ನ್ನು ಎಂಜಾಯ್ ಮಾಡುತ್ತಿದ್ದಾರೆ.  ಕೆಲ ತಿಂಗಳ ಹಿಂದಷ್ಟೇ ಅವರು ಮಗಳೊಂದಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. 

37

ಈಗ ಕ್ರಿಸ್‌ಮಸ್ ಪಾರ್ಟಿಯಲ್ಲಿ ತಮ್ಮ ಮಗಳೊಂದಿಗೆ ಈ ಜೋಡಿ ಭಾಗವಹಿಸಿದ್ದು, ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಪಾರ್ಟಿಯಲ್ಲಿ ಉಪಾಸನಾ ರಾಮ್‌ಚರಣ್ ಧರಿಸಿದ ಧಿರಿಸು ಈಗ ಬಾರಿ ಗಮನ ಸೆಳೆದಿದೆ. ಉಪಾಸನಾ ಒಬ್ಬರು ಉದ್ಯಮಿ ಮಹಿಳೆಯೂ, ಪುಟ್ಟ ಮಗುವಿನ ಚೊಚ್ಚಲ ತಾಯಿಯೂ ಆಗಿರುವುದರ ಜೊತೆ ಎಲ್ಲರ ಗಮನಸೆಳೆಯುವ ಫ್ಯಾಷನೇಬಲ್ ಧಿರಿಸು ಧರಿಸುವುದರಲ್ಲಿಯೂ ಹೆಸರುವಾಸಿಯಾಗಿದ್ದಾರೆ. 

47

ಉಪಾಸನಾ ಕಾಮಿನೇನಿಯವರು ಅವರು ಕೆಂಪು ಬಣ್ಣದ ಧಿರಿಸಿನಲ್ಲಿ ಈ ಕ್ರಿಸ್ಮಸ್‌ ಪಾರ್ಟಿಯಲ್ಲಿ ಭಾಗವಹಿಸಿದ್ದು ಜೊತೆಗೆ ಮಗಳು ಕ್ಲಿನ್‌ಕಾರಾ ಹಾಗೂ ನಟ ರಾಮ್‌ಚರಣ್ ಕೂಡ ಭಾಗಿಯಾಗಿದ್ದಾರೆ. ಉಪಾಸನಾ ಮಗುವನ್ನೆತ್ತಿಕೊಂಡಿದ್ದರೆ ಮತ್ತೊಂದು ಕಡೆ ರಾಮ್‌ಚರಣ್ ತಮ್ಮ ಮುದ್ದಿನ ಶ್ವಾನವನ್ನು ಮಗುವಿನಂತೆ ಎತ್ತಿಕೊಂಡಿದ್ದರು

57

ಇನ್ನು ಈ ಪಾರ್ಟಿಯಲ್ಲಿಉಪಾಸನಾ ಧರಿಸಿದ ಕೆಂಪು ಸ್ವೆಟರ್‌ ದರ ಜನರ ಹುಬ್ಬೇರುವಂತೆ ಮಾಡಿದೆ. ಕೆಂಪು ಉಣ್ಣೆಯ ಸ್ವೆಟರ್‌ ನಂತಹ ಈ ಗವನ್   ಕ್ರೀಮ್ ಬಣ್ಣದ ಕಾಲರ್ ಹೊಂದಿದ್ದು, ಐಷಾರಾಮಿ ಗುಸ್ಸಿ ಬ್ರಾಂಡ್‌ಗೆ ಸೇರಿದೆ.  ಇದಕ್ಕೆ ಗುಸ್ಸಿ ವೆಬ್‌ಸೈಟ್‌ನಲ್ಲಿರುವ ಹಾಕಲಾಗಿರುವ ದರ 1,400 ಪೌಂಡ್ ಅಂದರೆ 1,48,135.

67

ಹಾಗೆಯೇ ಕೆಂಪು ಬಣ್ಣದ ಇದರ ಸ್ಕರ್ಟ್ ದರ 1,450 ಪೌಂಡ್, ಅಂದರೆ ಇದನ್ನು ಭಾರತೀಯ ರೂಪಾಯಿಗಳಿಗೆ ಹೋಲಿಸಿದರೆ 1,53,410 ರೂಪಾಯಿಗಳು ಹೀಗಾಗಿ ಸಂಪೂರ್ಣ ಧಿರಿಸಿನ ಒಟ್ಟು ಬೆಲೆ 3 ಲಕ್ಷದ 01,545 ರೂ. ರೂಪಾಯಿಗಳು. 

77

ಈ ಹಿಂದೆ ಉಪಾಸನಾ ದೀಪಾವಳಿ ವೇಳೆಯೂ ಸುಂದರ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಈ ದೀಪಾವಳಿ ಪಾರ್ಟಿಯಲ್ಲಿ ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್, ಜೂನಿಯರ್ ಎನ್‌ಟಿಆರ್, ವೆಂಕಟೇಶ್ , ಅಲ್ಲು ಅರ್ಜುನ್, ಸ್ನೇಹ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.

Read more Photos on
click me!

Recommended Stories