ದಪ್ಪ ಇರೋ ಹೆಣ್ಮಕ್ಳಿಗೆಲ್ಲಾ ಕಾನ್ಫಿಡೆನ್ಸ್ ತುಂಬಿದ ಸಾಕ್ಷಿಗೆ ಕಂಕಣಭಾಗ್ಯ: ಮದುವಣಗಿತ್ತಿಯ ಸುಂದರ ಫೋಟೋಗಳು

First Published | Dec 26, 2023, 4:55 PM IST

ಇತ್ತೀಚೆಗಷ್ಟೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೇಪಾಳದ ಪ್ಲಸ್‌ ಸೈಜ್ ದೇಹದ ಹೊಂದಿದ್ದ ರೂಪಸಿಯೊಬ್ಬರು ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಲ್ಲೇ ತೆಳು ದೇಹವನ್ನೇ ಬಯಸುವ ಮಾಡೆಲಿಂಗ್ ಕ್ಷೇತ್ರಕ್ಕೆ ಸೆಡ್ಡು ಹೊಡೆದರು. ಅದೇ ರೀತಿ ದೇಹ ಹೇಗೆ ಇದ್ದರೂ ತಮ್ಮ ಆಟಿಟ್ಯುಡ್ ಮೂಲಕವೇ ಫ್ಯಾಷನ್ ಲೋಕದ ಗಮನ ಸೆಳೆದವರು ಸೋಶಿಯಲ್ ಮೀಡಿಯಾ ಸ್ಟಾರ್‌ ಸಾಕ್ಷಿ ಸಿಂದ್ವಾನಿ. 

ದೇಹ ಹೇಗೆ ಇದ್ದರೂ ತಮ್ಮ ಆಟಿಟ್ಯುಡ್ ಮೂಲಕವೇ ಫ್ಯಾಷನ್ ಲೋಕದ ಗಮನ ಸೆಳೆದವರು ಸೋಶಿಯಲ್ ಮೀಡಿಯಾ ಸ್ಟಾರ್‌ ಸಾಕ್ಷಿ ಸಿಂದ್ವಾನಿ. 

ಅಂತಹ ಸಾಕ್ಷಿ ಸಿಂದ್ವಾನಿ ಈಗ ತಮ್ಮ ಬಹುಕಾಲದ ಗೆಳೆಯ ರಾಘವ್ ಆರೋರಾ ಜೊತೆ ಹಸೆಮಣೆ ಏರಲು ಸಿದ್ಧರಾಗಿದ್ದು, ಮದುವೆ ಪೂರ್ವ ಸಂಪ್ರದಾಯದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸಿಂದ್ವಾನಿ.

Latest Videos


ಕಳೆದ ಜೂನ್‌ನಲ್ಲಿ ಸ್ಕಾಟ್‌ಲ್ಯಾಂಡ್‌ನ ರಮಣೀಯ ಪರ್ವತ ಪ್ರದೇಶವಾದ ಗ್ಲೆನ್‌ಕೋದಲ್ಲಿ ಗೆಳೆಯ ರಾಘವ್ ಆರೋರಾ ಅವರು ಸಾಕ್ಷಿ ಸಿಂದ್ವಾನಿಗೆ ಪ್ರೇಮ ನಿವೇದನೆ ಮಾಡಿದ್ದರು.

ಸಾಕ್ಷಿ ಸಿಂದ್ವಾನಿ ತಮ್ಮ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ತುಂಬಾ ದಪ್ಪವಿದ್ದರೂ ತಮ್ಮ ದೇಹದ ಬಗ್ಗೆ ಅಂಜಿಕೆ ಪಡದೇ ಸಕಾರಾತ್ಮಕ ಪ್ರಭಾವ ಬೀರುವಂತಹ ಪೋಸ್ಟ್‌ಗಳನ್ನೇ ಹೆಚ್ಚಾಗಿ ಹಾಕುತ್ತಿರುತ್ತಾರೆ. 


ಫ್ಯಾಷನ್ ಲೋಕದಲ್ಲಿ ತನ್ನದೇ ಭಾಷ್ಯ ಬರೆದಿರುವ ಈ 28 ವರ್ಷದ ಪ್ಲಸ್‌ಸೈಜ್ ಸುಂದರಿಗೆ ಈಗ ಕಂಕಣಭಾಗ್ಯ ಕೂಡಿ ಬಂದಿದ್ದು, ಸಾಕ್ಷಿ ಮನೆಯಲ್ಲಿ ವಿವಾಹಪೂರ್ವ ಸಂಪ್ರದಾಯಗಳು ಭರ್ಜರಿಯಾಗಿ ನಡೆಯುತ್ತಿವೆ. 

ಇದರ ಜೊತೆಗೆ ಸಾಕ್ಷಿ ನೆಟ್‌ಫ್ಲಿಕ್ಸ್ ಸಿರೀಸ್ ಮಸಾಬ ಮಸಾಬಾ 2ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಬ್ಯುಸಿನೆಸ್ ನಿಯತಕಾಲಿಕ ಫೋರ್ಬ್ಸ್‌ನ ಪೋರ್ಬ್ಸ್ ಅಂಡರ್ 30ಯಲ್ಲಿಯೂ ಇವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಪ್ರಖ್ಯಾತ ವಸ್ತ್ರ ವಿನ್ಯಾಸಕಾರರಾದ ಮನೀಶ್ ಮಲ್ಹೋತ್ರಾ ಹಾಗೂ ತರುಣ್ ತಹಿಲಿಯಾನಿ ಜೊತೆ ಕೆಲಸ ಮಾಡಿದ್ದು, ಅವರ ಉಡುಪುಗಳಿಗೆ ಫ್ಯಾಷನ್ ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿದ್ದಾರೆ. 

ತೆಳ್ಳಗಿರಬೇಕು ಬೆಳ್ಳಗಿರಬೇಕು ಉದ್ದವಾಗಿ ನೀಳ ಕಾಯವನ್ನು ಹೊಂದಿರಬೇಕು ಎಂಬುದು ಫ್ಯಾಷನ್ ಲೋಕ ಮಾಡೆಲ್‌ಗಳಿಗೆ ಇರುವ ನಿಯಮ ಆದರೆ ಇದೆಲ್ಲವೂ ಮೀರಿ ದೇಹ ಹೇಗಿದ್ದರೇನೋ ಆತ್ಮವಿಶ್ವಾಸ ಜೊತೆ ನಮ್ಮ ವರ್ತನೆ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ಈ ಸಾಕ್ಷಿ ಸಿಂದ್ವಾನಿ

ಇನ್ನು ತನ್ನ ಮದುವೆಯ ವಿಶೇಷ ದಿನಕ್ಕಾಗಿ ಸಿಂದ್ವಾನಿ ಅವರು ತಿಳಿ ನೀಲಿ ಬಣ್ಣದ ಮಿರಿ ಮಿರಿ ಮೆಂಚುವ ಲೆಹೆಂಗಾ ಧರಿಸಿದ್ದು, ಅದಕ್ಕೆ ಒಪ್ಪುವ ಕಿವಿಯೋಲೆ, ಕತ್ತಿನ ಸರ ಧರಿಸಿದ್ದಾರೆ. ಹಾಗೆಯೇ ಪತಿ ರಾಘವ್ ಅರೋರಾ ಅವರು ಕೆನೆ ಬಣ್ಣದ ಮೇಲೆ ಗೋಲ್ಡನ್ ಚುಕ್ಕಿಗಳಿಂದ ಮಿಂಚುವ ಜುಬ್ಬಾ ಧರಿಸಿದ್ದಾರೆ.

click me!