ಬಾಹುಬಲಿಯ 'ಶಿವಗಾಮಿ'ಯಂತೆ ಎಂದು ಪ್ರೇಕ್ಷಕರು ಹೊಗಳಿದ 'ಸಲಾರ್‌' ಚಿತ್ರದ ನಟಿ, ಹೆಸರಾಂತ ಕ್ರಿಕೆಟಿಗನ ಮಗಳು!

Published : Dec 27, 2023, 10:56 AM ISTUpdated : Dec 27, 2023, 11:15 AM IST

ಸಲಾರ್‌' ಸಿನಿಮಾ ಎಲ್ಲೆಡೆ ಸುದ್ದಿ ಮಾಡ್ತಿದೆ. ಸ್ಟೋರಿ, ಸಿನಿಮಾ ಮೇಕಿಂಗ್, ಆಕ್ಷನ್‌ ಸೀನ್ಸ್‌ಗಳ ಬಗ್ಗೆ ಚರ್ಚೆ ನಡೀತಿದೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಚಿತ್ರ ಉತ್ತಮ ಗಳಿಕೆ ಮಾಡಿದೆ. ಆದ್ರೆ 'ಸಲಾರ್' ಚಿತ್ರದಲ್ಲಿ ತನ್ನ ನಟನೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿರುವ ಶ್ರೀಯಾ ರೆಡ್ಡಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗನ ಮಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲ

PREV
18
 ಬಾಹುಬಲಿಯ 'ಶಿವಗಾಮಿ'ಯಂತೆ ಎಂದು ಪ್ರೇಕ್ಷಕರು ಹೊಗಳಿದ 'ಸಲಾರ್‌' ಚಿತ್ರದ ನಟಿ,  ಹೆಸರಾಂತ ಕ್ರಿಕೆಟಿಗನ ಮಗಳು!

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಪ್ರಶಾಂತ್‌ ನೀಲ್‌ ನಿರ್ದೇಶನದ 'ಬಾಹುಬಲಿ' ಖ್ಯಾತಿಯ ಪ್ರಭಾಸ್‌ ನಟನೆಯ 'ಸಲಾರ್‌' ಸಿನಿಮಾ ಎಲ್ಲೆಡೆ ಸುದ್ದಿ ಮಾಡ್ತಿದೆ. ಸ್ಟೋರಿ, ಸಿನಿಮಾ ಮೇಕಿಂಗ್, ಆಕ್ಷನ್‌ ಸೀನ್ಸ್‌ಗಳ ಬಗ್ಗೆ ಚರ್ಚೆ ನಡೀತಿದೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಚಿತ್ರ ಉತ್ತಮ ಗಳಿಕೆ ಮಾಡಿದೆ. ಚಿತ್ರದಲ್ಲಿ ಹೆಸರಾಂತ ನಟ-ನಟಿಯರು ನಟಿಸುವುದರ ಜೊತೆಗೆ ಕೆಲವು ಹೊಸ ಮುಖಗಳನ್ನು ಸಹ ಪರಿಚಯಿಸಲಾಗಿದೆ. 

28

'ಸಲಾರ್' ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಒಂದು ವರದರಾಜು (ಪೃಥ್ವಿರಾಜ್ ಸುಕುಮಾರನ್) ಅವರ ಸಹೋದರಿ ರಾಧಾ ರಾಮ ಮನ್ನಾರ್ ಪಾತ್ರ. ಈ ಪಾತ್ರವನ್ನು ನಟಿ ಶ್ರೀಯಾ ರೆಡ್ಡಿ ಮಾಡಿದ್ದಾರೆ.

38

ಸಲಾರ್ ಚಿತ್ರದಲ್ಲಿ ಶ್ರೀಯಾ ರೆಡ್ಡಿ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಶ್ರೀಯಾ ರೆಡ್ಡಿ ಪಾತ್ರವನ್ನು 'ಬಾಹುಬಲಿ'ಯಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ಶಿವಗಾಮಿ ಪಾತ್ರಕ್ಕೆಹೋಲಿಸಿದ್ದಾರೆ.

48

ಆದರೆ, 'ಸಲಾರ್' ಚಿತ್ರದಲ್ಲಿ ತನ್ನ ನಟನೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿರುವ ಶ್ರೀಯಾ ರೆಡ್ಡಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗನ ಮಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಶ್ರೀ ಯಾ ರೆಡ್ಡಿ ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ಭರತ್ ರೆಡ್ಡಿ ಅವರ ಪುತ್ರಿ.

58

ಶ್ರೀಯಾ ರೆಡ್ಡಿ, ನವೆಂಬರ್ 28, 1982ರಂದು ಜನಿಸಿದರು, ನಟಿ, ದೂರದರ್ಶನ ನಿರೂಪಕಿ ಮತ್ತು ವಿಡಿಯೋ ಜಾಕಿ ಸಹ ಆಗಿದ್ದಾರೆ. ಮುಖ್ಯವಾಗಿ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಮೊದಲು, ಶ್ರೀಯಾ ಯಶಸ್ವಿ ವಿಡಿಯೋ ಜಾಕಿಯಾಗಿ ಕೆಲಸ ಮಾಡಿದರು.

68

1978 ಮತ್ತು 1981ರ ನಡುವೆ ಕ್ರಿಕೆಟಿಗರಾಗಿ ಭಾರತ ತಂಡಕ್ಕಾಗಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತೀಯ ಕ್ರಿಕೆಟಿಗ ಭರತ್ ರೆಡ್ಡಿ. ಇವರ ಮಗಳು. ಶ್ರೀಯಾ ರೆಡ್ಡಿ ಗುಡ್ ಶೆಫರ್ಡ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಚೆನ್ನೈನ ಎತಿರಾಜ್ ಕಾಲೇಜಿನಲ್ಲಿ ಓದಿದರು. ಶ್ರೀಯಾ ರೆಡ್ಡಿ, ನಟ ವಿಶಾಲ್ ಅವರ ಹಿರಿಯ ಸಹೋದರ ವಿಕ್ರಮ್ ಕೃಷ್ಣ ಅವರ ಪತ್ನಿ. ದಂಪತಿಗಳು 2008ರಲ್ಲಿ ವಿವಾಹವಾದರು.

78

ಶ್ರೀಯಾ ರೆಡ್ಡಿ ಅವರ ಚೊಚ್ಚಲ ಸಿನಿಮಾ ಬಾಲಾಜಿ ಶಕ್ತಿವೇಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ 'ಸಮುರಾಯ್'. ಇದರಲ್ಲಿ ಅವರು ವಿಕ್ರಮ್ ಜೊತೆಗೆ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕೆಯ ಚೊಚ್ಚಲ ತೆಲುಗು ಬಿಡುಗಡೆಯಾದ 'ಅಪ್ಪುಡಪ್ಪುಡು' ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ನಂತರ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಚಲನಚಿತ್ರಗಳಲ್ಲಿ ಕೆಲಸ ಮಾಡಲಿಲ್ಲ.

88

ಕಳೆದ ವರ್ಷದವರೆಗೂ ಅಮೆರಿಕದಲ್ಲಿದ್ದ ಶ್ರೀಯಾ ರೆಡ್ಡಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾದ 'ಸುಡಾಲ್' ವೆಬ್ ಸರಣಿಯ ಮೂಲಕ ಅವರು ಮತ್ತೆ ನಟನೆಯನ್ನು ಆರಂಭಿಸಿದರು.

Read more Photos on
click me!

Recommended Stories