Breast Size: ಹೆಚ್ಚು ಕಡಿಮೆ ಇದ್ದರೆ ಸಹಜವೇ, ಅನಾರೋಗ್ಯದ ಲಕ್ಷಣವೇ?

First Published | Jul 19, 2023, 5:12 PM IST

ಹೆಚ್ಚಿನ ಮಹಿಳೆಯರ ಎರಡೂ ಸ್ತನಗಳ ಗಾತ್ರವೂ ವಿಭಿನ್ನವಾಗಿರುತ್ತೆ. ಸ್ತನಗಳ ಗಾತ್ರವು ಹೇಗೆ ಭಿನ್ನವಾಗಿರಬಹುದು? ಈ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿರಬಹುದು, ಇಂದು ಈ ಬಗ್ಗೆ ಸರಿಯಾದ ಮಾಹಿತಿ ತಿಳಿಯೋಣ. 
 

ಜಗತ್ತಿನಲ್ಲಿ ನಿಖರವಾಗಿ ಒಂದೇ ರೀತಿ ಕಾಣುವ ಅನೇಕ ವಿಷಯಗಳಿವೆ, ಆದರೆ ಸ್ತನವು ಅವುಗಳಲ್ಲಿ ಒಂದಾಗಿಲ್ಲ. ನಿಮ್ಮ ಎರಡೂ ಕೈಗಳು, ಪಾದಗಳು, ಕಣ್ಣುಗಳ ಗಾತ್ರವು ಬಹುತೇಕ ಒಂದೇ ಆಗಿರುತ್ತೆ, ಆದರೆ, ಸ್ತನಗಳ ಗಾತ್ರ ಒಂದೇ ರೀತಿ ಇರೋದಿಲ್ಲ. ಅಸಮ ಸ್ತನ ಗಾತ್ರವು ತುಂಬಾ ಸಾಮಾನ್ಯವಾಗಿದೆ ಮತ್ತು ಸ್ತನಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗಲೂ ಗಾತ್ರ ಒಂದೇ ರೀತಿ ಇರೋದಿಲ್ಲ. ಆದರೆ ಇದು ಏಕೆ ಸಂಭವಿಸುತ್ತೆ? ಯಾವುದಾದರೂ ರೋಗದ ಸಂಕೇತವೇ? ತಿಳಿಯಿರಿ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತರಬೇತಿ ಪಡೆದ ಪ್ರಶಸ್ತಿ ವಿಜೇತ ವೈದ್ಯರೊಬ್ಬರು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇವರು ಋತುಚಕ್ರ, ದೇಹ ಮತ್ತು ಲೈಂಗಿಕ ಸಂಬಂಧಗಳ ಬಗ್ಗೆ ವಿವಿಧ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ಸ್ತನಗಳ ವಿಭಿನ್ನ ಗಾತ್ರದ (different size of breast) ಬಗ್ಗೆ ಏನು ಹೇಳುತ್ತಾರೆ ನೋಡೋಣ. 

Tap to resize

ವಿಭಿನ್ನ ಸ್ತನ ಗಾತ್ರದ ಬಗ್ಗೆ ಕಾಳಜಿ ವಹಿಸಬೇಕೆ?
ಸ್ತನಗಳ ಗಾತ್ರ ವಿಭಿನ್ನವಾಗಿದ್ದರೆ, ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ., ಅನೇಕ ಮಹಿಳೆಯರಿಗೆ ತಮ್ಮ ಸ್ತನಗಳು ಅಭಿವೃದ್ಧಿ ಹೊಂದುತ್ತಿರುವಾಗ, ಹಾರ್ಮೋನುಗಳ ಬದಲಾವಣೆಯಿಂದಾಗಿ (hormone changes) ಒಂದು ದೊಡ್ಡದಾಗಿರಬಹುದು ಮತ್ತು ಒಂದು ಚಿಕ್ಕದಾಗಿರಬಹುದು. ಸ್ತನದ ಗಾತ್ರದ ಜೊತೆಗೆ, ಅವುಗಳ ಆಕಾರವೂ ವಿಭಿನ್ನವಾಗಿರುತ್ತದೆ.  ಸಾಮಾನ್ಯವಾಗಿ ಎಡ ಸ್ತನವು ದೊಡ್ಡದಾಗಿರುತ್ತದೆ ಮತ್ತು ಬಲ ಸ್ತನವು ಚಿಕ್ಕದಾಗಿರುತ್ತದೆ, ಆದರೆ ಇದಕ್ಕೆ ವಿರುದ್ಧವಾಗಿ ಇರುವ ಸಾಧ್ಯತೆ ಇದೆ.

ಸ್ತನಗಳ ಗಾತ್ರ ಬದಲಾಗಲು ಕಾರಣಗಳು ಯಾವುವು?  
ಪೂರ್ಣವಾಗಿ ಬೆಳೆದ ಸ್ತನದ ಗಾತ್ರವು ಸಹ ಬದಲಾಗಬಹುದಾದ ಅನೇಕ ಪರಿಸ್ಥಿತಿಗಳಿವೆ-  
ಗರ್ಭಧಾರಣೆಯು ಸ್ತನ ಗಾತ್ರದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ, ಸ್ತನಗಳು ದೊಡ್ಡದಾಗಬಹುದು ಅಥವಾ ಚಿಕ್ಕದಾಗಬಹುದು.. 
ಸ್ತನ್ಯಪಾನದ ಸಮಯದಲ್ಲಿ (breast feeding) ಸ್ತನ ಗಾತ್ರದಲ್ಲಿ ತೀವ್ರ ಬದಲಾವಣೆ ಉಂಟಾಗಬಹುದು. 
 ಸ್ತನ್ಯಪಾನದ ನಂತರವೂ ಸ್ತನದ ಗಾತ್ರ ಬದಲಾಗುತ್ತೆ. 

ವೈದ್ಯರ ಬಳಿಗೆ ಯಾವಾಗ ಹೋಗಬೇಕು? 
ವಿಭಿನ್ನ ಸ್ತನ ಗಾತ್ರಗಳನ್ನು ಹೊಂದಿರುವುದು ದೊಡ್ಡ ಸಮಸ್ಯೆಯಲ್ಲ, ಆದರೆ ನಿಮ್ಮ ಸ್ತನದಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ, ಅದು ಕೆಲವು ಕಾಯಿಲೆ ಅಥವಾ ಹಾರ್ಮೋನುಗಳ ಸಮಸ್ಯೆಯಿಂದಾಗಿರಬಹುದು. ಕೆಲವೊಮ್ಮೆ ಸಿಸ್ಟ್ (cyst) ಕಾರಣದಿಂದ ಸ್ತನಗಳ ಗಾತ್ರ ಬದಲಾಗುತ್ತೆ. ಈ ಸಂದರ್ಭದಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.. 

ಇದು ಯಾವ ರೀತಿಯ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಸಂಭವಿಸುತ್ತದೆ? 
ಎಟಿಪಿಕಲ್ ಡಕ್ಟ್ ಹೈಪರ್ಪ್ಲಾಸಿಯಾ (ADH) ಸ್ತನ ಅಂಗಾಂಶ ಕೋಶಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಸ್ತನದೊಳಗಿನ ಹಾಲಿನ ನಾಳವು ಹೆಚ್ಚು ಬೆಳೆಯಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ. 

ಸ್ತನದ ಒಳಗೆ ಒಂದು ರೀತಿಯ ಸಿಸ್ಟ್ ರಚನೆಯಾಗಬಹುದು. 
ಸ್ತನ ನಾಳಗಳ ಬೆಳವಣಿಗೆಯೂ ಕುಗ್ಗಬಹುದು. ಇದನ್ನು ಹೈಪೋಪ್ಲಾಸಿಯಾ ಎಂದು ಕರೆಯಲಾಗುತ್ತದೆ. 
ಕೆಲವೊಮ್ಮೆ ಹಾರ್ಮೋನುಗಳ ಸಮಸ್ಯೆಗಳಿಂದಾಗಿ ಸ್ತನಗಳ ಗಾತ್ರವೂ ಬದಲಾಗುತ್ತದೆ. 
ಯಾವುದೇ ರೀತಿಯ ಔಷಧವು ಸ್ತನದ ಮೇಲೆ ಪರಿಣಾಮ ಬೀರಬಹುದು.  

ಸಣ್ಣ ಸ್ತನಗಳು ರೋಗದ ಸಂಕೇತವೇ? 
ಸ್ತನದ ಗಾತ್ರವು ಮೊದಲಿನಿಂದಲೂ ಈ ರೀತಿ ಇದ್ದರೆ, ಯಾವುದೇ ಸಮಸ್ಯೆಯಿಲ್ಲ, ಆದರೆ ನಿಮ್ಮ ಸ್ತನಗಳು ಇದಕ್ಕಿದ್ದಂತೆ ಸಣ್ಣದಾಗುತ್ತಾ ಬಂದ್ರೆ, ಆವಾಗ ಎಚ್ಚರವಹಿಸಬೇಕು.  ಅಂತಹ ಸಂದರ್ಭದಲ್ಲಿ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಸಮಸ್ಯೆ ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. 

Latest Videos

click me!