Trolley bag cleaning tips: ಕೆಲವೊಮ್ಮೆ ಕೊಳಕು ಎಷ್ಟು ಕಾಣಿಸುತ್ತದೆ ಎಂದರೆ ಬ್ಯಾಗ್ ಅನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಇಷ್ಟಪಡಲ್ಲ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ.
ಪ್ರವಾಸಗಳಿಗೆ ಹೋಗುವುದನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ?. ಹಾಗೆ ಟ್ರಾವೆಲ್ ಮಾಡುವಾಗ ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸೂಟ್‌ಕೇಸ್ ಅಥವಾ ಟ್ರಾಲಿ ಬ್ಯಾಗ್ (Trolley Bag) ಅತ್ಯಂತ ಅವಶ್ಯಕವಾಗಿದೆ.
27
ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ..
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಟ್ರಾಲಿ ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳು ಲಭ್ಯವಿದೆ. ಅವು ವರ್ಷಗಟ್ಟಲೇ ಬಾಳಿಕೆ ಬರುತ್ತವೆ. ಆದರೆ ಅತಿಯಾದ ಬಳಕೆಯಿಂದಾಗಿ ಕಾಲಾನಂತರದಲ್ಲಿ ಕೊಳಕಾಗುತ್ತವೆ. ಕೆಲವೊಮ್ಮೆ ಕೊಳಕು ಎಷ್ಟು ಕಾಣಿಸುತ್ತದೆ ಎಂದರೆ ಬ್ಯಾಗ್ ಅನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಸಹ ಇಷ್ಟಪಡಲ್ಲ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ.
37
ಕೇವಲ 5 ನಿಮಿಷಗಳಲ್ಲಿ ಸ್ವಚ್ಛ
ಇಂದು ನಿಮ್ಮ ಹಳೆಯ, ಕೊಳಕು ಟ್ರಾಲಿ ಬ್ಯಾಗ್ ಅನ್ನು ಕೇವಲ 5 ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಸಹಾಯ ಮಾಡುವ ಹೋಮ್ ಹ್ಯಾಕ್ ಅನ್ನು ನಾವು ಹಂಚಿಕೊಳ್ಳಲಿದ್ದೇವೆ. ಕಂಟೆಂಟ್ ಕ್ರಯೇಟರ್ ದೀಪಕ್ ಕುಮಾರ್ ಭಗತ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಹ್ಯಾಕ್ ಅನ್ನು ಹೇಗೆ ಟ್ರೈ ಮಾಡೋದು ನೋಡೋಣ..
ಒಂದು ಬಟ್ಟಲು ನೀರು ನಿಂಬೆಹಣ್ಣು ವಿನೆಗರ್ ಅಡುಗೆ ಸೋಡಾ ಕಾಟನ್ ಬಟ್ಟೆ
57
ಕ್ಲೀನಿಂಗ್ ಲಿಕ್ವಿಡ್ ತಯಾರಿಸುವುದು ಹೇಗೆ
ಮೊದಲು ಒಂದು ಬಟ್ಟಲು ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಅಡುಗೆ ಸೋಡಾ ಸೇರಿಸಿ. ನಂತರ 2 ಚಮಚ ಬಿಳಿ ವಿನೆಗರ್ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕ್ಲೀನಿಂಗ್ ಲಿಕ್ವಿಡ್ ಸಿದ್ಧವಾಗಿದೆ.
67
ಅದನ್ನು ಬಳಸುವುದು ಹೇಗೆ?
ಮೊದಲಿಗೆ ಕಾಟನ್ ಬಟ್ಟೆ ತೆಗೆದುಕೊಳ್ಳಿ. ಬಟ್ಟೆಯನ್ನು ಕ್ಲೀನಿಂಗ್ ಲಿಕ್ವಿಡ್‌ನಲ್ಲಿ ಅದ್ದಿ, ನಂತರ ಚೆನ್ನಾಗಿ ಹಿಂಡಿ ಅದನ್ನು ನಿಮ್ಮ ಟ್ರಾಲಿ ಬ್ಯಾಗ್ ಮೇಲೆ ಉಜ್ಜಿ. ಇದು ಎಲ್ಲಾ ಕೊಳೆಯನ್ನು ತೆಗೆದುಹಾಕುತ್ತದೆ. ನಿಮ್ಮ ಟ್ರಾಲಿ ಬ್ಯಾಗ್ 5 ನಿಮಿಷಗಳಲ್ಲಿ ಹೊಸದರಂತೆ ಹೊಳೆಯುತ್ತೆ.
77
ಈ ಹ್ಯಾಕ್‌ಗಳು ಸಹ ಪ್ರಯೋಜನಕಾರಿ
1. ಬೆಚ್ಚಗಿನ ನೀರು ಮತ್ತು ಉಪ್ಪು ನಿಮ್ಮ ಟ್ರಾಲಿ ಬ್ಯಾಗ್‌ನಲ್ಲಿ ಬಹಳಷ್ಟು ಧೂಳು ಸಂಗ್ರಹವಾಗಿದ್ದರೆ, ನೀವು ಅದನ್ನು ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಮತ್ತು ಉಪ್ಪನ್ನು ಸಹ ಬಳಸಬಹುದು. ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ. ಮಿಶ್ರಣದಲ್ಲಿ ಕಾಟನ್ ಬಟ್ಟೆ ಅದ್ದಿ, ಹಿಂಡಿ ಇದರಲ್ಲಿ ಬ್ಯಾಗ್ ಒರೆಸಿ ಗಾಳಿಯಲ್ಲಿ ಒಣಗಲು ಬಿಡಿ. ಇದು ನಿಮ್ಮ ಬ್ಯಾಗ್ ಅನ್ನು ಸ್ವಚ್ಛಗೊಳಿಸುತ್ತದೆ.
2. ಬಿಳಿ ವಿನೆಗರ್ ಅಥವಾ ವೈನ್ ಕೆಲವೊಮ್ಮೆ ಬ್ಯಾಗ್ ಸ್ವಚ್ಛಗೊಳಿಸದಿದ್ದರೆ ಅಥವಾ ಹೆಚ್ಚು ಸಮಯದವರೆಗೆ ಗಮನಿಸದೆ ಬಿಟ್ಟರೆ ಅದರಲ್ಲಿ ಅಚ್ಚು ಬೆಳೆಯಬಹುದು. ನೀವು ಅದನ್ನು ಸ್ವಚ್ಛಗೊಳಿಸಲು ವಿನೆಗರ್ ಅಥವಾ ವೈನ್ ಅನ್ನು ಮೇಲೆ ಹೇಳಿದ ರೀತಿ ಬಳಸಬಹುದು. ಇದು ಕೆಲವೇ ನಿಮಿಷದಲ್ಲಿ ಬ್ಯಾಗ್ ಸ್ವಚ್ಛಗೊಳಿಸಬಹುದು.