ಈ ದ್ರಾವಣದಿಂದ ತಿಂಗಳಾದ್ರೂ ಕೊಳಕಾಗದೆ ಕ್ಲೀನ್ ಆಗಿರುತ್ತೆ ಟಾಯ್ಲೆಟ್ ಕಮೋಡ್, ವಾಸನೆಯೂ ಇರಲ್ಲ

Published : Dec 13, 2025, 06:06 PM IST

Homemade toilet cleaner: ಸರಿಯಾದ ನಿರ್ವಹಣಾ ವಿಧಾನಗಳನ್ನು ಅನುಸರಿಸಿದರೆ ವರ್ಷಪೂರ್ತಿ ನಿಮ್ಮ ಟಾಯ್ಲೆಟ್ ರೂಂ ಅನ್ನು ಸ್ವಚ್ಛವಾಗಿ ಮತ್ತು ವಾಸನೆ ಬರದಂತೆ ಇರಿಸಬಹುದು ಎಂದು ತಜ್ಞರು ಹೇಳುತ್ತಾರೆ.

PREV
17
ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ

ಟಾಯ್ಲೆಟ್ ರೂಂ ನೀಟಾಗಿ ಕ್ಲೀನ್ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಸೂಕ್ತವಾದ ಸಂತಾನೋತ್ಪತ್ತಿ ಸ್ಥಳವಾಗಿದ್ದು, ಅತಿಸಾರ, ಒಣ ಸೋಂಕುಗಳು ಮತ್ತು ಚರ್ಮದ ದದ್ದುಗಳಂತಹ ಸಮಸ್ಯೆಗಳನ್ನು ಬೆಳೆಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೈನಂದಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

27
ಆರೋಗ್ಯ ರಕ್ಷಣೆ

ಆಗ್ಗಾಗ್ಗೆ ಟಾಯ್ಲೆಟ್ ರೂಂ ಕ್ಲೀನ್ ಮಾಡುವುದರಿಂದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಕುಟುಂಬ ಸದಸ್ಯರ ದೈಹಿಕ ಆರೋಗ್ಯವನ್ನು ರಕ್ಷಿಸಬಹುದು.

37
ಮನಸ್ಸಿನ ಶಾಂತಿ ಹೆಚ್ಚುತ್ತೆ

ಇದಿಷ್ಟೇ ಅಲ್ಲ, ಟಾಯ್ಲೆಟ್ ರೂಂನ ದುರ್ವಾಸನೆ ಬರುವುದು ಕಡಿಮೆಯಾದರೆ ಮನೆಯ ವಾತಾವರಣದ ಗುಣಮಟ್ಟವೂ ಸುಧಾರಿಸುತ್ತೆ. ಮನೆಯೊಳಗೆ ಆರೋಗ್ಯಕರ, ಸ್ವಚ್ಛ ವಾತಾವರಣ ಸೃಷ್ಟಿಯಾಗುತ್ತದೆ. ಇದು ಮನಸ್ಸಿನ ಶಾಂತಿ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ.

47
ಮನೆಯ ಲುಕ್ ಹೆಚ್ಚಿಸುತ್ತೆ

ಕ್ಲೀನ್ ಆಗಿ ನಿರ್ವಹಿಸಲ್ಪಟ್ಟ ಶೌಚಾಲಯವು ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಮಾತ್ರವಲ್ಲ, ಕುಟುಂಬಕ್ಕೂ ಆರೋಗ್ಯಕರ ಮತ್ತು ಆನಂದದಾಯಕ ಅನುಭವವನ್ನು ನೀಡುತ್ತದೆ. ಇದು ಮನೆಯ ಲುಕ್ ಹೆಚ್ಚಿಸುತ್ತೆ.

57
ಏನೆಲ್ಲಾ ಬೇಕು?

ಅಂದಹಾಗೆ ನಾವಿಲ್ಲಿ ಹೇಳಿರುವ ಸಾಮಗ್ರಿ ಬಳಸಿ ಟಾಯ್ಲೆಟ್ ರೂಂ ಕ್ಲೀನ್ ಮಾಡುವುದರಿಂದ ಕೇವಲ ಒಂದೆರೆಡು ದಿನವಲ್ಲ, ತಿಂಗಳಾದ್ರೂ ಕ್ಲೀನ್ ಆಗಿರುತ್ತೆ. ಕಮೋಡ್ ಕ್ಲೀನ್ ಮಾಡಲು ನಿಮಗೆ ಬೇಕಾಗಿರುವುದು ಸ್ವಲ್ಪ ಕಲ್ಲು ಉಪ್ಪು, ಸ್ವಲ್ಪ ಶಾಂಪೂ,  ಅರ್ಧ ಗ್ಲಾಸ್‌ನಷ್ಟು ಲೈಸೋಲ್  (Lysol ) ಮತ್ತು  ಎರಡು ಸ್ಪೂನ್‌ನಷ್ಟು ಹಾರ್ಪಿಕ್ (Harpic).  

67
ವರ್ಷಪೂರ್ತಿ ಹೊಳೆಯುತ್ತಲೇ ಇರುತ್ತೆ

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಯನ್ನ ನೇರವಾಗಿ ಕೈ ಬಳಸದೆ ದಪ್ಪ ಕಡ್ಡಿ ತೆಗೆದುಕೊಂಡು ಮಿಶ್ರಣ ಮಾಡಿ. ಒಂದು ಬಾಟಲಿಯಲ್ಲಿ ಹಾಕಿಡಿ. ಈ ಮಿಶ್ರಣವನ್ನು ನಿಮ್ಮ ಶೌಚಾಲಯಕ್ಕೆ ಸಿಂಪಡಿಸಿ, ಒಂದು ಅಥವಾ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು, ಆ ನಂತರ ಎಂದಿನಂತೆ ಸ್ವಚ್ಛಗೊಳಿಸಿ. ನಿಮ್ಮ ಶೌಚಾಲಯವು ವರ್ಷಪೂರ್ತಿ ಹೊಳೆಯುತ್ತಲೇ ಇರುತ್ತದೆ.

77
ಏನೆಲ್ಲಾ ಲಾಭವಿದೆ?

ಕೊನೆಯದಾಗಿ ಹೇಳುವುದಾದರೆ, ಸ್ವಚ್ಛವಾದ ಶೌಚಾಲಯವು ಮನೆಯ ಸಂಪತ್ತು, ಉತ್ಪನ್ನ ಬಾಳಿಕೆ ಮತ್ತು ವೆಚ್ಚ ಕಡಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೂಂ ಹಾಳಾಗುವುದು, ನೀರು ಉಳಿಯುವುದು ಮತ್ತು ಕಲೆ ಆಗುವಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಉಪಕರಣಗಳ ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ದುರಸ್ತಿ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಸ್ವಚ್ಛವಾದ ಶೌಚಾಲಯವು ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಮನೆಯ ಪರಿಸರ ನೈರ್ಮಲ್ಯದ ಮೂಲಭೂತ ಅಂಶವಾಗಿದೆ. 

Read more Photos on
click me!

Recommended Stories