ಉದ್ದ, ದಟ್ಟವಾದ ಕೂದಲನ್ನು ಪಡೆಯಲು ಲಿಚಿ ಹೇರ್ ಮಾಸ್ಕ್ ಟ್ರೈ ಮಾಡಿ

Published : May 21, 2022, 05:06 PM IST

ಲಿಚಿ ಎಲ್ಲರಿಗೂ ತಿಳಿದ  ರುಚಿಕರವಾದ ಹಣ್ಣು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಪ್ರತಿಯೊಬ್ಬರೂ ಲಿಚಿಯ ರುಚಿಯನ್ನು ಇಷ್ಟಪಡುತ್ತಾರೆ. ನಿಮಗೂ ಇದರ ರುಚಿ ಇಷ್ಟಾನೆ ಇರಬಹುದು ಅಲ್ವಾ? ಲಿಚಿ ವಿಟಮಿನ್ ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಲಿಚಿ ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರ ಜೊತೆಗೆ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಅನ್ನೋದು ನಿಮಗೆ ಗೊತ್ತಾ?.

PREV
16
ಉದ್ದ, ದಟ್ಟವಾದ ಕೂದಲನ್ನು ಪಡೆಯಲು ಲಿಚಿ ಹೇರ್ ಮಾಸ್ಕ್ ಟ್ರೈ ಮಾಡಿ

ಚರ್ಮದ ಸೌಂದರ್ಯದ ಜೊತೆ ಲಿಚಿಯು(Lychee frui)t ಕೂದಲನ್ನು ಉದ್ದವಾಗಿ, ದಟ್ಟವಾಗಿ ಮತ್ತು ಬಲವಾಗಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲಿನ ಒರಟುತನವನ್ನು ತೆಗೆದುಹಾಕುತ್ತದೆ. ಜೊತೆಗೆ ಸುಂದರ ಕೂದಲನ್ನು ನಿಮಗೆ ನೀಡಲು ಇದು ಸಹಾಯ ಮಾಡುತ್ತೆ. ಹಾಗಿದ್ರೆ ಬನ್ನಿ ಲಿಚಿಯಿಂದ ಏನೆಲ್ಲಾ ಆಗುತ್ತೆ ನೋಡೋಣ… 

26

ಚರ್ಮದ ಮೇಲೆ ಲಿಚಿಯನ್ನು ಹಚ್ಚುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಬಹುದು.  ಲಿಚಿಯಿಂದ ಮಾಡಿದ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು ಮತ್ತು ಅದರ ಪ್ರಯೋಜನಗಳನ್ನು ಇಲ್ಲಿ ಹೇಳಲಾಗಿದೆ. ಕೂದಲ ಉದುರುವಿಕೆಯಿಂದ(Hair fall) ನೀವು ತೊಂದರೆಗೀಡಾಗಿದ್ದರೆ, ನೀವು ಅದನ್ನು ಹಚ್ಚಿ ನೋಡಿ 

36

ಲಿಚಿ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?
ಮೊದಲನೆಯದಾಗಿ, 7-8 ಲಿಚಿ ಹಣ್ಣುಗಳ ಸಿಪ್ಪೆ ಸುಲಿದು ಅವುಗಳ ಬೀಜಗಳನ್ನು ಹೊರತೆಗೆಯಿರಿ.
ಈಗ ಲಿಚಿ ರಸವನ್ನು ತೆಗೆದು, ಅದಕ್ಕೆ 2 ಟೀಸ್ಪೂನ್ ಅಲೋವೆರಾ ಜೆಲ್ ಅನ್ನು(Aloevera gel) ಸೇರಿಸಿ.
ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಕೂದಲಿಗೆ ಹಚ್ಚಿ. ಪೂರ್ತಿಯಾಗಿ ಹರಡುವಂತೆ ನೋಡಿ.

46

ನಿಮ್ಮ ನೆತ್ತಿ ಒಣಗುತ್ತಿದ್ದರೆ, ಈ ಮಾಸ್ಕ್ ನಿಂದ ನೆತ್ತಿಯನ್ನು ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ.
ನೀವು ಈ ಮಾಸ್ಕ್(Hair mask) ಅನ್ನು ನಿಮ್ಮ ಕೂದಲಿನ ಮೇಲೆ 1 ಗಂಟೆಗಳ ಕಾಲ ಇಡಬೇಕು, ನಂತರ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಇದರಿಂದಾ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತೆ. 

56

ಲಿಚಿ ಹೇರ್ ಮಾಸ್ಕ್ ಗಳ ಪ್ರಯೋಜನಗಳು
ಲಿಚಿ ಹೇರ್ ಮಾಸ್ಕ್ ಉಪಯೋಗಿಸೋದರಿಂದ, ಕೂದಲು ಪ್ರೋಟೀನ್, ವಿಟಮಿನ್ ಇ(Vitamin E), ವಿಟಮಿನ್ ಎ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ.
ಈ ಪೋಷಕಾಂಶಗಳು ಕೂದಲನ್ನು ಬಲಪಡಿಸುತ್ತವೆ ಮತ್ತು ಕೂದಲಿನ ಉದ್ದವನ್ನು ಹೆಚ್ಚಿಸುತ್ತವೆ.

66

ಲಿಚಿ ಹೇರ್ ಮಾಸ್ಕ್ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಲಿಚಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮೃದು ಮತ್ತು ಹೊಳೆಯುತ್ತದೆ.
ಲಿಚಿ ಹೇರ್ ಮಾಸ್ಕ್ ಗಳು ಉತ್ತಮ ಹೇರ್ ಕಂಡೀಷನಿಂಗ್ ಅನ್ನು(Hair conditioning) ಹೊಂದಿರುತ್ತವೆ ಮತ್ತು ಕೂದಲನ್ನು ಮೃದುವಾಗಿಸುತ್ತದೆ.

click me!

Recommended Stories