ಮಗಳ ಮೊದಲ ಪಿರಿಯಡ್ಸ್‌ನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಅಪ್ಪ, ಫ್ಯಾಮಿಲಿಗೆ ಗ್ರ್ಯಾಂಡ್ ಪಾರ್ಟಿ!

Published : Jul 20, 2023, 09:35 PM IST

ಉತ್ತರಾಖಂಡದ ಕಾಶಿಪುರದಲ್ಲಿ ತಂದೆಯೊಬ್ಬರು ತಮ್ಮ ಮಗಳ ಮೊದಲ ಪಿರಿಯಡ್ಸ್ ನ್ನು ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಈ ಕೇಕ್ ಕತ್ತರಿಸೋ ಉದ್ದೇಶ ಕೇವಲ ಪಿರಿಯಡ್ಸ್ ಕಡೆಗೆ ಸಕಾರಾತ್ಮಕ ಮನೋಭಾವ ಬೆಳೆಸೋದು ಮಾತ್ರ ಅಲ್ಲ, ಜೊತೆಗೆ ಮಗಳಿಗೆ ಆರಾಮದಾಯಕ ಫೀಲ್ ಕೊಡುವ ಉದ್ದೇಶವೂ ಆಗಿತ್ತು.   

PREV
110
ಮಗಳ ಮೊದಲ ಪಿರಿಯಡ್ಸ್‌ನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಅಪ್ಪ, ಫ್ಯಾಮಿಲಿಗೆ ಗ್ರ್ಯಾಂಡ್ ಪಾರ್ಟಿ!

ಇಂದಿಗೂ, ಹೆಚ್ಚಿನ ಜನರು ಮುಟ್ಟಿನ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ, ಅದೇನೋ ಅಸ್ಪ್ರಷ್ಯತೆ ಎನ್ನುವ ರೀತಿ ನೋಡುತ್ತಾರೆ. ಕೆಲವು ಕಡೆಗಳಲ್ಲಿ ಇಂದಿಗೂ ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಅಡುಗೆಮನೆಗೆ ಹೋಗಲು ಬಿಡೋದಿಲ್ಲ, ಅವರಿಗೆ ಕುಟುಂಬ ಸಮಾರಂಭಗಳಿಗೆ ಹಾಜರಾಗಲು ಅವಕಾಶವಿರೋದಿಲ್ಲ, ಆದರೆ ಈ ಎಲ್ಲಾ ಮೂಡ ನಂಬಿಕೆಗಳನ್ನು ಮುರಿದು, ಉತ್ತರಾಖಂಡದ ಜಿತೇಂದ್ರ ಭಟ್ ತಮ್ಮ ಮಗಳ ಮೊದಲ ಪಿರಿಯಡ್ಸ್ ನ್ನು (first periods) ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ.
 

210

ಮಗಳಿಗೆ ವಿಶೇಷ ಭಾವನೆ ಮೂಡಿಸಲು ಪಾರ್ಟಿ
ಜಿತೇಂದ್ರ ಭಟ್ ಕಾಶಿಪುರದಲ್ಲಿ ಮ್ಯೂಸಿಕ್ ಟೀಚರ್ (music teacher). ಇವರದ್ದು ಅವಿಭಕ್ತ ಕುಟುಂಬ. ಅದರಲ್ಲಿ ಅವರ ಪೋಷಕರು, ಒಡಹುಟ್ಟಿದವರು ಸೇರಿ ತುಂಬಾ ಜನ ಜೊತೆಯಾಗಿ ವಾಸಿಸುತ್ತಾರೆ. ಜಿತೇಂದ್ರ ಅವರ ಒಬ್ಬಳೇ ಮಗಳು ರಾಗಿಣಿ. ಅವರ ಪತ್ನಿ ಭಾವನಾ ಕೂಡ ಸಂಗೀತ ಶಿಕ್ಷಕಿ. 

310

13 ವರ್ಷದ ರಾಗಿಣಿ ಬುಧವಾರ ಮೊದಲ ಬಾರಿ ಪಿರಿಯಡ್ಸ್ ಆಗಿದೆ, ಈ ಹಿನ್ನೆಯಲ್ಲಿ ಎಲ್ಲಾ ಮೂಢನಂಬಿಕೆಗಳನ್ನು ಮುರಿದ ತಂದೆ ಮತ್ತು ಕುಟುಂಬವು ಒಟ್ಟಿಗೆ ಸೇರಿ ದೊಡ್ಡ ಪಾರ್ಟಿಯನ್ನು ಆಯೋಜಿಸಿತು. ಸಂಬಂಧಿಕರು, ಕುಟುಂಬ ಸ್ನೇಹಿತರು, ಎಲ್ಲರನ್ನೂ ಆಹ್ವಾನಿಸಲಾಗಿತ್ತು. ದೊಡ್ಡ ಹಾಲ್ ನಲ್ಲಿ ಬಿಳಿ ಮತ್ತು ಗುಲಾಬಿ ಬಲೂನುಗಳಿಂದ ಅಲಂಕರಿಸಲಾಗಿತ್ತು. ಇದೆಲ್ಲಾ ಮಾಡಿರೋದು ತಮ್ಮ ಮುದ್ದು ಮಗಳು ರಾಗಿಣಿಗೆ ವಿಶೇಷ ಭಾವನೆ ಮೂಡಿಸಲು. ಅಷ್ಟೇ ಅಲ್ಲ  ಪಿರಿಯಡ್ಸ್ ಅನ್ನೋದು ರೋಗವಲ್ಲ ಅದು ಮಹಿಳೆಯ ಜೀವನದ ಒಂದು ಭಾಗ ಅನ್ನೋ ಸಂದೇಶವನ್ನು ಸಹ ಸಮಾಜಕ್ಕೆ ನೀಡಿದರು. 

410

ಜಿತೇಂದ್ರ ತಮ್ಮ ಮಗಳ ಕೇಕ್ ಅನ್ನು ಪೀರಿಯಡ್ ಥೀಮ್ ಮೇಲೆ ಡಿಸೈನ್ ಮಾಡಿದ್ದರು. ಅವರು ಕೇಕ್ ನ ಬಣ್ಣವನ್ನು ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಮಾಡಿಸಿದ್ದರು, ಆದರೆ ಜಿತೇಂದ್ರ ಕೇಕ್ ಮೇಕರ್ ಬಳಿ ಕೇಕ್ ಮೇಲೆ "ಹ್ಯಾಪಿ ಪೀರಿಯಡ್ಸ್ ರಾಗಿಣಿ" (Happy periods Ragini) ಎಂದು ಬರೆಯಲು ಹೇಳಿದಾಗ, ಅವರಿಗೆ ವಿಚಿತ್ರ ಭಾವನೆ ಮೂಡಿತಂತೆ, ಈ ರೀತಿಯಾಗಿ ನಾನು ಎಂದಿಗೂ ಕೇಕ್ ತಯಾರಿಸಿಲ್ಲ ಎಂದಿದ್ರಂತೆ ಬೇಕರಿಯವರು. 
 

510

ಮಗಳು ದೊಡ್ಡವಳಾದಳು ಎಂದು ಫೇಸ್ ಬುಕ್ ಪೋಸ್ಟ್ ಮಾಡಿದ ತಂದೆ
ರಾಗಿಣಿಯ ಪೀರಿಯಡ್ ಪಾರ್ಟಿಯ ಫೋಟೋಗಳನ್ನು ಜಿತೇಂದ್ರ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಹ್ಯಾಪಿ ಪೀರಿಯಡ್ ರಾಗಿಣಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಜನರು ತುಂಬಾ ಮೆಚ್ಚಿಕೊಂಡು, ಶೇರ್ ಮಾಡಿದ್ದಾರೆ

610

ಕರೆದರೂ ಬಾರದ ಸಂಬಂಧಿಕರು
ಈ ರೀತಿ ಪಾರ್ಟಿ ಆಯೋಜಿಸೋದಕ್ಕೆ ಕುಟುಂಬದ ಕೆಲವು ಸದಸ್ಯರಿಗೆ ವಿಚಿತ್ರ ಅನಿಸಿದ್ದು, ಅವರು ಪಾರ್ಟಿಗೆ ಬಾರಲೇ ಇಲ್ಲ  ಎನ್ನುವ ಜೀತೇಂದ್ರ, ಹಳೆ ತಲೆಮಾರಿನ ಜನರಲ್ಲಿ, ಪಿರಿಯಡ್ಸ್ ಬಗ್ಗೆ ಹಲವಾರು ಮೂಡನಂಬಿಕೆ ಇದೆ. ಈ ವಿಷಯವನ್ನು ಮುಚ್ಚಿಡಬೇಕು ಎಂದು ಅವರು ಹೇಳುತ್ತಾರೆ. ಆದರೆ ನನಗೆ ಇದರಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ ಜೀತೇಂದ್ರ. 

710

ರಾಗಿಣಿಗೆ ಸ್ಪೆಷಲ್ ಗಿಫ್ಟ್ ಗೆ ಬೇಡಿಕೆ
ರಾಗಿಣಿಗೆ ಸ್ಯಾನಿಟರಿ ಪ್ಯಾಡ್ ಉಡುಗೊರೆಯಾಗಿ ನೀಡಬೇಕು ಎಂದು ಜಿತೇಂದ್ರ ತನ್ನ ಎಲ್ಲಾ ಸ್ನೇಹಿತರು ಮತ್ತು ರಾಗಿಣಿಯ ಸ್ನೇಹಿತರಿಗೆ ಹೇಳಿದ್ದರು , ಹಾಗಾಗಿ ಪಾರ್ಟಿಗೆ ಬಂದಿದ್ದವರೆಲ್ಲರೂ ಆಕೆಗೆ ಸ್ಯಾನಿಟರಿ ಪ್ಯಾಡ್ ಗಿಫ್ಟ್ ನೀಡಿದ್ದಾರಂತೆ. 
 

810

ಫಸ್ಟ್ ಪಿರಿಯಡ್ಸ್ ಬಗ್ಗೆ ರಾಗಿಣಿ ರಿಯಾಕ್ಷನ್ ಹೇಗಿತ್ತು? 
ರಾಗಿಣಿಗೆ 11 ವರ್ಷ ತುಂಬಿದಾಗ, ಜೀತೇಂದ್ರ ಅವರು ಮತ್ತು ಅವರ ಪತ್ನಿ ರಾಗಿಣಿಗೆ ಮುಟ್ಟಿನ ಬಗ್ಗೆ ಮಾಹಿತಿ ನೀಡಿದ್ದರಂತೆ. ಆದರೆ ಮೊದಲ ಬಾರಿ ಪಿರಿಯಡ್ಸ್ ಆದಾಗ ಆಕೆ ಹೆದರಿದ್ದಳಂತೆ. ನಂತರ ಅದರ ಬಗ್ಗೆ ವಿವರಿಸಿದಾಗ ಭಯ ಬಿಟ್ಟು ನಾರ್ಮಲ್ ಆಗಿದ್ದಾಳಂತೆ ರಾಗಿಣಿ. 

910

ಅಜ್ಜ- ಅಜ್ಜಿಯ ಆಶೀರ್ವಾದ
ಜಿತೇಂದ್ರ ಮನೆಯಲ್ಲಿ ಈ ಪಾರ್ಟಿಯನ್ನು ಆಯೋಜಿಸುವ ಬಗ್ಗೆ ಮಾತನಾಡಿದಾಗ, ಅವರ ಪೋಷಕರು ಸಹ ಮೊದಲು ಮುಜುಗರಕ್ಕೊಳಗಾದರಂತೆ, ಆದರೆ ನಂತರ ಅವರಿಗೆ ವಿವರಿಸಿದಾಗ, ಅವರು ಸಹ ಅರ್ಥಮಾಡಿಕೊಂಡರು ಮತ್ತು ಈ ಸಮಾರಂಭದಲ್ಲಿ ಭಾಗವಹಿಸಿ, ರಾಗಿಣಿಗೆ ಆಶೀರ್ವಾದ ಮಾಡಿದ್ದರಂತೆ. 

1010

ಈ ಬಗ್ಗೆ ಜೀತೇಂದ್ರ ಏನು ಹೇಳ್ತಾರೆ
ಯಾರಾದರೂ ಸ್ಯಾನಿಟರಿ ಪ್ಯಾಡ್ ಖರೀದಿಸಲು ಹೋದಾಗ, ಅಂಗಡಿಯವರು ಅದನ್ನು ಪತ್ರಿಕೆಯಲ್ಲಿ ಸುತ್ತುವುದನ್ನು ನಾನು ಯಾವಾಗಲೂ ನೋಡುತ್ತಿದ್ದೆ. ಈ ಮೂಢನಂಬಿಕೆಯನ್ನು ಮುರಿಯಬೇಕು ಎಂಬುದು ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು. ನನಗೆ ಮಗಳು ಹುಟ್ಟಿದ್ರೆ, ನಾನು ಪಿರಿಯಡ್ ಪಾರ್ಟಿ ಮಾಡುತ್ತೇನೆ ಮತ್ತು ನಾನು ಇದನ್ನು ನನ್ನ ವಿದ್ಯಾರ್ಥಿಗೂ ಹೇಳಿದ್ದೆ, ಈ ಅದು ನಿಜವಾಗಿದೆ ಎನ್ನುತ್ತಾರೆ ಜೀತೇಂದ್ರ, 

Read more Photos on
click me!

Recommended Stories