ಮನಿ ಪ್ಲಾಂಟ್ ವೇಗವಾಗಿ, ಹಚ್ಚಹಸಿರಾಗಿ ಬೆಳಿಬೇಕಾ?, ಹಾಗಾದ್ರೆ ಅಡುಗೆಮನೆಯಲ್ಲಿರುವ ಈ ಪದಾರ್ಥವನ್ನ ಸೇರಿಸಿ

Published : Sep 20, 2025, 04:40 PM IST

ಕೆಲವರ ಮನೆಗಳಲ್ಲಿ ಮನಿ ಪ್ಲಾಂಟ್ ಇದ್ದಕ್ಕಿದ್ದಂತೆ ಬೆಳೆಯುವುದು ನಿಲ್ಲುತ್ತೆ. ಇದರಿಂದಾಗಿ ಸಸ್ಯದ ಎಲೆಗಳು ಹಳೆಯದಾಗಿ ಒಣಗುತ್ತವೆ. ನಿಮ್ಮ ಮನಿ ಪ್ಲಾಂಟ್ ಬೆಳವಣಿಗೆಯೂ ನಿಂತುಹೋಗಿ ಅದು ಚೆನ್ನಾಗಿ ಬೆಳೆಯದಿದ್ದರೆ ಅಡುಗೆಮನೆಯಲ್ಲಿರುವ ಈ ಪದಾರ್ಥಗಳನ್ನ ಮನಿ ಪ್ಲಾಂಟ್ ಪಾಟ್‌ನಲ್ಲಿ ಇರಿಸಿ. 

PREV
16
ಸರಿಯಾಗಿ ನೋಡಿಕೊಳ್ಳುವುದು ಮುಖ್ಯ

ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮನಿ ಪ್ಲಾಂಟ್ ಪಾತ್ರ ದೊಡ್ಡದಿದೆ. ಮನಿ ಪ್ಲಾಂಟ್‌ ಇಲ್ಲಿಯೇ ಇಡಬೇಕು, ಅಲ್ಲಿಯೇ ಇಡಬೇಕು ಅಂತೇನಿಲ್ಲ. ನೀವು ಮನೆಯ ಒಳಗೆ ಮತ್ತು ಹೊರಗೆ ಎಲ್ಲಿ ಬೇಕಾದರೂ ಇಡಬಹುದು. ಮನಿ ಪ್ಲಾಂಟ್ ಒಂದು ಪುಟ್ಟ ಬಾಟಲಿಯಲ್ಲೂ ಸಹ ವೇಗವಾಗಿ ಬೆಳೆಯುತ್ತದೆ. ವಿಶೇಷವೆಂದರೆ ಮನಿ ಪ್ಲಾಂಟ್ ನೀರು ಮತ್ತು ಮಣ್ಣು ಎರಡರಲ್ಲೂ ಬೆಳೆಯುತ್ತದೆ. ಆದರೆ ಸಸ್ಯವನ್ನು ಸರಿಯಾಗಿ ನೋಡಿಕೊಳ್ಳುವುದು ಮುಖ್ಯ. ಕೆಲವರ ಮನೆಗಳಲ್ಲಿ ಮನಿ ಪ್ಲಾಂಟ್ ಇದ್ದಕ್ಕಿದ್ದಂತೆ ಬೆಳೆಯುವುದು ನಿಲ್ಲುತ್ತೆ.

26
ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತೆ

ಇದರಿಂದಾಗಿ ಸಸ್ಯದ ಎಲೆಗಳು ಹಳೆಯದಾಗಿ ಒಣಗುತ್ತವೆ. ನಿಮ್ಮ ಮನಿ ಪ್ಲಾಂಟ್ ಬೆಳವಣಿಗೆಯೂ ನಿಂತುಹೋಗಿ ಅದು ಚೆನ್ನಾಗಿ ಬೆಳೆಯದಿದ್ದರೆ ಅಡುಗೆಮನೆಯಲ್ಲಿರುವ ಈ ಪದಾರ್ಥಗಳನ್ನ ಮನಿ ಪ್ಲಾಂಟ್ ಪಾಟ್‌ನಲ್ಲಿ ಇರಿಸಿ. ಇದರೊಂದಿಗೆ ಮನಿ ಪ್ಲಾಂಟ್ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ ಮತ್ತು ಹೊಸ ಎಲೆಗಳು ಸಹ ಬೆಳೆಯಲು ಪ್ರಾರಂಭಿಸುತ್ತವೆ.

36
ಅರಿಶಿನದ ನೀರು

ನಿಮ್ಮ ಸಸ್ಯದಲ್ಲಿ ಫಂಗಸ್ ಬೆಳೆಯುತ್ತಿದ್ದರೆ ಸ್ವಲ್ಪ ಅರಿಶಿನ ನೀರನ್ನು ಮನಿ ಪ್ಲಾಂಟ್‌ ಪಾಟ್‌ಗೆ ಹಾಕಿ. ಇದು ಫಂಗಸ್ ತೆಗೆದುಹಾಕಿ ಸಸ್ಯ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅರಿಶಿನದ ಜೊತೆಗೆ ನೀವು ನಿಮ್ಮ ಮನಿ ಪ್ಲಾಂಟ್‌ಗೆ ಎಪ್ಸಮ್ ಸಾಲ್ಟ್ ಕೂಡ ಸೇರಿಸಬಹುದು. ಇದು ಅದನ್ನು ಹಸಿರಾಗಿಡುತ್ತದೆ.

46
ಸೋಡಾ ನೀರು

ನಿಮ್ಮ ಮನಿ ಪ್ಲಾಂಟ್‌ನ ಬೆಳವಣಿಗೆಯನ್ನು ಹೆಚ್ಚಿಸಲು ಪಾಟ್‌ಗೆ ಸೋಡಾ ನೀರನ್ನು ಸೇರಿಸಬಹುದು. 1-2 ಕಪ್ ನೀರಿನಲ್ಲಿ ಸುಮಾರು 1 ಚಮಚ ಸೋಡಾ ಕರಗಿಸಿ. ಈಗ ಈ ನೀರನ್ನು ಮನಿ ಪ್ಲಾಂಟ್‌ನ ಬೇರುಗಳಿಗೆ ಸುರಿಯಿರಿ. ಇದು ಉತ್ತಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ಹೊಸ ಎಲೆಗಳು ಕಾಣಿಸಿಕೊಳ್ಳುತ್ತವೆ.

56
ಟೀಪುಡಿ ನೀರು

ಮನಿ ಪ್ಲಾಂಟ್‌ಗೆ ಟೀ ಪುಡಿ ನೀರು ಅಥವಾ ಸೋಸಿದ ಟೀ ಪುಡಿ ಉಳಿದ್ದರೆ ಸೇರಿಸಿ. ಇದು ಮನಿ ಪ್ಲಾಂಟ್‌ಗೆ ಸಾವಯವ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಉಳಿದ ಟೀ ಪುಡಿ ಸೇರಿಸುತ್ತಿದ್ದರೆ, ಸೇರಿಸುವ ಮೊದಲು ಚೆನ್ನಾಗಿ ತೊಳೆಯಿರಿ. ಇದರಿಂದ ಅದರಲ್ಲಿರುವ ಸಿಹಿ ಹೋಗುತ್ತದೆ. ಇದು ಮನಿ ಪ್ಲಾಂಟ್ ಹಸಿರಾಗಲು ಮತ್ತು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.

66
ಮನಿ ಪ್ಲಾಂಟ್ ಹಸಿರಾಗಿರಲು ಟಿಪ್ಸ್

*ಮನಿ ಪ್ಲಾಂಟ್ ಹಸಿರಾಗಿಡಲು ಅದನ್ನು ಸೌಮ್ಯವಾದ ಸೂರ್ಯನ ಬೆಳಕಿನಲ್ಲಿಡಿ. ನೇರ ಸೂರ್ಯನ ಬೆಳಕಿನಿಂದ ಸಸ್ಯವನ್ನು ರಕ್ಷಿಸಿ.
*ಮಣ್ಣು ಮೇಲಿನಿಂದ ಒಣಗಿದಾಗ ಮಾತ್ರ ಸಸ್ಯಕ್ಕೆ ನೀರು ಹಾಕಿ.
*ಕಾಲಕಾಲಕ್ಕೆ ಗೊಬ್ಬರ ಹಾಕುವುದು ಮತ್ತು ಕಳೆ ತೆಗೆಯುವುದನ್ನು ಮುಂದುವರಿಸಿ.
*ಮನಿ ಪ್ಲಾಂಟ್‌ಗೆ ವಾರಕ್ಕೆ 1-2 ಬಾರಿ ಸ್ನಾನ ಮಾಡಿಸಿ. ಅಂದರೆ ಎಲೆಗಳನ್ನು ನೀರಿನಿಂದ ಸ್ವಚ್ಛಗೊಳಿಸಿ.
*ಕೆಟ್ಟ ಎಲೆಗಳನ್ನು ತೆಗೆದುಹಾಕುವುದನ್ನು ಮುಂದುವರಿಸಿ. ಇದರಿಂದ ಸಸ್ಯವು ಹಸಿರಾಗಿ ಉಳಿಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories