ಸೀರೆ ಮಾರಿ ಹಣ ಗಳಿಸ್ತಿದ್ದಾಕೆ ಈಗ ಬೃಹತ್‌ ಫ್ಯಾಷನ್‌ ಬ್ರ್ಯಾಂಡ್‌ ಒಡತಿ, ತಿಂಗಳ ಆದಾಯವೇ ಕೋಟಿ ಮೀರುತ್ತೆ!

First Published Jan 10, 2024, 8:49 AM IST

ಆ ಇಬ್ಬರೂ ಸಹೋದರಿಯರು ಹೆಸರಾಂತ ಕಂಪೆನಿಗಳಲ್ಲಿ ಹೈ ಪೇಯ್ಡ್‌ ಜಾಬ್‌ನಲ್ಲಿದ್ದರು. ಆದರೆ ಸ್ವತಃ ಏನನ್ನಾದರೂ ಆರಂಭಿಸಬೇಕು ಎಂಬ ಕನಸಿನಿಂದ ಸೀರೆ ಉದ್ಯಮ ಆರಂಭಿಸಲು ಹೊರಟರು. ಈಗ ಬೃಹತ್ ಫ್ಯಾಷನ್‌ ಬ್ರ್ಯಾಂಡ್‌ನ ಮಾಲೀಕರು. ತಿಂಗಳ ಆದಾಯವೇ ಕೋಟಿ ಮೀರುತ್ತೆ.

ಮನೆ, ಗಂಡ, ಮಕ್ಕಳು ಎಂದು ಎಲ್ಲವನ್ನೂ ನಿಭಾಯಿಸಬೇಕಾಗಿ ಬರುವಾಗ ಮಹಿಳೆ ಆಫೀಸ್ ಕೆಲಸವನ್ನು ಸಂಭಾಳಿಸುವುದೇ ಕಷ್ಟವಾಗುತ್ತದೆ. ಹೀಗಿರುವಾಗ ಈ ಇಬ್ಬರು ಮಹಿಳೆಯರು ಆಫೀಸ್ ಕೆಲಸವನ್ನು ತೊರೆದು ಸ್ವಂತ ಬಿಸಿನೆಸ್ ಆರಂಭಿಸಿದ್ದಾರೆ. ಬರೋಬ್ಬರಿ 50 ಕೋಟಿ ರೂ.ನ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಈ ಸಂಸ್ಥೆಯಲ್ಲೀಗ 17000ಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.

ಸಹೋದರಿಯರಾದ ತನಿಯಾ ಮತ್ತು ಸುಜಾತಾ ಬಿಸ್ವಾಸ್ 2016ರಲ್ಲಿ ಸೀರೆ ಬ್ರಾಂಡ್‌ನ್ನು ಪ್ರಾರಂಭಿಸಿದರು. ಆರಂಭದಲ್ಲಿ ಹೆಚ್ಚು ಸೀರೆ ಸೇಲ್ ಆಗದಿದ್ದರೂ, ನಂತರದ ದಿನಗಳಲ್ಲಿ ಮಹಿಳೆಯರು ಇವರ ಕಂಪೆನಿಯ ಸೀರೆಗಳನ್ನು ಕೊಳ್ಳಲು ಆರಂಭಿಸಿದರು. ಇದು ನಂತರದ ದಿನಗಳಲ್ಲಿ ಸಂಸ್ಥೆಯನ್ನು ಲಾಭದಾಯಕ ಕಂಪನಿಯನ್ನಾಗಿ ಮಾಡಿತು.

Latest Videos


ತನಿಯಾ ಮತ್ತು ಸುಜಾತಾ ಸೀರೆ ವ್ಯಾಪಾರಕ್ಕಿಂತ ಮೊದಲು ಹಲವಾರು ವ್ಯವಹಾರಗಳನ್ನು ಪ್ರಾರಂಭಿಸಿದರು. ಪ್ಯಾನ್‌ಕೇಕ್ ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ ಅದು ಎರಡು ತಿಂಗಳಿಗಿಂತ ಹೆಚ್ಚು ಕಾಲ ಉಳಿಯಲ್ಲಿಲ್ಲ. ನಂತರ ಫೋಟೋಗ್ರಫಿ ಪೇಜ್ ತೆರೆದರು. ಅದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲ್ಲಿಲ್ಲ. 

ಬಿಸ್ವಾಸ್ ಸಹೋದರಿಯರು ಪಾಕೆಟ್‌ಗಳು, ಸಡಿಲವಾದ ಪ್ಯಾಂಟ್‌ಗಳು ಮತ್ತು ಇತರ ರೀತಿಯ ಬಟ್ಟೆಗಳನ್ನು ಸಹ ವಿನ್ಯಾಸಗೊಳಿಸಿದರು. ಅದೂ ಸಹ ಫ್ಲಾಪ್ ಆಯಿತು. ನಂತರ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ 'ಸುತಾ' ಹೆಸರಿನ ಕಂಪೆನಿಯನ್ನು ಆರಂಭಿಸಿದರು. 'ಸುತಾ' ಮೃದುವಾದ ಮುಲ್‌ಮುಕ್‌ ಕಾಟನ್ ಸೀರೆಗಳನ್ನು ಮಾರಾಟ ಮಾಡುತ್ತದೆ

ತನಿಯಾ ಬಿಸ್ವಾಸ್ 2013ರಲ್ಲಿ IIM ಲಕ್ನೋದಿಂದ ಪದವಿ ಪಡೆದರು.  ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (NIT), ರೂರ್ಕೆಲಾದಲ್ಲಿ ಪದವಿ ಪೂರ್ಣಗೊಳಿಸಿದರು. 2009 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ಲಕ್ನೋದ IIM ನಿಂದ MBA ಅಧ್ಯಯನ ಮಾಡಿದರು. 

ಬಿಸ್ವಾಸ್ ತನ್ನ ಲಿಂಕ್ಡ್‌ಇನ್ ಪುಟದ ಪ್ರಕಾರ ಐಬಿಎಂನಲ್ಲಿ ಸಹಾಯಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಸ್ವಂತ ಉದ್ಯಮವನ್ನು ಮಾಡಬೇಕೆಂದು ಬಯಸಿದ್ದರು. ಹೀಗಾಗಿ 2016ರಲ್ಲಿ ಈ ಹೈ ಪೇಯ್ಡ್ ಜಾಬ್‌ನ್ನು ತೊರೆದು ಉದ್ಯಮವನ್ನು ಆರಂಭಿಸಲು ಮುಂದಾದರು.

2016ರಲ್ಲಿ, ತಲಾ 3 ಲಕ್ಷ ರೂ ಹೂಡಿಕೆ ಮಾಡಿ ಸೀರೆ ವ್ಯಾಪಾರವನ್ನು ಪ್ರಾರಂಭಿಸಿದರು. ಪ್ರಸ್ತುತ ಕಂಪನಿಯು 50 ಕೋಟಿ ರೂ. ಹೆಚ್ಚು ನಿವ್ವಳ ಲಾಭವನ್ನು ಗಳಿಸುತ್ತಿದೆ. 6 ಲಕ್ಷಗಳ ಜಂಟಿ ಹೂಡಿಕೆಯೊಂದಿಗೆ ಪ್ರಾರಂಭವಾದ ಕಂಪನಿಯು 17000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಬೃಹತ್ ಕಂಪನಿಯಾಗಿ ಮಾರ್ಪಟ್ಟಿದೆ.

ಅವರ ಬ್ರ್ಯಾಂಡ್ ಮೃದುವಾದ ಮುಲ್‌ಮುಲ್‌ ಕಾಟನ್ ಸೀರೆಗಳನ್ನು ಮಾರಾಟ ಮಾಡುತ್ತದೆ. ಈ ಸೀರೆಗಳನ್ನು ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಿಸಲಾಗುತ್ತದೆ. ತಮ್ಮ ತಾಯಿ ಮತ್ತು ಅಜ್ಜಿ ಉಡುವ ಸೀರೆಗಳನ್ನು ಯಾರೂ ಮಾರಾಟ ಮಾಡುತ್ತಿಲ್ಲ ಎಂದು ಮನಗಂಡು ತನಿಯಾ ಮತ್ತು ಸುಜಾತ ಈ ಬಿಸಿನೆಸ್ ಆರಂಭಿಸಲು ಪ್ಲಾನ್ ಮಾಡಿದರು.

ಮಾರುಕಟ್ಟೆಯು ಗಟ್ಟಿಯಾದ ಅಥವಾ ಚುಚ್ಚುವ ಸೀರೆಗಳಿಂದ ತುಂಬಿತ್ತು. ವಯಸ್ಸಾದ ಮಹಿಳೆಯರು ಅಥವಾ ವಿಧವೆಯರು ಮಾತ್ರ ಕಾಟನ್ ಸೀರೆಗಳನ್ನು ಧರಿಸುತ್ತಾರೆ ಎಂಬ ಗ್ರಹಿಕೆಯನ್ನು ಬದಲಾಯಿಸಲು ಇವರಿಬ್ಬರೂ ಬಯಿಸಿದ್ದರು. ಮಹಿಳೆಯರಿಗೆ ಆರಾಮದಾಯಕ ಪರ್ಯಾಯವನ್ನು ಒದಗಿಸಲು ಮುಲ್‌ಮುಲ್ ಕಾಟನ್ ಸೀರೆಯ ಕಂಪೆನಿಯನ್ನು ಆರಂಭಿಸಿದರು.

ಸುತ ಸೀರೆಗಳ ಬೆಲೆ 2,800 ರಿಂದ 3,000 ರೂ. ಸೀರೆಯ ವರೆಗೆ ಇರುತ್ತದೆ. ಬೆಲೆಯ ಶೇ.30-40ರಷ್ಟು ಹಣವನ್ನು ನೇಕಾರರಿಗೆ ನೀಡಲಾಗುತ್ತದೆ. 2022-2023ರ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 56 ಕೋಟಿ ರೂ. ಅವರ ಆರಂಭಿಕ ಹೂಡಿಕೆ 6 ಲಕ್ಷ ರೂ. ಅವರು ಮುಂದಿನ ವರ್ಷ 100 ಕೋಟಿ ಗಳಿಸುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ. 

click me!