ಬ್ಯೂಟಿ ವಿತ್‌ ಬ್ರೈನ್‌, ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್‌ ಅಧಿಕಾರಿ ಈ ಸೆಲ್ಫಿ ಕ್ವೀನ್‌!

First Published Jan 9, 2024, 9:20 AM IST

ಐಎಎಸ್‌, ಐಪಿಎಸ್‌ ಆಫೀಸರ್‌ ಆಗುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಜ್ಞಾನ, ಶ್ರದ್ಧೆ, ಪರಿಶ್ರಮದ ಅಗತ್ಯವಿದೆ. ಕೆಲವೊಬ್ಬರು ಒಂದೆರಡು ಸಾರಿ ಎಕ್ಸಾಂ ಬರೆದು ಆಗಲ್ಲ ಅಂತ ಬಿಟ್ಟು ಬಿಡುತ್ತಾರೆ. ಆದ್ರೆ ಇವರು ಬ್ಯೂಟಿ ವಿತ್ ಬ್ರೈನ್ ಅನ್ನುತ್ತಾರಲ್ಲ ಹಾಗೆ.. ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್‌ ಅಧಿಕಾರಿ. ಸೋಷಿಯಲ್ ಮೀಡಿಯಾದ ಸೆನ್ಸೇಶನ್‌.

22ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದವರು. ಬ್ಯೂಟಿ ವಿತ್‌ ಬ್ರೈನ್ ಎನ್ನುತ್ತಾರಲ್ಲ ಹಾಗೆ. ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್‌ ಅಧಿಕಾರಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾದರು ಮತ್ತು AIR 4ನ್ನು ಸಹ ಪಡೆದುಕೊಂಡಿದ್ದಾರೆ. 

UPSC ಅನೇಕ ಜನರಿಗೆ ಒಂದು ಕನಸು. ಲಕ್ಷಾಂತರ ಮಂದಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಪರೀಕ್ಷೆಗೆ ಹಾಜರಾಗಲು ಪ್ರತಿ ವರ್ಷ ನೋಂದಾಯಿಸುವ ಲಕ್ಷಾಂತರ ಆಕಾಂಕ್ಷಿಗಳಲ್ಲಿ, ಕೆಲವರು ಮಾತ್ರ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗುತ್ತದೆ. ಕೆಲವರು ಮೊದಲ ಪ್ರಯತ್ನದಲ್ಲೇ ಪಾಸಾದರೆ, ಇನ್ನು ಕೆಲವರು ಎರಡು ಮೂರು ಪ್ರಯತ್ನಗಳನ್ನು ಅಟೆಂಪ್ಟ್ ಮಾಡಿ ಕೈ ಬಿಡುತ್ತಾರೆ.

Latest Videos


ಆದರೆ, ಐಎಎಸ್ ಅಧಿಕಾರಿ ಸ್ಮಿತಾ ಸಬರ್‌ವಾಲ್‌ ಅವರು ತಮ್ಮ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಆಕಾಂಕ್ಷಿಗಳಲ್ಲಿ ಒಬ್ಬರು.

ಸ್ಮಿತಾ ಸಬರ್‌ವಾಲ್ ಅವರು 2000ರಲ್ಲಿ ಐಎಎಸ್‌ ಪರೀಕ್ಷೆಯನ್ನು ಪಾಸಾದರು. ಮತ್ತು AIR 4ನ್ನು ಪಡೆದುಕೊಂಡರು. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಜನಿಸಿದ ಸ್ಮಿತಾ ಅವರು ನಿವೃತ್ತ ಸೇನಾ ಕರ್ನಲ್‌ ಮಗಳು.

ಐಎಎಸ್ ಸ್ಮಿತಾ ಸಬರ್ವಾಲ್ ಅವರು ಯುಪಿಎಸ್‌ಸಿ ಪರೀಕ್ಷೆಗಳನ್ನು ತೇರ್ಗಡೆಯಾದಾಗ ಕೇವಲ 22 ವರ್ಷ ವಯಸ್ಸಿನವರಾಗಿದ್ದರು. ಈ ಮೂಲಕ ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್ ಅಧಿಕಾರಿಯಾಗಿದ್ದಾರೆ. 

ಸ್ಮಿತಾ ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್ ಆನ್ಸ್‌ನಲ್ಲಿ ಮಾಡಿದರು. ಹೈದರಾಬಾದ್‌ನ ಸೇಂಟ್ ಫ್ರಾನ್ಸಿಸ್‌ನಿಂದ ವಾಣಿಜ್ಯ ಪದವಿ ಪಡೆದರು. 12ನೇ ತರಗತಿಯಲ್ಲಿ ಸ್ಮಿತಾ ಕ್ಲಾಸ್ ಟಾಪರ್ ಆಗಿದ್ದರು. 

ವಾರಂಗಲ್, ವಿಶಾಖಪಟ್ಟಣಂ, ಕರೀಂನಗರ ಮತ್ತು ಚಿತ್ತೂರು ಸೇರಿದಂತೆ ತೆಲಂಗಾಣದ ಹಲವಾರು ಸ್ಥಳಗಳಲ್ಲಿ ಸ್ಮಿತಾ ಸಬರ್‌ವಾಲ್‌ ಅಧಿಕಾರ ನಿರ್ವಹಿಸಿದ್ದಾರೆ.

ಸಿಎಂ ಕಚೇರಿಗೆ ನೇಮಕಗೊಂಡ ಅತ್ಯಂತ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ  ಸ್ಮಿತಾ ಸಬರ್‌ವಾಲ್ ಪಾತ್ರರಾಗಿದ್ದಾರೆ. ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಅವರು ಜನರ ಅಧಿಕಾರಿ ಎಂದೇ ಜನಪ್ರಿಯರಾಗಿದ್ದಾರೆ.

ಸ್ಮಿತಾ ಅಗರ್‌ವಾಲ್‌ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಆಗಾಗ ತಾವು ಭಾಗವಹಿಸುವ ಕಾರ್ಯಕ್ರಮದ ಫೋಟೋ, ಸೆಲ್ಫೀಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅವರು ಟ್ವಿಟರ್‌ನಲ್ಲಿ 3.35 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

click me!