73ರ ಮಹಿಳೆ ಗರ್ಭದಲ್ಲಿ 35 ವರ್ಷದ 'ಮಗು'! ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಬಯಲಾದ ರಹಸ್ಯ

First Published | Jan 9, 2024, 5:33 PM IST

ಅಲ್ಜೀರಿಯಾದ 73 ವರ್ಷದ ವೃದ್ಧೆಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸಮಸ್ಯೆ ಬಗೆಹರಿಯದೇ ಇದ್ದಾಗ ಆಸ್ಪತ್ರೆಗೆ ಹೋಗಲೇಬೇಕಾಯಿತು. ವೃದ್ಧೆ ಮಹಿಳೆಯನ್ನು ಪರೀಕ್ಷಿಸಿದಾಗ ಪ್ರತಿಯೊಬ್ಬರು ಅಚ್ಚರಿ ಪಡುವಂತಹ ಘಟನೆಯೊಂದು ನಡೆದಿತ್ತು. 
 

ಪ್ರಕೃತಿಯ ಆಟಗಳು ನಿಜವಾಗಿಯೂ ಅದ್ಭುತವಾಗಿವೆ, ಕೆಲವೊಮ್ಮೆ ವಿಚಿತ್ರವೂ ಎನಿಸುತ್ತದೆ. ಅನೇಕ ಬಾರಿ, ಎಂತಹ ಘಟನೆಗಳು ಬೆಳಕಿಗೆ ಬರುತ್ತವೆ ಅಂದರೆ, ಅದನ್ನು ಕೇಳಿ ಒಬ್ಬ ವ್ಯಕ್ತಿಯು ಶಾಕ್ ಆಗೋದು ಗ್ಯಾರಂಟಿ. ಹೀಗಿರೋವಾಗ ಜಗತ್ತಿನಲ್ಲಿ ನಮಗೆ ನಿಯಂತ್ರಣವಿಲ್ಲದ ಕೆಲವು ವಿಷಯಗಳಿವೆ ಎಂದು ನಂಬಬೇಕು. 
 

ಇನ್ನು ಗರ್ಭಧಾರಣೆ (pregnancy) ಮತ್ತು ಮಕ್ಕಳ ಜನನದ ವಿಚಾರ ಬಂದಾಗ ಅದೆಲ್ಲವೂ ದೇವರ ಅನುಗ್ರಹ ಎಂದು ದೇವರೊಂದಿಗೆ ಸಂಬಂಧ ಕಲ್ಪಿಸುತ್ತೇವೆ. ಇನ್ನೂ ಕೆಲವು ಪ್ರಕರಣಗಳನ್ನು ಕಂಡಾಗ ಎಲ್ಲವೂ ಇನ್ನೂ ಮಾನವರ ಕೈಯಲ್ಲಿಲ್ಲ ಅನ್ನೋದನ್ನು ಸೂಚಿಸುತ್ತವೆ. 
 

Tap to resize

ಅಂತಹ ಒಂದು ಪ್ರಕರಣ ಅಲ್ಜೀರಿಯಾದಲ್ಲಿ ನಡೆದಿದೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ಇಲ್ಲಿನ ವೈದ್ಯರು ವಿಚಿತ್ರ ಪ್ರಕರಣವನ್ನು ಕಂಡುಕೊಂಡರು, ಇದರಲ್ಲಿ ವೃದ್ಧ ಮಹಿಳೆಗೆ ಹೊಟ್ಟೆ ನೋವು ಇತ್ತು, ಆದರೆ ಅವಳ ಸಮಸ್ಯೆ ಏನು ಎಂದು ಅವಳಿಗೆ ತಿಳಿದಿರಲಿಲ್ಲ. ಅವಳು ತನ್ನ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಹೋದಾಗ, ವೈದ್ಯರು ಪರೀಕ್ಷಿಸಿದ್ದಾರೆ, ಆಕೆಗೂ ತಿಳಿದಿರದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿದೆ. 

ಮಹಿಳೆ 35 ವರ್ಷಗಳ ಗರ್ಭಿಣಿಯಾಗಿದ್ದರು.
ಅಲ್ ಅರೇಬಿಯಾ ವರದಿ ಪ್ರಕಾರ, ಈ ಘಟನೆ 2016 ರಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಹೊಟ್ಟೆ ನೋವಿನ(stomach pain) ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಮಹಿಳೆಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಆಕೆಯ ವಯಸ್ಸು 73 ವರ್ಷ ಎಂದು ಹೇಳಲಾಗಿದೆ. ಆಕೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಹೊಂದಿದ್ದಳು, ಹೊಟ್ಟೆ ನೋವು ಕಡಿಮೆ ಆಗದೇ ಇದ್ದಾಗ ಆಕೆ ಆಸ್ಪತ್ರೆಗೆ ದಾಖಲಾದಳು.

ಆಸ್ಪತ್ರೆಯಲ್ಲಿ ಆಕೆಯನ್ನು ಅಲ್ಟ್ರಾಸೌಂಡ್ (ultrasound)ಮಾಡಿದಾಗ, ಅವಳು ತನ್ನ ಗರ್ಭದೊಳಗೆ ಮಗುವನ್ನು ಹೊಂದಿದ್ದಾರೆ ಎನ್ನುವ ಶಾಕಿಂಗ್ ವಿಷಯ ತಿಳಿದು ಬಂದಿದೆ. ಮತ್ತೊಂದು ಶಾಕಿಂಕ್ ವಿಷಯ ಎಂದರೆ ಮಹಿಳೆ ಬರೋಬ್ಬರಿ 35 ವರ್ಷಗಳ ಹಿಂದೆ ಗರ್ಭಧರಿಸಿದಳು. 7 ತಿಂಗಳ ನಂತರ, ಮಗುವಿಗೆ ನೈಸರ್ಗಿಕವಾಗಿ ಬೆಳೆಯಲು ಸಾಧ್ಯವಾಗಲಿಲ್ಲ, ಹಾಗಾಗಿ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿತು. ಆ ಸಮಯದಲ್ಲಿ ಮಗುವಿನ ತೂಕವು 2 ಕಿಲೋಗ್ರಾಂಗಳಷ್ಟಿತ್ತು . ಕ್ರಮೇಣ ಆ ಮಗು ಕ್ಯಾಲ್ಸಿಫೈಡ್ ಆಗಿ ಕಲ್ಲಾಗಿ ಮಾರ್ಪಟ್ಟಿತ್ತು.

ಈ ಸ್ಥಿತಿಯನ್ನು ಲಿಥೋಪೆಡಿಯನ್ ಎಂದು ಕರೆಯಲಾಗುತ್ತದೆ.
ಈ ವೈದ್ಯಕೀಯ ಸ್ಥಿತಿಯನ್ನು ಲಿಥೊಪೆಡಿಯನ್ (Lithopedion) ಎಂದು ಕರೆಯಲಾಗುತ್ತದೆ, ಇದು ತುಂಬಾ ಅಪರೂಪ ಸಮಸ್ಯೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ವಾದ್ಯಂತ ವೈದ್ಯಕೀಯ ಇತಿಹಾಸದಲ್ಲಿ ಇಂತಹ 300 ಘಟನೆಗಳು ಮಾತ್ರ ಕಂಡುಬಂದಿವೆ. 

 ಮಗುವಿನ ಕ್ಯಾಲ್ಸಿಫಿಕೇಶನ್ (calcification) ಕಾರಣದಿಂದಾಗಿ, ತಾಯಿಗೆ 35 ವರ್ಷಗಳಿಂದ ಯಾವುದೆ ಇನ್ ಫೆಕ್ಷನ್ ಆಗಲಿಲ್ಲ ಎಂದು ಡಾ.ಕಿಮ್ ಗಾರ್ಸಿ ಹೇಳಿದರು. ಮತ್ತೊಂದು ಅಚ್ಚರಿಯ ವಿಚಾರ ಅಂದ್ರೆ, ಗರ್ಭದಲ್ಲಿ ಕಲ್ಲಾಗಿ ಮಾರ್ಪಟ್ಟಿದ್ದ ಮಗು ಇದ್ದರೂ ಸಹ ಮಹಿಳೆಗೆ ಇಷ್ಟು ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಅಥವಾ ಹೊಟ್ಟೆ ಉಬ್ಬಿದಂತೆಯೂ ಕಂಡಿರಲಿಲ್ಲ. 

Latest Videos

click me!