ಮಧುಮೇಹ ಇರುವ ಗರ್ಭಿಣಿಯರ ರಕ್ತದ ಸಕ್ಕರೆಯ ಲೆವಲ್ ಅನ್ನು ಕಡಿಮೆ ಮಾಡುವುದರಿಂದ ದಢೂತಿ ಮಗವನ್ನು ಹೊಂದುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಅಲ್ಲದೇ ಜನನದ ಸಮಯದಲ್ಲಿ ಮಗುವಿಗೆ ಸಾವು ಮತ್ತು ಗಾಯದ ಅಪಾಯವೂ ಕಡಿಮೆಯಾಗಲಿದೆ ಎಂದು ಅಧ್ಯಯನ ಹೇಳುತ್ತದೆ.
infants general
ಮಧುಮೇಹ ಹೊಂದಿರುವ ತಾಯಿ ಸರಾಸರಿ ಗಾತ್ರಕ್ಕಿಂತ ದೊಡ್ಡ ಮಗುವಿಗೆ ಜನ್ಮ ನೀಡುತ್ತಾಳೆ. ಇದರಿಂದಾಗಿ ಅವರು ಹುಟ್ಟುವಾಗಲೇ ಗಾಯ ಅಥವಾ ಸಾವಿನ ಅಪಾಯ ಹೊಂದಿರುತ್ತಾರೆ.
ಗರ್ಭಾವಸ್ಥೆಯಲ್ಲಿ ಮಧುಮೇಹ ಹೆಚ್ಚಾಗುವ ಸಮಸ್ಯೆ ಪ್ರಪಂಚದಾದ್ಯಂತ ಸಾಮಾನ್ಯ. ಇದು ಹೆಚ್ಚಾಗಿ ದಪ್ಪ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯವು ಮಗುವಿನ ಜೀವನದುದ್ದಕ್ಕೂ ಇರುತ್ತದೆ.
ರಕ್ತದ ಸಕ್ಕರೆಯ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಅಗತ್ಯವಿದೆ.ಇದಕ್ಕಾಗಿ ಅವಳು ತನ್ನ ಆಹಾರ ಕ್ರಮವನ್ನು ಬದಲಾಯಿಸಬಹುದು, ಔಷಧವನ್ನು ತೆಗೆದುಕೊಳ್ಳಬಹುದು.ತಾಯಿ ಮತ್ತು ಮಗುವಿಗೆ ಅಪಾಯವನ್ನು ಕಡಿಮೆ ಮಾಡಲು ರಕ್ತದ ಸಕ್ಕರೆಯನ್ನು ಎಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರಿಂದ ಮಗುವಿನ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ನ್ಯೂಜಿಲೆಂಡ್‌ನ 10 ಆಸ್ಪತ್ರೆಗಳಲ್ಲಿ ಮಧುಮೇಹ ಹೊಂದಿರುವ 1,100 ಗರ್ಭಿಣಿ ಮಹಿಳೆಯರ ಅಧ್ಯಯನ ಮಾಡಲಾಯಿತು. ಈ ಸಮಯದಲ್ಲಿ, ಪ್ರತಿ ಆಸ್ಪತ್ರೆಯ ಡಯಾಬಿಟಿಕ್ ಗರ್ಭಿಣಿಯರ ಸಕ್ಕರೆ ಲೆವಲ್ ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದರು. ಪ್ರತಿ ಗುಂಪಿನಲ್ಲಿನ ಮಹಿಳೆಯರು ಮತ್ತು ಶಿಶುಗಳ ಫಲಿತಾಂಶಗಳನ್ನು
ನಂತರ ಹೋಲಿಸಲಾಯಿತು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದವರ ಮಕ್ಕಳು ನಿರೀಕ್ಷಿಸಿದಂತೆ ಬೆಳೆಯಲಿಲ್ಲ. ಇದು ಜನನದ ಸಮಯದಲ್ಲಿ ಶಿಶು ಮರಣ, ಆಘಾತ ಮತ್ತು ಶೋಲ್ಡರ್ ಡಿಸ್ಟೋಸಿಯಾ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಆದರೆ, ಇದು ತಾಯಿಯ ಆರೋಗ್ಯದ ಗಂಭೀರ ಪರಿಣಾಮ ಬೀರಿತ್ತು. ಉದಾಹರಣೆಗೆ ಹೆರಿಗೆ ಸಮಯದಲ್ಲಿ ಅಥವಾ ನಂತರ ಭಾರೀ ರಕ್ತಸ್ರಾವ ಆಗುವ ಸಾಧ್ತತೆಯೂ ಇರುತ್ತದೆ.
ಹೊಸ ಅಧ್ಯಯನದ ಫಲಿತಾಂಶಗಳು ವೈದ್ಯರು ತಮ್ಮ ಗರ್ಭಿಣಿ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯನ್ನು ಹೇಗೆ ನಿಯಂತ್ರಿಸಬಹುದು ಅಥವಾ ನಿಯಂತ್ರಿಸಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡಬಹುದು ಮತ್ತು ಕಟ್ಟುನಿಟ್ಟಾದ ಚಿಕಿತ್ಸೆಯು ಹಾನಿಯಾಗದಂತೆ ನಿಜವಾದ ಪ್ರಯೋಜನಗಳನ್ನು ತರಬಹುದು ಎಂದು ಈ ಅಧ್ಯಯನವು ತೋರಿಸಿದೆ.