Shefali Jariwala Death: ಆ ಇಂಜೆಕ್ಷನ್ ಬೆಲೆ ಎಷ್ಟು?, ಪ್ರಕ್ರಿಯೆ ಹೇಗಿರುತ್ತದೆ ಎಂದು ತಿಳಿಸಿದ ಬಾಲಿವುಡ್ ನಟಿ

Published : Jul 04, 2025, 11:35 AM IST

ತನಿಖೆ ಪ್ರಾರಂಭವಾದಾಗ ಶೆಫಾಲಿ ಜರಿವಾಲಾ ಮನೆಯಲ್ಲಿ ಆಂಟಿ ಏಜಿಂಗ್ ಮತ್ತು ಸ್ಕಿನ್ ಲೈಟನಿಂಗ್ ಔಷಧಿಗಳು ಕಂಡುಬಂದವು. ಇದರಲ್ಲಿ ಗ್ಲುಟಾಥಿಯೋನ್ ಮತ್ತು ವಿಟಮಿನ್ ಸಿ ಇಂಜೆಕ್ಷನ್ ಕೂಡ ಸೇರಿವೆ. 

PREV
16
ಶಾಕಿಂಗ್ ಸುದ್ದಿ

ಇತ್ತೀಚೆಗೆ ಮನರಂಜನಾ ಉದ್ಯಮದಿಂದ ಕೇಳಿಬಂದ ಶಾಕಿಂಗ್ ಸುದ್ದಿ ಎಂದರೆ ಅದು ಕಾಂಟ ಲಗಾ ಗರ್ಲ್ ಎಂದೇ ಫೇಮಸ್ ಆಗಿದ್ದ ರೂಪದರ್ಶಿ ಮತ್ತು ನಟಿ ಶೆಫಾಲಿ ಜರಿವಾಲಾ ಡೆತ್ ನ್ಯೂಸ್.

26
ಗ್ಲುಟಾಥಿಯೋನ್ ಇಂಜೆಕ್ಷನ್

ಪೊಲೀಸ್ ತನಿಖೆ ಪ್ರಾರಂಭವಾದಾಗ ಶೆಫಾಲಿ ಜರಿವಾಲಾ ಅವರ ಮನೆಯಲ್ಲಿ ಆಂಟಿ ಏಜಿಂಗ್ ಮತ್ತು ಸ್ಕಿನ್ ಲೈಟನಿಂಗ್ ಔಷಧಿಗಳು ಕಂಡುಬಂದವು. ಇದರಲ್ಲಿ ಗ್ಲುಟಾಥಿಯೋನ್ ಮತ್ತು ವಿಟಮಿನ್ ಸಿ ಇಂಜೆಕ್ಷನ್ ಕೂಡ ಸೇರಿವೆ.

36
ಇಂಜೆಕ್ಷನ್ ತೆಗೆದುಕೊಳ್ಳುವ ಪ್ರಕ್ರಿಯೆ

ಹಾಗಾದ್ರೆ ಗ್ಲುಟಾಥಿಯೋನ್ ಎಂದರೇನು ಮತ್ತು ಅದನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್‌ನಲ್ಲಿ ಚರ್ಚೆ ತೀವ್ರಗೊಂಡಿದೆ. ಇದೀಗ ಎನ್‌ಡಿಟಿವಿ ಇಂಡಿಯಾದೊಂದಿಗಿನ ವಿಶೇಷ ಸಂವಾದದಲ್ಲಿ ನಟಿ ರೋಜ್ಲಿನ್ ಖಾನ್ ಗ್ಲುಟಾಥಿಯೋನ್ ಇಂಜೆಕ್ಷನ್ ತೆಗೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ತಿಳಿಸಿದ್ದಾರೆ.

46
ರೋಜ್ಲಿನ್ ಖಾನ್ ಪ್ರಕಾರ

ರೋಜ್ಲಿನ್ ಖಾನ್ ಪ್ರಕಾರ, ಇದರ ಪ್ರಕ್ರಿಯೆ ತುಂಬಾ ಸರಳವಾಗಿದೆ. "ನಾನು ಮನೆಗೆ ಬಂದ ನಂತರ ವಿಟಮಿನ್ ಸಿ ತೆಗೆದುಕೊಳ್ಳುತ್ತಿದ್ದೆ ಮತ್ತು ಅದನ್ನು ಕೈಯ ರಕ್ತನಾಳಗಳಲ್ಲಿ ಅಪ್ಲೈ ಮಾಡಲಾಗುತ್ತದೆ. ಈ ಮೊದಲೇ ಹೇಳಿದ ಹಾಗೆ ಇದು ತುಂಬಾ ಸಿಂಪಲ್. ನಿಮಗೆ ಏನೂ ಅನಿಸುವುದಿಲ್ಲ. ಆದರೆ ಆ ವೈದ್ಯರು ಒಳ್ಳೆಯವರಾಗಿದ್ದರೆ ಮತ್ತು ಅನುಭವಿಗಳಾಗಿದ್ದರೆ, ಯಾವಾಗಲೂ ನೀವು ಆಹಾರ ಸೇವಿಸಿದ್ದೀರಾ" ಎಂದು ಕೇಳುತ್ತಾರೆ.

56
ಹಗುರವಾಗಿ ತೆಗೆದುಕೊಂಡಿದ್ದಾರೆ

"ನೀವು ಖಾಲಿ ಹೊಟ್ಟೆಯಲ್ಲಿ ಇಲ್ಲವೇ?, ಮನೆಗೆ ಹೋದ ನಂತರ ನೀವು ಯಾವುದೇ ವ್ಯಾಯಾಮ ಮಾಡುವುದಿಲ್ಲವೇ?, ಮುಂದಿನ 24 ಗಂಟೆಗಳ ಕಾಲ ನೀವು ತಿನ್ನುವುದು ಮತ್ತು ಕುಡಿಯುವುದು ಸೇರಿದಂತೆ ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳುತ್ತೀದ್ದೀರಾ? ಎಂದು ಅವರು ಸಾಮಾನ್ಯವಾಗಿ ನಿಮಗೆ ಕೇಳುತ್ತಾರೆ. ಇದೆಲ್ಲಾ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಇದನ್ನು ತುಂಬಾ ಹಗುರವಾಗಿ ತೆಗೆದುಕೊಂಡು ಕೆಲಸಕ್ಕೆ ಹೋಗುತ್ತಾರೆ" ಎಂದು ರೋಜ್ಲಿನ್ ಖಾನ್ ತಿಳಿಸಿದ್ದಾರೆ.

66
ಇಂಜೆಕ್ಷನ್ ಬೆಲೆಯೆಷ್ಟು?

ಅಷ್ಟೇ ಅಲ್ಲ, ಸಂದರ್ಶನದಲ್ಲಿ ರೋಜ್ಲಿನ್ ಖಾನ್ 2009 ರಲ್ಲಿಯೇ 6000 ರೂಪಾಯಿ ಮೌಲ್ಯದ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಇಂದು ಅದರ ಬೆಲೆ ಎಷ್ಟಾಗಿರಬಹುದು ಎಂದು ನೀವೇ ಊಹಿಸಿ.

Read more Photos on
click me!

Recommended Stories