ಈ ಸಿಂಪಲ್ ರೆಮಿಡಿ ಟ್ರೈ ಮಾಡಿ...ರಾತ್ರೋರಾತ್ರಿ ಜಿರಲೆ ಓಡಿಹೋಗ್ತವೆ

Published : Oct 07, 2025, 05:57 PM IST

Home Remedy For Cockroaches: ಈಗ ಭಾರತೀಯ ಮನೆಗಳಲ್ಲಿ ದೀಪಾವಳಿ ಕ್ಲೀನಿಂಗ್ ಎಂದು ಹೆಣ್ಮಕ್ಕಳು ಬ್ಯುಸಿ. ಕ್ಲೀನಿಂಗ್ ಮಾಡುವಾಗ ಪ್ರಮುಖ ವಿಷಯವೆಂದರೆ ಜಿರಲೆಗಳನ್ನು ಓಡಿಸುವುದು. ಒಂದು ವೇಳೆ ನಾವಿಲ್ಲಿ ಹೇಳಿರುವ ಪರಿಹಾರ ಟ್ರೈ ಮಾಡಿದ್ದೇ ಆದಲ್ಲಿ ಸ್ವಚ್ಛಗೊಳಿಸಿದ ನಂತರ ಒಂದೇ ಒಂದು ಜಿರಲೆ ಕಾಣಿಸಲ್ಲ. 

PREV
17
ಅಡುಗೆಮನೆಯಲ್ಲಿರುವ ಪದಾರ್ಥ

ನಿಮ್ಮ ಅಡುಗೆಮನೆ ಅಥವಾ ಸ್ನಾನಗೃಹದಲ್ಲಿ ಜಿರಲೆಗಳು ಹಾನಿಯನ್ನುಂಟುಮಾಡುತ್ತಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಮತ್ತು ಹಾನಿಕಾರಕ ಕೀಟನಾಶಕ ತರುವ ಅಗತ್ಯವಿಲ್ಲ. ತುಂಬಾ ಅಗ್ಗದ, ಪರಿಣಾಮಕಾರಿ ಮನೆಮದ್ದನ್ನೂ ಬಳಸಬಹುದು. ಈ ಪರಿಹಾರಕ್ಕಾಗಿ ನೀವು ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳನ್ನ ಬಳಸಬೇಕಾಗುತ್ತದೆ.

27
ಅಗ್ಗದ ಪರಿಹಾರ

ಈ ರೆಮಿಡಿ ಬಳಸುವುದರಿಂದ ನೀವು ರಾತ್ರೋರಾತ್ರಿ ಜಿರಲೆಗಳನ್ನು ತೊಡೆದುಹಾಕಬಹುದು. ಹೇಗಿದ್ದರೂ ಈಗ ಭಾರತೀಯ ಮನೆಗಳಲ್ಲಿ ದೀಪಾವಳಿ ಕ್ಲೀನಿಂಗ್ ಎಂದು ಹೆಣ್ಮಕ್ಕಳು ಬ್ಯುಸಿಯಾಗಿದ್ದಾರೆ. ಕ್ಲೀನಿಂಗ್ ಮಾಡುವಾಗ ಪ್ರಮುಖ ವಿಷಯವೆಂದರೆ ಜಿರಲೆಗಳನ್ನು ಓಡಿಸುವುದು. ಒಂದು ವೇಳೆ ನಾವಿಲ್ಲಿ ಹೇಳಿರುವ ಪರಿಹಾರ ಟ್ರೈ ಮಾಡಿದ್ದೇ ಆದಲ್ಲಿ ಸ್ವಚ್ಛಗೊಳಿಸಿದ ನಂತರ ಒಂದೇ ಒಂದು ಜಿರಲೆ ಕಾಣಿಸುವುದಿಲ್ಲ. ಮತ್ಯಾಕೆ ತಡ, ನೀವು ಈ ಅಗ್ಗದ ಪರಿಹಾರ ಪ್ರಯತ್ನಿಸಬಹುದು.

37
ದ್ರಾವಣವನ್ನು ತಯಾರಿಸಲು...

ಅಂದಹಾಗೆ ಜಿರಲೆಗೆ ದ್ರಾವಣವನ್ನು ತಯಾರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ.  ಇದಕ್ಕೆ  ಅರ್ಧ ನಿಂಬೆಹಣ್ಣು ಮತ್ತು 3 ರಿಂದ 4 ಪರಿಮಳಯುಕ್ತ ಬೇ ಎಲೆಗಳನ್ನು ಸೇರಿಸಿ. ಈಗ ಪಾತ್ರೆಯನ್ನು ಒಲೆಯ ಮೇಲೆ ಇರಿಸಿ.

47
ಪಟಿಕದ ತುಂಡು

ಒಲೆಯ ಮೇಲೆ ದ್ರಾವಣವನ್ನು ಬಿಸಿ ಮಾಡಿದ ನಂತರ, ಒಂದು ಆಲಂ ಅಥವಾ ಪಟಿಕದ ತುಂಡನ್ನು ಸೇರಿಸಿ. ನೀವು ಇದನ್ನು ದಿನಸಿ ಅಂಗಡಿಯಲ್ಲಿ 10ರೂ.ಗೆಲ್ಲಾ ಪಡೆಯಬಹುದು. ಇದನ್ನು ಹಾಕುವುದರಿಂದ ಅದರಲ್ಲಿ ಅರ್ಧಕರ್ಧ ಕೆಲಸ ಮಾಡುತ್ತದೆ. ಪಟಿಕವು ನೀರನ್ನು ಶುದ್ಧೀಕರಿಸುವುದಲ್ಲದೆ , ಅದರ ಬಲವಾದ ವಾಸನೆಯನ್ನ ಜಿರಲೆ ಇಷ್ಟಪಡಲ್ಲ. ನೀರನ್ನು ಒಮ್ಮೆ ಅಥವಾ ಎರಡು ಬಾರಿ ಕುದಿಯುವವರೆಗೆ ಬಿಸಿ ಮಾಡಿ. 

57
ಅಡುಗೆ ಸೋಡಾ

ಕುದಿಸಿದ ನಂತರ, ದ್ರಾವಣವು ಸಂಪೂರ್ಣವಾಗಿ ತಣ್ಣಗಾಗುವ ಮೊದಲು ಸೋಸಿ. ಸೋಸಿದ ನಂತರ ಅಡುಗೆ ಸೋಡಾ ಸೇರಿಸಿ. ದ್ರಾವಣವು ಇನ್ನೂ ಸ್ವಲ್ಪ ಬೆಚ್ಚಗಿರುವುದರಿಂದ, ಅಡುಗೆ ಸೋಡಾವನ್ನು ಸೇರಿಸಿದ ತಕ್ಷಣ ಬಲವಾದ ಫೋಮ್ ಅಂದರೆ ನೊರೆ  ರೂಪುಗೊಳ್ಳುತ್ತದೆ.

67
ಉಪ್ಪು ಮತ್ತು ಕರ್ಪೂರ, ಡೆಟಾಲ್

ನೊರೆ ಕಡಿಮೆಯಾದ ನಂತರ, ಉಪ್ಪು ಮತ್ತು ಕರ್ಪೂರದ ಪುಡಿಯನ್ನು ಸೇರಿಸಿ. ಇವೆಲ್ಲಾ ಜಿರಲೆಗಳಿಗೆ ಮಾರಕವಾಗಿವೆ. ಅಂತಿಮವಾಗಿ, ದ್ರಾವಣಕ್ಕೆ ಒಂದು ಲೋಟ ಡೆಟಾಲ್ ಅನ್ನು ಸೇರಿಸಿ.

77
ಸ್ಪ್ರೇ ಬಾಟಲಿಗೆ ತುಂಬಿಸಿ

ದ್ರಾವಣವು ಸಂಪೂರ್ಣವಾಗಿ ತಣ್ಣಗಾಗದಂತೆ ಎಚ್ಚರವಹಿಸಿ. ಕರ್ಪೂರ ಮತ್ತು ಇತರ ಪದಾರ್ಥಗಳ ಪರಿಮಳ ಮತ್ತು ಆವಿ ಹೆಚ್ಚು ಪರಿಣಾಮಕಾರಿಯಾಗಿರಲು ಸ್ವಲ್ಪ ಬೆಚ್ಚಗಿರುವಾಗಲೇ ಇದನ್ನು ಬಳಸಿ. ಈ ತಯಾರಾದ ದ್ರಾವಣವನ್ನು ಸ್ಪ್ರೇ ಬಾಟಲಿಗೆ ತುಂಬಿಸಿ. ಜಿರಲೆಗಳನ್ನು ನೀವು ಎಲ್ಲಿ ನೋಡುತ್ತೀರೋ ಅಲ್ಲಿ ಸಿಂಪಡಿಸಿ. ಇದು ರಾತ್ರಿಯಿಡೀ ಜಿರಲೆ ತೊಡೆದುಹಾಕಲು ಸಹಾಯ ಮಾಡುತ್ತದೆ . ಅಗತ್ಯವಿದ್ದಾಗ ನೀವು ಅದನ್ನು ಬಳಸಲು ಸಾಧ್ಯವಾಗುವಂತೆ ಸಂಗ್ರಹಿಸಿಡಬಹುದು.

Read more Photos on
click me!

Recommended Stories