ಕೊಳಕಾದ ಡೋರ್‌ಮ್ಯಾಟ್ ಅನ್ನು ನೀರಿಲ್ಲದೆ ಕ್ಲೀನ್ ಮಾಡಲು ಇಲ್ಲಿದೆ ಸುಲಭ ವಿಧಾನ

Published : Sep 23, 2025, 06:46 PM IST

Mat Cleaning Tip: ಭಾರವೆನಿಸುವ, ಕೊಳಕು ಮ್ಯಾಟ್‌ಗಳನ್ನ ತೊಳೆಯುವಷ್ಟರಲ್ಲಿ ಹೆಣ್ಮಕ್ಕಳು ಸಾಕುಸಾಕಾಗಿ ಹೋಗ್ತಾರೆ. ಜೊತೆಗೆ ನೀರು, ಪೌಡರ್ ಅಂತೆಲ್ಲಾ ಖರ್ಚು. ಆದರೆ ಇನ್ಮೇಲೆ ಆ ಚಿಂತೆ ಬಿಡಿ. ಇವುಗಳನ್ನು ಸ್ವಚ್ಛಗೊಳಿಸಲು ಬೇರೆ ಉಪಾಯವೊಂದಿದೆ.

PREV
15
ಮನೆ ತುಂಬಾ ಹರಡುವ ಕೊಳಕು

ಮನೆಯನ್ನು ಸ್ವಚ್ಛವಾಗಿಡಲು ಮತ್ತು ಹೊರಗಿನ ಕೊಳಕು ಒಳಗೆ ಬರದಂತೆ ತಡೆಯಲು ಡೋರ್‌ಮ್ಯಾಟ್‌ಗಳನ್ನು ಬಳಸಲಾಗುತ್ತದೆ. ಆದರೆ ಈ ಡೋರ್‌ಮ್ಯಾಟೇ ಕೊಳಕಾಗಿದ್ದರೆ ಅದು ಮನೆಯಾದ್ಯಂತ ಕೊಳೆಯನ್ನು ಹರಡುತ್ತದೆ ಅಲ್ಲವೇ. ಹೊರಗಿನಿಂದ ಬಂದಾಗ ಶೂಗಳು ಮತ್ತು ಚಪ್ಪಲಿಗಳಲ್ಲಿ ಸಿಲುಕಿರುವ ಕೊಳೆ ಡೋರ್‌ಮ್ಯಾಟ್‌ಗಳ ಮೇಲೆ ಸಂಗ್ರಹವಾಗುತ್ತದೆ. ಇದರಿಂದಾಗಿ ಧೂಳು ಮತ್ತು ಕೊಳಕು ಮನೆಯೊಳಗೆ ಸುಲಭವಾಗಿ ಪ್ರವೇಶಿಸುತ್ತದೆ. ಹಾಗೆಯೇ ಬಾತ್‌ರೂಂಗೆ ಹೋಗಿ ಬಂದ ನಂತರ ಒದ್ದೆಯಾದ ಕಾಲನ್ನ ಇದೇ ಡೋರ್‌ಮ್ಯಾಟ್‌ ಮೇಲೆ ಒರೆಸುತ್ತೇವೆ. ಈ ರೀತಿ ನಾವು ಎದ್ದು ಬಿದ್ದು ಮನೆಯಲ್ಲಿ ಡೋರ್‌ ಮ್ಯಾಟ್ ಉಪಯೋಗಿಸುವುದರಿಂದ ಅದು ಖಂಡಿತ ಕೊಳಕಾಗುತ್ತದೆ. ಇದೇ ಕೊಳಕೇ ಕೊನೆಗೆ ಮನೆ ತುಂಬಾ ಹರಡುತ್ತದೆ.

25
ತೊಳೆಯದೆ ಸ್ವಚ್ಛಗೊಳಿಸಲು ಕೆಲವು ಟಿಪ್ಸ್

ಆದ್ದರಿಂದ ಡೋರ್‌ಮ್ಯಾಟ್ ಅನ್ನು ಸ್ವಚ್ಛಗೊಳಿಸಲೇಬೇಕಾಗುತ್ತದೆ. ಹಾಗೇ ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಭಾರವೆನಿಸುವ, ಕೊಳಕು ಮ್ಯಾಟ್‌ಗಳನ್ನ ತೊಳೆಯುವಷ್ಟರಲ್ಲಿ ಹೆಣ್ಮಕ್ಕಳು ಸಾಕುಸಾಕಾಗಿ ಹೋಗ್ತಾರೆ. ಜೊತೆಗೆ ನೀರು, ಪೌಡರ್ ಅಂತೆಲ್ಲಾ ಖರ್ಚು. ಆದರೆ ಇನ್ಮೇಲೆ ಆ ಚಿಂತೆ ಬಿಡಿ. ಇವುಗಳನ್ನು ಸ್ವಚ್ಛಗೊಳಿಸಲು ಬೇರೆ ಉಪಾಯವೊಂದಿದೆ. ಹೌದು, ಡೋರ್‌ಮ್ಯಾಟ್ ಅನ್ನು ತೊಳೆಯದೆ ಸ್ವಚ್ಛಗೊಳಿಸಲು ನಿಮಗೆ ಸಹಾಯ ಮಾಡುವ ಕೆಲವು ಟಿಪ್ಸ್ ಇಲ್ಲಿವೆ.

35
ವ್ಯಾಕ್ಯೂಮ್ ಕ್ಲೀನರ್ ಬಳಕೆ

ಇತ್ತೀಚಿನ ದಿನಗಳಲ್ಲಿ ಜನರು ಮನೆ ಶುಚಿಗೊಳಿಸುವಿಕೆಗಾಗಿ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ನೀವು ಕಾರ್ಪೆಟ್‌ ಸ್ವಚ್ಛಗೊಳಿಸುವಂತೆಯೇ, ದಪ್ಪ, ಭಾರವಾದ ಡೋರ್‌ಮ್ಯಾಟ್ ಅನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಬಹುದು. ವ್ಯಾಕ್ಯೂಮ್ ಕ್ಲೀನರ್ ಡೋರ್‌ಮ್ಯಾಟ್‌ನಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಆಗ ನೀವು ಡೋರ್‌ಮ್ಯಾಟ್ ಅನ್ನು ಪದೇ ಪದೇ ತೊಳೆಯುವ ಪ್ರಮೇಯ ಬರೋಲ್ಲ. ಸ್ವಲ್ಪ ದಿನಗಳ ನಂತರ ತೊಳೆದರೂ ನಡೆಯುತ್ತದೆ.

45
ಬ್ರಷ್ ಬಳಸಿ

ಕೊಳಕಾದ ಡೋರ್‌ಮ್ಯಾಟ್ ಅನ್ನು ಲಾಂಡ್ರಿ ಬ್ರಷ್‌ನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲು, ಸಂಗ್ರಹವಾದ ಧೂಳನ್ನು ಕೊಡವಿ ತೆಗೆದುಹಾಕಿ. ಈಗ ಹಳೆಯ ಲಾಂಡ್ರಿ ಬ್ರಷ್‌ನಿಂದ ಡೋರ್‌ಮ್ಯಾಟ್ ಅನ್ನು ಉಜ್ಜಿ. ಒದ್ದೆ ಮಾಡಬಾರದು. ಈ ವಿಧಾನವು ಡೋರ್‌ಮ್ಯಾಟ್‌ನಲ್ಲಿ ಸಿಲುಕಿರುವ ಯಾವುದೇ ಧೂಳನ್ನ ತೆಗೆದುಹಾಕುತ್ತದೆ. ಹೀಗೆ ಡೋರ್‌ಮ್ಯಾಟ್ ಅನ್ನು ತೊಳೆಯದೆಯೇ ಸ್ವಚ್ಛಗೊಳಿಬಹುದು.

55
ಮನೆಯಲ್ಲಿಯೇ ಮಾಡಿ ಡ್ರೈ ಕ್ಲೀನಿಂಗ್

ಡೋರ್‌ಮ್ಯಾಟ್‌ಗಳನ್ನು ಮನೆಯಲ್ಲಿಯೇ ಸುಲಭವಾಗಿ ಡ್ರೈ ಕ್ಲೀನ್ ಮಾಡಬಹುದು. ಇದನ್ನು ಮಾಡಲು, ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪಟಿಕವನ್ನು ಸೇರಿಸಿ. 2 ಕ್ಯಾಪ್‌ ಫುಲ್ ಶಾಂಪೂ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬಾಟಲಿಗೆ ಸುರಿಯಿರಿ. ಈಗ ಸ್ವಚ್ಛವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಸಿಂಪಡಿಸಿ. ಈ ಬಟ್ಟೆಯಿಂದ ಡೋರ್‌ಮ್ಯಾಟ್ ಅನ್ನು ಒರೆಸಿ. ಇದು ಡೋರ್‌ಮ್ಯಾಟ್ ಮೇಲೆ ಸಂಗ್ರಹವಾಗಿರುವ ಯಾವುದೇ ಕೊಳೆಯಾದ್ರೂ ತೆಗೆದುಹಾಕುತ್ತದೆ. ನಂತರ ಡೋರ್‌ಮ್ಯಾಟ್ ಅನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಒಣಗಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories