ದುಡ್ಡಿನ ಮುಖ ನೋಡ್ಬೇಡಿ.. ಸಿಂಗಲ್ ಡೋರ್ vs ಡಬಲ್ ಡೋರ್ ಫ್ರಿಡ್ಜ್.. ಯಾವುದು ಉತ್ತಮ ತಿಳ್ಕೊಳ್ಳಿ

Published : Apr 23, 2026, 01:01 PM IST

Single door vs Double door fridge: ಹೊಸ ಫ್ರಿಡ್ಜ್ ಕೊಳ್ಳುವ ಪ್ಲಾನ್ ಇದೆಯೇ? ಹಾಗಿದ್ದರೆ ಬಜೆಟ್ ಒಂದನ್ನೇ ನೋಡಬೇಡಿ! ಸಿಂಗಲ್ ಡೋರ್ ಮತ್ತು ಡಬಲ್ ಡೋರ್ ಫ್ರಿಡ್ಜ್ ಗಳ ನಡುವೆ ಇರುವ ಅಸಲಿ ವ್ಯತ್ಯಾಸಗಳು, ಅವುಗಳ ಅನುಕೂಲ ಹಾಗೂ ಅನಾನುಕೂಲಗಳೇನು ಎಂಬುದು ನಿಮಗೆ ತಿಳಿದಿರಲಿ.

PREV
15
ಈ ವಿಚಾರದಲ್ಲಿ ಗೊಂದಲ ಸಹಜ

ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ರೆಫ್ರಿಜರೇಟರ್ (ಫ್ರಿಡ್ಜ್‌) ಅತ್ಯಗತ್ಯ ವಸ್ತುವಾಗಿದೆ. ವಿಶೇಷವಾಗಿ ಉರಿ ಬೇಸಿಗೆಯಲ್ಲಿ ತಂಪು ನೀರು, ತಾಜಾ ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಕೆಡದಂತೆ ಕಾಪಾಡಲು ಫ್ರಿಡ್ಜ್‌ ಬೇಕೇ ಬೇಕು. ಆದರೆ ಹೊಸ ಫ್ರಿಡ್ಜ್‌ ಖರೀದಿಸುವಾಗ ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವುದನ್ನು ಆರಿಸಬೇಕು ಎಂಬ ಗೊಂದಲ ಸಹಜ. ನಿಮ್ಮ ಮನೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮಾಹಿತಿ ಇಲ್ಲಿದೆ.

25
ಸಿಂಗಲ್ ಡೋರ್ ಫ್ರಿಡ್ಜ್

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಿಂಗಲ್ ಡೋರ್ ಫ್ರಿಡ್ಜ್‌ಗಳು ಹೆಚ್ಚು ಜನಪ್ರಿಯ. ಇವು 'ಡೈರೆಕ್ಟ್ ಕೂಲ್' ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತವೆ, ಹೀಗಾಗಿ ವಿದ್ಯುತ್ ಬಳಕೆ ತುಂಬಾ ಕಡಿಮೆ. ಇವುಗಳ ಬೆಲೆ ₹10,000 ರಿಂದ ₹18,000 ರಷ್ಟಿರುವುದರಿಂದ ಬಜೆಟ್ ಬಗ್ಗೆ ಚಿಂತಿಸುವವರಿಗೆ ಇದು ಉತ್ತಮ ಆಯ್ಕೆ. 2 ರಿಂದ 3 ಸದಸ್ಯರಿರುವ ಸಣ್ಣ ಕುಟುಂಬಕ್ಕೆ ಇದು ಸಾಕು. ಆದರೆ, ಇದರಲ್ಲಿ ಸ್ಥಳಾವಕಾಶ ಕಡಿಮೆ ಇರುತ್ತದೆ ಮತ್ತು ಫ್ರೀಜರ್‌ನಲ್ಲಿ ಮಂಜುಗಡ್ಡೆ (Ice) ಶೇಖರಣೆಯಾದಾಗ ಮ್ಯಾನುಯಲ್ ಆಗಿ 'ಡಿಫ್ರಾಸ್ಟ್' ಮಾಡಬೇಕಾಗುತ್ತದೆ. ಇತ್ತೀಚಿನ ಫ್ರಿಡ್ಜ್‌ಗಳಲ್ಲಿ ಮಂಜುಗಡ್ಡೆ ಆಟೋಮ್ಯಾಟಿಕ್ ಕರಗುವಂತೆ ಬಟನ್ ಸಿಸ್ಟಮ್ ಬಂದಿರುವುದನ್ನು ಗಮನಿಸಿರಬಹುದು.

35
ಡಬಲ್ ಡೋರ್ ಫ್ರಿಡ್ಜ್

ಡಬಲ್ ಡೋರ್ ಫ್ರಿಡ್ಜ್‌ಗಳು 'ಫ್ರಾಸ್ಟ್-ಫ್ರೀ' ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಇಲ್ಲಿ ಐಸ್ ಗಟ್ಟಿಯಾಗಿ ಶೇಖರಣೆಯಾಗುವ ಸಮಸ್ಯೆ ಇರುವುದಿಲ್ಲ. 4 ರಿಂದ 6 ಸದಸ್ಯರಿರುವ ದೊಡ್ಡ ಕುಟುಂಬಗಳಿಗೆ ಇದು ಬಹಳ ಅನುಕೂಲಕರ. ದೊಡ್ಡ ಪಾತ್ರೆಗಳು ಮತ್ತು ಹೆಚ್ಚಿನ ತರಕಾರಿಗಳನ್ನು ಇಡಲು ಇದರಲ್ಲಿ ವಿಶಾಲವಾದ ಸ್ಥಳವಿರುತ್ತದೆ. ಫ್ರೀಜರ್ ಮತ್ತು ಫ್ರಿಜ್‌ಗೆ ಪ್ರತ್ಯೇಕ ಬಾಗಿಲು ಇರುವುದರಿಂದ ಕೂಲಿಂಗ್ ದಕ್ಷತೆ ಹೆಚ್ಚಿರುತ್ತದೆ. ಆದರೆ ಇವುಗಳ ಬೆಲೆ ಮತ್ತು ವಿದ್ಯುತ್ ಬಿಲ್ ಸಿಂಗಲ್ ಡೋರ್‌ಗೆ ಹೋಲಿಸಿದರೆ ಸ್ವಲ್ಪ ಹೆಚ್ಚು.

45
ವಿದ್ಯುತ್ ಉಳಿತಾಯಕ್ಕೆ ಕೆಲವು ಸಲಹೆಗಳು

ನೀವು ಯಾವುದೇ ಫ್ರಿಡ್ಜ್‌ ಕೊಂಡರೂ 3-ಸ್ಟಾರ್ ಅಥವಾ 5-ಸ್ಟಾರ್ ರೇಟಿಂಗ್ ಇರುವ ಮಾಡೆಲ್ ಆರಿಸುವುದು ಬುದ್ಧಿವಂತಿಕೆ. ಪ್ರಸ್ತುತ ಮಾರುಕಟ್ಟೆಯಲ್ಲಿ 'ಡಿಜಿಟಲ್ ಇನ್ವರ್ಟರ್' ತಂತ್ರಜ್ಞಾನವಿರುವ ಫ್ರಿಡ್ಜ್‌ಗಳು ಲಭ್ಯವಿದ್ದು, ಇವು ಶಬ್ದ ಕಡಿಮೆ ಮಾಡುತ್ತವೆ ಮತ್ತು ವಿದ್ಯುತ್ ಉಳಿಸುತ್ತವೆ. 'ಕನ್ವರ್ಟಿಬಲ್ ಮೋಡ್' ಸೌಲಭ್ಯವಿದ್ದರೆ ಅಗತ್ಯವಿದ್ದಾಗ ಫ್ರೀಜರ್ ಅನ್ನು ಕೂಡ ಸಾಧಾರಣ ಫ್ರಿಜ್ ಆಗಿ ಬದಲಾಯಿಸಬಹುದು.

55
ಸರಿಯಾದ ಮಾಡೆಲ್ ಕಡೆ ಗಮನವಿರಲಿ

ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ಬಜೆಟ್ ಮತ್ತು ಕುಟುಂಬದ ಸದಸ್ಯರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಫ್ರಿಡ್ಜ್‌ ಆಯ್ಕೆ ಮಾಡಿ. ಸರಿಯಾದ ಮಾಡೆಲ್ ಆಯ್ಕೆಯಿಂದ ಆಹಾರವು ತಾಜಾವಾಗಿರುವುದಲ್ಲದೆ, ನಿಮ್ಮ ಕರೆಂಟ್ ಬಿಲ್ ಕೂಡ ಹತೋಟಿಯಲ್ಲಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories