Mukesh Ambani's Antilia kitchen: ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಅಡುಗೆಮನೆಯ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಕುಟುಂಬದ ಸಸ್ಯಹಾರಿ ಆಹಾರ ಪದ್ಧತಿ ಮತ್ತು ಮೆನುವನ್ನು ಯಾರು ನಿರ್ಧರಿಸುತ್ತಾರೆ?
ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿರುತ್ತಾರೆ. ಅಂಬಾನಿ ಕುಟುಂಬ ಮುಂಬೈನ ಅಂಟಿಲಿಯಾ ಬೃಹತ್ ಬಂಗ್ಲೆಯಲ್ಲಿ ವಾಸವಾಗಿದೆ. ಈ ಮನೆಯಲ್ಲಿ ದಿನಿತ್ಯದ ಕೆಲಸಕ್ಕಾಗಿ ನೂರಾರು ಜನರಿದ್ದಾರೆ. ಆದ್ರೆ ಅಡುಗೆಮನೆ ಮಹಿಳೆಯರಿಗೆ ಮನೆಯಲ್ಲಿನ ನೆಚ್ಚಿನ ಸ್ಥಳವಾಗಿದೆ.
26
ಅವಿಭಕ್ತ ಕುಟುಂಬ
ಸಾಮಾನ್ಯವಾಗಿ ಇಡೀ ಅಡಗೆಮನೆ ತಮ್ಮ ಹಿಡಿತದಲ್ಲಿರಬೇಕೆಂದು ಮಹಿಳೆಯರು ಬಯಸುತ್ತಾರೆ. ಅವಿಭಕ್ತ ಕುಟುಂಬವಾಗಿದ್ರೆ ಮನೆಯ ಮಹಿಳಾ ಸದಸ್ಯರ ನಡುವೆ ಕಿಚನ್ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಇರುತ್ತದೆ. ಮುಕೇಶ್ ಅಂಬಾನಿ ಕುಟುಂಬದಲ್ಲಿ ಇಬ್ಬರು ಸೊಸೆಯರಿದ್ದಾರೆ. ಶ್ಲೋಕಾ ಮೆಹ್ತಾ ಹಿರಿಯ ಸೊಸೆಯಾದ್ರೆ, ರಾಧಿಕಾ ಮರ್ಚೆಂಟ್ ಕಿರಿಯ ಸೊಸೆ. ಇವರಿಬ್ಬರ ನಡುವೆ ಯಾರ ಬಳಿಯಲ್ಲಿ ಅಡುಗೆಮನೆ ಹಿಡಿತದಲ್ಲಿದೆ ಗೊತ್ತಾ?
36
ಸಸ್ಯಹಾರಿ ಕುಟುಂಬ
ಅಂಬಾನಿ ಅವರದ್ದು ಸಾಮಾನ್ಯ ಕುಟುಂಬವೇನಲ್ಲ. ಇಲ್ಲಿ ಎಲ್ಲದಕ್ಕೂ ಕೆಲಸಗಾರರಿದ್ದಾರೆ. ಇನ್ನು ಅಂಟಿಲಿಯಾ ನಿವಾಸಕ್ಕೆ ಹೋಟೆಲ್‌ಗಳಿಂದಲೂ ಆಹಾರ ಬರುತ್ತಿರುತ್ತದೆ. ಅಂಟಿಲಿಯಾ ನಿವಾಸದಲ್ಲಿ ಅಡುಗೆ ತಯಾರಿಸಲು ಶೆಫ್‌ಗಳು ಇಲ್ಲಿದ್ದಾರೆ. ಅಂಬಾನಿ ಕುಟುಂಬ ಸಸ್ಯಹಾರಿಗಳಾಗಿದ್ದಾರೆ. ಯಾವ ದಿನ, ಯಾವ ಆಹಾರ ಸಿದ್ಧವಾಗಬೇಕು ಎಂಬುದರ ಕುರಿತು ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಹಿರಿಯ ಸೊಸೆಯಾಗಿರುವ ಕಾರಣ ಶ್ಲೋಕಾ ಮೆಹ್ತಾರಿಗೆ ಕುಟುಂಬದ ಆಚರಣೆ ಸೇರಿದಂತೆ ಸದಸ್ಯರ ಬೇಕು ಬೇಡಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕುಟುಂಬದ ಸಂಪ್ರದಾಯ ಮತ್ತು ಆಹಾರ ಪದ್ಧತಿ ಅರ್ಥ ಮಾಡಿಕೊಂಡಿರುವ ಶ್ಲೋಕಾ ಮೆಹ್ತಾ, ಅಡುಗೆಮನೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಕುಟುಂಬ ಸದಸ್ಯರು, ಅತಿಥಿಗಳಿಗೆ ಮತ್ತು ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಯಾವ ರೀತಿಯ ಭಕ್ಷ್ಯ ತಯಾರಿಸಬೇಕು ಎಂಬುದರ ಬಗ್ಗೆ ಶ್ಲೋಕಾ ಮೆಹ್ತಾ ಸೂಚನೆ ನೀಡುತ್ತಾರಂತೆ.
56
ಕಿರಿಯ ಸೊಸೆ ರಾಧಿಕಾ ಮರ್ಚೆಂಟ್
ರಾಧಿಕಾ ಮರ್ಚೆಂಟ್ ಇತ್ತೀಚೆಗಷ್ಟೇ ಅಂಬಾನಿ ಕುಟುಂಬಕ್ಕೆ ಸೇರ್ಪಡೆಯಾಗಿದ್ರಿಂದ ಇಲ್ಲಿ ಸಂಪ್ರದಾಯದ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ. ಕಳೆದ ಕೆಲವು ತಿಂಗಳಿನಿಂದ ಕುಟುಂಬ ಕಾರ್ಯಕ್ರಮದ ಹೊರತಾಗಿಯೂ ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿಯೂ ರಾಧಿಕಾ ಮರ್ಚೆಂಟ್ ಕಾಣಿಸಿಕೊಳ್ಳುತ್ತಿದ್ದಾರೆ.
ಕೆಲ ವರದಿಗಳ ಪ್ರಕಾರ, ಅಂಬಾನಿ ಕುಟುಂಬ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಮುಕೇಶ್ ಅಂಬಾನಿಯವರು ಶುದ್ಧ ಸಸ್ಯಹಾರಿಗಳಾಗಿದ್ದು, ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮುಂಬೈನ ವಿವಿಧ ರೆಸ್ಟೋರೆಂಟ್‌ಗಳಿಂದಲೂ ಆಹಾರವನ್ನು ತರಿಸಿಕೊಳ್ಳುತ್ತಾರೆ. ಪ್ರತಿ ಭಾನುವಾರ ಅಂಬಾನಿ ಕುಟುಂಬಕ್ಕೆ 'ಮೈಸೂರು ಕೆಫೆ'ಯಿಂದ ಆಹಾರ ಸರಬರಾಜು ಆಗುತ್ತದೆ.