ದಿ ಬಾ**ಡ್ಸ್ ಆಫ್ ಬಾಲಿವುಡ್ ಪ್ರಿಮಿಯರ್ ಶೋನಲ್ಲಿ ಅಂಬಾನಿ ಸೊಸೆಯಿಂದಿರುವ ಮಿಂಚಿದ್ದಾರೆ. ಗ್ಲಾಮರ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆದ್ರೆ ಆಕಾಶ್ ಅಂಬಾನಿ ಮಾಡಿದ ಕೆಲ್ಸ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. 

ಆರ್ಯನ್ ಖಾನ್ (Aryan Khan) ನಿರ್ದೇಶನದ "ದಿ ಬಾ**ಡ್ಸ್ ಆಫ್ ಬಾಲಿವುಡ್" ನ ಪ್ರೀಮಿಯರ್ ಪ್ರದರ್ಶನದಲ್ಲಿ ಸೆಲೆಬ್ರಿಟಿಗಳು ಮಿಂಚಿದ್ದಾರೆ. ರೆಡ್ ಕಾರ್ಪೆಟ್ ಫ್ಯಾಷನ್ ಮತ್ತು ಗ್ಲಾಮರ್ ನಿಂದ ತುಂಬಿತ್ತು. ರೆಡ್ ಕಾರ್ಪೆಟ್ ನಲ್ಲಿ ಅಂಬಾನಿ ಸೊಸೆಯಂದಿರು ಗಮನ ಸೆಳೆದಿದ್ದಾರೆ. ರಾಧಿಕಾ ಮರ್ಚೆಂಟ್ (Radhika Merchant), ಶ್ಲೋಕಾ ಮೆಹ್ತಾ(Shloka Mehta) ಜೊತೆ ಆಕಾಶ್ ಅಂಬಾನಿ (Akash Ambani) ತಮ್ಮ ಕ್ಲಾಸಿ ಮತ್ತು ಸೊಗಸಾದ ಲುಕ್ ನಲ್ಲಿ ಕಾಣಿಸಿಕೊಂಡ್ರು. ಸೋಶಿಯಲ್ ಮೀಡಿಯಾದಲ್ಲಿ ಆಕಾಶ್, ರಾಧಿಕಾ, ಶ್ಲೋಕಾ ಫೋಟೋ, ವಿಡಿಯೋಗಳು ವೈರಲ್ ಆಗ್ತಿವೆ. ಈ ವೇಳೆ ಆಕಾಶ್ ತನ್ನ ತಮ್ಮ ಅನಂತ್ ಅಂಬಾನಿ ಪತ್ನಿ ರಾಧಿಕಾ ಮೇಲೆ ವಿಶೇಷ ಕಾಳಜಿವಹಿಸಿದ್ದನ್ನು ನೀವು ಕಾಣ್ಬಹುದು.

ರಾಧಿಕಾ ಕೈ ಹಿಡಿದು ಸೊಂಟ ಬಳಸಿದ ಆಕಾಶ್ ಅಂಬಾನಿ : ಶ್ಲೋಕಾ ಮೆಹ್ತಾ, ಆಕಾಶ್ ಅಂಬಾನಿ ಜೊತೆ ಬಂದ ರಾಧಿಕಾ, ಅವರಿಬ್ಬರ ಜೊತೆ ಫೋಟೋಕ್ಕೆ ಫೋಸ್ ನೀಡಲು ನಿರಾಕರಿಸಿದಂತಿದೆ. ರಾಧಿಕಾ ಮನವೊಲಿಸಿ ಅವರನ್ನು ಜೊತೆಗೆ ಕರೆದುಕೊಂಡು ಬಂದ ಆಕಾಶ್, ರಾಧಿಕಾ ಹಾಗೂ ಶ್ಲೋಕಾ ಮಧ್ಯೆ ನಿಲ್ತಾರೆ. ಇಬ್ಬರ ಸೊಂಟ ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ. ನಂತ್ರ ಶ್ಲೋಕಾ ಬಿಟ್ಟು ರಾಧಿಕಾ ಕೈ ಹಿಡಿದು ಮುಂದೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡ್ತಾರೆ. ಆದ್ರೆ ರಾಧಿಕಾ ಕೈ ನೀಡ್ದೆ ಆಕಾಶ್ ಹಿಂದೆ ಹೋಗೋದಲ್ದೆ ಫೋಟೋಕ್ಕೆ ಫೋಸ್ ನೀಡ್ತಾರೆ. ಶ್ಲೋಕಾ ಮುಂದೆ ಹೋಗ್ತಿದ್ದರೆ ರಾಧಿಕಾ ಆಕಾಶ್ ಹಿಂದೆ ಬರ್ತಿದ್ದಾರೆ.

46 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ರಜನಿಕಾಂತ್, ಕಮಲ್‌ ಹಾಸನ್‌: ತಲೈವಾ

ನೆಟ್ಟಿಗರ ಮಧ್ಯೆ ಗಲಾಟೆ : ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಕಮೆಂಟ್ ಗಳ ಸುರಿಮಳೆಯಾಗಿದೆ. ಅನಂತ್, ಶ್ಲೋಕಾಗಿಂತ ಹೆಚ್ಚು ಕಾಳಜಿಯನ್ನು ರಾಧಿಕಾ ಮೇಲೆ ತೋರಿಸ್ತಿದ್ದಾರೆ. ರಾಧಿಕಾ ತನ್ನ ಹೆಂಡ್ತಿ ಅನ್ನೋ ರೀತಿ ಆಕಾಶ್ ವರ್ತನೆ ಇದೆ, ರಾಧಿಕಾ ಅನ್ಕಂಫರ್ಟ್ ಫೀಲ್ ಮಾಡ್ತಿದ್ದಾರೆ ಎನ್ನುವ ಕಮೆಂಟ್ ಬಂದಿದೆ. ಆಕಾಶ್ ಕೈ ಹಿಡಿಯದೆ ರಾಧಿಕಾ ತನ್ನ ಡಿಗ್ನಿಟಿ ಕಾಪಾಡಿಕೊಂಡಿದ್ದಾರೆ. ರಾಧಿಕಾ ಮುಖದಲ್ಲಿ ಟೆನ್ಷನ್ ಎದ್ದು ಕಾಣ್ತಿದೆ ಎನ್ನುವ ಮೂಲಕ ಬಹುತೇಕರು ರಾಧಿಕಾ ಪರ ಬ್ಯಾಟ್ ಬೀಸಿ, ಆಕಾಶ್ ಕ್ರಮವನ್ನು ಖಂಡಿಸಿದ್ದಾರೆ. ಆಕಾಶ್, ರಾಧಿಕಾಗೆ ಇಷ್ಟೆಲ್ಲ ಕಾಳಜಿ ತೋರಿಸ್ತಿದ್ರೆ ಬರೀ ರಾಧಿಕಾಗೆ ಮಾತ್ರವಲ್ಲ ಶ್ಲೋಕಾಗೂ ಮುಜುಗರವಾಗುತ್ತೆ ಅನ್ನೋದು ನೆಟ್ಟಿಗರ ವಾದ.

ಕೆಲ ನೆಟ್ಟಿಗರು, ಆಕಾಶ್ ಅಂಬಾನಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋಕೆ ನಿರಾಕರಿಸಿದ್ದಾರೆ. ಅಂಬಾನಿ ಕುಟುಂಬದಲ್ಲಿ ಎಲ್ಲರೂ ಕ್ಲೋಸ್ ಆಗಿದ್ದಾರೆ. ಆಕಾಶ್ ಹಾಗೂ ರಾಧಿಕಾ ಬಾಲ್ಯದಿಂದಲೂ ಪರಿಚಿತರು. ರಾಧಿಕಾರನ್ನು ಆಕಾಶ್, ಸಹೋದರಿಯಂತೆ ನೋಡ್ತಾರೆ. ಹಾಗಾಗಿ ಇಬ್ಬರು ಇಷ್ಟೊಂದು ಕ್ಲೋಸ್, ಎಲ್ಲವನ್ನೂ ತಪ್ಪಾಗಿ ತಿಳಿಬೇಡಿ ಅಂತ ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

ಕುಕ್ಕೆಯಲ್ಲಿ ಸರ್ಪಸಂಸ್ಕಾರ: ಬಾಲಿವುಡ್​ ಸ್ಟಾರ್ಸ್​ ಕತ್ರಿನಾ ಕೈಫ್​- ವಿಕ್ಕಿ ಮೊದಲ ಮಗುವಿನ ನಿರೀಕ್ಷೆಯಲ್ಲಿ...

ಪ್ರಿಮಿಯರ್ ಶೋನಲ್ಲಿ ಮಿಂಚಿದ ಅಂಬಾನಿ ಸೊಸೆಯಂದಿರು : ರಾಧಿಕಾ ಮರ್ಚೆಂಟ್ ರೆಡ್ ಸ್ಟ್ರಾಪ್ಲೆಸ್ ಗೌನ್ ಧರಿಸಿದ್ರು. ಡೈಮೆಂಡ್ ನೆಕ್ಲೆಸ್ ಮತ್ತು ಕಿವಿಯೋಲೆ ಅವರ ಲುಕ್ ಗೆ ಇನ್ನಷ್ಟು ಮೆರಗು ನೀಡಿತ್ತು. ಕೂದಲನ್ನು ಬಿಟ್ಟಿದ್ದ ರಾಧಿಕಾ, ಲೈಟ್ ಮೇಕಪ್ ಮಾಡಿದ್ರು. ಇನ್ನು ಶ್ಲೋಕಾ ಮೆಹ್ತಾ, ಬ್ಲಾಕ್ ಸ್ಟ್ರಾಪ್ಲೆಸ್ ಗೌನ್ ಧರಿಸಿದ್ರು. ಫ್ಲೇರ್ಡ್ ಸ್ಕರ್ಟ್ ಜೊತೆ ಡೈಮಂಡ್ ಬಳೆ, ಫ್ಲಾವರ್ ಚೋಕರ್ ಅವರ ಬ್ಯೂಟಿಯನ್ನು ಡಬಲ್ ಮಾಡಿತ್ತು. ಇವರಿಗೆ ಸಾಥ್ ನೀಡಿದ ಆಕಾಶ್ ಅಂಬಾನಿ, ಬ್ಲಾಕ್ ವೆಲ್ವೆಟ್ ಟುಕ್ಸೆಡೊ ಜಾಕೆಟ್ ಮತ್ತು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು.

View post on Instagram