Published : Jan 15, 2026, 07:40 PM ISTUpdated : Jan 15, 2026, 07:42 PM IST
Clean Silver Jewelry Naturally: ಕಪ್ಪಾದ ಬೆಳ್ಳಿ ಕಾಲ್ಗೆಜ್ಜೆ ಮತ್ತು ಕಾಲುಂಗುರ ಕೆಮಿಕಲ್ ಅಥವಾ ಅಡುಗೆ ಸೋಡಾ ಇಲ್ಲದೆ ಹೊಳೆಯುವಂತೆ ಮಾಡಲು ಬಯಸುವಿರಾ?, ಹಾಗಿದ್ರೆ ಈ 4 ಮನೆಮದ್ದುಗಳಿಂದ ಬೆಳ್ಳಿಯ ಹೊಳಪನ್ನು ಮರಳಿ ಪಡೆಯಿರಿ. ಇವು ರಾಸಾಯನಿಕ ಮುಕ್ತ ಕ್ಲೀನಿಂಗ್ ಟಿಪ್ಸ್ ಆಗಿದೆ.
ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಕಾಲುಂಗುರ ಧರಿಸುತ್ತಾ ಹೋದಂತೆ ಕಪ್ಪಾಗುತ್ತವೆ. ಬೆವರು, ತೇವಾಂಶ ಮತ್ತು ಗಾಳಿಯಿಂದಾಗಿ ಬೆಳ್ಳಿಯ ಮೇಲೆ ಆಕ್ಸಿಡೇಷನ್ ಪದರ ಉಂಟಾಗಿ, ಅದರ ಹೊಳಪು ಮಾಯವಾಗುತ್ತದೆ. ಹೆಚ್ಚಿನವರು ಇದನ್ನು ಸ್ವಚ್ಛಗೊಳಿಸಲು ಕೆಮಿಕಲ್ ಅಥವಾ ಅಡುಗೆ ಸೋಡಾ ಬಳಸುತ್ತಾರೆ, ಆದರೆ ಇವು ಬೆಳ್ಳಿಗೆ ಹಾನಿ ಮಾಡುತ್ತವೆ. ಕೆಮಿಕಲ್ ಇಲ್ಲದೆ, ಸುರಕ್ಷಿತವಾಗಿ ನಿಮ್ಮ ಬೆಳ್ಳಿ ಆಭರಣಗಳನ್ನು ಹೊಳೆಯುವಂತೆ ಮಾಡಲು ಈ 4 ಸುಲಭ ಉಪಾಯಗಳು ತುಂಬಾ ಪರಿಣಾಮಕಾರಿ.
25
ಹುಣಸೆ ಹಣ್ಣಿನ ನೀರು
ಹುಣಸೆಯಲ್ಲಿರುವ ನೈಸರ್ಗಿಕ ಆಸಿಡ್ ಬೆಳ್ಳಿಯ ಮೇಲಿನ ಕಪ್ಪು ಪದರವನ್ನು ನಿಧಾನವಾಗಿ ತೆಗೆದುಹಾಕುತ್ತದೆ.
ಬಳಕೆಯ ವಿಧಾನ: ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿ, 10-15 ನಿಮಿಷಗಳ ನಂತರ ಆ ನೀರಿನಲ್ಲಿ ಕಾಲುಂಗುರ ಅಥವಾ ಗೆಜ್ಜೆಯನ್ನು ಹಾಕಿ. ನಂತರ ಮೃದುವಾದ ಬಟ್ಟೆ ಅಥವಾ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ. ಬೆಳ್ಳಿ ಮತ್ತೆ ಹೊಳೆಯಲು ಶುರುವಾಗುತ್ತದೆ.
35
ಬೂದಿ (ಅಗ್ಗಿಷ್ಟಿಕೆ ಅಥವಾ ಅಗರಬತ್ತಿಯದ್ದು)
ಬೂದಿಯಲ್ಲಿ ನೈಸರ್ಗಿಕವಾಗಿ ಉಜ್ಜುವ ಗುಣಗಳಿದ್ದು, ಇದು ಬೆಳ್ಳಿಯನ್ನು ಸ್ವಚ್ಛಗೊಳಿಸುತ್ತದೆ.
ಬಳಕೆಯ ವಿಧಾನ: ಸ್ವಲ್ಪ ಬೂದಿಗೆ ನೀರು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಗೆಜ್ಜೆ ಅಥವಾ ಕಾಲುಂಗುರದ ಮೇಲೆ ಹಚ್ಚಿ ಹತ್ತಿಯಿಂದ ನಿಧಾನವಾಗಿ ಉಜ್ಜಿ. ನಂತರ ಶುದ್ಧ ನೀರಿನಿಂದ ತೊಳೆದು ಒಣಗಿಸಿ.
ವಿನೆಗರ್ ಆಕ್ಸಿಡೇಷನ್ ಅನ್ನು ಹೋಗಲಾಡಿಸಿದರೆ, ಉಪ್ಪು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಬಳಕೆಯ ವಿಧಾನ: ಒಂದು ಬಟ್ಟಲಿನಲ್ಲಿ ವಿನೆಗರ್ ಮತ್ತು ಒಂದು ಚಿಟಿಕೆ ಉಪ್ಪು ಮಿಶ್ರಣ ಮಾಡಿ. ಇದರಲ್ಲಿ ಬೆಳ್ಳಿ ಆಭರಣವನ್ನು 5-7 ನಿಮಿಷಗಳ ಕಾಲ ಇಟ್ಟು, ನಂತರ ಉಜ್ಜಿ ತೊಳೆಯಿರಿ. ಬಳಿಕ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ.
55
ಚಹಾ ಪುಡಿ ಮತ್ತು ಡಿಟರ್ಜೆಂಟ್
ಬೆಳ್ಳಿ ಸ್ವಚ್ಛಗೊಳಿಸಲು ಚಹಾ ಪುಡಿ ತುಂಬಾ ಪರಿಣಾಮಕಾರಿ.
ಬಳಕೆಯ ವಿಧಾನ: ಒಂದು ಪಾತ್ರೆಯಲ್ಲಿ ಒಂದು ಚಮಚ ಚಹಾ ಪುಡಿ, ಒಂದು ಚಮಚ ಡಿಟರ್ಜೆಂಟ್ ಮತ್ತು ಒಂದು ಗ್ಲಾಸ್ ನೀರು ಹಾಕಿ ಕುದಿಸಿ. ಕುದಿಸಿದ ನೀರಲ್ಲಿ ಬೆಳ್ಳಿ ಆಭರಣವನ್ನು ಹಾಕಿ 5-10 ನಿಮಿಷ ಬಿಡಿ. ನಂತರ ಹೊರತೆಗೆದು ಬ್ರಷ್‌ನಿಂದ ಉಜ್ಜಿ ಶುದ್ಧ ನೀರಿನಿಂದ ತೊಳೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.