Premanand Maharaj : ಮಹಿಳೆಯರು ಸಾಮಾನ್ಯವಾಗಿ ತಮ್ಮ ಮುಟ್ಟಿನ ಸಮಯದಲ್ಲಿ ಪೂಜೆ ಮಾಡುವುದಿಲ್ಲ, ಆದರೆ ಕೆಲವೊಮ್ಮೆ, ತೀರ್ಥಯಾತ್ರೆಯ ಸಮಯದಲ್ಲಿ, ದಿಢೀರ್ ಆಗಿ ಮುಟ್ಟಾದರೆ, ಅಂತಹ ಸಂದರ್ಭದಲ್ಲಿ ದೇಗುಲ ದರ್ಶನ ಪಡೆಯಲು ಸಾಧ್ಯವಾಗೋದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು?
ಹಿಂದೂ ಧರ್ಮದಲ್ಲಿ, ಮುಟ್ಟಿನ ಸಮಯದಲ್ಲಿ ಮಹಿಳೆಯರು ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಮುಟ್ಟಿನ ಸಮಯದಲ್ಲಿ ಪೂಜೆಯನ್ನು ತಪ್ಪಿಸುತ್ತಾರೆ, ಆದರೆ ಕೆಲವೊಮ್ಮೆ, ತೀರ್ಥಯಾತ್ರೆಯ ಸಮಯದಲ್ಲಿ ಮುಟ್ಟಾದರೆ, ಅವರು ದೇವರ ದರ್ಶನದಿಂದ ವಂಚಿತರಾಗುತ್ತಾರೆ.
28
ಪ್ರೇಮಾನಂದ ಮಹಾರಾಜರು
ಇತ್ತೀಚೆಗೆ, ಒಬ್ಬ ಮಹಿಳೆ ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜರಿಗೆ ಈ ಪ್ರಶ್ನೆಯನ್ನು ಕೇಳಿದರು. ಈ ಸಂಭಾಷಣೆ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ತೀರ್ಥಯಾತ್ರೆಯ ಸಮಯದಲ್ಲಿ ಮಹಿಳೆಯರಿಗೆ ಮುಟ್ಟಾದರೆ ದೇವಾಲಯಗಳಿಗೆ ಭೇಟಿ ನೀಡಬೇಕೇ ಎಂದು ಕೇಳಿದಾಗ, ಪ್ರೇಮಾನಂದ ಮಹಾರಾಜರು ಏನು ಹೇಳಿದರು ಅನ್ನೋದನ್ನು ನೋಡೋಣ.
38
ಪ್ರಶ್ನೆ ಏನು?
ಭಕ್ತ ಮಹಿಳೆಯೊಬ್ಬರು "ತೀರ್ಥಯಾತ್ರೆಗೆ ಬರುವ ಅನೇಕ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ತೀರ್ಥಯಾತ್ರೆಗೆ ಬಂದ ನಂತರ, ದಿಢೀರ್ ಆಗಿ ಮುಟ್ಟಾದರೆ, ಅದಕ್ಕೆ ಏನು ಮಾಡಬೇಕೆಂದು ಅನ್ನೋದು ಹಲವರಿಗೆ ತಿಳಿದಿಲ್ಲ. ಭಾರತದಲ್ಲಿ, ಅನೇಕ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಪೂಜೆ ಮಾಡುವ ಅಥವಾ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಅಂತಹ ಅನುಮಾನಗಳಿವೆ" . ಇದಕ್ಕೆ ಉತ್ತರ ಏನು ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಪ್ರೇಮಾನಂದ್ ಗುರುಗಳು, "ಯಾತ್ರಾ ಸ್ಥಳಕ್ಕೆ ಭೇಟಿ ನೀಡುವ ಅವಕಾಶವನ್ನು ಕಳೆದುಕೊಳ್ಳಬಾರದು. ಮುಟ್ಟು ಒಂದು ಶಾರೀರಿಕ ಪ್ರಕ್ರಿಯೆಯಾಗಿದ್ದು, ಎಲ್ಲಾ ತಾಯಂದಿರು ಮತ್ತು ಸಹೋದರಿಯರ ದೇಹದಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತದೆ. ತೀರ್ಥಯಾತ್ರೆಗೆ ಭೇಟಿ ನೀಡುವುದು ಸುಲಭವಲ್ಲ. ಯಾತ್ರಾ ಸ್ಥಳವನ್ನು ತಲುಪಲು ಜನ ತುಂಬಾ ಹಣವನ್ನು ವ್ಯಯಿಸುತ್ತಾರೆ ಮತ್ತು ದೈಹಿಕ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಹಾಗಾಗಿ, ಯಾವುದೇ ಸಂದರ್ಭದಲ್ಲೂ ತೀರ್ಥ ಸ್ಥಳವನ್ನು ಭೇಟಿ ನೀಡುವ ಅವಕಾಶವನ್ನು ಕಳೆದುಕೊಳ್ಳಬಾರದು" ಎಂದು ಹೇಳಿದರು.
58
ಹಾಗಿದ್ರೆ ಮಹಿಳೆಯರು ಏನು ಮಾಡಬೇಕು?
ಪ್ರೇಮಾನಂದ ಮಹಾರಾಜರು ಹೇಳಿದಂತೆ ಒಂದು ವೇಳೆ ತೀರ್ಥಯಾತ್ರೆ ಸಮಯದಲ್ಲಿ ಪಿರಿಯಡ್ಸ್ ಆದರೆ, ಅಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡಿ ಭಗವಂತನ ಶ್ರೀಗಂಧವನ್ನು ಹಣೆಗೆ ಹಚ್ಚಿ, ದೇವರ ದರ್ಶನ ಮಾಡಬಹುದು. ಆದರೆ, ದರ್ಶನವನ್ನು ದೂರದಿಂದಲೇ ಮಾಡಬೇಕು, ಯಾವುದೇ ಕಾಣಿಕೆ ಅಥವಾ ವಸ್ತುಗಳನ್ನು ದೇವರಿಗೆ ಅರ್ಪಿಸಬಾರದು, ಅಥವಾ ಭಗವಂತನ ಮೂರ್ತಿಯನ್ನು ಮುಟ್ಟಬಾರದು ಎಂದು ಅವರು ಹೇಳಿದ್ದಾರೆ.
68
ಮುಟ್ಟು ಖಂಡನೀಯವಲ್ಲ
ಮಹಿಳೆಯರು ಅನುಭವಿಸುವ ಮಾಸಿಕ ಮುಟ್ಟು ಖಂಡಿಸಬೇಕಾದ ವಿಷಯವಲ್ಲ, ಬದಲಿಗೆ ಪೂಜಿಸಬೇಕಾದ ವಿಷಯ. ದೇವತೆಗಳ ರಾಜ ಇಂದ್ರನ ಮೇಲಿದ್ದ ಬ್ರಹ್ಮ ಹತ್ಯಾ ದೋಷವನ್ನು ಮಹಿಳೆಯರು ಮಾಸಿಕ ಧರ್ಮವಾಗಿ ತಾವು ಅನುಭವಿಸುತ್ತಾರೆ. ಹಾಗಾಗಿ ಮುಟ್ಟು ಖಂಡಿತವಾಗಿಯೂ ಖಂಡನೀಯವಲ್ಲ. ಇಂದ್ರ ವೃತ್ರಾಸುರನನ್ನು ಕೊಂದಾಗ, ಅವನ ಮೇಲೆ ಬ್ರಹ್ಮಹತ್ಯಾ ದೋಷ ಬಂದಿತ್ತು. ಈ ಪಾಪದಿಂದ ಇಂದ್ರನನ್ನು ರಕ್ಷಿಸಲು, ಬ್ರಹ್ಮ ಋಷಿಗಳು ಈ ಪಾಪವನ್ನು ವಿಭಜಿಸಿದರು.
78
ಯಾರ ಮೇಲಿನ ಇಂದ್ರನ ಬ್ರಹ್ಮ ಹತ್ಯಾ ದೋಷ
ಬ್ರಹ್ಮ ಋಷಿಗಳು ಈ ಪಾಪದಲ್ಲಿ ಮೊದಲ ಭಾಗವನ್ನು ನದಿಗಳಲ್ಲಿ ನೊರೆ ಮತ್ತು ಗುಳ್ಳೆಗಳ ರೂಪದಲ್ಲಿ ಹುಟ್ಟುವ ನದಿಗಳಿಗೆ ನೀಡಲಾಯಿತು. ಎರಡನೇ ಭಾಗವನ್ನು ಮರಗಳಿಗೆ ನೀಡಲಾಯಿತು ಮತ್ತು ಮರಗಳ ಮೇಲೆ ಅಂಟನ್ನು ರೂಪಿಸುವಂತೆ ಮಾಡಲಾಯಿತು. ಮೂರನೇ ಭಾಗವನ್ನು ಬಂಜರು ಭೂಮಿಯನ್ನು ರೂಪಿಸುವ ಭೂಮಿಗೆ ನೀಡಲಾಯಿತು. ನಾಲ್ಕನೇ ಭಾಗವನ್ನು ಮುಟ್ಟಿನ ರೂಪದಲ್ಲಿ ಮಹಿಳೆಯರಿಗೆ ನೀಡಲಾಯಿತು.
88
ಪೂಜಿಸಬೇಕಾದ ವಿಷಯ
ಮಹಿಳೆಯರಿಗೆ ಮುಟ್ಟು ಖಂಡಿಸಬಹುದಾದ ವಿಷಯವಲ್ಲ, ಆದರೆ ಪೂಜಿಸಬೇಕಾದ ವಿಷಯ ಎಂದು ಪ್ರೇಮಾನಂದ ಮಹಾರಾಜರು ಹೇಳಿದರು. ಮೂರು ಲೋಕಗಳ ಪತಿಯಾದ ಇಂದ್ರನ ಈ ಪಾಪವನ್ನು ಅವರು ತಮ್ಮ ಮೇಲೆ ತೆಗೆದುಕೊಂಡಿದ್ದಾರೆ ಅಂದರೆ, ಅದು ಪೂಜ್ಯನೀಯವಾದ ವಿಷಯವೇ ಸರಿ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.