ಆರೋಗ್ಯಕರ ಮಗು ಬೇಕಾ? ಹಾಗಾದ್ರೆ ತಪ್ಪದೇ ಇವುಗಳನ್ನ ಟ್ರೈ ಮಾಡಿ

First Published | Nov 3, 2022, 6:17 PM IST

ಆರೋಗ್ಯಕರ ಮಗುವನ್ನು ಪಡೆಯೋ ಹಂಬಲ ಪ್ರತಿಯೊಬ್ಬ ದಂಪತಿಗಳಲ್ಲೂ ಇರುತ್ತೆ. ಆದರೆ ಇದು ಸಾಧ್ಯವಾಗಿಸೋದು ಹೇಗೆ? ಇತ್ತೀಚಿನ ದಿನಗಳಲ್ಲಿ, 40ನೇ ವಯಸ್ಸಿನಲ್ಲಿ, ದಂಪತಿಗಳ ಫರ್ಟಿಲಿಟಿ ಕ್ಷೀಣಿಸಲು ಪ್ರಾರಂಭಿಸುತ್ತಿದೆ. ಇದರಿಂದಾಗಿ ಗರ್ಭದಲ್ಲಿರುವ ಭ್ರೂಣದ ಆರೋಗ್ಯವೂ ಹದಗೆಡುತ್ತೆ. ಆದರೆ, ಫಲವತ್ತತೆ ಹೆಚ್ಚಿಸಲು, ಮಹಿಳೆಯರು ಮತ್ತು ಪುರುಷರು ಆರೋಗ್ಯಕರ ತೂಕ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಬಗ್ಗೆ ಕಾಳಜಿ ವಹಿಸಬೇಕು.

ನೀವು ಕೂಡ ಮಗುವನ್ನು ಪಡೆಯಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದೀರಾ? ಯಾಕಂದ್ರೆ ಮಗು ಮಾಡಿಕೊಳ್ಳಲು ಯೋಚಿಸುತ್ತಿರೋ ಪುರುಷರು ಮತ್ತು ಮಹಿಳೆಯರ ಫಲವತ್ತತೆಯ(Fertility) ಶಕ್ತಿಯನ್ನು ಉತ್ತಮವಾಗಿಡೋದು ತುಂಬಾ ಮುಖ್ಯ. ಇದರಿಂದ ಹುಟ್ಟಿದ ಮಗುವು ಆರೋಗ್ಯಕರವಾಗಿರುತ್ತೆ. ಆದರೆ ಕಳಪೆ ಜೀವನಶೈಲಿಯಿಂದಾಗಿ, ದಂಪತಿಗಳ ಫರ್ಟಿಲಿಟಿ ಕಡಿಮೆಯಾಗುತ್ತಿದೆ. 40 ವರ್ಷದ ನಂತರ, ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹಾಗಾಗಿ ಫಲವತ್ತತೆ ಸುಧಾರಿಸಲು ಮತ್ತು ಆರೋಗ್ಯಕರ ಮಗುವನ್ನು ಪಡೆಯಲು ಬಯಸಿದರೆ, ಸರಿಯಾದ ಸಮಯದಲ್ಲಿ ಈ ಕೆಲಸಗಳನ್ನು ಮಾಡಲು ಪ್ರಾರಂಭಿಸಿ.

ಫರ್ಟಿಲಿಟಿ ಸುಧಾರಿಸಲು ಉತ್ತಮ ಸಮಯ ಯಾವುದು?

ಫಲವತ್ತತೆ ಮತ್ತು ಗರ್ಭಧಾರಣೆಯನ್ನು ಸುಧಾರಿಸಲು ಪೌಷ್ಠಿಕಾಂಶ ಬಹಳ ಮುಖ್ಯ. ಆದ್ದರಿಂದ, ಆಹಾರದೊಂದಿಗೆ ಜೀವನಶೈಲಿಯನ್ನು(Lifestyle) ಆರೋಗ್ಯಕರವಾಗಿಸಿಕೊಳ್ಳಬೇಕು. ವೈದ್ಯರ ಪ್ರಕಾರ, ಈ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಉತ್ತಮ ಸಮಯವೆಂದರೆ ಪೂರ್ವ ಗರ್ಭದಾರಣೆ. ಇದು ಮಹಿಳೆ ಗರ್ಭಧರಿಸುವ 3 ತಿಂಗಳ ಮೊದಲು ಸಂಭವಿಸುತ್ತೆ. ಆಗ, ಫಲವತ್ತತೆ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತೆ.

Latest Videos


ಗಂಡ ಮತ್ತು ಹೆಂಡತಿ ತೂಕ ನಿಯಂತ್ರಿಸಬೇಕು (Weight control)

ಅನಾರೋಗ್ಯಕರ ತೂಕದಿಂದಾಗಿ ಮಹಿಳೆಯರು ಹಾರ್ಮೋನುಗಳ ಅಸಮತೋಲನ, ಅಂಡೋತ್ಪತ್ತಿ ಸಮಸ್ಯೆ ಮತ್ತು ಋತುಚಕ್ರದ ಅಸ್ವಸ್ಥತೆಗಳನ್ನು ಹೊಂದುತ್ತಾರೆ. ಅಷ್ಟೇ ಅಲ್ಲ, ಸ್ಥೂಲಕಾಯದ ಪುರುಷರಲ್ಲಿ ಹಾರ್ಮೋನುಗಳ ಸಮಸ್ಯೆಗಳು ಮತ್ತು ನಿಮಿರುವಿಕೆಯ ಡಿಸ್ ಫಂಕ್ಷನಿಂಗ್ ಸಾಮಾನ್ಯ. 

ಒಬೆಸಿಟಿ ಐವಿಎಫ್ (IVF) ಚಿಕಿತ್ಸೆಗೆ ಅಡ್ಡಿಪಡಿಸುತ್ತೆ. ಆದ್ದರಿಂದ, ಮಹಿಳೆ ಗರ್ಭಧರಿಸುವ 3 ತಿಂಗಳ ಮೊದಲು ಪುರುಷ ಸಂಗಾತಿ ತನ್ನ ತೂಕ ನಿಯಂತ್ರಿಸಬೇಕು. ಯಾಕಂದ್ರೆ, ತೂಕ ನಿಯಂತ್ರಣದ ಮೂರು ತಿಂಗಳ ನಂತರ, ದೇಹದಲ್ಲಿ ಆರೋಗ್ಯಕರ ವೀರ್ಯವು ರೂಪುಗೊಳ್ಳುತ್ತೆ. ಇದು ಪುರುಷರ ವೀರ್ಯಾಣು ಗುಣಮಟ್ಟ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತೆ.ಜೊತೆಗೆ ಮಹಿಳೆಯರಲ್ಲಿ ತೂಕ ನಿಯಂತ್ರಣವು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.

ಆರೋಗ್ಯಕರ ಆಹಾರ (Healthy food)

ಆರೋಗ್ಯಕರ ಆಹಾರ ತೆಗೆದುಕೊಳ್ಳೋದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತೆ. ಈ ಆಹಾರವು ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕ, ಫೈಬರ್, ಪ್ರಿ ಮತ್ತು ಪ್ರೊ-ಬಯೋಟಿಕ್ಸ್, ಆರೋಗ್ಯಕರ ಕೊಬ್ಬು, ಸಂಪೂರ್ಣ ಧಾನ್ಯ, ದ್ರವ, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಆಹಾರಗಳನ್ನು ಹೊಂದಿರಬೇಕು. ಮಾಂಸಾಹಾರಿಗಳು ಮೊಟ್ಟೆ (Egg), ಮೀನು (Fish) ಮತ್ತು ಚಿಕನ್ (Chiken) ಸಹ ತಿನ್ನಬಹುದು. 

ಫಲವತ್ತತೆಯನ್ನು ಸುಧಾರಿಸಲು ಈ ಆಹಾರಗಳ ಹೊರತಾಗಿ, ಡ್ರೈ ಫ್ರೂಟ್ಸ್(Dry fruits) ತಿನ್ನಬೇಕು. ಅವು ಅಗತ್ಯ ಪ್ರೋಟೀನ್, ವಿಟಮಿನ್ಸ್ ಮತ್ತು ಮಿನರಲ್ಸ್ (Minerals) ಒದಗಿಸುತ್ತವೆ. ಮಹಿಳೆಯರು ಪಾಲಕ್, ಬ್ರೊಕೋಲಿ, ಮೆಂತ್ಯ, ಗ್ರೀನ್ ವೆಜೆಟೇಬಲ್ಸ್, ರಾಸ್ಬೆರಿ, ಬ್ಲೂಬೆರ್ರಿ, ಬೀನ್ಸ್, ಬಾಳೆಹಣ್ಣು, ಕ್ವಿನೋವಾ ಮತ್ತು ಕುಂಬಳಕಾಯಿ ಬೀಜಗಳನ್ನು ಆಹಾರದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ತಿನ್ನೋದರಿಂದ ಪುರುಷರ ಫಲವತ್ತತೆ ಹೆಚ್ಚಾಗುತ್ತೆ.
 

ವ್ಯಾಯಾಮ(Exercise)

ನಿಯಮಿತ ಫಿಟ್ನೆಸ್ ಆಕ್ಟಿವಿಟೀಸ್ ಮಾಡೋದರಿಂದ ಹಾರ್ಮೋನುಗಳು ಸಮತೋಲನಗೊಳ್ಳುತ್ತವೆ. ಇದಲ್ಲದೆ, ಇನ್ಸುಲಿನ್ ಪ್ರತಿರೋಧವು ಸುಧಾರಿಸುತ್ತೆ  ಮತ್ತು ಒತ್ತಡ ಕಡಿಮೆ ಮಾಡುತ್ತೆ.ಈ ಎಲ್ಲಾ ವಿಷಯಗಳು ಪುರುಷರು ಮತ್ತು ಮಹಿಳೆಯರ ಫಲವತ್ತತೆ ಸುಧಾರಿಸಲು ಸಹಾಯ ಮಾಡುತ್ತವೆ. ಹಾಗೆಯೇ, ಐವಿಎಫ್ (IVF) ಹೊಂದುವ ಮಹಿಳೆಯರಿಗೆ ವ್ಯಾಯಾಮವು ಸಹ ತುಂಬಾ ಮುಖ್ಯ ಮತ್ತು ಇದು ತೂಕ ನಿಯಂತ್ರಣಕ್ಕೆ (Weight Control) ಸಹ ಸಹಾಯ ಮಾಡುತ್ತೆ.

ಈ ವಸ್ತುಗಳನ್ನು ಸೇವಿಸಬೇಡಿ

ಫಲವತ್ತತೆ ಹೆಚ್ಚಿಸಲು,  ಚಹಾ (Tea), ಕಾಫಿ (Coffee) ಮತ್ತು ತಂಪು ಪಾನೀಯಗಳಂತಹ ಕೆಫೀನ್ (Caffeine) ಯುಕ್ತ ಪಾನೀಯ ಸೇವಿಸೋದನ್ನು ನಿಲ್ಲಿಸಬೇಕು. ಹೀಗೆ ಮಾಡೋದರಿಂದ ಮಗು ಆರೋಗ್ಯಕರವಾಗಿ ಜನಿಸುವ ಸಾಧ್ಯತೆ ಹೆಚ್ಚಾಗುತ್ತವೆ. ಅನೇಕ ಸಂಶೋಧನೆಗಳ ಪ್ರಕಾರ, ಒತ್ತಡ (Stress) ಕಡಿಮೆ ಮಾಡೋದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು (Healthy Lifestyle) ಅಳವಡಿಸಿಕೊಳ್ಳೋದು ಮಹಿಳೆಯರ ಫಲವತ್ತತೆಯನ್ನು ಶೇಕಡಾ 80 ರಷ್ಟು ಹೆಚ್ಚಿಸುತ್ತೆ.

ಆಲ್ಕೋಹಾಲ್ (Alcohol) ಸೇವಿಸಬೇಡಿ

ಆಲ್ಕೋಹಾಲ್ ಸೇವನೆಯು ಗರ್ಭಧಾರಣೆಯನ್ನು ವಿಳಂಬಗೊಳಿಸುತ್ತೆ. ಇದಲ್ಲದೆ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಹೆಚ್ಚು ಆಲ್ಕೋಹಾಲ್ ಸೇವಿಸುವ ಪುರುಷರಿಗೆ ನಪುಂಸಕತ್ವ, ಕಡಿಮೆ ವೀರ್ಯಾಣುಗಳ ಸಂಖ್ಯೆ, ಕಡಿಮೆ ಸೆಕ್ಸ್ ಡ್ರೈವ್ (Sex Drve) ನಂತಹ ಸಮಸ್ಯೆಗಳು ಇರುತ್ತವೆ. ಈ ಟಿಪ್ಸ್ ಜೊತೆ, ನೀವು 40 ವರ್ಷದ ನಂತರ ಯೋಗ ಮಾಡುವ ಮೂಲಕ ಫಲವತ್ತತೆಯನ್ನು ಸುಧಾರಿಸಬಹುದು.
 

click me!