ದೊಡ್ಡ ಸ್ತನಗಳ ಸಮಸ್ಯೆ
ಸ್ತನದ ಗಾತ್ರವು ತುಂಬಾ ದೊಡ್ಡದಾಗಿರುವ ಮಹಿಳೆಯರಿಗೆ ಅದನ್ನು ನಿರ್ವಹಿಸಲು ಸಮಸ್ಯೆಯಾಗುತ್ತೆ. ಈ ಕಾರಣದಿಂದಾಗಿ, ಅನೇಕ ಬಾರಿ ಮಹಿಳೆಯರಿಗೆ ಬೆನ್ನು ನೋವಿನ ಸಮಸ್ಯೆ ಉಂಟಾಗುತ್ತದೆ ಮತ್ತು ಸ್ನಾಯುಗಳು ಸಹ ಗಟ್ಟಿಯಾಗಲು ಪ್ರಾರಂಭಿಸುತ್ತವೆ. ಅಲ್ಲದೆ, ಸ್ತನಗಳ ಬಳಿ ಹೆಚ್ಚಿನ ಕೊಬ್ಬಿನ ಕಾರಣದಿಂದಾಗಿ, ಸ್ಲೀವ್ ಲೆಸ್ ಮತ್ತು ರಿವೀಲಿಂಗ್ ಬಟ್ಟೆಗಳನ್ನು ಧರಿಸಲು ಕಷ್ಟವಾಗುತ್ತೆ. ಇಷ್ಟೇ ಅಲ್ಲ, ಸ್ತನದ ಗಾತ್ರ ದೊಡ್ಡದಾಗಿರುವ ಮಹಿಳೆಯರು ಹೆಚ್ಚಾಗಿ ತಮ್ಮ ಸ್ತನಗಳಲ್ಲಿ ನೋವನ್ನು ಸಹ ಅನುಭವಿಸುತ್ತಾರೆ.