ಪಿರಿಯಡ್ ಟೈಂನಲ್ಲಿ ಬ್ಲ್ಯಾಕ್ ಬ್ಲಡ್ ಯಾಕೆ ಬರುತ್ತೆ ಗೊತ್ತಾ?

Published : Mar 19, 2023, 01:15 PM IST

ಪಿರಿಯಡ್ಸ್ ಟೈಂನಲ್ಲಿ  ಹಾರ್ಮೋನುಗಳ ಬದಲಾವಣೆಯ ಹೊರತಾಗಿ, ಆಹಾರ ಮತ್ತು ಜೀವನಶೈಲಿಯಿಂದಾಗಿ ರಕ್ತದ ಬಣ್ಣವೂ ವಿಭಿನ್ನವಾಗಿರುತ್ತೆ. ಆದರೆ ಋತುಚಕ್ರದಲ್ಲಿ ಬ್ಲ್ಯಾಕ್ ಪಿರಿಯಡ್ ಬ್ಲಡ್ ಎಂದರೇನು ಎಂದು ನಿಮಗೆ ತಿಳಿದಿದ್ಯಾ? ಈ ಸ್ಟೋರಿ ಓದಿ.  

PREV
110
ಪಿರಿಯಡ್ ಟೈಂನಲ್ಲಿ ಬ್ಲ್ಯಾಕ್ ಬ್ಲಡ್ ಯಾಕೆ ಬರುತ್ತೆ ಗೊತ್ತಾ?

ಋತುಚಕ್ರದ(Periods) ಸಮಯದಲ್ಲಿ, ಅನೇಕ ರೀತಿಯ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ. ಇದು ಹೊಟ್ಟೆ ನೋವು, ಆಯಾಸ ಮತ್ತು ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುವ ಮನಸ್ಥಿತಿಯ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಈ ಸಮಯದಲ್ಲಿ ರಕ್ತಸ್ರಾವದ ಬಣ್ಣವನ್ನು ನೋಡುವ ಮೂಲಕ, ಮಹಿಳೆ ತನ್ನ ಆರೋಗ್ಯವು ಉತ್ತಮವಾಗಿದ್ಯಾ  ಅಥವಾ ಕೆಟ್ಟದಾಗಿದ್ಯಾ ಎಂದು ಊಹಿಸಬಹುದು.

210

ಪಿರಿಯಡ್ಸ್ ಟೈಂನಲ್ಲಿ ರಕ್ತಸ್ರಾವದಲ್ಲಿ(Bleeding) ರಕ್ತದ ಬಣ್ಣವು ಗಾಢ ಕೆಂಪು ಬಣ್ಣ, ಕಂದು, ಗುಲಾಬಿ, ಬೂದು ಮತ್ತು ಕಪ್ಪು ಬಣ್ಣವಾಗಿರಬಹುದು, ಇದು ಸಾಮಾನ್ಯ. ಹಾರ್ಮೋನುಗಳ ಬದಲಾವಣೆಯ ಹೊರತಾಗಿ, ಆಹಾರ ಮತ್ತು ಜೀವನಶೈಲಿಯಿಂದಾಗಿ ರಕ್ತದ ಬಣ್ಣವೂ ವಿಭಿನ್ನವಾಗಿರುತ್ತೆ. ಆದರೆ ಋತುಚಕ್ರದಲ್ಲಿ ಕಪ್ಪು ರಕ್ತ ಬರಲು ವಿಶೇಷ ಕಾರಣವೇನು ಎಂದು ನಿಮಗೆ ತಿಳಿದಿದ್ಯಾ?

310

ಋತುಚಕ್ರದಲ್ಲಿ ಬ್ಲ್ಯಾಕ್ ಬ್ಲಡ್ (Black blood) ಬರುವುದರ ಹಿಂದಿನ ಸೀಕ್ರೆಟ್ ಕಾರಣ ಹೀಗಿದೆ- 
ಋತುಚಕ್ರದಲ್ಲಿ ಬ್ಲ್ಯಾಕ್ ಬ್ಲಡ್ ವಿಸರ್ಜನೆಯ ಹಿಂದೆ ಅನೇಕ ಕಾರಣಗಳಿರಬಹುದು. ಆದರೆ ಮುಟ್ಟಿನ ಸಮಯದಲ್ಲಿ ಕಪ್ಪು ರಕ್ತದ ಬಿಡುಗಡೆಯು ಹೆಚ್ಚಾಗಿ ಆಹಾರ, ಜೀವನಶೈಲಿ ಮತ್ತು ಪರಿಸರದಿಂದಾಗಿರಬಹುದು. 

410

ಆದರೆ, ಕೆಲವೊಮ್ಮೆ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪರಿಸ್ಥಿತಿಗಳಾದ ಗರ್ಭಧಾರಣೆ, ಸೋಂಕು, ಗರ್ಭಕಂಠದ ಕ್ಯಾನ್ಸರ್(Cancer) ಕೂಡ ಇದಕ್ಕೆ ಕಾರಣವಾಗಬಹುದು. ಮುಟ್ಟಿನ ಸಮಯದಲ್ಲಿ ಬ್ಲ್ಯಾಕ್ ಬ್ಲಡ್ ದೀರ್ಘಕಾಲದ ನಂತರ ಗರ್ಭಾಶಯದಿಂದ ಹೊರಬರುವ ಹಳೆಯ ರಕ್ತವಾಗಿದೆ. 

510

ಯೋನಿಯಲ್ಲಿ ಏನೋ ಇರುವಿಕೆ: ಯೋನಿಯಲ್ಲಿ ಏನಾದರೊಂದು ಇರೋದರಿಂದ ಬ್ಲ್ಯಾಕ್ ಪಿರಿಯಡ್ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ, ಗರ್ಭನಿರೋಧಕ ಸಾಧನ, ಕಾಪರ್ ಟಿ, ಟ್ಯಾಂಪೂನ್ ಮುಂತಾದ ವಸ್ತುಗಳನ್ನು ಬಳಸುವ ಮಹಿಳೆಯರು ಬ್ಲ್ಯಾಕ್ ಬ್ಲಡ್ ವಿಸರ್ಜನೆಯ ಸಮಸ್ಯೆಗಳನ್ನು ಸಹ ಹೊಂದಬಹುದು. ಅನೇಕ ಬಾರಿ ಈ ಸಾಧನಗಳಿಂದಾಗಿ, ಯೋನಿ ಸೋಂಕಿಗೆ ಕಾರಣ ವಾಸನೆ(Odour), ಸ್ರವಿಸುವಿಕೆ ಇತ್ಯಾದಿಗಳ ಸಮಸ್ಯೆಯಾಗಿರಬಹುದು.

610

ಋತುಚಕ್ರದ ಆರಂಭ: ಈ ಸಮಸ್ಯೆಯು ಮೊದಲ ಋತುಚಕ್ರದ ಸಮಯದಲ್ಲಿ ಅಥವಾ ಋತುಬಂಧದ(Menopause) ಸಮಯದಲ್ಲಿಯೂ ಮಹಿಳೆಯರನ್ನು ಕಾಡಬಹುದು. ಈ ಸಮಯದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತೆ, ಇದರಿಂದಾಗಿ ಮಹಿಳೆಯ ಗರ್ಭಾಶಯದಲ್ಲಿರುವ ರಕ್ತ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. 

710

ಈ ಸಮಯದಲ್ಲಿ ಹೊರಬರುವ ರಕ್ತದ ಬಣ್ಣವು ಕೆಂಪು ಬಣ್ಣದಿಂದ ಕಂದು ಅಥವಾ ಕಪ್ಪು ಬಣ್ಣಕ್ಕೆ ಬದಲಾಗಲು ಇದು ಕಾರಣವಾಗಿದೆ. ಋತುಚಕ್ರಕ್ಕೆ ಮುಂಚಿತವಾಗಿ ಬ್ಲ್ಯಾಕ್ ಸ್ಪೋಟಿಂಗ್ ಗೆ(Black spotting) ಇದು ಕಾರಣವಾಗಿದೆ. ಹಾಗಾಗಿ, ನೀವು ಯಾವಾಗಲೂ ಯೋನಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು

810

ಪೆಲ್ವಿಕ್ ಉರಿಯೂತದ ಕಾಯಿಲೆ ಅಥವಾ ಇತರ ಸೋಂಕು: ಬ್ಲ್ಯಾಕ್ ಪಿರಿಯಡ್ ರಕ್ತದ ಪೆಲ್ವಿಕ್ ಉರಿಯೂತದ ಕಾಯಿಲೆ ಅಥವಾ ಇತರ ಯೋನಿ ಸೋಂಕುಗಳಿಂದ ಉಂಟಾಗಬಹುದು. ಈ ಸಮಸ್ಯೆಗಳಲ್ಲಿ, ಮೂತ್ರವಿಸರ್ಜನೆಯ ಸಮಯದಲ್ಲಿ ತೊಂದರೆ, ಪೆಲ್ವಿಕ್ ಪ್ರದೇಶದಲ್ಲಿ ನೋವು, ಋತುಚಕ್ರದ ನಡುವೆ ಕಲೆ, ಯೋನಿಯಲ್ಲಿ ತುರಿಕೆ(Vaginal itching), ಶೀತದೊಂದಿಗೆ ಜ್ವರದಂತಹ ರೋಗಲಕ್ಷಣಗಳನ್ನು ನೀವು ನೋಡಬಹುದು.

910

ಗರ್ಭಪಾತ(Miscarriage): ಮಹಿಳೆಯರಲ್ಲಿ ಗರ್ಭಪಾತದಿಂದ ಬ್ಲ್ಯಾಕ್ ಬ್ಲಡ್ ಉಂಟಾಗಬಹುದು. ಅನೇಕ ಮಹಿಳೆಯರಲ್ಲಿ, ಗರ್ಭಪಾತವು ಬೂದು ಅಥವಾ ಕಂದು ವಿಸರ್ಜನೆಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮವಾಗಿದೆ. 

1010

ಸಲಹೆ (Tips): ಒಂದು ಅಥವಾ ಎರಡು ಬಾರಿ ಬ್ಲ್ಯಾಕ್ ಬ್ಲಡ್ ವಿಸರ್ಜನೆ ಸಂಭವಿಸಿದ್ರೆ, ಅದನ್ನು ಸಾಮಾನ್ಯವೆಂದು ಪರಿಗಣಿಸಬಹುದು, ಆದರೆ ಈ ಸಮಸ್ಯೆ ಮುಂದುವರಿದರೆ, ತಜ್ಞ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಇದು ಕೆಲವೊಮ್ಮೆ ದೇಹದಲ್ಲಿ ಉದ್ಭವಿಸುವ ಕೆಲವು ರೋಗಗಳ ಸಂಕೇತವಾಗಿರಬಹುದು. ಹಾಗಾಗಿ ತಡ ಮಾಡದೆ ಡಾಕ್ಟರ್ ಬಳಿ ಸಲಹೆ ಕೇಳಿ.  

Read more Photos on
click me!

Recommended Stories