ದಾಲ್ಚಿನಿ ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸುತ್ತೆ ಗೊತ್ತಾ?

First Published Dec 3, 2022, 3:39 PM IST

ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯ ಅಂಡಾಶಯದಲ್ಲಿ ಸಣ್ಣ ಸಿಸ್ಟ್ ಗಳು ರೂಪುಗೊಳ್ಳುತ್ತವೆ, ಇದರಿಂದಾಗಿ ಮೊಟ್ಟೆಗಳ ಉತ್ಪಾದನೆ ಸರಿಯಾಗಿ ಆಗೋದಿಲ್ಲ. ನಿಮಗೂ ಪಿಸಿಒಎಸ್ ಸಮಸ್ಯೆಗಳಿದ್ದರೆ, ಪರಿಹಾರ ಪಡೆಯಲು ದಾಲ್ಚಿನ್ನಿಯನ್ನು ಈ ರೀತಿ ನಿಮ್ಮ ಆಹಾರದಲ್ಲಿ ಸೇರಿಸಬಹುದು.

ಪಿಸಿಒಎಸ್(PCOS)ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರಲ್ಲಿ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆಯಾಗಿದೆ, ಇದರಿಂದಾಗಿ ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತೆ. ಸಾಮಾನ್ಯವಾಗಿ, 25-40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ. ಇದು ಮಹಿಳೆಯ ಋತುಸ್ರಾವದ ಮೇಲೂ ಪರಿಣಾಮ ಬೀರುತ್ತೆ. ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯ ಅಂಡಾಶಯದಲ್ಲಿ ಸಣ್ಣ ಸಿಸ್ಟ್ ಗಳು ರೂಪುಗೊಳ್ಳುತ್ತವೆ, ಇದರಿಂದಾಗಿ ಮೊಟ್ಟೆಗಳ ಉತ್ಪಾದನೆ ಸರಿಯಾಗಿ ಆಗೋದಿಲ್ಲ. ನೀವು ಸಹ ಪಿಸಿಒಸ್ ಸಮಸ್ಯೆಗಳನ್ನು ಹೊಂದಿದ್ದರೆ, ಪರಿಹಾರವನ್ನು ಪಡೆಯಲು ದಾಲ್ಚಿನ್ನಿಯ ಈ ಪರಿಣಾಮಕಾರಿ ವಿಧಾನ ಅಳವಡಿಸಿ. 

ಕೊಲಂಬಿಯಾ ವಿಶ್ವವಿದ್ಯಾಲಯವು ನಡೆಸಿದ ಒಂದು ಸಂಶೋಧನೆಯಲ್ಲಿ, ದಾಲ್ಚಿನ್ನಿಯ ಬಳಕೆಯು ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಇನ್ಸುಲಿನ್(Insulin) ಪ್ರತಿರೋಧವನ್ನು ಕಡಿಮೆ ಮಾಡುತ್ತೆ  ಎಂದು ವರದಿಯಾಗಿದೆ, ಇದು ಅವರ ಋತುಚಕ್ರವನ್ನು ಸುಧಾರಿಸುತ್ತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

ಪಿಸಿಓಎಸ್ ಗಾಗಿ ದಾಲ್ಚಿನ್ನಿಯ (Cinnamon) ಆರೋಗ್ಯ ಪ್ರಯೋಜನಗಳು ಹೀಗಿವೆ: ದಾಲ್ಚಿನ್ನಿಯ ವಿಶಿಷ್ಟ ಪರಿಮಳ ಮತ್ತು ರುಚಿಯು ದಾಲ್ಚಿನ್ನಿ ತೊಗಟೆ ಎಣ್ಣೆಯಲ್ಲಿ ಕಂಡುಬರುವ ರಾಸಾಯನಿಕ ಸಂಯುಕ್ತದಿಂದ ಬರುತ್ತೆ - ಅದುವೇ ದಾಲ್ಚಿಮಾಲ್ಡಿಹೈಡ್. ದಾಲ್ಚಿನ್ನಿಯ ಹೆಚ್ಚಿನ ಆರೋಗ್ಯ ಪ್ರಯೋಜನಗಳಿಗೆ ದಾಲ್ಮಾಲ್ಡಿಹೈಡ್ ಕಾರಣವಾಗಿದೆ. ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಅಧ್ಯಯನಗಳು ದಾಲ್ಚಿನ್ನಿ ಪಿಸಿಒಎಸ್ ಗೆ ಹಲವಾರು ಆರೋಗ್ಯ ಪ್ರಯೋಜನ ಹೊಂದಿರಬಹುದು ಎಂದು ಸೂಚಿಸುತ್ತಿವೆ.

ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತೆ: ಪಿಸಿಒಎಸ್ ನಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ನ ಉನ್ನತ ಮಟ್ಟಗಳು ಸಾಮಾನ್ಯವಾಗಿರುತ್ತೆ. 8 ವಾರಗಳ ಕಾಲ ದಾಲ್ಚಿನ್ನಿ ಪೂರಕಗಳನ್ನು ತೆಗೆದುಕೊಂಡ ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರತಿರೋಧದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಮತ್ತೊಂದು ಅಧ್ಯಯನವು ದಾಲ್ಚಿನ್ನಿ ಸೇವನೆ ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುವ ಮೂಲಕ ಊಟದ ನಂತರದ ಗ್ಲುಕೋಸ್(Glucose) ಮಟ್ಟವನ್ನು ಕಡಿಮೆ ಮಾಡುತ್ತೆ ಎಂದು ತೋರಿಸಿದೆ.

ದಾಲ್ಚಿನ್ನಿ ಚಿಕಿತ್ಸೆಯಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ, ದಾಲ್ಚಿನ್ನಿ ಪೂರಕಗಳು ಚಯಾಪಚಯ ರೋಗಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಪಿಸಿಒಎಸ್ ಹೊಂದಿರುವ ರೋಗಿಗಳಿಗೆ ಸಹಾಯ ಮಾಡುತ್ತೆ. ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಕ್ಲಿನಿಕಲ್ ಪ್ರಯೋಗವು 8 ವಾರಗಳವರೆಗೆ ನಡೆದಿದ್ದು, ಈ ಸಮಯದಲ್ಲಿ 1.5 ಗ್ರಾಂ ದಾಲ್ಚಿನ್ನಿಯೊಂದಿಗೆ ಪೂರಕ ಆಹಾರ ಸೇವನೆಯಿಂದ ರಕ್ತದ ಗ್ಲುಕೋಸ್, ಇನ್ಸುಲಿನ್ ಮತ್ತು ದೇಹದ ತೂಕವನ್ನು(Weight) ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ತೋರಿಸಿದೆ.

ಋತುಚಕ್ರವನ್ನು(Periods) ನಿಯಂತ್ರಿಸಲು ಸಹಾಯ ಮಾಡತ್ತೆ: ಪಿಸಿಒಎಸ್ ಹೊಂದಿರುವ ಅನೇಕ ಮಹಿಳೆಯರು ಹಾರ್ಮೋನುಗಳ ಅಸಮತೋಲನದಿಂದಾಗಿ ಅನಿಯಮಿತ ಋತುಚಕ್ರವನ್ನು ಅನುಭವಿಸಬಹುದು. ದಾಲ್ಚಿನ್ನಿ ಹಾರ್ಮೋನ್ ಮತ್ತು ಋತುಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ ಮತ್ತು ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತೆ. ಅಧ್ಯಯನವು ದಾಲ್ಚಿನ್ನಿ ಪೂರಕಗಳನ್ನು (1.5 ಗ್ರಾಂ / ಡಿ) ತೆಗೆದುಕೊಳ್ಳುವ ಪಿಸಿಒಎಸ್ ರೋಗಿಗಳಲ್ಲಿ ಸರಿಯಾಗಿ ರಕ್ತ ಸ್ರಾವ ಉಂಟಾಗುವಂತೆ ಮಾಡಿದೆ. ಜೊತೆಗೆ ಹೊಟ್ಟೆ ನೋವನ್ನು ಕಡಿಮೆ ಮಾಡಿದೆ. 

ಉರಿಯೂತ ಕಡಿಮೆ ಮಾಡುತ್ತೆ: ಹೆಚ್ಚು ಉತ್ಕರ್ಷಣ ನಿರೋಧಕಗಳೊಂದಿಗೆ ದಾಲ್ಚಿನ್ನಿ ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದೆ, ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳ(Free radical) ವಿರುದ್ಧ ಹೋರಾಡುತ್ತೆ  ಮತ್ತು ಅಂಗಾಂಶ ಹಾನಿಯನ್ನು ಸರಿಪಡಿಸುತ್ತೆ . ಪಿಸಿಓಎಸ್ ಹೊಂದಿರುವ ಮಹಿಳೆಯರು ದೀರ್ಘಕಾಲದ ಉರಿಯೂತವನ್ನು ಹೊಂದುವ ಸಾಧ್ಯತೆ ಹೆಚ್ಚು ಇರದ ಕಾರಣ, ಆರಂಭದಲ್ಲಿ ದೇಹದ ಬಗ್ಗೆ ಕಾಳಜಿ ವಹಿಸೋಸುವುದು ಬಹಳ ಮುಖ್ಯ! 

ಕೊಲೆಸ್ಟ್ರಾಲ್(Cholestrol) ಮಟ್ಟವನ್ನು ಕಡಿಮೆ ಮಾಡುತ್ತೆ: ಪಿಸಿಒಎಸ್ ಹೊಂದಿರುವ ಅನೇಕ ಜನರಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುತ್ತೆ. ಹೆಚ್ಚಿನ ಅಧ್ಯಯನಗಳ ಅಗತ್ಯವಿದ್ದರೂ, ದಾಲ್ಚಿನ್ನಿಯು ಒಟ್ಟು ಕೊಲೆಸ್ಟ್ರಾಲ್, ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್, ಮತ್ತು ಟ್ರೈಗ್ಲಿಸರೈಡ್ ಮಟ್ಟಗಳನ್ನು ಕಡಿಮೆ ಮಾಡುತ್ತೆ  ಎಂದು ತೋರಿಸಲಾಗಿದೆ, ಅದರ ಜೊತೆ ಎಚ್ಡಿಎಲ್ (ಉತ್ತಮ) ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತೆ. ಸಂಶೋಧನೆಯಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿರೋದು ಕಂಡು ಬಂದಿದೆ.

ಹೃದ್ರೋಗದ(Heart disease) ರಿಸ್ಕ್ ಕಡಿಮೆ: ಪಿಸಿಒಎಸ್ ರೋಗಿಗಳಲ್ಲಿ ಕಂಡುಬರುವ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಅಧಿಕ ರಕ್ತದೊತ್ತಡವು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯರಕ್ತನಾಳದ ಕಾಯಿಲೆಯ ರಿಸ್ಕ್ ಕಡಿಮೆ ಮಾಡುವಲ್ಲಿ ದಾಲ್ಚಿನ್ನಿ ಪರಿಣಾಮಕಾರಿ ಎಂದು ಅಧ್ಯಯನಗಳು ವರದಿ ಮಾಡಿವೆ.

ಪಿಸಿಓಎಸ್ ಗೆ ದಾಲ್ಚಿನ್ನಿ ಬಳಸೋದು ಹೇಗೆ?: ಒಂದು ಲೋಟ ನೀರಿನಲ್ಲಿ ಕಾಲು ಟೀಸ್ಪೂನ್ ದಾಲ್ಚಿನ್ನಿ ಪುಡಿ ಹಾಕಿ ಮತ್ತು ಅದು ಕುದಿಯುವವರೆಗೆ ಬೇಯಿಸಿ. ಈಗ ಈ ನೀರನ್ನು ತಣ್ಣಗಾಗಿಸಿ ಮತ್ತು ಚಹಾದಂತೆ(Tea)ನಿಧಾನವಾಗಿ ಕುಡಿಯಿರಿ. ನೀವು ಈ ಚಹಾವನ್ನು ಇನ್ನಷ್ಟು ರುಚಿಕರವಾಗಿಸಲು ಬಯಸಿದರೆ, ನೀವು ಅದಕ್ಕೆ ಸ್ವಲ್ಪ ನಿಂಬೆ ರಸ ಸಹ ಸೇರಿಸಬಹುದು.

click me!