Breast Pain: ಹಾಲುಣಿಸುವ ತಾಯಂದಿರಲ್ಲಿ ಚಳಿಗಾಲದಲ್ಲಿ ಸ್ತನಗಳಲ್ಲಿ ನೋವುಂಟಾಗುವುದೇಕೆ?

First Published Nov 30, 2022, 7:00 PM IST

ನವಜಾತ ಶಿಶುವಿಗೆ ಹಾಲುಣಿಸುವಾಗ, ಮೊಲೆತೊಟ್ಟುಗಳಲ್ಲಿ ನೋವು ಮತ್ತು ತುರಿಕೆಯಂತಹ ಸಮಸ್ಯೆಗಳು ಸಾಮಾನ್ಯವಾಗಿ ಹೊಸ ತಾಯಂದಿರಲ್ಲಿ ಕಂಡು ಬರುತ್ತೆ. ಇದಕ್ಕೆ ಕಾರಣ ಏನು? ಅನ್ನೋದನ್ನು ನೀವು ತಿಳಿದುಕೊಂಡ್ರೆ, ಇದರಿಂದ ಸ್ತನದಲ್ಲಿ ಉಂಟಾಗುವ ಮರಗಟ್ಟುವಿಕೆ, ನೋವು ಮತ್ತು ತುರಿಕೆಯನ್ನು ತಪ್ಪಿಸಬಹುದು.

ತಾಯಿಯಾಗುವುದು ಪ್ರಪಂಚದ ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದಾಗಿದೆ. ತಾಯಿಗೆ ಮಾತ್ರವಲ್ಲ, ಮಗುವಿಗೆ ಸಹ, ಈ ಜಗತ್ತಿಗೆ ಬಂದು ತನ್ನ ತಾಯಿಯ ಎದೆಯ ಮೇಲೆ ಮಲಗುವುದೇ ಒಂದು ವಿಶೇಷ ಸಂಗತಿಯಾಗಿದೆ. ಪ್ರತಿಯೊಬ್ಬ ತಾಯಿಯೂ ತನ್ನ ನವಜಾತ ಶಿಶುವಿನ ಪೋಷಣೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಆದರೆ ಅನೇಕ ಬಾರಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಇದರಿಂದಾಗಿ ಹೊಸ ತಾಯಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಹೊಸ ತಾಯಿಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದೇವೆ, ಅದು ಚಳಿಯಿಂದಾಗಿ ಉಂಟಾಗುವ ಮೊಲೆತೊಟ್ಟು ಮರಗಟ್ಟುವಿಕೆ ಸಮಸ್ಯೆಯಾಗಿದೆ. ಇದರಿಂದಾಗಿ, ಮಗುವಿಗೆ ಹಾಲುಣಿಸುವಾಗ ಮೊಲೆತೊಟ್ಟುಗಳಲ್ಲಿ ನೋವು ಉಂಟಾಗುತ್ತೆ, ಕೆಲವೊಮ್ಮೆ ಶೀತದ ಪರಿಣಾಮವು ಮೊಲೆತೊಟ್ಟುಗಳ (pain in nipple) ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದರೆ ಮೊಲೆತೊಟ್ಟುಗಳಲ್ಲಿ ತುರಿಕೆ ಮತ್ತು ಅಸ್ವಸ್ಥತೆಯನ್ನು ಸಹ ಅನುಭವಿಸಬಹುದು.
 

ಮೊಲೆತೊಟ್ಟುಗಳಿಂದ ಹಾಲಿನ ಹರಿವಿನ ಕೊರತೆಯಿಂದಾಗಿ ಮತ್ತು ಸ್ತನದಿಂದ ಹಾಲು ಸಂಪೂರ್ಣವಾಗಿ ಖಾಲಿಯಾಗಲು ಸಾಧ್ಯವಾಗದ ಕಾರಣ, ಮೊಲೆತೊಟ್ಟುಗಳ ಸುತ್ತಲಿನ ನಾಳಗಳು ಮುಚ್ಚಲು ಪ್ರಾರಂಭಿಸುತ್ತವೆ, ಇದರಿಂದಾಗಿ ಹಾಲಿನ ಟ್ಯೂಬ್ ಬ್ಲಾಕ್ ಆಗಲು ಪ್ರಾರಂಭಿಸುತ್ತದೆ. ಅನೇಕ ಬಾರಿ, ಮಕ್ಕಳಿಗೆ ಹಾಲುಣಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದು ಅಥವಾ ಸ್ತನ ಪಂಪ್ (breast pump) ಸಹಾಯದಿಂದ ಸ್ತನದಿಂದ ಸಂಪೂರ್ಣ ಹಾಲನ್ನು ಪಡೆಯೋದ್ರಿಂದ ಸ್ತನ ನೋವು, ತುರಿಕೆ ಮತ್ತು ಮರಗಟ್ಟುವಿಕೆ ಉಂಟಾಗುವ ಸಾಧ್ಯತೆ ಇದೆ. 

ಸ್ತನಗಳ ಮರಗಟ್ಟುವಿಕೆ (numbness in breast) ಅಥವಾ ನಂಬ್’ನೆಸ್ ತಪ್ಪಿಸಲು, ಮುಖ್ಯವಾಗಿ ಮಗುವಿಗೆ ಕಾಲಕಾಲಕ್ಕೆ ಹಾಲುಣಿಸೋದು ಮುಖ್ಯ, ಅಷ್ಟೇ ಅಲ್ಲ ಸ್ತನ ಪಂಪ್ ಸಹಾಯದಿಂದ ಹಾಲನ್ನು ಸಂಪೂರ್ಣವಾಗಿ ತೆಗೆದುಹಾಕುವುದನ್ನು ಮಾಡಬೇಕು. ನಿಪ್ಪಲ್ ಗಳಲ್ಲಿ ಬ್ಲಾಕೇಜ್ (blockage in breast) ಶೀತದಿಂದ ಉಂಟಾದರೆ, ಮಗುವಿನ ಹಾಲುಣಿಸುವಾಗ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮತ್ತು ಬೆಚ್ಚಗಿನ ಕೋಣೆಯನ್ನು ಆಯ್ಕೆ ಮಾಡುವುದು ಈ ಸಮಸ್ಯೆಯನ್ನು ನಿವಾರಿಸುತ್ತೆ..

ಸ್ತನ ಮರಗಟ್ಟುವಿಕೆ (breast numbness)
ಶೀತವು ಸ್ತನದಲ್ಲಿ ನೋವನ್ನು ಉಂಟುಮಾಡುತ್ತಿದ್ದರೆ ಅಥವಾ ಹಾಲು ಪಡೆಯಲು ತೊಂದರೆ ಹೊಂದಿದ್ದರೆ, ಮತ್ತು ನಿಪ್ಪಲ್ ನಂಬ್’ನೆಸ್ ಅನುಭವಿಸಿದರೆ, ನೀವು ಹೀಟಿಂಗ್ ಪ್ಯಾಡ್ ಬಳಸಬಹುದು. ಹಾಲುಣಿಸುವ 20 ನಿಮಿಷಗಳ ಮೊದಲು ಸ್ತನವನ್ನು ಬೆಚ್ಚಗಿನ ಬಟ್ಟೆಯಿಂದ ಅಥವಾ ಬಿಸಿಮಾಡುವ ಪ್ಯಾಡ್ ಗಳ ಮೂಲಕ ಬ್ಲ್ಯಾಕೇಜ್ ತೆಗೆದುಹಾಕಬಹುದು. ಇದರಿಂದ ಹಾಲು ಸರಿಯಾಗಿ ಬರುತ್ತೆ, ಜೊತೆಗೆ ಸ್ತನದಲ್ಲಿ ನೋವು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.

ಹೈಡ್ರೇಶನ್ (Hydrate)
ಕೆಲವೊಮ್ಮೆ ನೀರಿನ ಕೊರತೆಯಿಂದಾಗಿ, ಹಾಲಿನ ಹರಿವು ಕಡಿಮೆಯಾಗಬಹುದು. ಕಡಿಮೆ ಹಾಲಿನ ಹರಿವು ಸಹ ಬ್ಲಾಕೇಜ್ ಗೆ ಕಾರಣವಾಗುತ್ತದೆ, ಆದ್ದರಿಂದ ಹಾಲುಣಿಸುವ ತಾಯಂದಿರು ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹ ಹೈಡ್ರೇಟ್ ಆಗಿರುತ್ತೆ ಮತ್ತು ದೇಹದಲ್ಲಿ ಎಲೆಕ್ಟ್ರೋಲೈಟ್ ಗಳು ಸಹ ಹೆಚ್ಚಾಗುತ್ತವೆ, ಇದು ಹೆಚ್ಚು ಹಾಲನ್ನು ಉತ್ಪಾದಿಸಲು ನಿಮಗೆ ಸಹಾಯ ಮಾಡುತ್ತದೆ.

ವಿಟಮಿನ್ ಸಿ (Vitamin C)
ಹಾಲುಣಿಸುವ ಮಹಿಳೆಯರಿಗೆ ವಿಟಮಿನ್-ಸಿ ಬಹಳ ಮುಖ್ಯ. ವೈದ್ಯರ ಪ್ರಕಾರ, ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ ನಿಂಬೆ ರಸ ಕುಡಿಯಬೇಕು, ಇದರಿಂದ ದೇಹದಲ್ಲಿ ಸರಿಯಾದ ಪ್ರಮಾಣದ ವಿಟಮಿನ್ ಸಿ ಉಳಿಯುತ್ತದೆ. ಇದಲ್ಲದೆ, ಟೊಮೆಟೊ, ಹಸಿರು ಎಲೆ ತರಕಾರಿಗಳು, ಕ್ಯಾರೆಟ್, ಗೆಣಸು, ಬೀನ್ಸ್, ಚಿಯಾ ಬೀಜಗಳು, ಹಾಲು, ಬೀಜಗಳು ಮತ್ತು ಏಪ್ರಿಕಾಟ್ಗಳು, ಕಲ್ಲಂಗಡಿಗಳು ಮತ್ತು ಸಿಟ್ರಸ್ ಹಣ್ಣುಗಳಂತಹ ಹಣ್ಣುಗಳನ್ನು ತಿನ್ನಬೇಕು, ಇದರಿಂದ ದೇಹವು ವಿಟಮಿನ್-ಸಿ ಅನ್ನು ಉತ್ತಮವಾಗಿ ಪಡೆಯಬಹುದು.

ಏನನ್ನು ತಿನ್ನಬಾರದು
ಸ್ತನ್ಯಪಾನ (breast feeding) ಮಾಡುವ ಮಹಿಳೆಯರು ಸೇವಿಸುವ ಯಾವುದೇ ಆಹಾರವು ಅವರ ಎದೆಹಾಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಕಚ್ಚಾ ಮಾಂಸ, ಮಸಾಲೆಯುಕ್ತ, ಜಂಕ್ ಫುಡ್ (junk food), ಎಣ್ಣೆಯುಕ್ತ ಆಹಾರ, ಸಕ್ಕರೆಯನ್ನು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ತಿನ್ನಬಾರದು. 200 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸಬೇಡಿ. ಅಂತಹ ಊಟವು ಹಾಲಿನ ರಚನೆಯನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಅಂತಹ ಆಹಾರ ಮತ್ತು ಕೆಫೀನ್ ತಿನ್ನುವುದನ್ನು ತಪ್ಪಿಸಿ.
 

ಸ್ತನದಲ್ಲಿನ ಹಾಲಿನ ಬ್ಲಾಕೇಜ್ ಗೆ ಚಿಕಿತ್ಸೆ ನೀಡುವುದು ಹೇಗೆ?
ಸಂಪೂರ್ಣ ಆಹಾರಕ್ರಮ: ಹಾಲುಣಿಸುವ ಮಹಿಳೆಯರು ಸಹ ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು, ಇದರಿಂದ ಹಾಲಿನ ಉತ್ಪಾದನೆ ಸರಿಯಾಗಿರುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ವಿಟಮಿನ್ ಗಳು, ಕ್ಯಾಲ್ಸಿಯಂ, ಕಬ್ಬಿಣ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪೊಟ್ಯಾಸಿಯಮ್ ನಂತಹ ಇತರ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಬೇಕು. ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರವು ಮಹಿಳೆಯರ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹಾಲು ಸಹ ಉತ್ತಮವಾಗಿ ಉತ್ಪತ್ತಿಯಾಗುತ್ತದೆ.

click me!