ಇದು ಸ್ತನಗಳ ವಿಷ್ಯ… ಈ ತಪ್ಪೆಲ್ಲಾ ಆಗದಂತೆ ಇರಲಿ ಎಚ್ಚರ!

First Published | Dec 2, 2022, 1:25 PM IST

ಸ್ತನ ದೇಹದ ಒಂದು ಪ್ರಮುಖ ಭಾಗ. ಆದರೆ ನಾವು ಕೆಲವೊಮ್ಮೆ ಸ್ತನಗಳೊಂದಿಗೆ ಕೆಲವು ತಪ್ಪುಗಳನ್ನ ಮಾಡ್ತೇವೆ. ಡಾಕ್ಟರ್ ಸ್ತನಗಳೊಂದಿಗೆ ಯಾವ ಕೆಲಸಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಿದ್ದಾರೆ. ಅವುಗಳನ್ನು ಫಾಲೋ ಮಾಡಿದ್ರೆ ಹೆಲ್ತಿ ಲೈಫ್ ನಿಮ್ಮದಾಗುತ್ತೆ. 

ಸ್ತನದ (Breast) ಬಗ್ಗೆ ಮಾತನಾಡೋದು ಅಥವಾ ಎಲ್ಲಿಯಾದರೂ ಓದಿದ್ರೆ, ಬಹುಶಃ ಅರ್ಧದಷ್ಟು ಜನ ನಾಚಿಕೆಪಡುತ್ತಾರೆ ಅಥವಾ ಅದರಲ್ಲಿ ಏನು ಬರೆಯಲಾಗಿದೆ ಎಂಬ ಕುತೂಹಲದಿಂದ ಯಾರಿಗೂ ಕಾಣದಂತೆ ಓದುತ್ತಾರೆ. ಇಲ್ಲಿ ನಾವು ದೇಹದ ಅತ್ಯಂತ ಪ್ರಮುಖ ಭಾಗವಾದ ಸ್ತನದ ಬಗ್ಗೆ ತಿಳಿಯೋಣ, ಆದರೆ ಅದರ ಬಗ್ಗೆ ಮಾತನಾಡುವಾಗಲೂ, ಭಾರತದಲ್ಲಿ ಈಗಲೂ ಮುಜುಗರದ ಭಾವನೆ ಇದೆ.  

ಹುಡುಗಿಯರಿಗೆ ಇದು ಬಹಳ ಮುಖ್ಯವಾದ ವಿಷಯ. ನಮ್ಮ ಖಾಸಗಿ ಭಾಗಗಳ ಬಗ್ಗೆ ಮಾತನಾಡಲು ಅಥವಾ ಅವುಗಳ ಬಗ್ಗೆ ಚರ್ಚಿಸಲು ನಾವು ಹೆಚ್ಚಾಗಿ ನಾಚಿಕೆ ಪಡುತ್ತೇವೆ. ಬ್ರಾ ಸ್ಟ್ರಾಪ್ ನೋಡಿದರೂ ಸಹ, ಬ್ರಾ ಶೇಮಿಂಗ್ (Bra shaming) ಮಾಡಲಾಗುತ್ತೆ  ಏಕೆಂದರೆ ಇವು ದೇಹದ ಒಳ ಉಡುಪುಗಳು, ಅವು ಹೊರಗೆ ಕಾಣಬಾರದು ಎಂದು. ಇದು ನಾಚಿಕೆ ಪಡುವಂತ ವಿಷಯವಲ್ಲ ಇದನ್ನು ಆರೋಗ್ಯದ ಕಥೆ ಮತ್ತು ಅದಕ್ಕೆ ಅನುಗುಣವಾಗಿ ಇದನ್ನು ಚರ್ಚಿಸಬಹುದು. ಕೆಲವೊಮ್ಮೆ ಸ್ತನದ ಬಗ್ಗೆ ಅನೇಕ ತಪ್ಪುಗಳನ್ನು ಮಾಡುತ್ತೇವೆ, ಅವುಗಳ ಬಗ್ಗೆ ತಿಳಿಯೋಣ. 

Tap to resize

ಸ್ತನ ಗಾತ್ರದ(breast size) ಬಗ್ಗೆ ಚಿಂತಿಸಬೇಡಿ

ಸ್ತನಗಳು ವಿಭಿನ್ನ ಆಕಾರ ಮತ್ತು ಗಾತ್ರಗಳನ್ನು ಹೊಂದಿರಬಹುದು. ಒಂದು ಸ್ತನ ದೊಡ್ಡದಾಗಿರಬಹುದು ಮತ್ತು ಒಂದು ಚಿಕ್ಕದಾಗಿರಬಹುದು. ಡಾಕ್ಟರ್ ಪ್ರಕಾರ, ಅನೇಕ ಬಾರಿ ನಾವು ನಮ್ಮ ಸ್ತನಗಳ ಬಗ್ಗೆ ಎಷ್ಟು ಜಾಗೃತರಾಗುತ್ತೇವೆ ಅಂದ್ರೆ ಅವುಗಳ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ, ಆದರೆ ಇದನ್ನು ಮಾಡಬಾರದು. ಇದು ತಪ್ಪು ಮತ್ತು ಇದರಿಂದ ಸ್ತನದ ಆಕಾರ ಮತ್ತು ಗಾತ್ರದ ಬಗ್ಗೆ ಕೀಳು ಭಾವನೆ ಹೊಂದುವುದು ಸಹ ತಪ್ಪು. ಸ್ತನದ ಬಗ್ಗೆ ನೀವು ವಿಶ್ವಾಸ ಹೊಂದಿರಬೇಕು. 

ಪ್ರತಿ ತಿಂಗಳು ಸ್ತನ ಪರೀಕ್ಷೆ(Test) ಮಾಡೋದು ಅವಶ್ಯಕ

ಸ್ತನ ಪರೀಕ್ಷೆ (Breast Test)  ಬಹಳ ಮುಖ್ಯ ಮತ್ತು ಪ್ರತಿ ತಿಂಗಳು ಮಾಡಬೇಕು. ಯಾಕಂದ್ರೆ ಸ್ತನ ಕ್ಯಾನ್ಸರ್ ನ ಆರಂಭಿಕ ರೋಗ ಲಕ್ಷಣಗಳನ್ನು ಸ್ವಯಂ-ಸ್ತನ ಪರೀಕ್ಷೆ ಮೂಲಕ ಬಹಳ ಸುಲಭವಾಗಿ ಕಂಡು ಹಿಡಿಯಬಹುದು. ಸ್ತನದ ಭಾಗ, ಅಂಡರ್ ಆರ್ಮ್  ಮತ್ತು ಕಾಲರ್ ಬೋನ್ ಪರೀಕ್ಷಿಸುವುದು ಬಹಳ ಮುಖ್ಯ. ಏಕೆಂದರೆ ಸ್ತನದ ಸ್ನಾಯುಗಳು ಎಲ್ಲೇ ಇದ್ದರೂ, ಗಡ್ಡೆ, ಒಂದು ರೀತಿಯ ನೋವು, ಯಾವುದೇ ಸ್ರಾವ, ಇತ್ಯಾದಿಗಳು ಇರಬಹುದು.  

ಸರಿಯಾದ ಸೈಜ್ ನ  ಬ್ರಾ(Bra) ಧರಿಸೋದು ಬಹಳ ಮುಖ್ಯ

ಸರಿಯಾದ ಸೈಜ್ ನ ಬ್ರಾ ಧರಿಸದಿದ್ದರೆ, ಅದು ಸ್ತನಕ್ಕೆ ಸಾಕಷ್ಟು ಹಾನಿ ಉಂಟುಮಾಡಬಹುದು. ತುಂಬಾ ಸಡಿಲವಾದ ಬ್ರಾ ಅಥವಾ ತುಂಬಾ ಬಿಗಿಯಾದ ಬ್ರಾ ಎರಡೂ ಸರಿಯಲ್ಲ. ಇದು ಸ್ತನ ಸ್ನಾಯುಗಳಲ್ಲಿ ಸೆಳೆತಕ್ಕೆ ಕಾರಣವಾಗಬಹುದು. ಇದಲ್ಲದೆ, ಬ್ರಾವನ್ನು ಆಗಾಗ್ಗ ತೆಗೆಯುತ್ತ, ಸ್ತನವನ್ನು ಸ್ವಲ್ಪ ವಿಶ್ರಾಂತಿ ಪಡೆಯಲು ಬಿಡಿ. ಆಗ, ಸ್ತನಗಳು ಸಡಿಲವಾಗೋದಿಲ್ಲ, ಬ್ರಾಗಳನ್ನು ಧರಿಸದ ಕಾರಣ ಸ್ತನಗಳು ಸಡಿಲಗೊಳ್ಳುತ್ತವೆ ಎಂಬುದು ಅತಿದೊಡ್ಡ ಮಿಥ್ಯೆ.  

ಸ್ತನ ಲೈಟನಿಂಗ್ ಕ್ರೀಮ್ (Lightening cream) ಬಳಸಬೇಡಿ

ಸ್ತನದ ಬಣ್ಣ ಬದಲಾಯಿಸಲು ಲೈಟನಿಂಗ್ ಕ್ರೀಮ್ ಮಾರಾಟವಾಗುತ್ತಿವೆ. ಆದರೆ ಅವು ಸರಿಯಲ್ಲ ಮತ್ತು ಅವುಗಳ ಬಳಕೆಯು ನಿಮಗೆ ಅನೇಕ ರೀತಿಯಲ್ಲಿ ಹಾನಿ ಮಾಡಬಹುದು. ಸ್ತನ ಕ್ರೀಮ್ ಗಳು ಚರ್ಮಕ್ಕೆ ಒಳ್ಳೆಯದಲ್ಲದ ವಿವಿಧ ರಾಸಾಯನಿಕಗಳನ್ನು ಹೊಂದಿರುತ್ತವೆ.  

ಡಿಸ್ಚಾರ್ಜ್(DIscharge) ಇತ್ಯಾದಿಗಳು ನಡೆಯುತ್ತಿದ್ದರೆ ಏನು ಮಾಡಬೇಕು?

ನಿಮ್ಮ ಸ್ತನದಲ್ಲಿ ಸ್ರಾವ ಇತ್ಯಾದಿಗಳು ಇದ್ದರೆ, ಮೊಲೆ ತೊಟ್ಟುಗಳಲ್ಲಿ ಸಮಸ್ಯೆ ಇದ್ದರೆ, ಸ್ತನದಲ್ಲಿ ಒಂದು ರೀತಿಯ ನೋವು, ಸಾಫ್ಟ್ ನೆಸ್  ಇದ್ದರೆ, ಕೆಲವು ರೀತಿಯಲ್ಲಿ ಸ್ತನದ ಬಣ್ಣದಲ್ಲಿ ಬದಲಾವಣೆಯಾಗುತ್ತಿದ್ರೆ, ಆಗ ನಿಮಗೆ ವೈದ್ಯಕೀಯ ಸಹಾಯದ ಅಗತ್ಯವಿದೆ. ಅದನ್ನು ನಿರ್ಲಕ್ಷಿಸಬೇಡಿ, ಇದು ತುಂಬಾ ಅಪಾಯಕಾರಿ ಆಗಬಹುದು. ಸ್ತನ ಕ್ಯಾನ್ಸರ್‌ನಂತಹ ಯಾವುದೇ ಸ್ಥಿತಿ ಕಂಡು ಹಿಡಿಯಲು ವೈದ್ಯಕೀಯ ಪರೀಕ್ಷೆ ಅಗತ್ಯ.  

ಸ್ತನದಲ್ಲಿ ಯಾವುದೇ ಸಮಸ್ಯೆ ಇದ್ದರೆ ,ಅದನ್ನು ಮುಚ್ಚಿಡುವ ಬಗ್ಗೆ ಯೋಚನೆ ಮಾಡೋದೆ ಬೇಡ. ಖಂಡಿತವಾಗಿಯೂ ವೈದ್ಯರೊಂದಿಗೆ ಮಾತನಾಡಿ. ನೀವು ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿದ್ದರೆ, ಅದರ ಬಗ್ಗೆ ವೈದ್ಯರನ್ನು ಸಂಪರ್ಕಿಸಿ. ನಿಮಗೆ ಪರಿಹಾರ ಸಿಗುತ್ತದೆ.

Latest Videos

click me!