ಗರ್ಭಿಣಿಯರು ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅನಾರೋಗ್ಯಕರ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯನ್ನು ನಿಲ್ಲಿಸುತ್ತವೆ. ಅಂಥಾ ಕೆಲವು ಅಭ್ಯಾಸಗಳ ಬಗ್ಗೆ ತಿಳಿಯಿರಿ.
ಈ ಅಭ್ಯಾಸಗಳು ಮಗುವಿನ ಬೆಳವಣಿಗೆಯನ್ನು ನಿಲ್ಲಿಸುತ್ತವೆ! ಗರ್ಭಧಾರಣೆಯು(Pregnancy) ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಒಂದು ವಿಶೇಷ ಭಾವನೆಯಾಗಿದೆ, ಇದನ್ನು ಒಬ್ಬ ಮಹಿಳೆ ಮಾತ್ರ ಅನುಭವಿಸಬಹುದು, ಬೇರೆ ಯಾವುದೇ ವ್ಯಕ್ತಿಯಲ್ಲ. ಗರ್ಭಾವಸ್ಥೆಯಲ್ಲಿ, ಮಹಿಳೆ ಯಾವುದೇ ರೂಪದಲ್ಲಿರಲಿ, ತನ್ನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದಕ್ಕಾಗಿ ಏನೇನು ಮಾಡಬೇಕು ತಿಳಿಯಿರಿ.
27
ಗರ್ಭಿಣಿಯರು ತಮ್ಮ ಆಹಾರದ(Food) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಹಾಗೇ ಅವರ ಜೀವನದಿಂದ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ತೆಗೆದುಹಾಕಬೇಕು. ಈ ಅನಾರೋಗ್ಯಕರ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತೆ, ಇದರಿಂದಾಗಿ ಮಗುವಿನ ಬೆಳವಣಿಗೆ ನಿಲ್ಲುತ್ತೆ. ನಿಮ್ಮ ಮನೆಯಲ್ಲಿರುವ ಮಹಿಳೆ ಗರ್ಭಿಣಿಯಾಗಿದ್ದರೆ ಅಥವಾ ಗರ್ಭಿಣಿಯಾಗಲಿದ್ದರೆ, ನೀವು ಕೆಲವು ಅಭ್ಯಾಸಗಳನ್ನು ಇವತ್ತೇ ಬಿಡಬೇಕು. ಈ ಅಭ್ಯಾಸಗಳು ಯಾವುವು ಎಂದು ತಿಳಿದುಕೊಳ್ಳೋಣ.
37
ಅಲ್ಕೋಹಾಲ್(Alcohol) ಕುಡಿಯೋದು
ನೀವು ಮೋಜಿಗಾಗಿ ಅಲ್ಕೋಹಾಲ್ ಕುಡಿಯಬಹುದು, ಆದರೆ ಇದು ನಿಮ್ಮ ಗರ್ಭದಲ್ಲಿರುವ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತೆ. ಗರ್ಭಾವಸ್ಥೆಯಲ್ಲಿ ಅಲ್ಕೋಹಾಲ್ ಸೇವನೆಯು ಭ್ರೂಣದ ಮೇಲೆ ಪರಿಣಾಮ ಬೀರುತ್ತೆ, ಇದರಿಂದಾಗಿ ಮಗುವಿನ ಮಾನಸಿಕ ಬೆಳವಣಿಗೆ ನಿಲ್ಲುತ್ತೆ ಮತ್ತು ಗರ್ಭಪಾತದ ಅಪಾಯ ಹೆಚ್ಚಿಸುತ್ತೆ.
47
ನಿಕೋಟಿನ್(Nicotin) ಸೇವನೆ
ಗರ್ಭಾವಸ್ಥೆಯಲ್ಲಿ ಸಿಗರೇಟ್ ಸೇವನೆಯು ನಿಮ್ಮ ಮಗುವಿಗೆ ಹಾನಿಕಾರಕವಾಗಿದೆ. ಇದು ಅಕಾಲಿಕ ಜನನ, ಕಡಿಮೆ ತೂಕ, ಅಸ್ತಮಾ ಮತ್ತು ಶಿಶು ಮರಣ ಸಿಂಡ್ರೋಮ್ನಂತಹ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ನೀವು ಸೆಕೆಂಡ್ ಹ್ಯಾಂಡ್ ಸ್ಮೋಕ್ ಸಹ ತಪ್ಪಿಸಬೇಕು.
57
ಕಾಫಿ(Coffee) ಸೇವನೆ
ನೀವು ತಾಯಿಯಾಗಲಿದ್ದರೆ, ನಿಮ್ಮ ಕೆಫೀನ್ ಸೇವನೆಯನ್ನು ಸರಿಪಡಿಸಬೇಕು ಏಕೆಂದರೆ ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತೆ. ಅತಿಯಾಗಿ ಕಾಫಿ ಕುಡಿಯುವ ಮಹಿಳೆಯರು ಅಧಿಕ ರಕ್ತದೊತ್ತಡ ಅನುಭವಿಸುವ ಸಾಧ್ಯತೆ ಹೆಚ್ಚು, ಇದು ಅವರ ಆರೋಗ್ಯಕ್ಕೆ ಹಾನಿ ಮಾಡುತ್ತೆ .
67
ಮಾದಕ ದ್ರವ್ಯಗಳ (Drugs)ಸೇವನೆ
ಗರ್ಭಾವಸ್ಥೆಯಲ್ಲಿ ಮಾದಕ ದ್ರವ್ಯಗಳ ದುರುಪಯೋಗವು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತೆ. ಇದು ಜ್ಞಾಪಕ ಶಕ್ತಿ, ಕಳಪೆ ಬೆಳವಣಿಗೆ, ನಡವಳಿಕೆಯ ಸಮಸ್ಯೆ ಮತ್ತು ಜನನ ದೋಷಗಳಿಗೆ ಕಾರಣವಾಗಬಹುದು. ಈ ಮಾದಕ ದ್ರವ್ಯಗಳ ಸೇವನೆಯು ಭ್ರೂಣವನ್ನು ಹಾನಿಗೊಳಿಸುತ್ತೆ, ಈ ಕಾರಣದಿಂದಾಗಿ ಮಿಸ್ ಕ್ಯಾರೇಜ್ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.
77
ಕೆಟ್ಟ ಆಹಾರ ಪದ್ಧತಿ
ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ, ಸಮತೋಲಿತ ಆಹಾರ ತೆಗೆದುಕೊಳ್ಳಲು ಸೂಚಿಸಲಾಗುತ್ತೆ ಮತ್ತು ಗರ್ಭಾವಸ್ಥೆಯಲ್ಲಿ ಹಸಿ ಅಥವಾ ಬೇಯಿಸದ ಮಾಂಸ(Meat), ಮೀನುಗಳಂತಹ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಇದಲ್ಲದೆ, ಸಂಸ್ಕರಿಸಿದ ಮಾಂಸ, ಚೀಸ್, ಕಚ್ಚಾ ಮೊಟ್ಟೆ, ಸಕ್ಕರೆ ಆಹಾರಗಳಿಂದ ದೂರವಿರೋದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.