ಜಾಹೀರಾತು ಪಡೆಯದೇ ಇದ್ರೂ ಇನ್​ಸ್ಟಾದಿಂದ ತಿಂಗಳಿಗೆ 1 ಕೋಟಿ ಗಳಿಸ್ತಾಳೆ ಈಕೆ- ಹೇಗೆ ನೋಡಿ

Published : Jun 11, 2026, 09:44 PM IST

ಕೇರಳ ಮೂಲದ ಅಶ್ವಿನಿ ಎಂಬ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಯಾವುದೇ ಜಾಹೀರಾತುಗಳಿಲ್ಲದೆ ತಿಂಗಳಿಗೆ ಕೋಟಿಗೂ ಅಧಿಕ ಸಂಪಾದಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನ 'ಪೇಯ್ಡ್ ಸಬ್‌ಸ್ಕ್ರಿಪ್ಶನ್' ವೈಶಿಷ್ಟ್ಯವನ್ನು ಬಳಸಿಕೊಂಡು, ತನ್ನ ವಿಶೇಷ ಕಂಟೆಂಟ್ ಮೂಲಕ ಈಕೆ ಭಾರಿ ಹಣ ಗಳಿಸುತ್ತಿದ್ದಾಳೆ.

PREV
17
ಸೋಷಿಯಲ್ ಮೀಡಿಯಾ ಹವಾ

ಆಫೀಸ್​ಗಳಲ್ಲಿನ ಉದ್ಯೋಗವೂ ಬೇಡ, ಶಿಕ್ಷಣವೂ ಬೇಡ. ಹೀಗಿದ್ದರೂ ಲಕ್ಷ ಲಕ್ಷ ದುಡಿಯುವ ಹಲವಾರು ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್ಸ್​ ಇದ್ದಾರೆ. ಸೆಲೆಬ್ರಿಟಿಗಳಾದರೆ ಬಿಡಿ, ಅವರಿಗೆ ಬೇಡ ಬೇಡ ಎಂದರೂ ಫಾಲೋವರ್ಸ್​ ಬರ್ತಾರೆ, ಪ್ರಮೋಷನಲ್​ ಜಾಹೀರಾತು ಕೂಡ ಬಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸ್ತಾರೆ.

27
ಜಾಹೀರಾತು ತೆಗೆದುಕೊಳ್ಳದೇ ಕೋಟಿ ಗಳಿಕೆ

ಆದರೆ ಪ್ರಮೋಷನ್​ ಆ್ಯಡೂ ತೆಗೆದುಕೊಳ್ಳದ ಇಲ್ಲೊಬ್ಬ ಯುವತಿ ತಿಂಗಳಿಗೆ 1 ಕೋಟಿಗೂ ಅಧಿಕ ರೂಪಾಯಿ ಗಳಿಸ್ತಾಳೆ ಎಂದ್ರೆ ನಂಬ್ತಿರಾ? ನಂಬೋದೇನು ನಂಬಲೇಬೇಕು. ಏಕೆಂದ್ರೆ ಇದೇ ಇಂದಿನ ರಿಯಾಲಿಟಿ. ಇಂಥವರಿಗೇ ಇರೋ ಕಾಲವಿದು!

37
ಕೇರಳದ ಸೆ* ಬಾಂಬ್​

ಈಕೆ ಹೆಸರು ಅಶ್ವಿನಿ. ಕೇರಳದವಳು. "ಪರ್ಪಲ್ ಹ್ಯಾಲ್ಸಿಯಾನ್" ಎಂಬ ಹೆಸರಿನಲ್ಲಿ ಇನ್​ಸ್ಟಾಗ್ರಾಮ್​ ಕ್ರಿಯೇಟ್​ ಮಾಡಿದ್ದಾಳೆ. ಇಲ್ಲಿ ಆಕೆ ಹಾಕುವ ದೃಶ್ಯಗಳೆಲ್ಲವೂ ಹಸಿಬಿಸಿಯದ್ದೇ ಆಗಿರುತ್ತದೆ. ಇದೇ ರೀತಿ ಹಸಿಬಿಸಿ ದೃಶ್ಯ ಹಾಕಿಯೇ ಕನ್ನಡದಲ್ಲಿಯೂ ಒಂದಿಷ್ಟು ಹೆಣ್ಣುಮಕ್ಕಳು ಲಕ್ಷಾಂತರ ರೂಪಾಯಿ ಗಳಿಸ್ತಾ ಇರೋದು ನಿಮ್ಮ ಕಣ್ಣ ಮುಂದೆ ಇದಾಗಲೇ ಮುಂದೆ ಇದಾಗಲೇ ಬಂದಿರಬಹುದು ಬಿಡಿ. ಆದರೆ, ಹಸಿಬಿಸಿ ದೃಶ್ಯದ ವಿಡಿಯೋ ಹಾಕಿದಾಕ್ಷಣ ಲಕ್ಷ ಲಕ್ಷ ಗಳಿಸ್ತಾರೆ ಅನ್ನೋದು ತಪ್ಪೇ. ಅಲ್ಲೂ ಅವರಿಗೆ ಅದೃಷ್ಟ ಇರಬೇಕು ಎನ್ನಿ.

47
ಕೋಟಿ ಕೋಟಿ ದುಡಿಯೋದು ಹೇಗೆ?

ಅದೇನೇ ಇದ್ರೂ ಈ ಅಶ್ವಿನಿ ಮಾತ್ರ ಪ್ರತಿ ತಿಂಗಳು ಕೋಟಿಕೋಟಿ ಲೆಕ್ಕದಲ್ಲಿ ದುಡೀತಿದ್ದಾಳೆ. ಜಾಹೀರಾತನ್ನೂ ಪಡೆಯದೇ ಈಕೆ ಮಾಡೋದಾದ್ರೂ ಏನು ಎನ್ನೋದು ಹಲವರ ಪ್ರಶ್ನೆ.

57
Paid subsription

ಅದಕ್ಕೆ ಉತ್ತರ, ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಪಾವತಿಸಿದ ಚಂದಾದಾರಿಕೆ ಅರ್ಥಾತ್​ Paid subsription ವೈಶಿಷ್ಟ್ಯವನ್ನು ಬಳಸಿಕೊಂಡಿದ್ದಾಳೆ. ಸಾರ್ವಜನಿಕವಾಗಿಯೇ ಇಷ್ಟೊಂದು ಹಸಿಬಿಸಿ ಹಾಕೋಳು ಇನ್ನು ದುಡ್ಡು ಕೊಟ್ಟರೆ ಯಾವ ವಿಡಿಯೋ ಹಾಕಬಹುದು ಎಂದು ಕಲ್ಪನೆ ಮಾಡಿಕೊಂಡೇ ಬಾಯಲ್ಲಿ ನೀರು ಸುರಿಸುತ್ತಾ ಸಹಸ್ರಾರು ಮಂದಿ Paid subsriptionಗೆ ಚಂದಾದಾರರಾಗಿದ್ದಾರೆ. ಅಲ್ಲಿ ಅವಳು ಯಾವ ರೀತಿಯ ವಿಡಿಯೋ ಮಾಡಿದ್ದಾಳೋ ಆ ಚಂದಾದಾರರಿಗೆ ಕೇಳಿದ್ರೆ ತಿಳಿಯಬಹುದು.

67
ಜೊಲ್ಲು ಸುರಿಸುವವರ ಕೃಪೆ

ಒಟ್ಟಿನಲ್ಲಿ ಅವಳ ಅಂದ ಚೆಂದವನ್ನು ದುಡ್ಡು ಕೊಟ್ಟು ನೋಡುವ ದುಡ್ಡು ಹೆಚ್ಚಾದವರು ಇರೋದ್ರಿಂದ, ಅವರ ಕೃಪೆಯಿಂದ ಅಶ್ವಿನಿ ಕೋಟಿ ಕೋಟಿಗಳಲ್ಲಿ ದುಡಿಯುತ್ತಿದ್ದಾರೆ. ನಿಮ್ಮ ಪ್ರಮೋಷನ್​ ಆ್ಯಡೂ ಬೇಡ, ಯಾವ ಜಾಹೀರಾತೂ ಬೇಡ, ಲೈಕ್ಸ್​,ಕಮೆಂಟ್ಸ್​ಗಳೂ ಬೇಡ ಎನ್ನೋ ಈಕೆ ಪೇಯ್ಡ್​ ಸಬ್​ಸ್ಕ್ರಿಪ್ಷನ್​ನಿಂದ ಭರ್ಜರಿ ದುಡಿಮೆ ಮಾಡುತ್ತಿದ್ದಾಳೆ.

77
ಇವಳ ಅವತಾರಕ್ಕೆ ಹಣ ಸುರೀತಾರೆ!

ಈಕೆಯ ಅವತಾರ ದುಡ್ಡು ಕೊಟ್ಟು ನೋಡಲು 400 ರೂಪಾಯಿ ಪಾವತಿಸಬೇಕಂತೆ. ಅವಳಿಗೆ ಇದಾಗಲೇ 25 ಸಾವಿರ ಚಂದಾದಾರರು ಇದ್ದಾರೆ. ತಿಂಗಳಿಗೆ 400, 25 ಸಾವಿರ ಮಂದಿ...ಎಲ್ಲಾ ಲೆಕ್ಕಾಚಾರ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಮಾಡಿದ್ರೆ, ಜನರ ಮನಸ್ಥಿತಿ ಹೇಗಿದೆ ಎನ್ನೋದು ತಿಳಿಯುತ್ತದೆ. ಪುಕ್ಕಟೆಯಾಗಿ ಇಂಟರ್​ನೆಟ್​ನಲ್ಲಿ ಏನು ಬೇಕಾದ್ರೂ ನೋಡೋ ಜನ, ಇನ್ನು ಇವಳಿಗಾಗಿ ದುಡ್ಡು ಕೊಡ್ತಾ ಇದ್ದಾರೆ ಎಂದ್ರೆ....?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories