ದಕ್ಷಿಣ ಭಾರತದಲ್ಲಿ ಪತಿಯಿಲ್ದೆ ಬದುಕುತ್ತಿರುವ ಪತ್ನಿಯರ ಸಂಖ್ಯೆಯಲ್ಲಿ ಹೆಚ್ಚಳ, ಕಾರಣ ಶಾಕಿಂಗ್

Published : Jun 05, 2026, 12:59 PM IST

ಭಾರತದಲ್ಲಿ ಮಹಿಳೆಯರ ಸಾಮಾಜಿಕ ಮತ್ತು ಕೌಟುಂಬಿಕ ಸ್ಥಿತಿ ಬಗ್ಗೆ ಇತ್ತೀಚಿಗೆ ಬಿಡುಗಡೆಯಾದ ವರದಿ ಆಘಾತಕಾರಿ ವಿಷ್ಯ ಹೊರ ಹಾಕಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವಿಧವೆಯರು, ವಿಚ್ಛೇದಿತರು, ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 

PREV
16
ಅಚ್ಚರಿ ವರದಿ

ಮಾದರಿ ನೋಂದಣಿ ವ್ಯವಸ್ಥೆ (SRS) 2024 ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಸಂಗಾತಿಯಿಲ್ಲದೆ ವಾಸಿಸುವ ಮಹಿಳೆಯರ ಶೇಕಡಾವಾರು ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ತಮಿಳುನಾಡು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದ್ರ ನಂತ್ರ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ಸ್ಥಾನ ಹಂಚಿಕೊಂಡಿವೆ.

26
ತಮಿಳುನಾಡಿನ ಸಂಖ್ಯೆ ಎಷ್ಟಿದೆ?

ವರದಿ ಪ್ರಕಾರ, ತಮಿಳುನಾಡಿನಲ್ಲಿ ಗಂಡನಿಲ್ಲದೆ ವಾಸಿಸುವ ಮಹಿಳೆಯರ ಶೇಕಡಾವಾರು ಪ್ರಮಾಣ 11.6 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇಕಡಾ 5.4 ಕ್ಕಿಂತ ಎರಡು ಪಟ್ಟು ಹೆಚ್ಚು. ಕೇರಳವು ಶೇಕಡಾ 10.4 ರೊಂದಿಗೆ ಎರಡನೇ ಸ್ಥಾನದಲ್ಲಿದೆ.

36
ಮಹಿಳೆಯರಿಗೆ ದೀರ್ಘಾಯಸ್ಸು

ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರ ಜೀವಿತಾವಧಿ ಹೆಚ್ಚು. ದಕ್ಷಿಣ ಭಾರತದಲ್ಲಿ, ಮಹಿಳೆಯರು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಬಹುತೇಕ ಮಹಿಳೆಯರು ಗಂಡನಿಗಿಂತ ಹೆಚ್ಚು ವರ್ಷ ಹೆಚ್ಚಿಗೆ ಬದುಕ್ತಾರೆ. ವಿಶೇಷವಾಗಿ ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚು. ಕೆಲ್ಸ ಮಾಡುವ ವಯಸ್ಸಿನಲ್ಲೇ ಅನೇಕ ಪುರುಷರು ಸಾವನ್ನಪ್ಪುತ್ತಿದ್ದಾರೆ. ಪತ್ನಿಗಿಂತ ಪತಿ ಮೊದಲು ಸಾವನ್ನಪ್ಪಿದಾಗ ವಿಧವೆಯರ ಸಂಖ್ಯೆ ಹೆಚ್ಚಾಗೋದು ಸಹಜ. ಪುರುಷರಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಮರಣ ಪ್ರಮಾಣವು ಮಹಿಳೆಯರ ವೈವಾಹಿಕ ಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

46
ಲೇಟ್ ಮದುವೆ

ದಕ್ಷಿಣ ಭಾರತದಲ್ಲಿ ಮಹಿಳೆಯರ ಸರಾಸರಿ ಮದುವೆ ವಯಸ್ಸು ದೇಶದ ಇತರ ಹಲವು ಭಾಗಗಳಿಗಿಂತ ಹೆಚ್ಚಾಗಿದೆ. ಕೇರಳದಲ್ಲಿ ಮಹಿಳೆಯರ ಸರಾಸರಿ ಮದುವೆ ವಯಸ್ಸು 24.5 ವರ್ಷಗಳು, ಆದರೆ ರಾಷ್ಟ್ರೀಯ ಸರಾಸರಿ 23.1 ವರ್ಷಗಳು. ತಡವಾಗಿ ಮದುವೆ ಮಹಿಳೆಯರ ಜೀವನ ಚಕ್ರದ ಮೇಲೂ ಪರಿಣಾಮ ಬೀರುತ್ತದೆ.

56
ವೇಗವಾಗಿ ಬೆಳೆಯುತ್ತಿರುವ ಹಿರಿಯರ ಜನಸಂಖ್ಯೆ

ದಕ್ಷಿಣ ಭಾರತದ ರಾಜ್ಯಗಳು ದೇಶದಲ್ಲಿ ಅತಿ ಹೆಚ್ಚು ವೃದ್ಧರ ಜನಸಂಖ್ಯೆಯನ್ನು ಹೊಂದಿವೆ. ಕೇರಳ ಮತ್ತು ತಮಿಳುನಾಡಿನಲ್ಲಿ, ವೃದ್ಧ ಪುರುಷರಿಗಿಂತ ವೃದ್ಧ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.

66
ಉತ್ತರ ಭಾರತದಲ್ಲಿ ಚಿತ್ರ ವಿಭಿನ್ನ

ಮತ್ತೊಂದೆಡೆ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಗಂಡನಿಲ್ಲದೆ ಬದುಕುತ್ತಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ. ಬಿಹಾರದಲ್ಲಿ, ಈ ಅಂಕಿ ಅಂಶವು ಕೇವಲ ಶೇಕಡಾ 2 ರಷ್ಟಿದೆ. ಇದು ತಮಿಳುನಾಡಿಗಿಂತ ಐದು ಪಟ್ಟು ಕಡಿಮೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories