ಪ್ರೆಗ್ನೆನ್ಸಿಯಲ್ಲಿ ಮಧುಮೇಹ, ಹುಷಾರಾಗಿದ್ದರೆ ನಿಯಂತ್ರಣ ಸುಲಭ

First Published | Jun 2, 2022, 5:49 PM IST

ಪ್ರೆಗ್ನೆನ್ಸಿಯಲ್ಲಿ, ಮಹಿಳೆಯರಿಗೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ಕೆಲವು ಮಹಿಳೆಯರ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾನೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ಮಧುಮೇಹವಿರುತ್ತದೆ. ಇದನ್ನು ಗೆಸ್ಟೇಷನಲ್ ಡಯಾಬಿಟಿಸ್ ಎನ್ನುತ್ತಾರೆ. ಈ ಸಮಸ್ಯೆಯನ್ನು ನಿಯಂತ್ರಿಸೋದು ಹೇಗೆ ಅನ್ನೋದನ್ನು ನಾವಿಲ್ಲಿ ಹೇಳುತ್ತೇವೆ.  

ಹೆರಿಗೆಯ ನಂತರ ಈ ಮಧುಮೇಹವು (Diabetes) ದೂರವಾಗುತ್ತದೆ ನಿಜ. ಆದರೆ ಗರ್ಭಧಾರಣೆಯ ಸಮಯದಲ್ಲಿ ಗರ್ಭದಲ್ಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ಬಾರಿ ಮಧುಮೇಹವು ಅಕಾಲಿಕ ಶಿಶು ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗೆ ಆದಂತಹ ಸಂದರ್ಭದಲ್ಲಿ ನೀವು ಹೆಚ್ಚಿದ ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸಬೇಕು. ಇವುಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ನೀವು ಮಧುಮೇಹವನ್ನು ನಿಯಂತ್ರಿಸಬಹುದು.

ಸಲಾಡ್ ಗಳು -(Salad)

ಸಲಾಡ್‌ಗಳನ್ನು ತಿನ್ನುವ ಮೂಲಕ ಗ್ಲೂಕೋಸ್ (Glucose) ಮಟ್ಟವನ್ನು ಕಡಿಮೆ ಮಾಡಲು ಸಾಧ್ಯ. ಸಕ್ಕರೆಯನ್ನು ನಿಯಂತ್ರಿಸಲು ನೀವು ಆಹಾರದಲ್ಲಿ ಹೆಚ್ಚು ಸಲಾಡ್ ಗಳನ್ನು ಸೇರಿಸಬೇಕು. ಇದು ಗ್ಲೈಸೆಮಿಕ್ ಸೂಚ್ಯಂಕವನ್ನು ನಿಧಾನವಾಗಿರಿಸುತ್ತದೆ ಮತ್ತು ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ನೀವು ವಿವಿಧ ರೀತಿಯ ಹಣ್ಣುಗಳ, ತರಕಾರಿಗಳ ಸಲಾಡ್ ಸೇವಿಸಿ. 

Tap to resize

ಮೊಟ್ಟೆ  -(Egg)

ಮೊಟ್ಟೆ (Egg) ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆರೋಗ್ಯಕ್ಕೆ (Healt) ಉತ್ತಮವಾದ ಆಹಾರ. ಮೊಟ್ಟೆ ತಿನ್ನುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಇದು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. 

ರಕ್ತದಲ್ಲಿನ ಸಕ್ಕರೆ (Blood sugar) ಹೆಚ್ಚಾದಾಗ, ಪ್ರತಿದಿನ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು.  ಮೊಟ್ಟೆಗಳನ್ನು ತಿಂಡಿಯಾಗಿ ಮುಂಜಾನೆಯ ಉಪಹಾರದಲ್ಲಿ ತಿನ್ನಬಹುದು. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ. ಒಟ್ಟಲ್ಲಿ ಮೊಟ್ಟೆ ಸೇವನೆಯಿಂದ ಸಂಪೂರ್ಣ ಪೌಷ್ಟಿಕ ಆಹಾರ ನಿಮಗೆ ಸಿಗುತ್ತೆ. 

ಬಾದಾಮಿ -(Almond)

ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ನಿಯಂತ್ರಿಸಲು, ಬಾದಾಮಿಯನ್ನು ಆಹಾರದಲ್ಲಿ ಸೇರಿಸಬೇಕು. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಮಗು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ಹಸಿವಾದಾಗ ಅಥವಾ ಏನಾದರು ತಿನ್ನುವ ಬಯಕೆ ಉಂಟಾದರೆ, 10 ಬಾದಾಮಿಗಳನ್ನು ತಿನ್ನಬೇಕು. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಸಹ ನಿಯಂತ್ರಣದಲ್ಲಿರುತ್ತದೆ. 

ಚಿಯಾ ಸೀಡ್ಸ್ ಗಳು - (Chia seeds)

ಗರ್ಭಾವಸ್ಥೆಯಲ್ಲಿ ಸಾಕಷ್ಟು ನಾರಿನಂಶ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ  ಕೂಡ ಇದು ತುಂಬಾನೆ ಒಳ್ಳೆಯದು. ಚಿಯಾ ಬೀಜಗಳನ್ನು ತಿನ್ನುವುದು ಮಧುಮೇಹವನ್ನು ನಿಯಂತ್ರಿಸುತ್ತದೆ. ಇದು ಸಾಕಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಬೇಗ ಹಸಿವಾಗೋದಿಲ್ಲ. ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.
 

ಮೊಸರು- (Curd)

ಗರ್ಭಿಣಿಯರು ತಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಬೇಕು. ಮೊಸರಿನಿಂದ ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಮೊಸರು ಪ್ರೋ-ಬಯೋಟಿಕ್ಸ್ ಅನ್ನು ಹೊಂದಿರುತ್ತದೆ, ಇದು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೊಸರು ಸೇವಿಸೋದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. 

Latest Videos

click me!