ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಂಡು ಕುಳಿತುಕೊಳ್ಳೋದು ರಕ್ತದೊತ್ತಡವನ್ನು(Blood pressure) ಹೆಚ್ಚಿಸುತ್ತೆ ಮತ್ತು ರಕ್ತದ ಹರಿವನ್ನು ಸಹ ಅಡ್ಡಿಪಡಿಸಬಹುದು ಎಂದು ಹೇಳಲಾಗುತ್ತೆ. ಅನೇಕ ಜನರು ಆಹಾರ ತಿನ್ನುವಾಗ, ಆಫೀಸ್ ನಲ್ಲಿ ಕೆಲಸ ಮಾಡುವಾಗ ತಮ್ಮ ಕಾಲುಗಳನ್ನು ಅಡ್ಡವಾಗಿ ಅಂದರೆ ಕ್ರಾಸ್ ಲೆಗ್ ಮಾಡಿ ಕುಳಿತುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ ಮತ್ತು ಅವರು ಗರ್ಭಾವಸ್ಥೆಯಲ್ಲಿಯೂ ಸಹ ಈ ಅಭ್ಯಾಸವನ್ನು ಮುಂದುವರೆಸುತ್ತಾರೆ. ಆದ್ರೆ ಇದು ಸರಿಯಲ್ಲ.
ಕುಳಿತುಕೊಳ್ಳುವ ಸರಿಯಾದ ಭಂಗಿಯು ಸ್ನಾಯುಗಳ ಕೆಲಸವನ್ನು ಸುಧಾರಿಸುತ್ತೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತೆ, ಗಮನ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಲೇಬರ್ ಗೆ ಸಹಾಯ ಮಾಡುತ್ತೆ. ಅದಕ್ಕಾಗಿ ಗರ್ಭಿಣಿಯರು ತಮ್ಮ ಲೈಫ್ ಸ್ಟೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಮತ್ತು ಸ್ಟ್ರೆಚಿಂಗ್(Stretching), ವಾಕಿಂಗ್ ಮತ್ತು ನೇರವಾಗಿ ಕುಳಿತುಕೊಳ್ಳುವ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು.
ನೀವೂ ಗರ್ಭಿಣಿಯಾಗಿದ್ದರೆ(Pregnant) ಮತ್ತು ಕಾಲಿನ ಮೇಲೆ ಕಾಲನ್ನು ಇಟ್ಟುಕೊಂಡು ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದರೆ, ಹಾಗೆ ಮಾಡೋದು ಸರಿಯೇ ಅಥವಾ ಅಲ್ಲವೇ ಎಂದು ಇಲ್ಲಿ ನೀವು ತಿಳಿದುಕೊಳ್ಳಬಹುದು. ಇದರೊಂದಿಗೆ, ಗರ್ಭಾವಸ್ಥೆಯಲ್ಲಿ ಮಲಗಲು ಯಾವ ಭಂಗಿ ಸುರಕ್ಷಿತ ಅನ್ನೋದನ್ನು ಸಹ ತಿಳಿಯಿರಿ.
ಗರ್ಭಾವಸ್ಥೆಯಲ್ಲಿ ಕಾಲುಗಳನ್ನು ಕ್ರಾಸಾಗಿಡೋದು ಸರಿಯೇ?
ಪ್ರತಿಯೊಬ್ಬ ಗರ್ಭಿಣಿ ಮಹಿಳೆಯೂ ಪ್ರತಿಯೊಂದು ಸಣ್ಣ ವಿಷಯವನ್ನು ನೋಡಿಕೊಳ್ಳುತ್ತಾಳೆ. ಟೇಲರ್ ಪೊಸಿಷನಲ್ಲಿ ಕುಳಿತುಕೊಳ್ಳೋದು ಹೆರಿಗೆಯ ಸಮಯದಲ್ಲಿ ಸೊಂಟದ ಭಾಗವನ್ನು ತೆರೆಯಲು ಮತ್ತು ಮಗು ಆರಾಮವಾಗಿರಲು ಸಹಾಯ ಮಾಡುತ್ತೆ ಮತ್ತು ಗರ್ಭಿಣಿ ಮಹಿಳೆ ಹೆರಿಗೆಗೆ ಸಿದ್ಧಳಾಗಲು ನೆರವಾಗುತ್ತೆ. ಅದಕ್ಕಾಗಿಯೇ ಕೆಲವು ಮಹಿಳೆಯರು ಮನೆಕೆಲಸ ಮಾಡುವಾಗ, ಪೂಜೆ ಮಾಡುವಾಗ ಯೋಗ ಮತ್ತು ಧ್ಯಾನ(Meditation) ಮಾಡುವಾಗ ಈ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ.
ವೈದ್ಯರ ಅಭಿಪ್ರಾಯ
ಗರ್ಭಾವಸ್ಥೆಯಲ್ಲಿ ಸ್ಕ್ವ್ಯಾಟ್ ಭಂಗಿಯಲ್ಲಿ ಕುಳಿತುಕೊಳ್ಳೋದರಿಂದ ಪೆಲ್ವಿಕ್ ಸ್ನಾಯುಗಳನ್ನು ಬಲಪಡಿಸುತ್ತೆ, ಇದು ಹೆರಿಗೆಗೆ (Labour)ಸಹಾಯ ಮಾಡುತ್ತೆ ಎಂದು ಹೇಳುತ್ತಾರೆ. ಕೆಲವೇ ತಿಂಗಳುಗಳಲ್ಲಿ ಹೆರಿಗೆ ಆಗಲಿರುವ ಮಹಿಳೆಯರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಸಲಹೆ ನೀಡಲಾಗುತ್ತೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ.
ಯಾರು ಹಾಗೆ ಕುಳಿತುಕೊಳ್ಳಬಾರದು?
ಪಾದಗಳನ್ನು ಅಡ್ಡವಾಗಿಟ್ಟುಕೊಂಡು ನೆಲದ ಮೇಲೆ ಕುಳಿತುಕೊಳ್ಳೋದರಿಂದ ಅನೇಕ ಪ್ರಯೋಜನಗಳಿವೆ, ಆದರೆ ಕೆಲವು ಗರ್ಭಿಣಿಯರಿಗೆ ಫಿಸಿಯೋಥೆರಪಿಸ್ಟ್ ಗಳು(Physiotherapist) ನೆಲದ ಮೇಲೆ ಕುಳಿತುಕೊಳ್ಳದಂತೆ ಸಲಹೆ ನೀಡಲಾಗುತ್ತೆ. ನಿಮಗೆ ಪೆಲ್ವಿಕ್ ಸುತ್ತಳತೆಯ ನೋವು ಇದ್ದರೆ ನೀವು ಈ ಭಂಗಿಯಲ್ಲಿ ಕುಳಿತುಕೊಳ್ಳೋದನ್ನು ತಪ್ಪಿಸಬೇಕು.
ಕಾಲುಗಳನ್ನು ಬಹಳ ಹೊತ್ತು ಅಡ್ಡವಾಗಿ ಇಟ್ಟುಕೊಂಡು ಕುಳಿತುಕೊಳ್ಳೋದು ಕಾಲು ಮತ್ತು ಪಾದಗಳ ಮೇಲೆ ಒತ್ತಡವನ್ನು ಹಾಕುತ್ತೆ ಮತ್ತು ರಕ್ತದ ಹರಿವು ನಿಲ್ಲಿಸುತ್ತೆ, ಇದು ಊತ(Swelling)ಅಥವಾ ರಕ್ತನಾಳಗಳಲ್ಲಿ ನೋವಿಗೆ ಕಾರಣವಾಗುತ್ತೆ. ಕೆಲವು ಮಹಿಳೆಯರು ಯಾವುದೇ ಭಂಗಿಯಲ್ಲಿ ದೀರ್ಘಕಾಲ ಕುಳಿತಾಗ ಬೆನ್ನುನೋವು ಉಂಟಾಗುತ್ತೆ.
ಭಾರತೀಯ ಶೈಲಿಯಲ್ಲಿ ಕೆಳಗೆ ಕುಳಿತುಕೊಳ್ಳುವುದು ತುಂಬಾ ಆರಾಮದಾಯಕವಾಗಿದೆ ಮತ್ತು ಇದು ರಕ್ತದ(Blood) ಹರಿವನ್ನು ಸುಧಾರಿಸುತ್ತೆ. ಇದು ತೊಡೆಗಳ ಸ್ನಾಯುಗಳನ್ನು ಹಿಗ್ಗಿಸುತ್ತೆ ಮತ್ತು ಸಾಮಾನ್ಯ ಹೆರಿಗೆಗೆ ಸಹಾಯ ಮಾಡುತ್ತೆ. ಆದುದರಿಂದ ಇನ್ನು ಮುಂದೆ ಕೆಳಗೆ ಕುಳಿತುಕೊಳ್ಳೋದನ್ನು ಅಭ್ಯಾಸ ಮಾಡಿಕೊಳ್ಳೋದು ಉತ್ತಮ.