Pregnancyನಲ್ಲಿ ಮಾವಿನ ಹಣ್ಣು ತಿಂದ್ರೆ ಓಕೇನಾ? ಏನಾಗಬಹುದು ಆರೋಗ್ಯ

Published : Jun 26, 2023, 04:22 PM IST

ಹೆಚ್ಚಿನ ಜನರು ಇಷ್ಟಪಡುವ ಹಣ್ಣುಗಳಲ್ಲಿ ಮಾವಿನ ಹಣ್ಣು ಒಂದಾಗಿದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ತಿನ್ನೋದು ಸುರಕ್ಷಿತವೇ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.   

PREV
17
Pregnancyನಲ್ಲಿ ಮಾವಿನ ಹಣ್ಣು ತಿಂದ್ರೆ ಓಕೇನಾ? ಏನಾಗಬಹುದು ಆರೋಗ್ಯ

ಬೇಸಿಗೆಯಲ್ಲಿ ಹೆಚ್ಚಾಗಿ ಮಾವಿನಹಣ್ಣು (Mango) ಕಾಣಸಿಗುತ್ತೆ. ಸೆಕೆ ಇಷ್ಟ ಇಲ್ಲಾಂದ್ರೂ ಜನರಿಗೆ ಮಾವಿನ ಹಣ್ಣಿನ ಕಾರಣದಿಂದ ಬೇಸಿಗೆ ಇಷ್ಟ. ಈಗ ಮಳೆಗಾಲ (Rainy Season) ಆರಂಭವಾಗಿದೆ, ಆದ್ರೂ ಮಾರುಕಟ್ಟೆಗಳಲ್ಲಿ ಮಾವಿನಹಣ್ಣುಗಳಿಗೇನು ಕೊರತೆ ಇಲ್ಲ. ಹಾಗಾಗಿ ಜನರು ವಿವಿಧ ರೀತಿಯಲ್ಲಿ ಮಾವಿನ ಹಣ್ಣು ಸೇವಿಸಲು ಇಷ್ಟಪಡುತ್ತಾರೆ. ಅನೇಕ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ಈ ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಗರ್ಭಾವಸ್ಥೆಯಲ್ಲಿ ಮಹಿಳೆಯರು (pregnant woman) ಮತ್ತು ಮಕ್ಕಳು ಮಾವಿನಹಣ್ಣು ಸೇವಿಸುವುದು ಸುರಕ್ಷಿತವೇ? 

27

ಗರ್ಭಾವಸ್ಥೆಯಲ್ಲಿ, ಮಹಿಳೆ ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ, ಸ್ವಲ್ಪ ಅಜಾಗರೂಕತೆಯು ಮಹಿಳೆ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ಗರ್ಭಾವಸ್ಥೆಯಲ್ಲಿ ಮಾವಿನಹಣ್ಣಿನ ಸೇವನೆ ಸುರಕ್ಷಿತವೇ ಅಥವಾ ಇಲ್ಲವೇ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಆಗಾಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ. ಆದ್ದರಿಂದ ನೀವು ಸಹ ಇದರ ಬಗ್ಗೆ ಗೊಂದಲದಲ್ಲಿದ್ದರೆ, ಈ ಬಗ್ಗೆ ನಿಮಗೂ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
 

37

ಮಾವಿನಹಣ್ಣು ತಿನ್ನಬಹುದೇ?
ಗರ್ಭಿಣಿಯಾಗಿದ್ದರೆ, ಮಾವಿನ ಹಣ್ಣಿನ ಸೀಸನ್ (Mango season) ನಲ್ಲಿ ಸೇವಿಸಬಹುದು. ಇದನ್ನು ತಿನ್ನೋದ್ರಿಂದ ಮಹಿಳೆಯರಿಗೆ ಅನೇಕ ಪ್ರಯೋಜನಗಳು ಸಿಗುತ್ತವೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರಿಗೆ ಅನೇಕ ಪೋಷಕಾಂಶಗಳು (vitamins) ಬೇಕಾಗುತ್ತವೆ. ಈ ಸಮಯದಲ್ಲಿ ಮಾವು ತಿನ್ನೋದ್ರಿಂದ ಅದರಿಂದ ಮಾವಿನ ಹಣ್ಣಿನಲ್ಲಿರುವ ವಿಟಮಿನ್ 'ಎ', ವಿಟಮಿನ್ 'ಸಿ' ಮತ್ತು ವಿಟಮಿನ್ 'ಬಿ 6' ನಂತಹ ಪೋಷಕಾಂಶಗಳು ಸಿಗುತ್ತವೆ. ಆದರೆ ಈ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸದಂತೆ ವಿಶೇಷ ಕಾಳಜಿ ವಹಿಸಿ, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.
 

47

ಗರ್ಭಾವಸ್ಥೆಯಲ್ಲಿ ಮಾವಿನಹಣ್ಣು ತಿನ್ನುವುದರ ಪ್ರಯೋಜನಗಳು
ಗರ್ಭಾವಸ್ಥೆಯಲ್ಲಿ, ಮಗುವಿನ ಒಟ್ಟಾರೆ ಬೆಳವಣಿಗೆಗೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ, ಸಾಮಾನ್ಯ ಭ್ರೂಣದ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿ.
ಮಾವಿನ ಹಣ್ಣಿನಲ್ಲಿರುವ ಫೋಲಿಕ್ ಆಸಿಡ್ (folic acid) ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ವಿಟಮಿನ್-ಸಿ ಸಮೃದ್ಧವಾಗಿರುವ ಮಾವಿನ ಹಣ್ಣಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ಸಹಾಯ ಮಾಡುತ್ತದೆ.

57

ಮಾವಿನ ಹಣ್ಣನ್ನು ತಿನ್ನೋದ್ರಿಂದ, ದೇಹದಲ್ಲಿನ ವಿಟಮಿನ್ 'ಬಿ 6' ಕೊರತೆಯನ್ನು ಕಡಿಮೆ ಮಾಡಬಹುದು. ಅಲ್ಲದೆ, ಇದರಲ್ಲಿರುವ ವಿಟಮಿನ್ ಎ ಸಹ ಮಗುವಿಗೆ ಬಹಳ ಮುಖ್ಯವಾಗಿದೆ, ಏಕೆಂದರೆ ಅದರ ಕೊರತೆಯು ಮಗುವಿನ ರೋಗನಿರೋಧಕ ಶಕ್ತಿಯನ್ನು (immunity power) ದುರ್ಬಲಗೊಳಿಸುವುದಲ್ಲದೆ, ಅತಿಸಾರ ಮತ್ತು ಉಸಿರಾಟದ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.
 

67

ಎಚ್ಚರಿಕೆ ಇರಲಿ
ಮಾವಿನ ಹಣ್ಣಿನ ಈ ಪ್ರಯೋಜನಗಳನ್ನು ತಿಳಿದ ನಂತರ, ಗರ್ಭಾವಸ್ಥೆಯಲ್ಲಿ ಮಾವಿನ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನೀವು ಅರ್ಥಮಾಡಿಕೊಂಡಿರಬೇಕು. ಆದರೆ ಈ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸುವುದರಿಂದ ಮಹಿಳೆಗೆ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನೆನಪಿನಲ್ಲಿಡಿ. 

77

ಗರ್ಭಾವಸ್ಥೆಯಲ್ಲಿ ಹೆಚ್ಚು ಮಾವಿನ ಹಣ್ಣು ಸೇವಿಸುವುದರಿಂದ ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
ಲೂಸ್ ಮೋಷನ್ (loose motion)
ಡಿ ಹೈಡ್ರೇಶನ್
ತಲೆತಿರುಗುವಿಕೆ
ಮೂಡ್ ಸ್ವಿಂಗ್
ತಲೆನೋವು
ಗೊಂದಲ ಇತ್ಯಾದಿ.

Read more Photos on
click me!

Recommended Stories