ಪ್ರತಿಯೊಬ್ಬ ಮಹಿಳೆಯೂ ತನ್ನ ಸ್ತನವು ಸ್ವಲ್ಪ ದೊಡ್ಡದಾಗಿರಬೇಕು ಮತ್ತು ಸರಿಯಾದ ಶೇಪ್ ನಲ್ಲಿರಬೇಕು ಎಂದು ಬಯಸುತ್ತಾಳೆ. ದೊಡ್ಡ ಸ್ತನಗಳು (big breast) ಒಳ್ಳೆಯದು ಅನ್ನೋದು ಸಹ ಹೆಚ್ಚಿನ ಜನರ ಅಭಿಪ್ರಾಯ. ಇದು ಆರೋಗ್ಯಕರ ದೇಹದ ಸಂಕೇತ. ವಿಶ್ವಾದ್ಯಂತ ಸರಾಸರಿ ಸ್ತನ ಗಾತ್ರದ ಬಗ್ಗೆ ವರ್ಲ್ಡ್ ಡೇಟಾ ಪ್ರಕಾರ, ಸ್ತನವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ.
ನಾರ್ವೆ, ಐಸ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್ ಮತ್ತು ಯುಎಸ್ಎಯಲ್ಲಿ ಮಹಿಳೆಯರಲ್ಲಿ ಅತಿದೊಡ್ಡ ಸ್ತನಗಳಿವೆ. ಮಧ್ಯ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಮಹಿಳೆಯರ ಸ್ತನದ ಗಾತ್ರ ಚಿಕ್ಕದು. ಸ್ತನದ ಗಾತ್ರ ಹೆಚ್ಚಾಗಿರಲು ಬೊಜ್ಜು ಅಥವಾ ಫ್ಯಾಟ್ ಪ್ರಮುಖ ಕಾರಣ. ಸ್ಥೂಲಕಾಯತೆಯಿಂದಾಗಿ (obesity) ಸ್ತನಗಳ ಗಾತ್ರ ಹೆಚ್ಚುತ್ತಿದ್ದು, ಇದು ಅಪಾಯದ ಮುನ್ಸೂಚನೆ.
ಮಹಿಳೆ ಅಥವಾ ಪುರುಷನ ಸ್ತನ ಸರಿಯಾದ ಗಾತ್ರ ಎಷ್ಟು?
WHO ಪ್ರಕಾರ ಅಧಿಕ ತೂಕವನ್ನು ಹೊಂದಿರುವ ವ್ಯಕ್ತಿಯನ್ನು ಬಿಎಂಐ 25 ಕ್ಕಿಂತ ಹೆಚ್ಚು ಅಥವಾ ಸಮಾನ ಎಂದು ಹೇಳಲಾಗುತ್ತೆ. ಸ್ಥೂಲಕಾಯದ ವ್ಯಕ್ತಿಗೆ BMI (Body Mass Index) 30 ಅಥವಾ ಅದಕ್ಕಿಂತ ಹೆಚ್ಚಿರುತ್ತೆ. ಆರೋಗ್ಯವಂತ ವ್ಯಕ್ತಿ 20 ರ ಬಿಎಂಐ ಹೊಂದಿರುತ್ತಾರೆ. ಹೆಚ್ಚಿನ ಆರೋಗ್ಯವಂತ ಜನರು ಇರುವ ದೇಶ ಅಂದರೆ ಅದು ಡೆನ್ಮಾರ್ಕ್ ಮಾತ್ರ. ಇಲ್ಲಿನ ಜನರ ಸರಾಸರಿ ಬಿಎಂಐ 24.6 ಆಗಿದೆ. ಯುನೈಟೆಡ್ ಸ್ಟೇಟ್‌ನಲ್ಲಿ ಜನರು ಸ್ಥೂಲಕಾಯತೆಯ ಮಿತಿ ದಾಟಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಇಲ್ಲಿನ ಜನರ ಸರಾಸರಿ ಬಿಎಂಐ 29.0 ಆಗಿದೆ.
ಸ್ತನ ಗಾತ್ರದ ಹೆಚ್ಚಳಕ್ಕೆ ದೇಹದ ಕೊಬ್ಬು ಕಾರಣವಾಗಬಹುದೇ?
ಮಹಿಳೆಯರ ಸ್ತನಗಳು ಸಾಮಾನ್ಯವಾಗಿ ಕೊಬ್ಬು ಸಮೃದ್ಧ ಟಿಶ್ಯೂ ಮತ್ತು ಗ್ರಂಥಿಗಳನ್ನು ಹೊಂದಿರುತ್ತದೆ. ಸ್ತನಗಳ ಗಾತ್ರವು ಆನುವಂಶಿಕ ಅಂಶಗಳ ಮೇಲೆ ಮಾತ್ರವಲ್ಲದೆ ಕೊಬ್ಬಿನ ಅಂಶ ಮತ್ತು ಕನೆಕ್ಟಿಂಗ್ ಟಿಶ್ಯೂ ಸಂಯೋಜನೆಯನ್ನು ಸಹ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ನಿಮ್ಮ ದೇಹದ ಬಿಎಂಐ ಹೆಚ್ಚಾಗಿದ್ರೆ ನಿಮ್ಮ ಸ್ತನಗಳು ದೊಡ್ಡದಾಗಿರುತ್ತವೆ.
ಮಧ್ಯ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಮಹಿಳೆಯರ ಸ್ತನ ಗಾತ್ರ ಸಣ್ಣದಾಗಿರೋದಕ್ಕೆ ಕಾರಣ ಏನು?
ಮೊದಲ ಕಾರಣ ಆನುವಂಶಿಕವಾಗಿದೆ. ಎರಡನೆಯದು ಈ ಉಪಖಂಡದ ಮಹಿಳೆಯರು ಸಾಮಾನ್ಯವಾಗಿ ಕುಳ್ಳಗಿನ ವ್ಯಕ್ತಿಗಳು ಮತ್ತು ಹೆಚ್ಚು ತೂಕ ಹೊಂದಿರೋದಿಲ್ಲ. ಏಷ್ಯಾದ ಸರಾಸರಿ ಮಹಿಳೆ ಸುಮಾರು 1.53 ಮೀಟರ್ ಎತ್ತರ ಮತ್ತು 55 ಕೆಜಿಗಿಂತ ಕಡಿಮೆ ತೂಕ ಹೊಂದಿದ್ದಾಳೆ. ಮಧ್ಯ ಆಫ್ರಿಕಾದಲ್ಲಿರುವ ಮಹಿಳೆಯರು, 1.60 ಮೀ ಗಿಂತ ಕಡಿಮೆ ತೂಕ ಮತ್ತು 60 ಕೆಜಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಈ ಕಾರಣಕ್ಕಾಗಿ ಅವರ ಸ್ತನಗಳ ಗಾತ್ರವೂ (breast size) ಸಣ್ಣದಾಗಿದೆ.
ಯಾವ ದೇಶದ ಮಹಿಳೆಯರ ಸ್ತನ ಗಾತ್ರ ಮತ್ತು BMI ಎಷ್ಟಿದೆ ನೋಡಿ
ನಾರ್ವೆ : C-D : 26.2
ಲಕ್ಸೆಂಬರ್ಗ್: ಸಿ : 25.7
ಐಸ್ಲ್ಯಾಂಡ್ :ಸಿ :25.6
US : C : 29.0
ಯುಕೆ : C : 27.1
ವೆನೆಜುವೆಲಾ : B-C : 26.9
ಕೊಲಂಬಿಯಾ : B-C : 26.7
ಸ್ವೀಡನ್ : B-C : 25.4
ನೆದರ್ಲ್ಯಾಂಡ್ಸ್ : B-C : 25.3
ಕೆನಡಾ : B-C : 26.7
ರಷ್ಯಾ : B-C : 26.7
ಪೋಲೆಂಡ್ : B-C : 26.1
ಬಲ್ಗೇರಿಯಾ : B-C : 25.9
ಟಾಪ್ 13 ದೇಶಗಳ ಪಟ್ಟಿ ನೋಡಿದರೆ, ಈ ದೇಶದ ಜನರ ಬಿಎಂಐ 25 ಕ್ಕಿಂತ ಹೆಚ್ಚಾಗಿದೆ ಅಲ್ವಾ? ಅಂದ್ರೆ, ಅಧಿಕ ತೂಕ ಹೊಂದಿರುವವರು ಅಥವಾ ಸ್ಥೂಲಕಾಯತೆಯತ್ತ ಸಾಗುತ್ತಿರುವ ದೇಶಗಳ ಸಂಖ್ಯೆ ಹೆಚ್ಚಾಗಿದೆ. ಇದು ಅಪಾಯದ ಸೂಚನೆ. ಟಾಪ್ 20 ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ. ಯಾಕಂದ್ರೆ ಇಲ್ಲಿನ ಮಹಿಳೆಯರ ಸ್ತನಗಳ ಗಾತ್ರ ಸಾಮಾನ್ಯವಾಗಿದೆ. ತುಂಬಾ ದೊಡ್ಡದೂ ಅಲ್ಲ, ತುಂಬಾ ಚಿಕ್ಕದೂ ಅಲ್ಲ. ಅವರ ತೂಕಕ್ಕೆ ಅನುಗುಣವಾಗಿ, ಅವರ ಸ್ತನದ ಗಾತ್ರ ಇದೆ.