ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ಲೋಕಸಭೆ ಅಧಿವೇಶನದಲ್ಲಿ ತಮ್ಮ ಸೀರೆಯುಟ್ಟ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ನೋಟವನ್ನು ನೆಟ್ಟಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಹೋಲಿಸುತ್ತಿದ್ದು, 'ಎಮರ್ಜೆನ್ಸಿ' ಸಿನಿಮಾದ ಪಾತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಬಾಲಿವುಡ್ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಸ್ಟೈಲಿಶ್ ಲುಕ್ ಮೂಲಕ ಕ್ಯಾಮೆರಾಗಳನ್ನು ತಮ್ಮತ್ತ ಸೆಳೆಯುತ್ತಾರೆ. ಲೋಕಸಭೆ ಅಧಿವೇಶನಕ್ಕೆ ಚೆಂದದ ಸೀರೆ ಧರಿಸಿ ಆಗಮಿಸುವ ಕಂಗನಾ ರಣಾವತ್ ಅವರಲ್ಲಿ ನೆಟ್ಟಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರರನ್ನು ನೋಡುತ್ತಿದ್ದಾರೆ.
25
ಕಂಗನಾ ರಣಾವತ್ ಲುಕ್
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಕಂಗನಾ ರಣಾವತ್ ತಮ್ಮ ಲುಕ್ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾರೆ. ಕಂಗನಾ ಅವರ ಏರ್ಪೋಟ್ ಲುಕ್ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅಧಿವೇಶನದಲ್ಲಿಯೂ ಕಂಗನಾ ರಣಾವತ್ ಸಿಂಪಲ್ ಕಾಟನ್ ಮಾದರಿ ಸೀರೆಗಳಲ್ಲಿಯೇ ಮಿಂಚುತ್ತಿದ್ದಾರೆ.
35
ಕ್ಲಾಸಿ ಕನ್ನಡಕ ಮತ್ತು ಕೈಯಲ್ಲೊಂದು ಪುಟಾಣಿ ಬ್ಯಾಗ್
ದೆಹಲಿಯಲ್ಲಿ ಚಳಿ ಹೆಚ್ಚಾಗಿರುವ ಕಾರಣ ಕಂಗನಾ ರಣಾವತ್, ಲಾಂಗ್ ಕೋಟ್ ಧರಿಸುತ್ತಿದ್ದಾರೆ. ಇವುಗಳ ಜೊತೆ ಕ್ಲಾಸಿ ಕನ್ನಡಕ ಮತ್ತು ಕೈಯಲ್ಲೊಂದು ಪುಟಾಣಿ ಬ್ಯಾಗ್ ಕಂಗನಾ ಅವರಿಗೆ ರಾಯಲ್ ಲುಕ್ ನೀಡುತ್ತಿವೆ. ಇದೀಗ ಈ ಫೋಟೋಗಳನ್ನು ಇಂದಿರಾ ಗಾಂಧಿಯವರ ಜೊತೆ ಹೋಲಿಕೆ ಮಾಡಲಾಗುತ್ತಿದೆ.
ಕಂಗನಾ ರಣಾವತ್ ಮತ್ತು ಇಂದಿರಾ ಗಾಂಧಿ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ರಣಾವತ್ ತಮಗೇ ಗೊತ್ತಿಲ್ಲದಂತೆಯೇ ಇಂದಿರಾ ಗಾಂಧಿ ಅವರನ್ನು ಫಾಲೋ ಮಾಡ್ತಿದ್ದಾರೆ. ದಯವಿಟ್ಟು ಈ ವಿಷಯವನ್ನು ಅವರಿಗೆ ತಿಳಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ಕಂಗನಾ ರಣಾವತ್ ನಟಿಸಿದ್ದರು. 2025ರಲ್ಲಿ ಬಿಡುಗಡೆಯಾದ Emergency ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ ಸೋಲು ಕಂಡಿತ್ತು. ಈ ಚಿತ್ರದಲ್ಲಿ ಬಳಸಿದ ಸೀರೆಗಳನ್ನು ಕಂಗನಾ ಇದೀಗ ಧರಿಸಿ ಬರುತ್ತಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.