ಒಂದು ಪೈಸೆಯೂ ಖರ್ಚಿಲ್ಲದೇ ಕೊಳಕು ಪ್ಲಾಸ್ಟಿಕ್ ಬಕೆಟ್‌, ಮಗ್‌ಗಳನ್ನ ಕೆಲವೇ ನಿಮಿಷದಲ್ಲಿ ಕ್ಲೀನ್ ಮಾಡಿ

Published : Jan 27, 2026, 11:12 AM IST

DIY plastic cleaning: ಒಂದು ವೇಳೆ ಕ್ಲೀನ್ ಮಾಡದಿದ್ದರೆ ಹಳದಿ ಕಲೆಗಳು ಮತ್ತು ಸೂಕ್ಷ್ಮಜೀವಿಗಳು ಸಂಗ್ರಹವಾಗಬಹುದು. ಆದರೆ ಕೆಲವು ಸಿಂಪಲ್ ಟಿಪ್ಸ್‌ ಫಾಲೋ ಮಾಡುವ ಮೂಲಕ ಅವುಗಳನ್ನು ಮತ್ತೆ ಸ್ವಚ್ಛವಾಗಿ ಹೊಳೆಯುವಂತೆ ಮಾಡಬಹುದು. 

PREV
15
ಕೆಲವು ಸಿಂಪಲ್ ಟಿಪ್ಸ್‌

ಬಾತ್‌ ರೂಂ ಕ್ಲೀನಿಂಗ್ ಅಂದ್ರೆ ಕೇವಲ ಫ್ಲೋರ್ ಮತ್ತು ಟಾಯ್ಲೆಟ್ ರೂಂ ಕಮೋಡ್ ಕ್ಲೀನ್ ಮಾಡೋದಲ್ಲ. ನಾವೆಲ್ಲಾ ಬಕೆಟ್‌ಗಳು, ಮಗ್‌ಗಳು ಮತ್ತು ಸ್ಟೂಲ್‌ಗಳಂತಹ ವಸ್ತುಗಳನ್ನು ಸಹ ಪ್ರತಿದಿನ ಬಳಸುತ್ತೇವೆ. ಹಾಗಾಗಿ ಇವುಗಳನ್ನು ಕ್ಲೀನ್ ಮಾಡಬೇಕಾಗುತ್ತದೆ. ಒಂದು ವೇಳೆ ಕ್ಲೀನ್ ಮಾಡದಿದ್ದರೆ ಹಳದಿ ಕಲೆಗಳು ಮತ್ತು ಸೂಕ್ಷ್ಮಜೀವಿಗಳು ಸಂಗ್ರಹವಾಗಬಹುದು. ಆದರೆ ಕೆಲವು ಸಿಂಪಲ್ ಟಿಪ್ಸ್‌ ಫಾಲೋ ಮಾಡುವ ಮೂಲಕ ಅವುಗಳನ್ನು ಮತ್ತೆ ಸ್ವಚ್ಛವಾಗಿ ಹೊಳೆಯುವಂತೆ ಮಾಡಬಹುದು.

25
ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಬಿಸಿನೀರು ಮತ್ತು ಡಿಟರ್ಜೆಂಟ್ ಪೌಡರ್
ಅತ್ಯಂತ ಕೊಳಕಾದ ಪ್ಲಾಸ್ಟಿಕ್ ಬಕೆಟ್‌ಗಳು ಮತ್ತು ಮಗ್‌ಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ಮತ್ತು ಡಿಟರ್ಜೆಂಟ್ ಪೌಡರ್  ಸಾಕು. ಬಿಸಿ ನೀರಿನಲ್ಲಿ ನೀವು ಅಡುಗೆ ಸೋಡಾ, ಡಿಟರ್ಜೆಂಟ್ ಪೌಡರ್ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕೊಳಕು ಮೇಲ್ಮೈಗೆ 10-15 ನಿಮಿಷಗಳ ಕಾಲ ಹಚ್ಚಿ, ನಂತರ ಸ್ಕ್ರಬ್ಬರ್ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಈ ವಿಧಾನವು ಮೊಂಡುತನದ ಕಲೆಗಳು ಮತ್ತು ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ. ಬಕೆಟ್ ಹೊಸದಾಗಿ ಕಾಣುವಂತೆ ಮಾಡುತ್ತದೆ.

35
ಅಡುಗೆ ಸೋಡಾ ಮತ್ತು ನಿಂಬೆಹಣ್ಣು

ಕೊಳಕು ಪ್ಲಾಸ್ಟಿಕ್ ಬಕೆಟ್‌ ಶೈನ್ ಆಗಲು ಕೇವಲ ಅಡುಗೆ ಸೋಡಾ ಮತ್ತು ನಿಂಬೆಹಣ್ಣು ಸಹ ಪರಿಣಾಮಕಾರಿ ಮಾರ್ಗವಾಗಿದೆ. ಈ ಸಂಯೋಜನೆಯು ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬಳಸಿ ದಪ್ಪ ಪೇಸ್ಟ್ ಮಾಡಿ ಬಕೆಟ್‌ಗಳು, ಮಗ್‌ಗಳು ಮತ್ತು ಟಾಯ್ಲೆಟ್ ಕಲೆ ಇರುವ ಪ್ರದೇಶಗಳಿಗೆ ಸಿಂಪಡಿಸಿ. ಸ್ಕ್ರಬ್ಬರ್‌ನಿಂದ ಸ್ಕ್ರಬ್ ಮಾಡುವ ಮೊದಲು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಈ ವಿಧಾನವು ಸುಲಭವಾಗಿ ಕೊಳೆಯನ್ನು ತೆಗೆದುಹಾಕಿ ಮತ್ತು ಪುನಃ ಹೊಳಪನ್ನು ಕೊಡುತ್ತದೆ.

45
ಬಾತ್‌ರೂಂ ಕ್ಲೀನರ್‌

ಸ್ನಾನಗೃಹದ ಕೆಲವು ಮೇಲ್ಮೈಗಳಿಗೆ ಅಪ್ಲೈ ಮಾಡುವಂತೆಯೇ ಬಕೆಟ್‌ಗಳು, ಮಗ್‌ಗಳು ಮತ್ತು ಸ್ಟೂಲ್‌ಗಳಿಗೆ ಬಾತ್‌ರೂಂ ಕ್ಲೀನರ್‌ ಅಪ್ಲೈ ಮಾಡಿ.(ನೀವು ರಾಸಯನಿಕ ಮುಕ್ತ ಬಾತ್‌ರೂಂ ಕ್ಲೀನರ್‌ ಉಪಯೋಗಿಸಿ. ಒಂದು ವೇಳೆ ಕೆಮಿಕಲ್ ಇರುವುದನ್ನ ಉಪಯೋಗಿಸಿದರೆ ತೊಳೆಯುವಾಗ ಕೆಮಿಕಲ್ ಕೈ ಅಥವಾ ಕಾಲೊಳಗೆ ಸೇರಿ ಆರೋಗ್ಯ ಸಮಸ್ಯೆ ಉಂಟಾಗಬಹುದು) ಈಗ ಸ್ಕ್ರಬ್ಬರ್‌ನಿಂದ ಸ್ಕ್ರಬ್ ಮಾಡುವ ಮೊದಲು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ವಾರಕ್ಕೊಮ್ಮೆ ಅವುಗಳನ್ನು ಈ ರೀತಿ ಸ್ವಚ್ಛಗೊಳಿಸುವುದರಿಂದ ಅವು ಹೊಸದಾಗಿ ಕಾಣುತ್ತದೆ. ಈ ವಿಧಾನವನ್ನು ಫಾಲೋ ಮಾಡಿದ್ದೇ ಆದಲ್ಲಿ ನಿಮಗೆ ಹೆಚ್ಚು ಕಷ್ಟವಿಲ್ಲದೆ ಹಳದಿ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು.

55
ಹೈಡ್ರೋಕ್ಲೋರಿಕ್ ಆಮ್ಲ

ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲು ಹೈಡ್ರೋಕ್ಲೋರಿಕ್ ಆಮ್ಲದಂತಹ ಸೌಮ್ಯ ಆಮ್ಲಗಳನ್ನು ಬಳಸಲಾಗುತ್ತದೆ. ಆದರೆ ಬಕೆಟ್ ಮತ್ತು ಮಗ್‌ಗಳಿಂದ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಸಹ ಅವುಗಳನ್ನು ಬಳಸಬಹುದು. ಇದನ್ನು ನೀರಿನಲ್ಲಿ ಮಿಶ್ರಣ ಮಾಡಿ. ಆದರೆ ನೆನಪಿಡಿ . ಇದನ್ನು ಬಳಸುವಾಗ ಕೈಗವಸುಗಳನ್ನ ಬಳಸಿ. ಆ ನಂತರ ಬ್ರಷ್‌ನಿಂದ ಸ್ಕ್ರಬ್ ಮಾಡುವುದರಿಂದ ನಿಮ್ಮ ಸ್ನಾನಗೃಹದ ವಸ್ತುಗಳು ಫಳ ಫಳ ಹೊಳೆಯಲು ಆರಂಭಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories