ಇದೇ ನೋಡಿ ಸೊಂಪಾದ ಕೂದಲಿನ ಗುಟ್ಟು: ಮೆಂತ್ಯೆ ಈರುಳ್ಳಿಯನ್ನು ಹೀಗೆ ಬಳಸಿ

Published : May 23, 2025, 07:08 PM IST

ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮೆಂತ್ಯದಲ್ಲಿ ನಿಕೋಟಿನಿಕ್ ಆಮ್ಲ ಇದೆ. ಇದು ಕೂದಲಿನ ಬುಡಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

PREV
16
ದಪ್ಪ ಜಡೆಗೆ ಬೆಸ್ಟ್ ಹೋಂ ರೆಮಿಡಿ

ಉದ್ದ, ದಟ್ಟ ಕೂದಲು ಎಲ್ಲ ಹುಡುಗಿಯರ ಆಸೆ. ಆದ್ರೆ ಇಂದಿನ ಕಾಲದಲ್ಲಿ ಸರಿಯಾದ ಆಹಾರ, ಜೀವನಶೈಲಿ, ಮಾಲಿನ್ಯದಿಂದ ಕೂದಲು ಉದುರುವ ಸಮಸ್ಯೆ ಜಾಸ್ತಿ. ಮಾರ್ಕೆಟ್ ನಲ್ಲಿ ಸಿಗೋ ಎಣ್ಣೆ, ಶಾಂಪೂಗಳಿಂದ ಪ್ರಯೋಜನ ಆಗದಿದ್ದಾಗ ಮನೆಮದ್ದುಗಳೇ ಉತ್ತಮ. ಹಾಗಾಗಿ ಮೆಂತ್ಯ ಬಳಸಿ ಕೂದಲಿನ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಮೆಂತ್ಯ ಜೊತೆ ಚಿಕ್ಕ ಈರುಳ್ಳಿ ಬಳಸಿದ್ರೆ ಕೂದಲು ದಟ್ಟವಾಗಿ ಬೆಳೆಯುತ್ತದೆ.

26
ಮೆಂತ್ಯ ಕೂದಲಿಗೆ ಸೂಪರ್ ಫುಡ್ ತರ
ಮೆಂತ್ಯ ಕೂದಲಿಗೆ ಸೂಪರ್ ಫುಡ್ ತರ. ಇದರಲ್ಲಿ ಪ್ರೋಟೀನ್ ಜಾಸ್ತಿ ಇದ್ದು, ಕೂದಲಿನ ಬುಡವನ್ನು ಬಲಪಡಿಸುತ್ತದೆ. ನಿಕೋಟಿನಿಕ್ ಆಮ್ಲ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಐರನ್ ಅಂಶ ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೂದಲನ್ನು ಫ್ರೀ ರಾಡಿಕಲ್ಸ್ ನಿಂದ ರಕ್ಷಿಸುತ್ತದೆ.
36
ಈರುಳ್ಳಿಯಿಂದ ತಲೆಕೂದಲಿಗೇನು ಲಾಭ

ಈರುಳ್ಳಿಯಲ್ಲಿರುವ ಸಲ್ಫರ್ ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ದಪ್ಪವಾಗುತ್ತದೆ. ಆಂಟಿ ಆಕ್ಸಿಡೆಂಟ್ ಗಳು ಕೂದಲನ್ನು ಆರೋಗ್ಯವಾಗಿಡುತ್ತದೆ. ವಿಟಮಿನ್ ಸಿ, ಬಿ6, ಪೊಟ್ಯಾಶಿಯಂ ಕೂಡ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

46
ಮೆಂತ್ಯೆ ಈರುಳ್ಳಿ ಮಿಶ್ರಿತ ಹೇರ್‌ ಮಾಸ್ಕ್ ರೆಡಿ ಮಾಡೋದು ಹೇಗೆ?

ಮೆಂತ್ಯ-ಈರುಳ್ಳಿ ಹೇರ್ ಮಾಸ್ಕ್ ಗೆ ನೆನೆಸಿದ ಮೆಂತ್ಯ, ಉಳ್ಳಾಗಡ್ಡಿ ರಸ ಸಾಕು. ನೆನೆಸಿದ ಮೆಂತ್ಯವನ್ನು ಪೇಸ್ಟ್ ಮಾಡಿ, ಉಳ್ಳಾಗಡ್ಡಿ ರಸದ ಜೊತೆ ಸೇರಿಸಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮೈಲ್ಡ್ ಶಾಂಪೂ ಬಳಸಿ ತೊಳೆಯಿರಿ.

56
ಮೆಂತ್ಯೆ ಕುದಿಸಿದ ನೀರಿಗೆ ಈರುಳ್ಳಿ ರಸ
ನೆನೆಸಿದ ಮೆಂತ್ಯ ಕುದಿಸಿ, ನೀರು ಫಿಲ್ಟರ್ ಮಾಡಿ. ಇದಕ್ಕೆ ಉಳ್ಳಾಗಡ್ಡಿ ರಸ ಸೇರಿಸಿ. ಈ ನೀರನ್ನು ತಲೆ-ಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಕೂದಲು ದಟ್ಟವಾಗಿ, ಮೃದುವಾಗಿ, ಹೊಳೆಯುತ್ತದೆ.
66
ಮೆಂತ್ಯೆ ಈರುಳ್ಳಿ ಎಣ್ಣೆ

ಮೆಂತ್ಯ-ಉಳ್ಳಾಗಡ್ಡಿ ಎಣ್ಣೆ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮೆಂತ್ಯವನ್ನು ಕೊಬ್ಬರಿ ಎಣ್ಣೆಯಲ್ಲಿ ಹುರಿದು, ಎಣ್ಣೆ ಫಿಲ್ಟರ್ ಮಾಡಿ. ಇದಕ್ಕೆ ಈರುಳ್ಳಿ ರಸ ಸೇರಿಸಿ. ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ 2 ಗಂಟೆ ಬಿಟ್ಟು ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡಿದ್ರೆ ಉತ್ತಮ ಪ್ರಯೋಜನ ಸಿಗುವುದು.

Read more Photos on
click me!

Recommended Stories