ಪಿರಿಯಡ್ಸ್ ನೋವಿನಿಂದ ನರಳುತ್ತಿದ್ದೀರಾ? ಈ ಚಹಾ ಕುಡಿದ್ರೆ ನೋವು ಮಾಯ

Published : May 23, 2025, 01:56 PM IST

ಕೆಲವು ರೀತಿಯ ಚಹಾಗಳು ಮುಟ್ಟಿನ ಸಮಯದಲ್ಲಿ ಉಂಟಾಗುವ ತೀವ್ರ ನೋವಿನಿಂದ ನಿಮ್ಮನ್ನು ಮುಕ್ತಗೊಳಿಸಬಹುದು. ಮುಟ್ಟಿನ ಸಮಯದಲ್ಲಿ ನೀವು ಈ ಚಹಾಗಳನ್ನು ಕುಡಿಯಲೇಬೇಕು.   

PREV
17
ಪಿರಿಯಡ್ಸ್ ನೋವಿನಿಂದ ನರಳುತ್ತಿದ್ದೀರಾ? ಈ ಚಹಾ ಕುಡಿದ್ರೆ ನೋವು ಮಾಯ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಋತುಸ್ರಾವದ ಸಮಯದಲ್ಲಿ ವೀಪರೀತ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಈ ನೋವಿನಿಂದ ಮುಕ್ತಿ ಪಡೆಯೋದಕ್ಕೆ ಮಹಿಳೆಯರು ಅದೆಷ್ಟೊ ಕಸರತ್ತುಗಳನ್ನು ಸಹ ಮಾಡ್ತಾರೆ. ಆದರೆ ಸುಲಭವಾಗಿ ಹೊಟ್ಟೆ ನೋಡು ನಿವಾರಣೆಯಾಗೋದಿಲ್ಲ. ಅದಕ್ಕಾಗಿಯೇ ಕೆಲವರು ಮೆಡಿಸಿನ್ ಗಳನ್ನು ತೆಗೆದುಕೊಳ್ಳುವ ಮೂಲಕ ಹೊಟ್ಟೆ ನೋವನ್ನು ಕಡಿಮೆ ಮಾಡ್ತಾರೆ.  
 

27

ಮುಟ್ಟಿನ ಸಮಯದಲ್ಲಿ ಉಂಟಾಗುವ ತೀವ್ರ ನೋವಿನಿಂದ (periods cramp) ಪರಿಹಾರ ಪಡೆಯಲು ಕೆಲವು ವಿಶೇಷ ರೀತಿಯ ಚಹಾಗಳು ನಿಮಗೆ ಸಹಾಯ ಮಾಡುತ್ತವೆ.ಈ ಚಹಾವನ್ನು ಮುಟ್ಟಿನ ಸಮಯದಲ್ಲಿ ಕುಡಿಯಬೇಕು. ಇದರಿಂದ ನಿಮಗೆ ಹಲವು ಪ್ರಯೋಜನಗಳು ಸಿಗುತ್ತವೆ. ಆ ಚಹಾಗಳು ಯಾವುವು? ಅದರಿಂದ ಏನೇನು ಪ್ರಯೋಜನಗಳಿವೆ ನೋಡೋಣ. 

37

ಕ್ಯಾಮೊಮೈಲ್ (chamomile tea) ಚಹಾವು ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ನೋವು ಕಡಿಮೆ ಮಾಡುತ್ತದೆ. ಕ್ಯಾಮೊಮೈಲ್ ಚಹಾ ಕುಡಿಯೋದರಿಂದ ಹೊಟ್ಟೆ ನೋವು ನಿವಾರಣೆ ಮಾಡೋದು ಮಾತ್ರವಲ್ಲ ಚೆನ್ನಾಗಿ ನಿದ್ರೆ ಬರುತ್ತೆ, ಆಂಕ್ಸೈಂಟಿ ನಿವಾರಣೆಯಾಗುತ್ತದೆ.
 

47

ಶುಂಠಿ ಚಹಾ (ginger tea) ಸಹ ಹೊಟ್ಟೆ ನೋವು ನಿವಾರಣೆ ಮಾಡಲು ಸಹಾಯ ಮಾಡುತ್ತೆ.  ಶುಂಠಿ ಚಹಾದಲ್ಲಿ ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ, ಇದು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಶುಂಠಿ ಚಹಾ ಉತ್ತಮ ಆರೋಗ್ಯವನ್ನು ಸಹ ನೀಡುತ್ತೆ. 
 

57

ಮುಟ್ಟಿನ ಸಮಯದಲ್ಲಿ ದಾಲ್ಚಿನ್ನಿ ಚಹಾ (cinnamon tea) ಕುಡಿಯೋದು ಸಹ ಕೂಡ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದು ಮೆದುಳಿನ ಆರೋಗ್ಯ, ಹೃದಯ ಆರೋಗ್ಯ, ಜೀರ್ಣಕ್ರಿಯೆಗೂ ಸಹ ಹೆಚ್ಚಿನ ಪ್ರಯೋಜನ ನೀಡುತ್ತೆ. ಈ ಚಹಾ ಕುಡಿಯೋದ್ರಿಂದ ಹೊಟ್ಟೆ ನೋವು ಶೀಘ್ರದಲ್ಲಿ ನಿವಾರಣೆಯಾಗುತ್ತೆ. 

67

ಬೆಲ್ಲದ ಚಹಾ (Jaggery Tea) ಮುಟ್ಟಿನ ಸಮಯದಲ್ಲಿ ಸ್ನಾಯು ನೋವನ್ನು ಶಮನಗೊಳಿಸುತ್ತದೆ. ಇದನ್ನ ಅನಾದಿ ಕಾಲದಿಂದ ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದಾರೆ. ನೀವು ಸಹ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಾಧ್ಯವಾದಷ್ಟು ಬೆಲ್ಲದ ಚಹಾ ಸೇವನೆ ಮಾಡಿ. ಇದು ಹೊಟ್ಟೆ ನೋವನ್ನು ಶಮನ ಮಾಡಲು ನೆರವಾಗುತ್ತೆ. 

77

ಇದರ ಜೊತೆಗೆ ಹೀಟಿಂಗ್ ಪ್ಯಾಡ್‌ಗಳು (heating pad) ಮತ್ತು ಲಘು ವ್ಯಾಯಾಮಗಳು ಸಹ ನಿಮಗೆ ಹೊಟ್ಟೆ ನೋವಿನಿಂದ ಸಾಕಷ್ಟು ಪರಿಹಾರವನ್ನು ನೀಡಬಹುದು. ಪಿರಿಯಡ್ಸ್ ಸಮಯದಲ್ಲಿ ಹೀಟಿಂಗ್ ಪ್ಯಾಡ್ ನಿಮ್ಮ ಜೊತೆಯೇ ಇಟ್ಟುಕೊಳ್ಳೊದು ಉತ್ತಮ. 

Read more Photos on
click me!

Recommended Stories