Clothes Care Tips: ಒಂದೇ ಒಂದು ಬಾರಿ ತೊಳೆದ ನಂತರ ಅವುಗಳ ಬಣ್ಣ ಮಾಸುತ್ತದೆ. ಫಿಟ್ ಹಾಳಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬಟ್ಟೆ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮದೇ ತಪ್ಪುಗಳೇ ನಮ್ಮ ಬಟ್ಟೆಗಳನ್ನು ಹಾಳುಮಾಡುತ್ತವೆ.
ದೊಡ್ಡ ಶೋ ರೂಂ ಅಥವಾ ಬೊಟಿಕ್‌ನಿಂದ ಖರೀದಿಸಿದ ಹೊಸ ಬಟ್ಟೆಗಳು ತೊಳೆದ ಒಂದೇ ಬಾರಿಗೆ ಹೊಳಪನ್ನು ಕಳೆದುಕೊಳ್ಳುತ್ತವೆ ಅಥವಾ ಕುಗ್ಗುತ್ತವೆ. ಇದು ನಮ್ಮೆಲ್ಲರ ಗಮನಕ್ಕೂ ಸಹ ಬಂದಿರುತ್ತದೆ. ಆದರೆ ಬಟ್ಟೆಯ ಹಿಂಭಾಗದಲ್ಲಿರುವ ಲೇಬಲ್‌ಗಳನ್ನು ನಿರ್ಲಕ್ಷಿಸುವುದೇ ಇದಕ್ಕೆ ಕಾರಣ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.
26
ನಮ್ಮ ಬಟ್ಟೆ ಹಾಳಾಗೋಕೆ ಕಾರಣ
ನಾವು ದುಬಾರಿ, ಬ್ರಾಂಡೆಡ್ ಬಟ್ಟೆಗಳನ್ನು ವರ್ಷಗಳ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತೇವೆ. ಆದರೆ ಒಂದೇ ಒಂದು ಬಾರಿ ತೊಳೆದ ನಂತರ ಅವುಗಳ ಬಣ್ಣ ಮಾಸುತ್ತದೆ ಮತ್ತು ಫಿಟ್ ಹಾಳಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬಟ್ಟೆ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮದೇ ತಪ್ಪುಗಳೇ ನಮ್ಮ ಬಟ್ಟೆಗಳನ್ನು ಹಾಳುಮಾಡುತ್ತವೆ.
36
ಲೇಬಲ್‌ಗಳ ಬಗ್ಗೆ ಮಾಹಿತಿಯನ್ನು ನೋಡೋಣ..
ಪ್ರತಿಯೊಂದು ರೆಡಿಮೇಡ್ ಡ್ರೆಸ್ ಒಳಗೆ ಒಂದು ಸಣ್ಣ ಲೇಬಲ್ ಇರುತ್ತದೆ. ಅದನ್ನು ನಾವು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ತಿರಸ್ಕರಿಸುತ್ತೇವೆ. ಅದನ್ನು ಕಟ್ ಮಾಡುತ್ತೇವೆ. ಇದನ್ನು ಕೇರ್ ಲೇಬಲ್ ಎಂದು ಕರೆಯಲಾಗುತ್ತದೆ. ಈ ಸಣ್ಣ ಚಿಹ್ನೆಗಳು ಮೂಲಭೂತವಾಗಿ ನಿಮ್ಮ ಉಡುಪಿನ ಬಳಕೆದಾರರ ಕೈಪಿಡಿಯಾಗಿದೆ. ಇಲ್ಲಿ ನಾವು ಈ ಲೇಬಲ್‌ಗಳ ಬಗ್ಗೆ ಮಾಹಿತಿಯನ್ನು ನೋಡೋಣ..
ಲೇಬಲ್‌ನಲ್ಲಿ ಬಕೆಟ್ ಮತ್ತು ಅದರ ಮೇಲೆ ಕೈ ಗುರುತು ಇದ್ದರೆ ಬಟ್ಟೆ ತುಂಬಾ ಸೂಕ್ಷ್ಮವಾಗಿದೆ ಎಂದರ್ಥ. ಅದನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕಬೇಡಿ. ಬದಲಾಗಿ, ಅದನ್ನು ನಿಧಾನವಾಗಿ ತೊಳೆಯಿರಿ. ಬಕೆಟ್ ಚಿಹ್ನೆ ಮಾತ್ರ ಇದ್ದರೆ ನೀವು ಅದನ್ನು ವಾಷಿಂಗ್ ಮಷಿನ್‌ನಲ್ಲಿ ಮತ್ತು ಕೈಯಿಂದ ತೊಳೆಯಬಹುದು ಎಂದರ್ಥ. ಬಕೆಟ್ ಮೇಲೆ ಕ್ರಾಸ್ ಮಾರ್ಕ್ ಇದ್ದರೆ ಅಂತಹ ಬಟ್ಟೆಗಳನ್ನು ಮನೆಯಲ್ಲಿ ತೊಳೆಯಬಾರದು. ಡ್ರೈ ಕ್ಲೀನ್‌ಗೆ ಕೊಡಬೇಕು.
56
2.ಒಣಗಿಸುವ ಚಿಹ್ನೆಗೂ ಗಮನ ಕೊಡಿ
ಬಟ್ಟೆಯ ಲೇಬಲ್ ಮೇಲೆ ಚೌಕ ಮತ್ತು ಅದರೊಳಗೆ ವೃತ್ತವಿದ್ದರೆ, ನೀವು ಅದನ್ನು ಮಷಿನ್‌ನಲ್ಲಿ ಒಣಗಿಸಬಹುದು ಎಂದರ್ಥ. ಚೌಕದ ಒಳಗಿನ ವೃತ್ತದ ಮೇಲೆ ಎಕ್ಸ್ ಅಥವಾ ಕ್ರಾಸ್ ಮಾರ್ಕ್ ಇದ್ದರೆ ಬಟ್ಟೆಗಳನ್ನು ಎಂದಿಗೂ ಮಷಿನ್‌ನಲ್ಲಿ ಒಣಗಿಸಬೇಡಿ. ಇಲ್ಲದಿದ್ದರೆ ಬಟ್ಟೆಗಳು ಕುಗ್ಗಬಹುದು. ನೀವು ಬರೀ ಕ್ರಾಸ್ ಮಾರ್ಕ್ ನೋಡಿದರೆ ನೇರ ಸೂರ್ಯನ ಬೆಳಕು ಬಟ್ಟೆಗೆ ಸೂಕ್ತವಲ್ಲ ಎಂದರ್ಥ. ಅದನ್ನು ನೆರಳಿನಲ್ಲಿ ಒಣಗಿಸಿ.
66
3.ಇಸ್ತ್ರಿ ಗುರುತುಗೆ ಗಮನ ಕೊಡಿ.
ಐರನ್ ಮಾರ್ಕ್ ಒಳಗೆ ಚುಕ್ಕೆ ಇದ್ದರೆ, ಬಟ್ಟೆಯನ್ನು ತುಂಬಾ ಹಗುರವಾಗಿ ಇಸ್ತ್ರಿ ಮಾಡಬೇಕಾಗುತ್ತದೆ ಎಂದರ್ಥ. ನೈಲಾನ್ ಮತ್ತು ರೇಷ್ಮೆ ಬಟ್ಟೆಗಳಿಗೆ ನೀವು ಈ ನಿಯಮ ಪಾಲಿಸಬೇಕು. ಎರಡು ಅಥವಾ ಮೂರು ಚುಕ್ಕೆಗಳಿದ್ದರೆ, ನೀವು ಉಡುಪನ್ನು ಮಧ್ಯಮ ಅಥವಾ ಬಿಸಿಯಾಗಿ ಐರನ್‌ನಲ್ಲಿ ಇಸ್ತ್ರಿ ಮಾಡಬಹುದು ಎಂದರ್ಥ. ಹತ್ತಿ ಅಥವಾ ಲಿನಿನ್ ಅನ್ನು ಇಸ್ತ್ರಿ ಮಾಡುವಾಗ ಇದನ್ನು ಪರಿಗಣಿಸುವುದು ಮುಖ್ಯ. ಐರನ್ ಮೇಲೆ ಕ್ರಾಸ್ ಮಾರ್ಕ್ ಇದ್ದರೆ ನೀವು ಈ ಬಟ್ಟೆಯ ಮೇಲೆ ಐರನ್ ಮಾಡಿದ ತಕ್ಷಣವೇ ಬರ್ನ್ ಆಗಬಹುದು ಎಂದರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.