Health Tips: ಗರ್ಭಾವಸ್ಥೆಯಲ್ಲಿ ಟೀ, ಕೂಲ್ ಡ್ರಿಂಕ್ಸ್ ಬದಲು ಇದನ್ನ ಕುಡಿಯಿರಿ

First Published | Apr 29, 2023, 7:00 AM IST

ಪ್ರಸ್ತುತ, ಭಾರತದ ಅನೇಕ ಭಾಗಗಳಲ್ಲಿ ತುಂಬಾ ತೀವ್ರ ಶಾಖವಿದೆ ಮತ್ತು ಮುಂಬರುವ ದಿನಗಳಲ್ಲಿ ಈ ಶಾಖವು ಮತ್ತಷ್ಟು ಹೆಚ್ಚಾಗಲಿದೆ. ಹಾಗಾಗಿ, ಗರ್ಭಿಣಿ ಮಹಿಳೆಯರಿಗೆ ಸಮಸ್ಯೆ ಹೆಚ್ಚಾಗಬಹುದು. ಹಾಗಿದ್ರೆ ಇದನ್ನು ನಿವಾರಿಸಲು ಏನು ಮಾಡೋದು? 

ಬೇಸಿಗೆಯಲ್ಲಿ ಗರ್ಭಿಣಿಯರು ತಮ್ಮನ್ನು ಹೈಡ್ರೇಟ್(Hydrate) ಆಗಿಡಲು ಪ್ರಯತ್ನಿಸೋದು ಉತ್ತಮ. ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಹೈಡ್ರೇಟ್ ಆಗಿರೋದು ಬಹಳ ಮುಖ್ಯ. ಸುಡುವ ಶಾಖದಲ್ಲಿ ನಿಮ್ಮನ್ನು ತಂಪಾಗಿಸುವ ಮತ್ತು ನಿಮ್ಮನ್ನು ಹೈಡ್ರೇಟ್ ಆಗಿಡುವ ಕೆಲವು ಆರೋಗ್ಯಕರ ಪಾನೀಯಗಳ ಬಗ್ಗೆ ಇಲ್ಲಿ ತಿಳಿಯಿರಿ .
 

ಎಳನೀರು (Tender coconut)
ನಿರ್ಜಲೀಕರಣವನ್ನು ತಪ್ಪಿಸಲು ಎಳನೀರು ಉತ್ತಮ ಮಾರ್ಗ. ಇದು ಆಯಾಸವನ್ನು ನಿವಾರಿಸುತ್ತೆ ಮತ್ತು ಬೆವರುವಾಗ ದೇಹದಿಂದ ಬಿಡುಗಡೆಯಾಗುವ ನೈಸರ್ಗಿಕ ಉಪ್ಪನ್ನು ಮರುಪೂರಣ ಮಾಡುತ್ತೆ.

Latest Videos


ಗರ್ಭಾವಸ್ಥೆಯಲ್ಲಿ ಬಾಯಾರಿಕೆಯನ್ನು ನೀಗಿಸಲು ಎಳನೀರು ಉತ್ತಮ ಆಯ್ಕೆ. ಗರ್ಭಾವಸ್ಥೆಯಲ್ಲಿ ವಾಂತಿಯಿಂದಾಗಿ(Vomit) ದೇಹದಲ್ಲಿ ದ್ರವಗಳ ಕೊರತೆಯನ್ನು ನಿಭಾಯಿಸಲು ಎಳನೀರು ಸಹಾಯ ಮಾಡುತ್ತೆ.

ನಿಂಬೆ ಜ್ಯೂಸ್ (Lemon juice)
ನಿಂಬೆ ನೀರು ದೇಹವನ್ನು ಹೈಡ್ರೇಟ್ ಆಗಿರಿಸುತ್ತೆ ಮತ್ತು ವಿಟಮಿನ್ ಸಿಯನ್ನು ಒದಗಿಸುತ್ತೆ, ಇದು ನಿಮ್ಮ ದೇಹವು ಕಬ್ಬಿಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತೆ. ಹಗಲಿನಲ್ಲಿ ಅಥವಾ  ಊಟದೊಂದಿಗೆ ನಿಂಬೆರಸವನ್ನು ಕುಡಿಯಬಹುದು. ಮಾರ್ನಿಂಗ್ ಸಿಕ್‌ನೆಸ್‌ನಿಂದ ಬಳಲುತ್ತಿದ್ದರೆ,  ನಿಂಬೆ ನೀರಿನೊಂದಿಗೆ ಸ್ವಲ್ಪ ಪುದೀನಾ, ಶುಂಠಿ ಮತ್ತು ಚಾಟ್ ಮಸಾಲಾವನ್ನು ಕುಡಿಯಬಹುದು. ಗರ್ಭಾವಸ್ಥೆಯಲ್ಲಿ ನಿಂಬೆ ಸೇವಿಸೋದರಿಂದ ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸಲು ಸಹಾಯ ಮಾಡುತ್ತೆ ಮತ್ತು ಸಾಮಾನ್ಯವಾಗಿ ಸುರಕ್ಷಿತ ಆಯ್ಕೆಯಾಗಿದೆ.

ತಾಜಾ ಹಣ್ಣಿನ ಜ್ಯೂಸ್ (Fresh fruit juice)
ಮೂಸಂಬಿ, ಕಿತ್ತಳೆ, ಅನಾನಸ್, ದಾಳಿಂಬೆ ಮತ್ತು ದ್ರಾಕ್ಷಿಯಿಂದ ತಾಜಾ ರಸಗಳನ್ನು ತಯಾರಿಸಬಹುದು ಮತ್ತು ಅದನ್ನು ಕುಡಿಯಬಹುದು. ಹಣ್ಣುಗಳನ್ನು ತಿನ್ನಲು ಇಷ್ಟಪಡದಿದ್ದರೆ,  ಹಣ್ಣಿನ ಜ್ಯೂಸ್ ಸಹ ಕುಡಿಯಬಹುದು. ಕಲ್ಲಂಗಡಿ ಮತ್ತು ಮಾವಿನ ಜ್ಯೂಸ್ ಬಿಸಿ ಹವಾಮಾನಕ್ಕೆ ಉತ್ತಮವಾಗಿದೆ. ಹಣ್ಣಿನ ರಸವನ್ನು ತಾಜಾವಾಗಿ ಕುಡಿಯಬೇಕು.

ಹಾಲಿನಿಂದ ತಯಾರಿಸಿದ ಪಾನೀಯಗಳು
ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸಮೃದ್ಧವಾಗಿದೆ. ಬೇಸಿಗೆಯಲ್ಲಿ, ಸ್ಕಿಮ್ಡ್ ಹಾಲು, ಲಸ್ಸಿ(Lassi) ಮತ್ತು ಮಜ್ಜಿಗೆ ಇತ್ಯಾದಿಗಳನ್ನು ಕುಡಿಯಬಹುದು. ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿಡಲು ಇವು ಕೆಲಸ ಮಾಡುತ್ತವೆ. 
 

ಇದರ ಜೊತೆಗೆ ಹಾಲು, ಮೊಸರು, ಐಸ್ ಮತ್ತು ಹಣ್ಣಿನಿಂದ ತಯಾರಿಸಿದ ಮಿಲ್ಕ್ ಶೇಕ್(Milk shake) ಅಥವಾ ಹಣ್ಣಿನ ಸ್ಮೂಥಿಯನ್ನು ಸಹ  ಕುಡಿಯಬಹುದು. ಇದು ಮಿನರಲ್ಸ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಊಟದ ನಡುವೆ ಲಘು ಆಹಾರವಾಗಿ ತೆಗೆದುಕೊಳ್ಳಲು ಉತ್ತಮವಾಗಿದೆ.

ಮನೆಯಲ್ಲಿ ತಯಾರಿಸಿದ ಪಾನೀಯಗಳು
ಮನೆಯಲ್ಲಿ ಜಲ್ಜಿರಾ(Jal-jeera), ಮಾವಿನ ಪನ್ನಾ ಮತ್ತು ಸತ್ತುವನ್ನು ಸಹ ಮಾಡಿ ಕುಡಿಯಬಹುದು. ಬೇಸಿಗೆಯಲ್ಲಿ ಹಣ್ಣಿನ ಸಿರಪ್ ಸಹ ಸಾಕಷ್ಟು ಕುಡಿಯಿರಿ. ಇವು ದೇಹವನ್ನು ತಂಪಾಗಿಸುತ್ತವೆ ಮತ್ತು ಅದನ್ನು ಹೈಡ್ರೇಟ್ ಆಗಿರಿಸುತ್ತವೆ. ಇವು, ಮಾರ್ನಿಂಗ್ ಸಿಕ್‌ನೆಸ್ ಎದುರಿಸಲು ಸಹಾಯ ಮಾಡುತ್ತವೆ.

ಆಹಾರದಲ್ಲಿ ಸಾಕಷ್ಟು ತರಕಾರಿಗಳನ್ನು ಸೇರಿಸಲು ಗರ್ಭಿಣಿಯರಿಗೆ ತೊಂದರೆ ಇದ್ದರೆ,  ತರಕಾರಿ ರಸವನ್ನು(Vegetable juice) ಸಹ ಕುಡಿಯಬಹುದು. ಬೇಸಿಗೆಯ ಶಾಖದಲ್ಲಿ, ಬಾಯಾರಿಕೆಯನ್ನು ನೀಗಿಸಲು ನೀರನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಹುಡುಕುತ್ತಿದ್ದರೆ, ತರಕಾರಿಗಳ ತಣ್ಣನೆಯ ಜ್ಯೂಸ್ ಸೇವಿಸಬಹುದು.
 

click me!