ತುಳಸಿ ಗಿಡ ಸೊಂಪಾಗಿ ಬೆಳೀಬೇಕಂದ್ರೆ ಲಿಂಬೆ ಸಿಪ್ಪೆ ಹಾಕಿ, ಏನಿದೆ ಇದ್ರಲ್ಲಿ?

Published : Apr 28, 2026, 03:04 PM IST

ತುಳಸಿ ಗಿಡ ಕೇವಲ ಗಿಡವಲ್ಲ. ಅದನ್ನು ಔಷಧಿ ಸಸ್ಯ, ದೇವರು ಅಂತ ಭಾರತೀಯರು ನಂಬ್ತಾರೆ. ಅನೇಕರ ಮನೆಯಲ್ಲಿ ತುಳಸಿ ಗಿಡ ಸೋಂಪಾಗಿ ಬೆಳೆಯೋದಿಲ್ಲ. ನೆಟ್ಟ ಒಂದೇ ವಾರಕ್ಕೆ ಹಾಳಾಗುತ್ತೆ. ಗಿಡ ಚೆನ್ನಾಗಿ ಬೆಳೆಯಲು ನಿಂಬೆ ಸಿಪ್ಪೆ ಹಾಕೋದು ಸೂಕ್ತವೇ? 

PREV
17
ತುಳಸಿ ಗಿಡಕ್ಕೆ ನಿಂಬೆ ಸಿಪ್ಪೆ

ನಿಂಬೆ ಹಣ್ಣ ಆರೋಗ್ಯ ವೃದ್ಧಿಸೋದು ಮಾತ್ರವಲ್ಲ ಗಿಡಗಳ ಬೆಳವಣಿಗೆಗೆ ಸಹಕಾರಿ. ತುಳಸಿ ಗಿಡಕ್ಕೆ ನಿಂಬೆ ಸಿಪ್ಪೆ ಹಾಕೋದು ಎಷ್ಟು ಸರಿ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ನಿಂಬೆ ಸಿಪ್ಪೆಯನ್ನು ನೀವು ಯಾವುದೇ ಭಯವಿಲ್ದೆ ತುಳಸಿ ಗಿಡಕ್ಕೆ ಹಾಕ್ಬಹುದು.

27
ನಿಂಬೆ ಸಿಪ್ಪೆ ಪ್ರಯೋಜನ

ನಿಂಬೆ ಸಿಪ್ಪೆಗಳು ಕೇವಲ ತ್ಯಾಜ್ಯವಲ್ಲ. ಅವು ಪೋಷಕಾಂಶಗಳಿಂದ ಕೂಡಿರುತ್ತವೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಮಣ್ಣಿನ ಗುಣಮಟ್ಟವನ್ನು ಸುಧಾರಿಸುತ್ತದೆ. ನಿಧಾನವಾಗಿ ಕೊಳೆಯುವ ಈ ಸಿಪ್ಪೆಗಳು ಮಣ್ಣಿನಲ್ಲಿ ಕರಗಿ ತುಳಸಿ ಬೇರುಗಳನ್ನು ಪೋಷಿಸುತ್ತವೆ. ಇದು ಸಸ್ಯದ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಎಲೆಗಳು ಹಸಿರಾಗಿ ಕಾಣುವಂತೆ ಮಾಡುತ್ತದೆ.

37
ಕೀಟದಿಂದ ಮುಕ್ತಿ

ತುಳಸಿ ಗಿಡಕ್ಕೆ ಸಣ್ಣ ಕೀಟಗಳ ಕಾಟ ಹೆಚ್ಚು. ಗಿಡಹೇನುಗಳು ಅಥವಾ ಇರುವೆಗಳಿಂದ ಗಿಡ ಬೇಗ ಹಾಳಾಗುತ್ತದೆ. ಇದು ಎಲೆಗಳನ್ನು ಹಾನಿಗೊಳಿಸುತ್ತದೆ. ನಿಂಬೆ ಸಿಪ್ಪೆಗಳಲ್ಲಿರುವ ಕಟುವಾದ ವಾಸನೆ ಮತ್ತು ನೈಸರ್ಗಿಕ ಪದಾರ್ಥಗಳು ಈ ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ನೀವು ಸಿಪ್ಪೆಗಳನ್ನು ಮಣ್ಣಿಗೆ ಸೇರಿಸಿದಾಗ ಅಥವಾ ಅವುಗಳನ್ನು ಸೌಮ್ಯವಾದ ದ್ರಾವಣವಾಗಿ ಬಳಸಿದಾಗ, ಅದು ರಾಸಾಯನಿಕಗಳ ಹಾನಿಕಾರಕ ಪರಿಣಾಮಗಳಿಲ್ಲದೆ ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ.

47
ಕಡಿಮೆಯಾಗುವ ಪಾಟ್ ವಾಸನೆ

ಪಾಟ್ ಸಾಮಾನ್ಯವಾಗಿ ಮಣ್ಣಿನ ವಾಸನೆ ಹೊಂದಿರುತ್ತದೆ. ಅದಕ್ಕೆ ಹೆಚ್ಚು ನೀರು ಹಾಕಿದಾಗ ವಾಸನೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ನೀವು ನಿಂಬೆ ಸಿಪ್ಪೆಯನ್ನು ಇದಕ್ಕೆ ಹಾಕಿದಾಗ ಅದು ಮಡಿಕೆ ವಾಸನೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ಸಿಪ್ಪೆಯಲ್ಲಿರುವ ಸಿಟ್ರಸ್ ಪರಿಮಳವು ಮಣ್ಣನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ.

57
ಪ್ರಮಾಣ ಎಷ್ಟಿರಬೇಕು?

ನಿಂಬೆ ಸಿಪ್ಪೆಗಳ ಒಂದು ಪರಿಣಾಮವೆಂದರೆ ಮಣ್ಣಿನ ಆಮ್ಲೀಯತೆಯನ್ನು ಹೆಚ್ಚಿಸುವುದು. ಸ್ವಲ್ಪ ಆಮ್ಲೀಯ ಮಣ್ಣು ಕೆಲವು ಸಸ್ಯಗಳಿಗೆ ಪ್ರಯೋಜನಕಾರಿಯಾಗಿದೆ, ಆದರೆ ತುಳಸಿಗೆ ಸಮತೋಲನ ಅಗತ್ಯ. ನಿಂಬೆ ಸಿಪ್ಪೆ ತುಳಸಿ ಗಿಡಕ್ಕೆ ಉತ್ತಮ ಎನ್ನುವ ಕಾರಣಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಸೇರಿಸಬೇಡಿ. ಇದು ಮಣ್ಣಿನ ಪಿಎಚ್ ಮಟ್ಟಕ್ಕೆ ಅಡ್ಡಿ ಆಗ್ಬಹುದು. ಸಸ್ಯದ ಬೆಳವಣಿಗೆಗೆ ಅಡ್ಡಿಯಾಗ್ಬಹುದು.

67
ಬಳಕೆ ಹೀಗಿರಲಿ

ನಿಂಬೆ ಸಿಪ್ಪೆಯನ್ನು ದೊಡ್ಡ ತುಂಟುಗಳಾಗಿ ಹಾಕ್ಬಾರದು. ಮೊದಲು ನಿಂಬೆ ಸಿಪ್ಪೆಗಳನ್ನು ಸಂಗ್ರಹಿಸಿ. ನಂತ್ರ ಅದನ್ನು ಬಿಸಿಲಿನಲ್ಲಿ ಒಣಗಿಸಿ. ಆ ನಂತ್ರ ಅದನ್ನು ಪುಡಿ ಮಾಡಿ, ಮಣ್ಣಿಗೆ ಸೇರಿಸಿ. ಇದು ವೇಗವಾಗಿ ಕೊಳೆಯಲು ಸಹಾಯ ಮಾಡುತ್ತದೆ. ಸಸ್ಯಕ್ಕೆ ತ್ವರಿತ ಪ್ರಯೋಜನ ನೀಡುತ್ತದೆ. ಅತಿಯಾದ ಪ್ರಮಾಣದಲ್ಲಿ ಬಳಸುವುದನ್ನು ತಪ್ಪಿಸಲು ಜಾಗರೂಕರಾಗಿರಿ ಮತ್ತು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬಳಸಬೇಡಿ.

77
ಇದು ನೆನಪಿರಲಿ

ನೀವು ನಿಂಬೆ ಸಿಪ್ಪೆಯನ್ನು ತುಳಸಿ ಗಿಡಕ್ಕೆ ಹಾಕುವ ಮೊದಲು ಪ್ರಮಾಣದ ಬಗ್ಗೆ ಗಮನ ಹರಿಸಬೇಕು. ಹಾಗೆಯೇ ಪ್ರತಿಯೊಂದು ಗಿಡಕ್ಕೂ ಅಗತ್ಯತೆ ಭಿನ್ನವಾಗಿರುತ್ತದೆ. ಹಾಗಾಗಿ ನೀವು ಅಗತ್ಯವನ್ನು ಗಮನಿಸಿ ನಿಂಬೆ ಸಿಪ್ಪೆಯನ್ನು ಬಳಸಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories