ಒಮ್ಮೆ ಮೂರ್ತಿ ಅವರು ಪೇಪರ್ ಓದುತ್ತಿರುವಾಗ ನಾನು ಅವರು ಓಕೆ ಎನ್ನುತ್ತಾರೆ ಎನ್ನುವ ಕಾರಣಕ್ಕೆ ಮೂರು ಕೋಟಿಯ ಆಭರಣ ಖರೀದಿ ಮಾಡ್ತೇನೆ ಎಂದೆ. ಅದಕ್ಕೆ ನಾನು ಎಂದುಕೊಂಡಂತೆ ಆಗಲಿಲ್ಲ. ಮೂರ್ತಿ ಅವರು ಪೇಪರ್ ಪಕ್ಕಕ್ಕಿಟ್ಟು ನೀನು ವಿಲೇಜ್ ಅಕೌಂಟೆಂಟ್ ಕುಟುಂಬದವಳು, ಇಷ್ಟು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ಏನೂ ಲಾಸ್ ಆಗಲ್ಲ, ಆದರೆ ನೀನು 30 ರೂಪಾಯಿಯದ್ದನ್ನೇ ಖರೀದಿ ಮಾಡುವವಳಲ್ಲ, ಇನ್ನು ಮೂರು ಕೋಟಿ ರೂಪಾಯಿದ್ದು ಖರೀದಿ ಮಾಡೋದೇ ಇಲ್ಲ ಬಿಡು ಎಂದರು ಎಂದಿದ್ದಾರೆ. ಇದಕ್ಕೆ ಹಲವರು ಪೇಪರ್ ವಿಷ್ಯವನ್ನು ಮಾತ್ರ ನಿಜ ನಿಜ ಎಂದಿದ್ದು, ತಮ್ಮ ಮನೆಯಲ್ಲಿಯೂ ಹಾಗೆಯೇ ಎಂದು ಕಮೆಂಟ್ ಹಾಕುತ್ತಿದ್ದಾರೆ.